Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

T20 World Cup 2024: ಹರಿಣಗಳ ಪಡೆ ಎದುರು ಹೋರಾಡಿ ಟೂರ್ನಿಯಿಂದ ಹೊರ ಬಿದ್ದ ನೇಪಾಳ; ಸೂಪರ್‌-8 ಸುತ್ತಿಗೆ ಬಾಂಗ್ಲಾ!

ಜೂನ್‌ 14 ಶನಿವಾರ, ಐಸಿಸಿ 2024ರ ಟಿ20 ವಿಶ್ವಕಪ್‌ನ ಲೀಗ್‌ ಹಂತದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನೇಪಾಳ ಹೋರಾಡಿ ಟೂರ್ನಿಯಿಂದ ಹೊರಗುಳಿದಿದೆ.

ದಕ್ಷಿಣ ಆಫ್ರಿಕಾವನ್ನು 115 ರನ್‌ಗಳಿಗೆ ಕಟ್ಟಿ ಹಾಕಿದ ನೇಪಾಳ ಚೇಸಿಂಗ್‌ ಮಾಡುವಾಗ ಎಡುವಿದೆ. ಹೀಗಾಗಿ ಹರಿಣಗಳ ಪಡೆ ಎದುರು ಕೇವಲ ಒಂದು ರನ್‌ನಿಂದ ಪಂದ್ಯವನ್ನು ನೇಪಾಳ ಸೋತಿದೆ.

T20 World Cup 2024 South Africa won against Nepal

ಈಗಾಗಲೇ ಸೂಪರ್‌-8 ಸುತ್ತಿಗೆ ಆರ್ಹತೆ ಪಡೆದಿರುವ ದಕ್ಷಿಣ ಆಫ್ರಿಕಾ ಗುಂಪು ಹಂತದಲ್ಲಿ ಆಡಿದ 4 ಪಂದ್ಯಗಳನ್ನು ಗೆದ್ದಿರುವ ಸಾಧಿನೆ ಮಾಡಿದೆ. ನೇಪಾಳ ತಂಡ ಟೂರ್ನಿಯಿಂದ ಔಟ್‌ ಆದರೆ, ಬಾಂಗ್ಲಾದೇಶ ಸೂಪರ್‌-8 ಸುತ್ತಿಗೆ ಆರ್ಹತೆ ಪಡೆಯುವುದು ಬಹುತೇಕ ಖಚಿತವಾಗಿದೆ.

ಟಾಸ್‌ ಗೆದ್ದು ಬೌಲಿಂಗ್‌ ಆಯ್ಕೆ ಮಾಡಿಕೊಂಡ ನೇಪಾಳ ತಂಡದ ನಾಯಕ ರೋಹಿತ್ ಪೌಡೆಲ್ ಅವರು ದಕ್ಷಿಣ ಆಫ್ರಿಕಾವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಆರಂಭಿಕರಾಗಿ ಕಣಕ್ಕೀಳಿದ ಕ್ವಿಂಟನ್ ಡಿ ಕಾಕ್ ಮತ್ತು ರೀಜಾ ಹೆಂಡ್ರಿಕ್ಸ್ ಜೋಡಿ ಉತ್ತಮ ಅಡಿಪಾಯ ಹಾಕಲಿಲ್ಲ.

ಕ್ವಿಂಟನ್ ಡಿ ಕಾಕ್ 10 ರನ್‌ಗೆ ಔಟ್‌ ಆದರೆ, ಬಳಿಕ ಬಂದ ನಾಯಕ ಐಡೆನ್ ಮಾರ್ಕ್ರಾಮ್ (15), ಹೆನ್ರಿಚ್ ಕ್ಲಾಸೆನ್ (3) ಮತ್ತು ಡೇವಿಡ್ ಮಿಲ್ಲರ್ (7) ನೇಪಾಳ ಬೌಲರ್‌ಗಳ ಎದುರು ತಂಡದ ಪರ ಅತಿಹೆಚ್ಚು ರನ್‌ ಗಳಿಸದೆ ವಿಕೆಟ್‌ ಕಳೆದುಕೊಂಡರು. ಕುಸಿದ ದಕ್ಷಿಣ ಆಫ್ರಿಕಾ ಪರ ರೀಜಾ ಹೆಂಡ್ರಿಕ್ಸ್ ಜವಾಬ್ದಾರಿಯುತ ಇನ್ನಿಂಗ್ಸ್‌ ಆಡಿದರು.

ಹೆಂಡ್ರಿಕ್ಸ್‌ ಎದುರಿಸಿದ 49 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್‌ ನೆರವಿನಿಂದ 43 ರನ್‌ಗಳನ್ನು ಹೊಡೆದು ವಿಕೆಟ್‌ ಕಳೆದುಕೊಂಡರು. ನಂತರ ಮಾರ್ಕೊ ಜಾನ್ಸೆನ್ (1) ಮತ್ತು ಕಗಿಸೊ ರಬಾಡಾ ಶೂನ್ಯಕ್ಕೆ ಔಟ್‌ ಆದರು

ಇಂತಹ ಪರಿಸ್ಥಿತಿಯಲ್ಲಿ ಯುವ ಬ್ಯಾಟರ್‌ ಟ್ರಿಸ್ಟಾನ್ ಸ್ಟಬ್ಸ್ 18 ಎಸೆತಗಳಲ್ಲಿ ಅಜೇಯ 27 ರನ್‌ ಬಾರಿಸಿದರು. ಹೀಗಾಗಿ ದಕ್ಷಿಣ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 115 ರನ್‌ಗಳ ಸಾಧಾರಣ ಮೊತ್ತ ಕಲೆಹಾಕಿತು.

ನೇಪಾಳ ಪರ ಕುಶಾಲ್ ಭುರ್ಟೆಲ್ 4 ವಿಕೆಟ್‌ ಉರುಳಿಸಿ ಮಿಂಚಿದರೆ, ದೀಪೇಂದ್ರ ಸಿಂಗ್ 3 ವಿಕೆಟ್‌ ಪಡೆದು ಸಂಭ್ರಮಿಸಿದರು.

ಹರಿಣಗಳ ಪಡೆ ನೀಡಿದ 116 ರನ್‌ಗಳ ಗುರಿ ಬೆನ್ನಟ್ಟಿದ ನೇಪಾಳ ಪರ ಆಸಿಫ್ ಶೇಖ್ ಮತ್ತು ಅನಿಲ್ ಸಾಹ್ ಉತ್ತಮ ಇನ್ನಿಂಗ್ಸ್‌ ಆಡಿದರು. ಆದರೆ ದಕ್ಷಿಣ ಆಫ್ರಿಕಾದ ತಬ್ರೈಜ್ ಶಮ್ಸಿ ಸ್ಪಿನ್‌ ಮೋಡಿಗೆ ನೇಪಾಳ ಬ್ಯಾಟರ್‌ಗಳು ವಿಕೆಟ್‌ ಕಳೆದುಕೊಂಡರು

ಕುಶಾಲ್ ಭುರ್ಟೆಲ್ (13) ಹಾಗು ನಾಯಕ ರೋಹಿತ್ ಪೌಡೆಲ್ ಶೂನ್ಯಕ್ಕೆ ಔಟ್‌ ಅದರು. ಬಳಿಕ ಒಂದಾದ ಆಸಿಫ್ ಶೇಖ್ ಮತ್ತು ಅನಿಲ್ ಸಾಹ್ ಜೋಡಿ ಅರ್ಧಶತಕದ ಜೊತೆಯಾಟವಾಡಿತು.

ಆಸಿಫ್ ಶೇಖ್ 49 ಎಸೆತಗಲ್ಲಿ 4 ಬೌಂಡರಿ, 1 ಸಿಕ್ಸರ್‌ ನೆರವಿನಿಂದ 41 ರನ್‌ಗಳಿಸಿ ಔಟ್‌ ಆದರೆ, ‌ಅನಿಲ್ ಸಾಹ್ 24 ಎಸೆತಗಳನ್ನು 3 ಬೌಂಡರಿ ಮತ್ತು 1 ಸಿಕ್ಸರ್ ಮೂಲಕ 27 ರನ್ ‌ಹೊಡೆದು ವಿಕೆಟ್‌ ಕಳೆದುಕೊಂಡರು.

ಬಳಿಕ ಕ್ರೀಸ್‌ಗೆ ಬಂದ ಯಾವುದೇ ಬ್ಯಾಟರ್‌ಗಳು ನೇಪಾಳ ತಂಡದ ಗೆಲುವಿಗೆ ಶ್ರಮಿಸಲಿಲ್ಲ. ಕುಶಾಲ್ ಮಲ್ಲಾ(1), ದೀಪೇಂದ್ರ ಸಿಂಗ್ ಐರಿ (6) ಔಟ್‌ ಆದರೆ, ಗುಲ್ಸನ್ ಝಾ (6) ಕೊನೆಯಲ್ಲಿ ತಂಡದ ಗೆಲುವಿಗೆ 1 ಎಸೆತದಲ್ಲಿ ಎರಡು ರನ್‌ ಬೇಕಿದಾಗ ದುರದೃಷ್ಟಕರ ರನೌಟ್‌ ಆದರು.

ಈ ಮೂಲಕ ಹರಿಣಗಳ ಪಡೆ 1 ರನ್‌ನಿಂದ ರೋಚಕ ಪಂದ್ಯವನ್ನು ಗೆದ್ದು ಬೀಗಿತು. ಬೌಲಿಂಗ್‌ನಲ್ಲಿ ತಬ್ರೈಜ್ ಶಮ್ಸಿ 4 ಕಬಳಿಸಿದರೆ, ಆನ್ರಿಚ್ ನಾರ್ಟ್ಜೆ ಮತ್ತು ಐಡೆನ್ ಮಾರ್ಕ್ರಾಮ್ ತಲಾ ಒಂದೊಂದು ವಿಕೆಟ್‌ ಪಡೆದುಕೊಂಡರು.

Story first published: Saturday, June 15, 2024, 8:50 [IST]
Other articles published on Jun 15, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+