T20 World Cup 2024: ಪಂದ್ಯಾವಳಿಯ ಅರ್ಧದಲ್ಲೇ ಶುಭ್ಮನ್ ಗಿಲ್, ಅವೇಶ್ ಖಾನ್ ಭಾರತಕ್ಕೆ ವಾಪಸ್!
ಸದ್ಯ ಯುಎಸ್ಎ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ನಡೆಯುತ್ತಿರುವ 2024ರ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಮುಂದಿನ ಹಂತಕ್ಕೆ ಹೋಗುತ್ತಿರುವ ಭಾರತ ತಂಡ ತಮ್ಮ ಆಡುವ 11ರ ಬಳಗವನ್ನು ಕಂಡುಕೊಂಡಿದೆ.
ಹೀಗಾಗಿ, ಭಾರತ ತಂಡ ತಮ್ಮ ಗುಂಪು ಹಂತದ ಕೊನೆಯ ಪಂದ್ಯದ ನಂತರ, ಟಿ20 ವಿಶ್ವಕಪ್‌ಗಾಗಿ ಮೀಸಲು ಆಟಗಾರರಾದ ಶುಭ್ಮನ್ ಗಿಲ್ ಮತ್ತು ಅವೇಶ್ ಖಾನ್ ಅವರನ್ನು ಬಿಡುಗಡೆಗೊಳಿಸಲು ನಿರ್ಧರಿಸಿದ್ದು, ಭಾರತಕ್ಕೆ ವಾಪಸ್ಸಾಗಲಿದ್ದಾರೆ.

ನಾಯಕ ರೋಹಿತ್ ಶರ್ಮಾ ಜೊತೆಗೆ ಅನುಭವಿ ವಿರಾಟ್ ಕೊಹ್ಲಿಗೆ ಆರಂಭಿಕ ಬ್ಯಾಟರ್ ಜವಾಬ್ದಾರಿ ವಹಿಸಿರುವುದರಿಂದ, ಶುಭ್ಮನ್ ಗಿಲ್ ಬದಲಾಗಿ ಆಯ್ಕೆಯಾದ ಯಶಸ್ವಿ ಜೈಸ್ವಾಲ್ ಇನ್ನು ಒಂದು ಪಂದ್ಯವನ್ನೂ ಆಡಿಲ್ಲ.
ಅಲ್ಲದೆ, ವೇಗಿಗಳು ತಮ್ಮ ಫಾರ್ಮ್ ಕಂಡುಕೊಂಡಿದ್ದಾರೆ ಮತ್ತು ಪ್ರತಿ ಬೌಲರ್‌ಗಳು ವಿಕೆಟ್‌ಗಳನ್ನು ಪಡೆಯುತ್ತಿದ್ದಾರೆ ಮತ್ತು ಪ್ರಯಾಣದ ಮೀಸಲು ಆಗಿದ್ದ ಅವೇಶ್ ಖಾನ್ ಆಡುವ ತಂಡದಿಂದ ಹೊರಗುಳಿದಿದ್ದಾರೆ.
ವರದಿಗಳ ಪ್ರಕಾರ, ಅವೇಶ್ ಖಾನ್ ಮತ್ತು ಶುಭ್ಮನ್ ಗಿಲ್ ಇಬ್ಬರೂ ಯುಎಸ್ಎ ಲೆಗ್ ಪಂದ್ಯಗಳ ನಂತರ ಭಾರತಕ್ಕೆ ಮರಳಲಿದ್ದಾರೆ. ಇಬ್ಬರೂ ಆಟಗಾರರು ಭಾರತ ತಂಡದೊಂದಿಗೆ ನ್ಯೂಯಾರ್ಕ್‌ನಿಂದ ಫೋರ್ಟ್ ಲಾಡರ್‌ಡೇಲ್‌ಗೆ ಚಾರ್ಟರ್ಡ್ ಫ್ಲೈಟ್ ಮೂಲಕ ಪ್ರಯಾಣಿಸುತ್ತಿರುವುದು ಕಂಡುಬಂದಿದೆ.

ಮುಖ್ಯ ತಂಡದ ಇತರೆ ಆಟಗಾರರಿಗೆ ಯಾವುದೇ ಗಾಯ ಸಂಭವಿಸಿದಲ್ಲಿ ಶುಭ್ಮನ್ ಗಿಲ್ ಮತ್ತು ಅವೇಶ್ ಖಾನ್ ಭಾರತ ತಂಡದ ಭಾಗವಾಗುತ್ತಿದ್ದರು. ಭಾರತ ತಂಡ ಸೂಪರ್ 8 ಹಂತಕ್ಕಾಗಿ ವೆಸ್ಟ್ ಇಂಡೀಸ್‌ಗೆ ಪ್ರಯಾಣಿಸಲಿದ್ದು, ಇದೀಗ ಯುಎಸ್ಎ ಲೆಗ್ ಮುಕ್ತಾಯಗೊಳ್ಳುತ್ತಿದ್ದಂತೆಯೇ, ಇಬ್ಬರನ್ನೂ ಭಾರತಕ್ಕೆ ವಾಪಸ್ ಕಳುಹಿಸಲಾಗುತ್ತದೆ.
ರಿಂಕು ಸಿಂಗ್ ಮತ್ತು ಖಲೀಲ್ ಅಹ್ಮದ್ ಅವರು ಇನ್ನೂ ಭಾರತ ತಂಡದಲ್ಲಿರುವ ಇತರ ಮೀಸಲು ಆಟಗಾರರು ಎಂಬುದು ಗಮನಾರ್ಹ ಸಂಗತಿ.
ಈ ಕ್ರಮವು ಶುಭ್ಮನ್ ಗಿಲ್‌ಗೆ ಹಿಂತಿರುಗುವುದನ್ನು ಬಿಟ್ಟು ಬೇರೆ ಆಯ್ಕೆಯಿಲ್ಲ. ಏಕೆಂದರೆ, ಟೀಮ್ ಇಂಡಿಯಾ ಯಶಸ್ವಿ ಜೈಸ್ವಾಲ್ ರೂಪದಲ್ಲಿ ಬ್ಯಾಕ್‌ಅಪ್ ಆರಂಭಿಕ ಬ್ಯಾಟರ್‌ನನ್ನು ಹೊಂದಿದೆ.
ಅವೇಶ್ ಖಾನ್ ಬಗ್ಗೆ ಹೇಳುವುದಾದರೆ, ಭಾರತ ತಂಡ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ರೂಪದಲ್ಲಿ ಇಬ್ಬರು ಬಲ-ವೇಗಿಗಳನ್ನು ಹೊಂದಿದೆ. ಆ ಪಟ್ಟಿಗೆ ಆಲ್‌ರೌಂಡರ್‌ಗಳಾದ ಹಾರ್ದಿಕ್ ಪಾಂಡ್ಯ ಮತ್ತು ಶಿವಂ ದುಬೆ ಕೂಡ ಸೇರಿದ್ದಾರೆ.
ಎಡಗೈ ವೇಗಿ ಖಲೀಲ್ ಅಹ್ಮದ್ ಅವರು ಅರ್ಶ್‌ದೀಪ್ ಸಿಂಗ್ ಗಾಯಗೊಂಡರೆ ಭಾರತ ತಂಡಕ್ಕೆ ಆಯ್ಕೆಯಾಗಬಹುದಾದ ಬೌಲರ್ ಆಗಿದ್ದಾರೆ. ಹೀಗಾಗಿ, ತಂಡದಲ್ಲಿ ಉಳಿಸಿಕೊಳ್ಳಲಾಗಿದೆ.
ದಶಕದ ನಂತರ ಭಾರತ ಐಸಿಸಿ ಟ್ರೋಫಿ ಮೇಲೆ ಕಣ್ಣಿಟ್ಟಿದೆ
ಜೂನ್ 12ರಂದು ಯುಎಸ್ಎ ವಿರುದ್ಧ ಗೆಲುವು ಸಾಧಿಸುವ ಮೂಲಕ ಟೀಮ್ ಇಂಡಿಯಾ, ಟಿ20 ವಿಶ್ವಕಪ್ ಪಂದ್ಯಾವಳಿಯ ಸೂಪರ್ 8ರ ಹಂತವನ್ನು ತಲುಪಿದೆ. ಭಾರತ ತಮ್ಮ ಮೊದಲ ಸೂಪರ್ 8ರ ಪಂದ್ಯವನ್ನು ಜೂನ್ 20ರಂದು ಆಡಲಿದೆ.
ಇತರ ಎರಡು ಪಂದ್ಯಗಳನ್ನು ಆಂಟಿಗುವಾದಲ್ಲಿ ಜೂನ್ 22ರಂದು ಮತ್ತು ಸೇಂಟ್ ಲೂಸಿಯಾದಲ್ಲಿ ಜೂನ್ 24ರಂದು ನಿಗದಿಪಡಿಸಲಾಗಿದೆ.
ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಸೆಮಿಫೈನಲ್‌ಗೆ ಪ್ರವೇಶಿಸಿದರೆ, ಜೂನ್ 27ರಂದು ಗಯಾನಾದ ಜಾರ್ಜ್‌ಟೌನ್‌ನಲ್ಲಿ ಆಡಲಿದ್ದು, ಇನ್ನು ಜೂನ್ 29ರಂದು ಬಾರ್ಬಡೋಸ್‌ನ ಬ್ರಿಡ್ಜ್‌ಟೌನ್‌ನಲ್ಲಿ ಫೈನಲ್ ಪಂದ್ಯವನ್ನು ನಿಗದಿಪಡಿಸಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications