ಮೇ 14 ಮಂಗಳವಾರ, 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅಂತಿಮ ಘಟ್ಟದ ತಲುಪಿದೆ. ಶ್ರೀಮಂತ ಕ್ರಿಕೆಟ್ ಲೀಗ್ ಮುಗಿಯುತ್ತಿದ್ದಂತೆ 2024ರ ಐಸಿಸಿ ಪುರುಷರ ಟಿ20 ವಿಶ್ವಕಪ್ ಆರಂಭವಾಗಲಿದೆ.
ಅಮೆರಿಕಾ ಮತ್ತು ವೆಸ್ಟ್ ಇಂಡೀಸ್ ಆತಿಥ್ಯ ವಹಿಸಿರುವ ಈ ಮೆಗಾ ಟೂರ್ನಿಯಲ್ಲಿ ಭಾಗವಹಿಸುತ್ತಿರುವ ಬಹುತೇಕ ತಂಡಗಳು ಈಗಾಗಲೇ ತಮ್ಮ 15 ಸದಸ್ಯರ ಹೆಸರನ್ನು ಪ್ರಕಟಿಸಿದೆ.

ಇದೀಗಾ ಜೂನ್ 1 ರಿಂದ 29 ರವರೆಗೆ ನಡೆಯಲಿರುವ ಟಿ20 ವಿಶ್ವಕಪ್‌ಗೂ ಮುನ್ನ ವನಿಂದು ಹಸರಂಗ ನೇತೃತ್ವದ ಶ್ರೀಲಂಕಾ ಕ್ರಿಕೆಟ್ ತಂಡವು ಅಮೆರಿಕಾಗೆ ಹಾರಿದೆ. ಪ್ರಯಾಣಕ್ಕೂ ಮುನ್ನ ವನಿಂದು ಹಸರಂಗಾ ಸಹಾ ಆಟಗಾರರ ಉಪಸ್ಥಿತಿಯಲ್ಲಿ ದೀಪ ಬೆಳಗಿಸುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದಕ್ಷಿಣ ಆಫ್ರಿಕಾ ವಿರುದ್ಧ ಶ್ರೀಲಂಕಾ ತನ್ನ ಆರಂಭಿಕ ಪಂದ್ಯವನ್ನು ಜೂನ್ 3 ರಂದು ಅಮೇರಿಕಾದ ನಸ್ಸೌ ಕೌಂಟಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಆಡಲಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಶ್ರೀಲಂಕಾ ಟಿ20 ತಂಡದ ನಾಯಕರಾಗಿ ವನಿಂದು ಹಸರಂಗ ನೇಮಕಗೊಂಡಿದ್ದಾರೆ. ಹೀಗಾಗಿ ವನಿಂದು ಹಸರಂಗ ಲಂಕಾ ತಂಡವನ್ನು ಮುನ್ನಡೆಸಲಿದ್ದು, ಮಧ್ಯಮ ಕ್ರಮಾಂಕದ ಬ್ಯಾಟರ್ ಚರಿತ್ ಅಸಲಂಕಾ ಅವರು ಉಪನಾಯಕರಾಗಿದ್ದಾರೆ.
ಶ್ರೀಲಂಕಾ ಕ್ರಿಕೆಟ್ ತಂಡದಲ್ಲಿ ಮತ್ತೊಂದು ಸಂತಸ ಮನೆ ಮಾಡಿದೆ. ಸುಮಾರು ಮೂರು ವರ್ಷಗಳ ನಂತರ ಟಿ20 ಕ್ರಿಕೆಟ್‌ಗೆ ಏಂಜೆಲೊ ಮ್ಯಾಥ್ಯೂಸ್ ವಾಪಸ್ಸು ಆಗಿದ್ದಾರೆ. ಇವರ ಅನುಭವ ತಂಡದಲ್ಲಿರುವ ಯುವ ಆಟಗಾರಿಗೆ ಸ್ಪೂರ್ತಿ ಆಗಿದೆ. ಮ್ಯಾಥ್ಯೂಸ್ 2014ರಲ್ಲಿ ಟಿ 20 ವಿಶ್ವಕಪ್ ಗೆದ್ದ ಲಂಕಾ ತಂಡದಲ್ಲಿದ್ದರು. ಮ್ಯಾಥ್ಯೂಸ್ ಅವರ ಆರನೇ ಟಿ 20 ವಿಶ್ವಕಪ್ ಟೂರ್ನಿ ಆಡುತ್ತಿದ್ದಾರೆ.
ಟಿ20 ವಿಶ್ವಕಪ್‌ಗಾಗಿ ಶ್ರೀಲಂಕಾ ತಂಡ : ವನಿಂದು ಹಸರಂಗ (ನಾಯಕ), ಚರಿತ್ ಅಸಲಂಕಾ (ಉಪನಾಯಕ), ಕುಸಾಲ್ ಮೆಂಡಿಸ್, ಪಾತುಮ್ ನಿಸ್ಸಾಂಕ, ಕಮಿಂದು ಮೆಂಡಿಸ್, ಸದೀರ ಸಮರವಿಕ್ರಮ, ಏಂಜೆಲೊ ಮ್ಯಾಥ್ಯೂಸ್, ದಸುನ್ ಶನಕ, ಧನಂಜಯ ಡಿ ಸಿಲ್ವಾ, ಮಹೇಶ್ ವೆಲ್ಥೆಕ್ಷಣ, ದನಿ ತೀಕ್ಷಣ, , ದುಷ್ಮಂತ ಚಮೀರ, ನುವಾನ್ ತುಷಾರ, ಮಥೀಶ ಪತಿರಣ, ಮತ್ತು ದಿಲ್ಶನ್ ಮಧುಶಂಕ
ಮೀಸಲು ಆಗಾರರು: ಅಸಿತ ಫೆರ್ನಾಂಡೋ, ವಿಜಯಕಾಂತ್ ವ್ಯಾಸಕಾಂತ್, ಭಾನುಕಾ ರಾಜಪಕ್ಸೆ ಮತ್ತು ಜನಿತ್ ಲಿಯಾನಗೆ.