For Quick Alerts
ALLOW NOTIFICATIONS  
For Daily Alerts
 

T20 World Cup 2024: ಬ್ರೂಕ್ -ಲಿವಿಂಗ್ಸ್ಟೋನ್ ಹೋರಾಟ ವ್ಯರ್ಥ; ಆಂಗ್ಲರನ್ನು ಕಟ್ಟಿ ಹಾಕಿದ ಹರಿಣಗಳ ಪಡೆ

ಜೂನ್ 21 ಶುಕ್ರವಾರ, ವೆಸ್ಟ್‌ ಇಂಡೀಸ್‌ನ ಸೇಂಟ್ ಲೂಸಿಯಾಸದ ಡೇರೆನ್ ಸಾಮಿ ರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ 2024ರ ಟಿ20 ವಿಶ್ವಕಪ್‌ನ ಸೂಪರ್-8ರ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡವನ್ನು ದಕ್ಷಿಣ ಆಫ್ರಿಕಾ ಕಟ್ಟಿ ಹಾಕಿದೆ.

ರೋಚಕ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ವೇಗದ ಬೌಲರ್‌ ಆನ್ರಿಚ್ ನಾರ್ಟ್ಜೆ ಅವರು ತಂಡದ ಗೆಲುವಿಗೆ ಮಹತ್ವದ ಕೊಡುಗೆ ನೀಡಿದರು. ಇಂಗ್ಲೆಂಡ್‌ ಗೆಲುವಿಗೆ ಏಕಾಂಗಿ ಹೋರಾಟ ನಡೆಸುತ್ತಿದ್ದ ಸ್ಪೋಟಕ ಬ್ಯಾಟರ್‌ ಹ್ಯಾರಿ ಬ್ರೂಕ್ ಅವರ ವಿಕೆಟ್ ಪಡೆಯುವ ಮೂಲಕ ಬ್ರೇಕ್ ಥ್ರೂ ನೀಡಿ ಆಫ್ರಿಕಾಗೆ ಆನ್ರಿಚ್ ನಾರ್ಟ್ಜೆ ಜಯ ತಂದುಕೊಟ್ಟರು.

T20 World Cup 2024 South Africa win against England

ಹರಿಣಗಳ ಪಡೆ ನೀಡಿದ 164 ರನ್‌ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್ ಮುಗ್ಗರಿಸಿತು. 20 ಓವರ್‌ಗಳಲ್ಲಿ ಇಂಗ್ಲೆಂಡ್‌ 6 ವಿಕೆಟ್‌ಗಳನ್ನು ಕಳೆದುಕೊಂಡು ಕೇವಲ 156 ರನ್‌ ಗಳಿಸಲಷ್ಟೇ ಶಕ್ತವಾಯಿತು. ಹೀಗಾಗಿ ದಕ್ಷಿಣ ಆಫ್ರಿಕಾ 7 ರನ್‌ಗಳಿಂದ ಪಂದ್ಯವನ್ನು ಗೆದ್ದು ಬೀಗಿತು.‌

ದಕ್ಷಿಣ ಆಫ್ರಿಕಾ ಇನ್ನಿಂಗ್ಸ್‌

ಇಂಗ್ಲೆಂಡ್ ವಿರುದ್ಧ ಟಾಸ್‌ ಸೋತು ಬ್ಯಾಟಿಂಗ್‌ ಮಾಡಿದ ದಕ್ಷಿಣ ಆಫ್ರಿಕಾ ಭರ್ಜರಿ ಆರಂಭ ಕಂಡಿತ್ತು. ಆದರೆ ಕ್ವಿಂಟನ್‌ ಡಿಕಾಕ್ ಅವರ 65 ರನ್‌ಗಳ ಸ್ಫೋಟಕ ಇನ್ನಿಂಗ್ಸ್‌ನ ನಂತರ ದಕ್ಷಿಣ ಆಫ್ರಿಕ ತಂಡದ ವಿಕೆಟ್‌ಗಳು ಪತತವಾದವು. ಡಿಕಾಕ್‌ 38 ಎಸೆತಗಳಲ್ಲಿ ತಲಾ 4 ಬೌಂಡರಿ ಹಾಗು ಸಿಕ್ಸರ್‌ ಸಿಡಿಸಿ 65 ಬಾರಿಸಿದರು.

ಕೊನೆಯಲ್ಲಿ ಡೇವಿಡ್ ಮಿಲ್ಲರ್ ಕುಸಿದ ಹರಿಣಗಳ ಪಡೆಗೆ ನೆರವಾಗಿದರಿ. ಮಿಲ್ಲರ್‌ 28 ಎಸೆತಗಳಲ್ಲಿ 2 ಸಿಕ್ಸರ್‌ ಹಾಗು 4 ಬೌಂಡರಿ ಮೂಲಕ 43 ರನ್ ಗಳಿಸಿದರು. ಈ ಇಬ್ಬರು ಬ್ಯಾಟರ್‌ಗಳ ಅಮೋಘ ಪ್ರದರ್ಶನದಿಂದ ದಕ್ಷಿಣ ಆಫ್ರಿಕಾ ತಂಡ ನಿಗದಿತ 20 ಓವರ್‌ಗಳಲ್ಲಿ 6 ಕಳೆದುಕೊಂಡು 163 ರನ್ ಗಳಿಸುವಲ್ಲಿ ಯಶಸ್ವಿಯಾಯಿತು.

ಇಂಗ್ಲೆಂಡ್‌ ಪರ ಜೋಫ್ರಾ ಆರ್ಚರ್ 3 ವಿಕೆಟ್‌ ಕಬಳಿಸಿ ಮಿಂಚಿದರೆ, ಆದಿಲ್ ರಶೀದ್ ಮತ್ತು ಮೊಯಿನ್ ಅಲಿ ತಲಾ ಒಂದೊಂದು ವಿಕೆಟ್‌ ಪಡೆದರು.

ಇಂಗ್ಲೆಂಡ್‌ ಚೇಸಿಂಗ್‌

ದಕ್ಷಿಣ ಆಫ್ರಿಕಾ ನೀಡಿದ 164 ರನ್‌ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್‌ ಅತ್ಯಂತ ನಾಚಿಕೆಗೇಡಿನ ಆರಂಭ ಮಾಡಿತು. ಇಂಗ್ಲೆಂಡ್ ತನ್ನ 4 ಪ್ರಮುಖ ಬ್ಯಾಟರ್‌ಗಳನ್ನು ಕೇವಲ 61 ರನ್‌ಗಳಿಗೆ ಕಳೆದುಕೊಂಡಿದೆ. ಫಿಲ್ ಸಾಲ್ಟ್, ಜೋಸ್ ಬಟ್ಲರ್, ಬೈರ್‌ಸ್ಟೋ ಮತ್ತು ಮೊಯಿನ್ ಅಲಿ 20 ರ ಅಂಕಿಯನ್ನೂ ತಲುಪಲು ಸಾಧ್ಯವಾಗಲಿಲ್ಲ.

ಈ ವೇಳೆ ಅದ್ಭುತವಾಗಿ ಆಡಿದ ಹ್ಯಾರಿ ಬ್ರೂಕ್ ಅರ್ಧಶತಕ ಸಿಡಿಸುವ ಮೂಲಕ ಇಂಗ್ಲೆಂಡ್‌ ಗೆಲುವಿಗೆ ಏಕಾಂಗಿ ಹೋರಾಟ ನಡೆಸಿದರು. ಹ್ಯಾರಿ ಬ್ರೂಕ್ ಎದುರಿಸಿದ 37 ಎಸೆತಗಳಲ್ಲ 7 ಬೌಂಡರಿಗಳೊಂದಿಗೆ 53 ರನ್‌ ಬಾರಿಸಿದರು.

ಇನ್ನೊಂದೆಡೆ ಲಿಯಾಮ್ ಲಿವಿಂಗ್‌ಸ್ಟೋನ್ ಕೇವಲ 17 ಎಸೆತಗಲ್ಲಿ 2 ಸಿಕ್ಸರ್‌ ಹಾಗು 3 ಬೌಂಡರಿ ನೆರವಿನಿಂದ 33 ರನ್‌ ಕಲೆ ಹಾಕಿ ಇಂಗ್ಲೆಂಡ್‌ ಗೆಲ್ಲಿಸಲು ಪ್ರಯತ್ನಿಸಿದರು. ಕೊನೆ ಓವರ್‌ನಲ್ಲಿ ಆನ್ರಿಚ್ ನಾರ್ಟ್ಜೆ ಭರ್ಜರಿ ಬೌಲಿಂಗ್‌ ಪ್ರದರ್ಶನ ಮಾಡಿ ದಕ್ಷಿಣ ಆಫ್ರಿಕಾ ತಂಡಕ್ಕೆ ಗೆಲುವು ತಂದು ಕೊಟ್ಟರು.

ದಕ್ಷಿಣಾ ಆಫ್ರಿಕಾ ಪರ ಕೇಶವ್ ಮಹಾರಾಜ್ ಮತ್ತು ಕಗಿಸೊ ರಬಾಡ ತಲಾ 2 ವಿಕೆಟ್‌ ಕಬಳಿಸಿದರೆ, ಆನ್ರಿಚ್ ನಾರ್ಟ್ಜೆ ಹಾಗು ಒಟ್ನೀಲ್ ಬಾರ್ಟ್‌ಮನ್ ತಲಾ ಒಂದೊಂದು ವಿಕೆಟ್‌ ಪಡೆದರು.

ಇಂಗ್ಲೆಂಡ್‌ vs ದಕ್ಷಿಣ ಆಫ್ರಿಕಾ ಪ್ಲೇಯಿಂಗ್‌-11

ಇಂಗ್ಲೆಂಡ್‌ ತಂಡ: ಫಿಲಿಪ್ ಸಾಲ್ಟ್, ಜೋಸ್ ಬಟ್ಲರ್ (ನಾಯಕ ಮತ್ತು ವಿಕೆಟ್‌ ಕೀಪರ್‌), ಹ್ಯಾರಿ ಬ್ರೂಕ್, ಜಾನಿ ಬೈರ್‌ಸ್ಟೋವ್, ಮೊಯಿನ್ ಅಲಿ, ಲಿಯಾಮ್ ಲಿವಿಂಗ್‌ಸ್ಟೋನ್, ಸ್ಯಾಮ್ ಕರ್ರಾನ್, ಜೋಫ್ರಾ ಆರ್ಚರ್, ಆದಿಲ್ ರಶೀದ್, ಮಾರ್ಕ್ ವುಡ್, ರೀಸ್ ಟೋಪ್ಲಿ.

ಇಂಗ್ಲೆಂಡ್‌ ತಂಡ : ಕ್ವಿಂಟನ್ ಡಿ ಕಾಕ್ (ವಿಕೆಟ್‌ ಕೀಪರ್‌), ರೀಜಾ ಹೆಂಡ್ರಿಕ್ಸ್, ಐಡೆನ್ ಮಾರ್ಕ್ರಾಮ್ (ನಾಯಕ), ಡೇವಿಡ್ ಮಿಲ್ಲರ್, ಹೆನ್ರಿಚ್ ಕ್ಲಾಸೆನ್, ಟ್ರಿಸ್ಟಾನ್ ಸ್ಟಬ್ಸ್, ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಕಗಿಸೊ ರಬಾಡ, ಆನ್ರಿಚ್ ನಾರ್ಟ್ಜೆ, ಒಟ್ನೀಲ್ ಬಾರ್ಟ್‌ಮನ್

Story first published: Friday, June 21, 2024, 23:53 [IST]
Other articles published on Jun 21, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+