ಜೂನ್ 3 ಸೋಮವಾರ, ಅಮೆರಿಕಾದ ನ್ಯೂಯರ್ಕ್‌ನ ನಸ್ಸೌ ಕೌಂಟಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಸಿಸಿ 2024ರ ಟಿ20 ವಿಶ್ವಕಪ್‌ನ 4ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಬೌಲರ್‌ಗಳ ಬೌಲಿಂಗ್ ದಾಳಿಗೆ ಶ್ರೀಲಂಕಾ ಬ್ಯಾಟರ್‌ಗಳು ತತ್ತರಿಸಿ ಹೋಗಿದ್ದಾರೆ.
ದಕ್ಷಿಣ ಆಫ್ರಿಕಾ ಪರ ಅನ್ರಿಚ್ ನಾರ್ಟ್ಜೆ ಬೆಂಕಿ ಬೌಲಿಂಗ್ ಪ್ರದರ್ಶನ ತೋರಿದರು. ಪರಿಣಾಮ ಶ್ರೀಲಂಕಾ 19.1 ಓವರ್‌ನಲ್ಲಿ ಆಲೌಟ್ ಆಗುವ ಮೂಲಕ ಕೇವಲ 77 ರನ್ ಗಳಿಸಿದೆ. ಬಲಿಷ್ಠ ಹರಿಣಗಳ ಪಡೆ ಗೆಲುವಿಗೆ 78 ರನ್‌ಗಳ ಅವಶ್ಯಕತೆ ಇದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಲೆಕ್ಕಚಾರವನ್ನು ದಕ್ಷಿಣ ಆಫ್ರಿಕಾ ಬೌಲರ್‌ಗಳು ಉಲ್ಟಾ ಮಾಡಿದ್ದಾರೆ. ಬೃಹತ್ ರನ್ ಗಳಿಸುವ ಯೋಚನೆಯಲ್ಲಿ ಪಾತುಮ್ ನಿಸ್ಸಾಂಕ ಮತ್ತು ಕುಸಾಲ್ ಮೆಂಡಿಸ್ ಆರಂಭಿಕರಾಗಿ ಕಣಕ್ಕೀಳಿದಿದ್ದರು. ಆದರೆ ಪಾತುಮ್ ನಿಸ್ಸಾಂಕ ಕೇವಲ 3 ರನ್‌ಗಳಿಸಿ ವಿಕೆಟ್ ಕಳೆದುಕೊಂಡರು.
ಬಳಿಕ ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಕಮಿಂದು ಮೆಂಡಿಸ್ (11) ಮತ್ತು ಆರಂಭಿಕ ಕುಸಾಲ್ ಮೆಂಡಿಸ್ (19) ತಮ್ಮ ಅಬ್ಬರ ತೋರದೆ ಒಂದೇ ಓವರ್‌ನಲ್ಲಿ ಔಟ್ ಆದರು. ಮತ್ತೊಂದೆಡೆ ನಾಯಕ ವನಿಂದು ಹಸರಂಗ ಹಾಗು ಸದೀರ ಸಮರವಿಕ್ರಮ ಬಂದ ದಾರಿಗೆ ಸುಂಕವಿಲ್ಲದಂತೆ ಶೂನ್ಯಕ್ಕೆ ವಿಕೆಟ್ ಕಳೆದುಕೊಂಡು ಶ್ರೀಲಂಕಾ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು.
ಇನ್ನು ಚರಿತ್ ಅಸಲಂಕ (6) ಏಂಜೆಲೊ ಮ್ಯಾಥ್ಯೂಸ್ (16) ಔಟ್ ಆದರೆ, ದಸುನ್ ಶನಕ (9) ಮಹೀಶ್ ತೀಕ್ಷಣ (7), ಮತೀಶ ಪತಿರಣ (0), ವಿಕೆಟ್ ಕಳೆದುಕೊಂಡರು. ನುವಾನ್ ತುಶ್ (0) ರನೌಟ್‌ಗೆ ಬಲಿಯಾದರು.
ದಕ್ಷಿಣ ಆಫ್ರಿಕಾ ಪರ ಸಂಘಟಿಕ ಆಕ್ರಮಣಕಾರಿ ಬೌಲಿಂಗ್ ಪ್ರದರ್ಶನ ಕಂಡು ಬಂತು. ಆನ್ರಿಚ್ ನಾರ್ಟ್ಜೆ 4 ವಿಕೆಟ್ ಕಬಳಿಸಿ ಮಿಂಚಿದರು. ಕೇಶವ್ ಮಹಾರಾಜ್ ಹಾಗು ಕಗಿಸೊ ರಬಾಡಾ ತಲಾ 2 ವಿಕೆಟ್ ಉರುಳಿಸಿದರೆ, ಒಟ್ನೀಲ್ ಬಾರ್ಟ್‌ಮನ್ 1 ವಿಕೆಟ್ ಪಡೆದರು.
ಶ್ರೀಲಂಕಾ ತಂಡ : ಪಾತುಮ್ ನಿಸ್ಸಾಂಕ, ಕುಸಾಲ್ ಮೆಂಡಿಸ್ (ವಿ.ಕೀ), ಕಮಿಂದು ಮೆಂಡಿಸ್, ಸದೀರ ಸಮರವಿಕ್ರಮ, ಚರಿತ್ ಅಸಲಂಕ, ಏಂಜೆಲೊ ಮ್ಯಾಥ್ಯೂಸ್, ದಸುನ್ ಶನಕ, ವನಿಂದು ಹಸರಂಗ (ನಾಯಕ), ಮಹೀಶ್ ತೀಕ್ಷಣ, ಮತೀಶ ಪತಿರಣ, ನುವಾನ್ ತುಶ್
ದಕ್ಷಿಣ ಆಫ್ರಿಕಾ ತಂಡ : ಕ್ವಿಂಟನ್ ಡಿ ಕಾಕ್ (ವಿ.ಕೀ), ರೀಜಾ ಹೆಂಡ್ರಿಕ್ಸ್, ಐಡೆನ್ ಮಾರ್ಕ್ರಾಮ್ (ನಾಯಕ), ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಕಗಿಸೊ ರಬಾಡಾ, ಆನ್ರಿಚ್ ನಾರ್ಟ್ಜೆ, ಒಟ್ನೀಲ್ ಬಾರ್ಟ್‌ಮನ್