Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

T20 World Cup 2024: ಬಾಂಗ್ಲಾ ವಿರುದ್ಧ ಆಘಾತಕಾರಿ ಸೋಲಿನಿಂದ ಪಾರಾದ ದಕ್ಷಿಣ ಆಫ್ರಿಕಾಕ್ಕೆ ಗೆಲುವು

ಸೋಮವಾರ, ಜೂನ್ 10ರಂದು ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ 2024ರ ಟಿ20 ವಿಶ್ವಕಪ್‌ನ 21ನೇ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ದಕ್ಷಿಣ ಆಫ್ರಿಕಾ ತಂಡ 4 ರನ್‌ಗಳ ರೋಚಕ ಗೆಲುವು ದಾಖಲಿಸಿತು.

ಈ ಮೂಲಕ ಆಡಿದ ಮೂರು ಪಂದ್ಯಗಳಲ್ಲಿ ಮೂರು ಪಂದ್ಯಗಳನ್ನು ಗೆಲ್ಲುವ ಮೂಲಕ 6 ಅಂಕಗಳೊಂದಿಗೆ ದಕ್ಷಿಣ ಆಫ್ರಿಕಾ ತಂಡ ಸೂಪರ್ 8 ಹಂತಕ್ಕೆ ಪ್ರವೇಶವನ್ನು ಖಚಿತಪಡಿಸಿಕೊಂಡಿತು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡ ಮಧ್ಯಮ ಕ್ರಮಾಂಕದಲ್ಲಿ ಹೆನ್ರಿಚ್ ಕ್ಲಾಸೆನ್ ಮತ್ತು ಡೇವಿಡ್ ಮಿಲ್ಲರ್ ಅವರ ಅಮೋಘ ಆಟದ ನೆರವಿನಿಂದ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 113 ರನ್‌ ಗಳಿಸಿತು.

T20 World Cup 2024 South Africa Defeat Bangladesh By 4 Runs In Thrilling Match

114 ರನ್‌ಗಳ ಸಾಧಾರಣ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು ಕೇವಲ 109 ರನ್‌ಗಳಿಗೆ ನಿಯಂತ್ರಣಗೊಂಡಿತು ಮತ್ತು ಸುಲಭವಾಗಿ ಗೆಲ್ಲಬಹುದಾಗಿದ್ದ ಪಂದ್ಯವನ್ನು 4 ರನ್‌ಗಳಿಂದ ಸೋತಿತು.

ಬಾಂಗ್ಲಾದೇಶ ತಂಡದ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ ತಂಝೀದ್ ಹಸನ್ 9 ರನ್ ಮತ್ತು ನಾಯಕ ನಜ್ಮುಲ್ ಹೊಸೈನ್ ಶಾಂಟೋ 14 ರನ್ ಗಳಿಸಿದ ನಂತರ ಉತ್ತಮ ಆರಂಭ ನೀಡಲಿಲ್ಲ.

ಬಳಿಕ ಬಂದ ಲಿಟ್ಟನ್ ದಾಸ್ ಕೂಡ 9 ರನ್ ಗಳಿಸಿ ಔಟಾದರೆ, ಅನುಭವಿ ಆಲ್‌ರೌಂಡರ್ ಶಕಿಬ್ ಅಲ್ ಹಸನ್ 3 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

ಈ ವೇಳೆ ತೌಹಿದ್ ಹೃದೋಯ್ 34 ಎಸೆತಗಳಲ್ಲಿ 22 ರನ್ ನೀಡಿ 37 ರನ್ ಬಾರಿಸಿದರೆ, ಮಹಮ್ಮದುಲ್ಲಾ 27 ಎಸೆತಗಳಲ್ಲಿ 20 ರನ್ ಗಳಿಸಿ ಗೆಲುವಿಗೆ ಪ್ರಯತ್ನಪಟ್ಟರೂ, ಕೊನೆಯವರೆಗೆ ಕ್ರೀಸ್‌ನಲ್ಲುಳಿಯಲು ಸಾಧ್ಯವಾಗಲಿಲ್ಲ. ಉಳಿದಂತೆ ಜಕರ್ ಅಲಿ 8 ರನ್ ಗಳಿಸಿ ಔಟಾದರು.

ಬೌಲಿಂಗ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡದ ಪರ ಮಾರಕ ದಾಳಿ ನಡೆಸಿದ ಅನ್ರಿಚ್ ನಾರ್ಟ್ಜೆ 4 ಓವರ್‌ಗಳಲ್ಲಿ 17 ರನ್ ನೀಡಿ 2 ಕಬಳಿಸಿದರೆ, ಕಗಿಸೊ ರಬಾಡ 4 ಓವರ್‌ಗಳಲ್ಲಿ 19 ರನ್ ನೀಡಿ 2 ವಿಕೆಟ್ ಪಡೆದರು. ಕೇಶವ್ ಮಹಾರಾಜ್ 4 ಓವರ್‌ಗಳಲ್ಲಿ 27 ರನ್ ನೀಡಿ 3 ವಿಕೆಟ್ ಪಡೆದು ಮಿಂಚಿದರು.

ಇದಕ್ಕೂ ಮುನ್ನ ದಕ್ಷಿಣ ಆಫ್ರಿಕಾ ತಂಡದ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ ಕ್ವಿಂಟನ್ ಡಿ ಕಾಕ್ 18 ರನ್ ಗಳಿಸಿದರೆ, ರೀಝಾ ಹೆಂಡ್ರಿಕ್ಸ್ ಸೊನ್ನೆಗೆ ಔಟಾದರು. ಏಡೆನ್ ಮಾರ್ಕ್ರಾಮ್ 4 ರನ್ ಗಳಿಸಿದರೆ, ಟ್ರಿಸ್ಟಾನ್ ಸ್ಟಬ್ಸ್ ಡಕ್‌ಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಹೆನ್ರಿಚ್ ಕ್ಲಾಸೆನ್ 46 ರನ್ ಮತ್ತು ಡೇವಿಡ್ ಮಿಲ್ಲರ್ 29 ರನ್ ಗಳಿಸಿ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು.

ಬಾಂಗ್ಲಾದೇಶ ತಂಡದ ಪರ ಬೌಲಿಂಗ್‌ನಲ್ಲಿ ತಂಝೀದ್ ಹಸನ್ ಶಕಿಬ್ 4 ಓವರ್‌ಗಳಲ್ಲಿ 18 ರನ್ ನೀಡಿ 3 ವಿಕೆಟ್ ಪಡೆದರೆ, ತಸ್ಕಿನ್ ಅಹ್ಮದ್ 4 ಓವರ್‌ಗಳಲ್ಲಿ 19 ರನ್ ನೀಡಿ 2 ವಿಕೆಟ್ ಕಬಳಿಸಿದರು.

Story first published: Monday, June 10, 2024, 23:46 [IST]
Other articles published on Jun 10, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+