For Quick Alerts
ALLOW NOTIFICATIONS  
For Daily Alerts
 

T20 World Cup 2024: ರೋಹಿತ್ ಶರ್ಮಾ-ವಿರಾಟ್‌ ಕೊಹ್ಲಿ-ಬಾಬರ್‌ ಅಜಮ್‌ ನಡುವೆ ಪ್ರಬಲ ಪೈಪೋಟಿ; ಯಾರಾಗ್ತಾರೆ ನಂ.1?

ಜೂನ್‌ 8 ಶನಿವಾರ, 2024ರ ಟಿ20 ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಬಹುನಿರೀಕ್ಷಿತ ಪಂದ್ಯಕ್ಕೆ ಕೇವಲ 1 ದಿನ ಮಾತ್ರ ಉಳಿದಿದೆ. ಜೂನ್ 9 ರಂದು ರೋಹಿತ್ ಶರ್ಮಾ ಮತ್ತು ಬಾಬರ್ ಅಜಮ್ ನಾಯಕತ್ವದ ತಂಡಗಳು ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಲಿವೆ.

ಟಿ20 ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಪಾಕಿಸ್ತಾನದ ದಾಖಲೆ ತುಂಬಾ ಕೆಟ್ಟದಾಗಿದೆ. ಇಲ್ಲಿಯವರೆಗೆ ಆಡಿದ 7 ಪಂದ್ಯಗಳಲ್ಲಿ ಭಾರತ 6 ಪಂದ್ಯ ಗೆದ್ದಿದ್ದರೆ 1ರಲ್ಲಿ ಮಾತ್ರ ಗೆಲುವು ಸಾಧಿಸಿದೆ. ಎರಡೂ ತಂಡಗಳು ಗೆಲ್ಲುವ ನಿರೀಕ್ಷೆಯೊಂದಿಗೆ ಮೈದಾನಕ್ಕೆ ಇಳಿಯಲಿವೆ.

T20 World Cup 2024 Strong rivalry between Rohit Sharma Virat Kohli Babar Azam

ಒಂದೆಡೆ ಪೈಪೋಟಿ ನಡೆಯುತ್ತಿದ್ದರೆ, ಮತ್ತೊಂದೆಡೆ ಪಾಕಿಸ್ತಾನ ನಾಯಕ ಬಾಬರ್ ಅಜಮ್‌, ಟೀಮ್‌ ಇಂಡಿಯಾ ಸ್ಟಾರ್‌ ಬ್ಯಾಟರ್‌ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ನಡುವೆ ನಂಬರ್ 1 ಸ್ಥಾನಕ್ಕೇರುವ ಹೋರಾಟ ನಡೆಯಲಿದೆ.

ಭಾರತ-ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಬಾಬರ್ ಅಜಮ್ ನಡುವೆ ಅತಿ ಹೆಚ್ಚು ಟಿ20 ಅಂತಾರಾಷ್ಟ್ರೀಯ ರನ್ ಗಳಿಸಿದ ಬ್ಯಾಟರ್‌ ಎಂಬ ವಿಶೇಷ ದಾಖಲೆ ಬರೆಯುವ ಅವಕಾಶ ಹೊಂದಿದ್ದಾರೆ. ಬಾಬರ್ ಅಜಮ್ ಕಳೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿ ಅತಿ ಹೆಚ್ಚು ಟಿ20 ಅಂತರಾಷ್ಟ್ರೀಯ ರನ್‌ಗಳಿಸಿದ ಮೊದಲ ಬ್ಯಾಟರ್‌ ಎಂಬ ಹೆಗ್ಗಳಿಕೆ ಪಾತ್ರಾರಾಗಿದ್ದಾರೆ.

ಬಾಬರ್‌ 4067 ರನ್ ಗಳಿಸಿ ಮೊದಲ ಸ್ಥಾನದಲ್ಲಿದರೆ, ಕೊಹ್ಲಿ 4038 ರನ್ ಬಾರಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಮೂರನೇ ಸ್ಥಾನದಲ್ಲಿರುವ ರೋಹಿತ್ ಶರ್ಮಾ 4026 ರನ್ ಹೊಡೆದಿದ್ದಾರೆ. ಹೀಗಿರುವಾಗ ಭಾರತ-ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಈ ಮೂವರ ನಡುವೆ ಕಠಿಣ ಪೈಪೋಟಿ ಏರ್ಪಡಬಹುದು. ಮೊದಲ ಸ್ಥಾನವನ್ನು ಯಾರು ಬೇಕಾದರೂ ತಲುಪಬಹುದು.

T20 World Cup 2024 Strong rivalry between Rohit Sharma Virat Kohli Babar Azam

ಪಾಕಿಸ್ತಾನ ವಿರುದ್ಧ ಕೊಹ್ಲಿ ಮತ್ತು ರೋಹಿತ್ ದಾಖಲೆ

ರೋಹಿತ್ ಶರ್ಮಾ ಕಳೆದ ಕೆಲವು ವರ್ಷಗಳಿಂದ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ಹೇಳಿಕೊಳ್ಳುವಂತ ಪ್ರದರ್ಶನ ನೀಡಿಲ್ಲ. ರೋಹಿತ್ 6 ಪಂದ್ಯಗಳಲ್ಲಿ 17ರ ಸರಾಸರಿಯಲ್ಲಿ ಮತ್ತು 121.42 ಸ್ಟ್ರೈಕ್ ರೇಟ್‌ನಲ್ಲಿ ಕೇವಲ 68 ರನ್ ಗಳಿಸಿದ್ದಾರೆ.

ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್ ಸ್ಟೇಡಿಯಂನಲ್ಲಿ ನಡೆದ 2007ರ ಮೊದಲ ಆವೃತ್ತಿ ಟಿ20 ವಿಶ್ವಕಪ್‌ ಫೈನಲ್‌ನಲ್ಲಿ ಔಟಾಗದೆ 30 ರನ್ ರೋಹಿತ್‌ ಅತ್ಯುತ್ತಮ ಸ್ಕೋರ್ ಆಗಿದೆ. ಪಾಕಿಸ್ತಾನ ವಿರುದ್ಧದ ಕೊನೆಯ 3 ಪಂದ್ಯಗಳಲ್ಲಿ ರೋಹಿತ್ 10, 0 ಮತ್ತು 4 ರನ್ ಗಳಿಸಿದ್ದಾರೆ.

ಇನ್ನೊಂದೆಡೆ ಪಾಕಿಸ್ತಾನ ವಿರುದ್ಧದ ಟಿ20 ವಿಶ್ವಕಪ್‌ನಲ್ಲಿ ಕೊಹ್ಲಿ ಅದ್ಭುತ ದಾಖಲೆಯನ್ನು ಹೊಂದಿದ್ದಾರೆ. ಪಾಕಿಸ್ತಾನ ವಿರುದ್ಧ ಟಿ20 ವಿಶ್ವಕಪ್‌ನ 5 ಪಂದ್ಯಗಳಿಂದ ಕೊಹ್ಲಿ 308 ರನ್ ಗಳಿಸಿದ್ದಾರೆ. ಇದರಲ್ಲಿ ಅಬ್ಬರದ 4 ಅರ್ಧ ಶತಕಗಳು ಸೇರಿವೆ.

T20 World Cup 2024 Strong rivalry between Rohit Sharma Virat Kohli Babar Azam

ಭಾರತದ ವಿರುದ್ಧ ಬಾಬರ್ ಅಜಮ್ ಪ್ರದರ್ಶನ

ಟೀಮ್‌ ಇಂಡಿಯಾ ವಿರುದ್ಧ ಬಾಬರ್ ಅಜಮ್ ದಾಖಲೆ ಕೂಡ ವಿಶೇಷವೇನಲ್ಲ. ಆಡಿರುವ 4 ಪಂದ್ಯಗಳಿಂದ 30.66 ರ ಸರಾಸರಿ ಮತ್ತು 127.77 ರ ಸ್ಟ್ರೈಕ್ ರೇಟ್‌ನಲ್ಲಿ 92 ರನ್ ಗಳಿಸಿದ್ದಾರೆ. ಇದುವರೆಗೆ ಭಾರತದ ವಿರುದ್ಧ ಬಾಬರ್ ಅಜಮ್ ಎರಡು ಟಿ20 ವಿಶ್ವಕಪ್ ಪಂದ್ಯಗಳನ್ನು ಆಡಿದ್ದಾರೆ.

ದುಬೈನಲ್ಲಿ 2021ರ ಟಿ20 ವಿಶ್ವಕಪ್‌ನಲ್ಲಿ ಬಾಬರ್‌ ಅಜೇಯ 68 ರನ್ ಗಳಿಸಿದರು. ಈ ಇನ್ನಿಂಗ್ಸ್‌ನಿಂದಾಗಿ ಪಾಕಿಸ್ತಾನ 10 ವಿಕೆಟ್‌ಗಳಿಂದ ಭಾರತವನ್ನು ಸೋಲಿಸಿತು.

ಇದು ಎಲ್ಲಾ ಮಾದರಿಗಳಲ್ಲಿ ಭಾರತದ ವಿರುದ್ಧ ಪಾಕಿಸ್ತಾನದ ಮೊದಲ ವಿಶ್ವಕಪ್ ಗೆಲುವಾಗಿತ್ತು. 2022ರ ಟಿ20 ವಿಶ್ವಕಪ್‌ನಲ್ಲಿ ಬಾಬರ್ ಅಜಮ್ ಅವರು ಶೂನ್ಯಕ್ಕೆ ಅರ್ಷ್‌ದೀಪ್ ಸಿಂಗ್ ಬೌಲಿಂಗ್‌ನಲ್ಲಿ ಔಟ್‌ ಆಗಿದ್ದರು.

Story first published: Saturday, June 8, 2024, 22:08 [IST]
Other articles published on Jun 8, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+