Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

T20 World Cup 2024: ಸೂಪರ್-8 ಸುತ್ತಿಗೆ ಎಂಟ್ರಿ ಕೊಟ್ಟ ಟೀಮ್ ಇಂಡಿಯಾ ವೇಳಾಪಟ್ಟಿ!

ಜೂನ್‌ 14 ಶುಕ್ರವಾರ, ವೆಸ್ಟ್ ಇಂಡೀಸ್ ಮತ್ತು ಅಮೆರಿಕಾ ಜಂಟಿಯಾಗಿ ಆತಿಥ್ಯ ವಹಿಸಿರುವ ಐಸಿಸಿ ಟಿ20 ವಿಶ್ವಕಪ್ 2024ರ ಗುಂಪು ಹಂತವು ಈಗ ಅಂತಿಮ ಘಟ್ಟದಲ್ಲಿದೆ. ಇದಾದ ಬಳಿಕ ಟೂರ್ನಿ ಸೂಪರ್-8 ಸುತ್ತು ನಡೆಯಲಿದೆ.

ಇದರಲ್ಲಿ ಅಗ್ರ 8 ತಂಡಗಳು ಸೆಮಿಫೈನಲ್ ತಲುಪಲು ಪರಸ್ಪರ ಪೈಪೋಟಿ ನಡೆಸಲಿವೆ. ಗುಂಪು ಹಂತದಲ್ಲಿ ಐರ್ಲೆಂಡ್, ಪಾಕಿಸ್ತಾನ ಮತ್ತು ಯುಎಸ್ಎ ತಂಡಗಳನ್ನು ಸೋಲಿಸುವ ಮೂಲಕ ಟೀಮ್‌ ಇಂಡಿಯಾ ಸೂಪರ್-8ಕ್ಕೆ ಆರ್ಹತೆ ಪಡೆದಿದೆ. ಟಿ20 ವಿಶ್ವಕಪ್‌ 2024ರ ಸೂಪರ್ -8 ರಲ್ಲಿ ಭಾರತದ ವೇಳಾಪಟ್ಟಿ ಹೀಗಿದೆ.

T20 World Cup 2024 Super-8 Team India Schedule

ಭಾರತ ತಂಡವು ಸೂಪರ್ -8 ರಲ್ಲಿ ಗುಂಪು -1 ರಲ್ಲಿ ಸ್ಥಾನ ಪಡೆದಿದೆ. ಈ ಹಂತದಲ್ಲಿ ಟೀಮ್‌ ಇಂಡಿಯಾ ತನ್ನ ಗುಂಪಿನ 3 ತಂಡಗಳ ವಿರುದ್ಧ 3 ಪಂದ್ಯಗಳನ್ನು ಆಡಬೇಕಿದೆ.

ಭಾರತದ ಜೊತೆಗೆ ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನ ತಂಡಗಳು ಕೂಡ ಗುಂಪು-1ರಲ್ಲಿ ಸ್ಥಾನ ಪಡೆದಿವೆ. ಈ ಎರಡೂ ತಂಡಗಳು ಸೂಪರ್-8ಗೆ ಲಗ್ಗೆ ಇಟ್ಟಿವೆ. ನಾಲ್ಕನೇ ತಂಡ ಯಾವುದು ಎಂಬುದು ಇನ್ನೂ ತಿಳಿದಿಲ್ಲ. ಗುಂಪು ಹಂತದ ಅಂತ್ಯದ ವೇಳೆಗೆ ಈ ನಾಲ್ಕನೇ ತಂಡದ ಹೆಸರೂ ಬಹಿರಂಗವಾಗಲಿದೆ.

ಭಾರತ ತನ್ನ ಮೊದಲ ಪಂದ್ಯವನ್ನು ಸೂಪರ್-8 ರಲ್ಲಿ ಜೂನ್ 20 ರಂದು ಬಾರ್ಬಡೋಸ್‌ನಲ್ಲಿ ಅಫ್ಘಾನಿಸ್ತಾನ ವಿರುದ್ಧ ಆಡಲಿದೆ. ಟೀಮ್‌ ಇಂಡಿಯಾ ತನ್ನ ಎರಡನೇ ಪಂದ್ಯವನ್ನು ಜೂನ್ 22 ರಂದು ಆಂಟಿಗುವಾದಲ್ಲಿ ಆಡಲಿದ್ದು, ಯಾವ ತಂಡ ಎಂಬುದು ಇನ್ನು ತಿಳಿದಿಲ್ಲ.

ಆದರೆ ಡಿ ಗುಂಪುನಲ್ಲಿ ಎರಡನೇ ಸ್ಥಾನದಲ್ಲಿರುವ ತಂಡವನ್ನು ಭಾರತ ಎದುರಿಸಲಿದೆ. ಇದಾದ ನಂತರ ಭಾರತವು ತನ್ನ ಸೂಪರ್-8 ಹಂತದ ಮೂರನೇ ಪಂದ್ಯವನ್ನು ಜೂನ್ 24 ರಂದು ಸೇಂಟ್ ಲೂಸಿಯಾದಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಲಿದೆ.

ಟಿ20 ವಿಶ್ವಕಪ್‌ನ ನಾಲ್ಕು ಗುಂಪುಗಳ ಟಾಪ್-2 ತಂಡಗಳು ಸೂಪರ್-8 ಹಂತವನ್ನು ತಲುಪುತ್ತವೆ. ಸೂಪರ್ 8 ಹಂತದಲ್ಲಿ ಅಗ್ರ 8 ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗುತ್ತದೆ.

ಇದರಲ್ಲಿ 4 ಸೆಮಿ-ಫೈನಲಿಸ್ಟ್ ತಂಡಗಳನ್ನು ನಿರ್ಧರಿಸಲು ಎಲ್ಲಾ ತಂಡಗಳು ತಮ್ಮ ಗುಂಪಿನಲ್ಲಿರುವ ತಂಡಗಳ ವಿರುದ್ಧ 3 ಪಂದ್ಯಗಳನ್ನು ಆಡಬೇಕಾಗುತ್ತದೆ. ಪ್ರತಿ ಸೂಪರ್-8 ಗುಂಪಿನ ಅಗ್ರ 2 ತಂಡಗಳ ನಡುವೆ ಸೆಮಿಫೈನಲ್ ಪಂದ್ಯಗಳು ನಡೆಯಲಿವೆ. ಅಂತಿಮವಾಗಿ ವಿಜೇತ ಎರಡು ತಂಡಗಳು ಜೂನ್ 29 ರಂದು ಬಾರ್ಬಡೋಸ್‌ನಲ್ಲಿ ಫೈನಲ್ ಪಂದ್ಯವನ್ನು ಆಡಲಿವೆ.

Story first published: Friday, June 14, 2024, 21:59 [IST]
Other articles published on Jun 14, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+