T20 World Cup 2024: ಅಬ್ಬರದ ಅರ್ಧಶತಕ ಸಿಡಿಸಿದ ವಾರ್ನರ್; ಆಸ್ಟ್ರೇಲಿಯಾ ಎದುರು ಮಂಡಿಯೂರಿದ ಬಾಂಗ್ಲಾ!
ಜೂನ್ 21 ಶುಕ್ರವಾರ, ಆಂಟಿಗುವಾದ ನಾರ್ತ್ ಸೌಂಡ್‌ನಲ್ಲಿರುವ ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ನಡೆದ 2024ರ ಟಿ20 ವಿಶ್ವಕಪ್ ಸೂಪರ್ 8 ಪಂದ್ಯದಲ್ಲಿ ಬಾಂಗ್ಲಾದೇಶ ಎದುರು ಆಸ್ಟ್ರೇಲಿಯಾ ಗೆಲುವಿನ ಕೇಕೆ ಹಾಕಿದೆ.
ಟಿ20 ವಿಶ್ವಕಪ್‌ನ ಸೂಪರ್-8ರ ಪಂದ್ಯದಲ್ಲಿ ಮಳೆ ಅಡ್ಡಿಪಡಿಸಿದ ಕಾರಣ ಆಸ್ಟ್ರೇಲಿಯಾ ತಂಡವು ಡಕ್‌ವರ್ತ್ ಲೂಯಿಸ್ (ಡಿಎಲ್‌ಎಸ್) ನಿಯಮದ ಅಡಿಯಲ್ಲಿ ಬಾಂಗ್ಲಾದೇಶವನ್ನು 28 ರನ್‌ಗಳಿಂದ ಸೋಲಿಸಿದೆ.

ಆಸ್ಟ್ರೇಲಿಯಾ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಇದಾದ ಬಳಿಕ ಆಸ್ಟ್ರೇಲಿಯ ಬಾಂಗ್ಲಾದೇಶವನ್ನು 20 ಓವರ್‌ಗಳಲ್ಲಿ 8 ವಿಕೆಟ್‌ಗೆ 140 ರನ್‌ಗಳಿಗೆ ಕಟ್ಟಿ ಹಾಕಿತ್ತು.
141 ರನ್‌ಗಳ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ 11.2 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 100 ರನ್ ಗಳಿಸಿತ್ತು. ಪಂದ್ಯ ನಡೆಯುವ ಮಧ್ಯೆ ಮಳೆ ಬಂದ ಕಾರಣ ಡಕ್ವರ್ತ್ ಲೂಯಿಸ್ ನಿಯಮದನ್ವಯ 28 ರನ್‌ಗಳಿಂದ ಆಸ್ಟ್ರೇಲಿಯಾ ಜಯ ಸಾಧಿಸಿತು.
ಇಂದಿನ ಪಂದ್ಯದಲ್ಲಿ ಮೊದಲು ಟಾಸ್ ಗೆದ್ದ ಆಸ್ಟ್ರೇಲಿಯಾ ನಾಯಕ ಮಿಚೆಲ್ ಮಾರ್ಷ್ ಬೌಲಿಂಗ್ ಆಯ್ಕೆ ಮಾಡಿಕೊಂಡು, ಬಾಂಗ್ಲಾದೇಶ ತಂಡವನ್ನು ಬ್ಯಾಟಿಂಗ್ಗೆ ಆಹ್ವಾನಿಸಿದರು. ಕಾಂಗೂರು ಪಡೆ ಪರ ಬೌಲಂಗ್ ದಾಳಿಗಿಳಿದ ಎಡಗೈ ವೇಗದ ಬೌಲರ ಮಿಚೆಲ್ ಸ್ಟಾರ್ಕ್ ತಮ್ಮ ಮೂರನೇ ಎಸೆತದಲ್ಲೇ ತಂಝಿದ್ ಹಸನ್ರನ್ನು (0) ಔಟ್ ಮಾಡುವ ಮೂಲಕ ಬಾಂಗ್ಲಾಕ್ಕೆ ಆರಂಭಿಕ ಅಘಾತ ನೀಡಿದರು.
ಇದಾದ ಬಳಿಕ ತಾಳ್ಮೆಯುತ ಆಟವಾಡಿದ ಲಿಟನ್ ದಾಸ್ (16) ಹಾಗೂ ನಾಯಕ ನಜ್ಮುಲ್ ಹೊಸೈನ್ ಶಾಂಟೋ (41) 58 ರನ್ ಜೊತೆಯಾಟದ ಮೂಲಕ ತಂಡಕ್ಕೆ ಆಸರೆಯಾದು. ಈ ವೇಳೆ ಲಿಟನ್ ಔಟಾದ ಬೆನ್ನಲ್ಲೇ ಬಾಂಗ್ಲಾದೇಶ ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತ ಸಾಗಿತು.
ಆ್ಯಡಂ ಜಂಪಾ ತಮ್ಮ ನಾಲ್ಕು ಓವರ್‌ಗಳ ಕೋಟಾದಲ್ಲಿ 24 ರನ್ ಬಿಟ್ಟುಕೊಟ್ಟು ಎರಡು ವಿಕೆಟ್ ಕಿತ್ತು ಕಾಂಗೂರು ಪಡೆ ಮೇಲುಗೈ ಸಾಧಿಸಲು ಸಹಾಯ ಮಾಡಿದರು. ನಂತರ ತೌಹಿದ್ ಹೃದಯ್ 28 ಎಸೆತಗಳಲ್ಲಿ 40 ರನ್ ಗಳಿಸಿ ತಂಡಕ್ಕೆ ನೆರವಾದರೆ, ವೇಗಿ ಟಸ್ಕಿನ್ ಅಹ್ಮದ್ 13 ರನ್ ಕಾಣಿಕೆ ನೀಡಿದರು.
ಶಕಿಬ್ (8) ಸೇರಿದಂತೆ ಇನ್ನುಳಿದ ಬ್ಯಾಟರ್‌ಗಳಿಂದ ಎರಡಂಕಿ ಮೊತ್ತ ಕಲೆ ಹಾಕಲು ಸಾಧ್ಯವಾಗಲ್ಲ. ರಿಶದ್ ಹೊಸೈನ್, ಮೊಹಮ್ಮದುಲ್ಲಾ ತಲಾ 2 ರನ್ ಹಾಗು ಮಹೆದಿ ಹಸನ್ ಶೂನ್ಯಕ್ಕೆ ಔಟಾದರು. ಹೀಗಾಗಿ ಬಾಂಗ್ಲಾದೇಶ ನಿಗದಿತ 20 ಓವರ್‌ಗಳಲ್ಲ 8 ವಿಕೆಟ್ ನಷ್ಟಕ್ಕೆ 140 ರನ್ ಗಳಿಸಲಷ್ಟೇ ಶಕ್ತವಾಯಿತು.
ಕಾಂಗೂರು ಪಡೆ ಚೇಸಿಂಗ್
ಬಾಂಗ್ಲಾ ನೀಡಿದ 141 ರನ್ ಗುರಿ ಬೆನ್ನಟ್ಟಿದ ಕಾಂಗರೂ ಪಡೆಗೆ ಭರ್ಜರಿ ಆರಂಭ ದೊರೆಯಿತು. ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್ (53*) ಹಾಗೂ ಟ್ರಾವಿಸ್ ಹೆಡ್ ಮೊದಲ ವಿಕೆಟ್‌ಗೆ 6.5 ಓವರ್‌ಗಳಲ್ಲಿ 65 ರನ್ ಕಲೆ ಹಾಕಿದರು. ಇಂತಹ ಪರಿಸ್ಥಿತಿ ಅದ್ಭುತವಾಗಿ ಆಡುತ್ತಿದ್ದ ಹೆಡ್ 31 ರನ್ಗೆ ಔಟಾದರು.
ಬಳಿಕ ಮೂರನೇ ಕ್ರಮಾಂಕದಲ್ಲಿ ಬಂದ ನಾಯಕ ಮಿಚೆಲ್ ಮಾರ್ಷ್ ಕೇವಲ 1 ರನ್ಗೆ ವಿಕೆಟ್ ಕಳೆದುಕೊಳ್ಳುವ ಮೂಲಕ ನಿರಾಸೆ ಮೂಡಿಸಿದರು. ನಂತರ ನಾಲ್ಕನೇ ಕ್ರಮಾಂಕದಲ್ಲಿ ವಾರ್ನರ್ ಜೊತೆಗೂಡಿದ ಗ್ಲೆನ್ ಮ್ಯಾಕ್ಸ್‌ವೆಲ್ ತಲಾ ಸಿಕ್ಸರ್ ಹಾಗೂ ಬೌಂಡರಿ ಸಹಿತ 14* ರನ್ ಗಳಿಸಿದ್ದರು.
ಈ ಸಮಯದಲ್ಲ ವೇಳೆ ಮಳೆ ಶುರುವಾಯಿತು. ಆಗ ಕಾಂಗೂರು ಪಡೆ 11.2 ಓವರ್‌ಗಳಲ್ಲಿ 2 ವಿಕೆಟ್‌ಗೆ 100 ರನ್ ಗಳಿಸಿತ್ತು. ತದನಂತರ ಮಳೆ ನಿಲ್ಲದ ಕಾರಣ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಆಸ್ಟ್ರೇಲಿಯಾವನ್ನು 28 ರನ್‌ಗಳಿಂದ ವಿಜೇತ ತಂಡ ಎಂದು ಘೋಷಿಸಲಾಯಿತು. ಈ ಮೂಲಕ ಸೂಪರ್-8 ಹಂತದಲ್ಲಿ ಮಾರ್ಷ್ ಪಡೆ ಗೆಲುವಿನ ಆರಂಭ ಪಡೆಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications