T20 World Cup 2024: ನೆದರ್ಲ್ಯಾಂಡ್ಸ್ ಎದುರು ಹೋರಾಡಿ ಸುಲಭ ಗುರಿ ಮುಟ್ಟಿದ ದಕ್ಷಿಣ ಆಫ್ರಿಕಾ; ಮಿಲ್ಲರ್ ಅರ್ಧಶತಕ
ಜೂನ್ 7 ಶನಿವಾರ, ಅಮೆರಿಕಾದ ನ್ಯೂಯರ್ಕ್‌ನ ನಸ್ಸೌ ಕೌಂಟಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ 2024ರ ಟಿ20 ವಿಶ್ವಕಪ್‌ನ ಲೀಗ್ ಹಂತದ 16ನೇ ಪಂದ್ಯದಲ್ಲಿ ನೆದರ್ಲ್ಯಾಂಡ್ ಎದುರು ದಕ್ಷಿಣ ಆಫ್ರಿಕಾ ಹೋರಾಡಿ ಸುಲಭ ಗುರಿ ತಲುಪಿದೆ.
ಈ ಮೂಲಕ ಟಿ20 ವಿಶ್ವಕಪ್‌ನ ಲೀಗ್ ಹಂತದಲ್ಲಿ ಹರಿಣಗಳ ಪಡೆ ಎರಡನೇ ಗೆಲುವು ದಾಖಲಿಸಿದೆ. ನೆದರ್ಲ್ಯಾಂಡ್ ನೀಡಿದ ಟಾರ್ಗೆಟ್ ಅನ್ನು ದಕ್ಷಿಣ ಆಫ್ರಿಕಾ ತಂಡ 6 ವಿಕೆಟ್‌ಗಳನ್ನು ಕಳೆದುಕೊಂಡು ಡೇವಿಡ್ ಮಿಲ್ಲರ್ ಅರ್ಧಶತಕದ ನೆರವಿನಿಂದ ಯಶಸ್ವಿಯಾಗಿ ಚೇಸಿಂಗ್ ಮಾಡಿದೆ.

ನೆದರ್ಲ್ಯಾಂಡ್ ನೀಡಿದ 104 ರನ್‌ಗಳ ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಬಲಿಷ್ಠ ದಕ್ಷಿಣ ಆಫ್ರಿಕಾ ಪರ ಕ್ವಿಂಟನ್ ಡಿ ಕಾಕ್ ಮತ್ತು ರೀಜಾ ಹೆಂಡ್ರಿಕ್ಸ್ ಆರಂಭಿಕರಾಗಿ ಕಣಕ್ಕೀಳಿದರು. ಆದರೆ ಖಾತೆ ತೆರೆಯದ ಕ್ವಿಂಟನ್ ಡಿ ಕಾಕ್ ರನೌಟ್ ಆಗುವ ಮೂಲಕ ನಿರಾಸೆ ಮೂಡಿಸಿದರು.
ಇದರ ಹಿಂದೆಯೇ ರೀಜಾ ಹೆಂಡ್ರಿಕ್ಸ್ ಕೂಡ ಕೇವಲ 3 ರನ್‌ಗಳಿಸ ಔಟ್ ಆದರೆ, ನಾಯಕ ಐಡೆನ್ ಮಾರ್ಕ್ರಾಮ್ ಮತ್ತೊಮ್ಮೆ ಬಂದ ದಾರಿಗೆ ಸುಂಕವಿಲ್ಲದಂತೆ ಶೂನ್ಯಕ್ಕೆ ವಿಕೆಟ್ ಕಳೆದುಕೊಂಡರು. ಬಳಿಕ ಸ್ಪೋಟಕ ಬ್ಯಾಟರ್ ಹೆನ್ರಿಚ್ ಕ್ಲಾಸೆನ್ ಸಹಾ 4 ರನ್‌ಗೆ ತಮ್ಮ ಆಟವನ್ನು ಮುಗಿಸಿ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು.
ಈ ಹಂತದಲ್ಲಿ ಹರಿಣಗಳ ಪಡೆ ಕೇವಲ 12 ರನ್‌ಗಳಿಗೆ ಪ್ರಮುಖ 4 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟ ಎದುರಿಸಬೇಕಾಯಿತು. ಇಂತಹ ಪರಿಸ್ಥಿತಿಯಲ್ಲಿ ಕ್ರೀಸ್‌ಗೆ ಬಂದ ಯುವ ಬ್ಯಾಟರ್ ಟ್ರಿಸ್ಟಾನ್ ಸ್ಟಬ್ಸ್ ಮತ್ತು ಅನುಭವಿ ಡೇವಿಡ್ ಮಿಲ್ಲರ್ ಉತ್ತಮ ಜೊತೆಯಾಟವಾಡಿದರು. ಈ ಮೂಲಕ ಕುಸಿದ ದಕ್ಷಿಣ ಆಫ್ರಿಕಾಕ್ಕೆ ಗೆಲುವಿನ ಚಿಗುರೊಡೆಸಿದರು.
ಕೊನೆಯಲ್ಲಿ ಟ್ರಿಸ್ಟಾನ್ ಸ್ಟಬ್ಸ್ 33 ರನ್‌ಗಳನ್ನು ಹೊಡೆದು ಔಟ್ ಆದರೆ, ನಂತರ ಬಂದ ಮಾರ್ಕೊ ಜಾನ್ಸೆನ್ 3 ರನ್‌ಗರೆ ವಿಕೆಟ್ ಕಳೆದುಕೊಂಡರು. ಇದಾದ ಬಳಿಕ ಸೋಲಿನ ಸುಳಿಯಲ್ಲಿದ ದಕ್ಷಿಣ ಆಫ್ರಿಕಾ ತಂಡವನ್ನು ಡೇವಿಡ್ ಮಿಲ್ಲರ್ ಅರ್ಧಶತಕ ಬಾರಿಸುವ ಮೂಲಕ ಗೆಲುವಿನ ದಡ ಸೇರಿಸಿದರು. ಡೇವಿಡ್ ಮಿಲ್ಲರ್ ಎದರುಸಿದ 51 ಎಸೆತಗಳಲ್ಲಿ 3 ಬೌಂಡರಿ 4 ಸಿಕ್ಸರ್ ನೆರವಿನಿಂದ ಅಜೇಯ 59 ರನ್ ಗಳಿಸಿದರು.
ನೆದರ್ಲ್ಯಾಂಡ್ಸ್ ಪರ ಲೋಗನ್ ವ್ಯಾನ್ ಬೀಕ್ ಮತ್ತು ವಿವಿಯನ್ ಕಿಂಗ್ಮಾ ತಲಾ ಎರಡು ವಿಕೆಟ್ ಪಡೆದು ಮಿಂಚಿದರೆ, ಬಾಸ್ ಡಿ ಲೀಡೆ ಒಂದು ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications