T20 World Cup 2024: ಬಾರ್ಬಡೋಸ್‌ನಲ್ಲಿ ಬೀಚ್ ವಾಲಿಬಾಲ್ ಆಡಿದ ಟೀಮ್ ಇಂಡಿಯಾ ಆಟಗಾರರು; ವಿಡಿಯೋ ವೈರಲ್!
ಜೂನ್ 17 ಸೋಮವಾರ, 2024ರ ಐಸಿಸಿ ಪುರುಷರ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ಅಮೋಘ ಪ್ರದರ್ಶನ ನೀಡುವ ಮೂಲಕ ವಿಜಯ ಯಾತ್ರೆ ಆರಂಭಿಸಿದೆ. 'ಎ' ಗುಂಪಿನಲ್ಲಿ ಆಡಿದ 4 ಪಂದ್ಯಗಳನ್ನು ಗೆದ್ದ ಟೀಮ್ ಇಂಡಿಯಾ ಸೂಪರ್-8 ಸುತ್ತಿಗೆ ಆರ್ಹತೆ ಪಡೆದಿದೆ.
ಗುಂಪು ಹಂತದ ಪಂದ್ಯದಲ್ಲಿ ಮೊದಲು ಐರ್ಲೆಂಡ್ ವಿರುದ್ಧ ಗೆಲುವು ಕಂಡ ಭಾರತ ಬಳಿಕ ಬದ್ಧ ವೈರಿ ಪಾಕಿಸ್ತಾನ ತಂಡವನ್ನು ಹೀನಾಯವಾಗಿ ಸೋಲಿಸಿತ್ತು. ಇದಾದ ನಂತರ ಯುಎಸ್‌ಎ ತಂಡದ ಎದುರು ಭಾರತ ತಂಡವು ಗೆದ್ದರೆ, ಕೆನಾಡ ವಿರುದ್ಧದ ಪಂದ್ಯ ಮಳೆಯಿಂದ ರದ್ದಾಗಿತ್ತು.

ಹೀಗಾಗಿ 7 ಅಂಕಗಳನ್ನು ಪಡೆದ ಟೀಮ್ ಇಂಡಿಯಾ 'ಎ' ಗುಂಪಿನಲ್ಲಿ ಆಗ್ರಸ್ಥಾನ ಪಡೆಯುವ ಮೂಲಕ ಸೂಪರ್-8 ಸುತ್ತಿಗೆ ಎಂಟ್ರಿ ಕೊಟ್ಟಿತ್ತು. ಇದೀಗಾ ರೋಹಿತ್ ಶರ್ಮಾ ನಾಯಕತ್ವದಲ್ಲಿ ಸೂಪರ್-8 ರ ಮುಂದಿನ ಪಂದ್ಯಗಳನ್ನು ಆಡಲು ಟೀಮ್ ಇಂಡಿಯಾ ಫ್ಲೋರಿಡಾದಿಂದ ಬಾರ್ಬಡೋಸ್ ತಲುಪಿದೆ.
ಜೂನ್ 20 ರಂದು (ಗುರುವಾರ) ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್ ಬ್ರಿಡ್ಜ್‌ಟೌನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಟೀಮ್ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಅಫ್ಘಾನಿಸ್ತಾನ ವಿರುದ್ಧ ಆಡಲಿದೆ. ಈ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಆಟಗಾರರು ಸಾಕಷ್ಟು ಎಂಜಾಯ್ ಮಾಡಿದ್ದು, ಈ ವಿಡಿಯೋವನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ಟ್ವೀಟರ್ (ಎಕ್ಸ್) ಖಾತೆಯಲ್ಲಿ ಹಂಚಿಕೊಂಡಿದೆ.
ಪೋಸ್ಟ್ ಮಾಡಿರುವ ವಿಡಿಯೋ ಮೇಲೆ 'ಬಾರ್ಬಡೋಸ್‌ನ ಬೀಚ್‌ನಲ್ಲಿ ಟೀಮ್ ಇಂಡಿಯಾದ ವಿಶೇಷ ಶೈಲಿ' ಎಂದು ಬಿಸಿಸಿಐ ಶೀರ್ಷಿಕೆ ಬರೆದಿದೆ. ವಿಡಿಯೋದಲ್ಲಿ ಟೀಮ್ ಇಂಡಿಯಾ ಆಟಗಾರರ ಸಾಕಷ್ಟು ಮೋಜು ಮಸ್ತಿ ಮಾಡಿದ್ದಾರೆ. ಬಾರ್ಬಡೋಸ್‌ನ ಬೀಚ್‌ನಲ್ಲಿ ವಾಲಿಬಾಲ್ ಆಡಿ ಬೆವರು ಸುರಿಸಿದ್ದಾರೆ.
ಜೊತೆಗೆ ಮುಂದಿನ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವನ್ನು ಮಣಿಸಲು ಟೀಮ್ ಇಂಡಿಯಾ ಸಜ್ಜಾಗುತ್ತಿದೆ. ಟೀಮ್ ಇಂಡಿಯಾ ಆಟಗಾರರು ಮರಳಿನಲ್ಲಿ ಬಹಳ ಉತ್ಸಾಹ ಮತ್ತು ಆನಂದದಿಂದ ವಾಲಿಬಾಲ್ ಆಡಿದ್ದಾರೆ.
ವೀಡಿಯೊದ ಆರಂಭದಲ್ಲಿ ಕಾಣಿಸಿಕೊಂಡಿರುವ ಹಾರ್ದಿಕ್ ಪಾಂಡ್ಯ ಮತ್ತು ವಿರಾಟ್ ಕೊಹ್ಲಿ ಪರಸ್ಪರ ನಡೆದುಕೊಂಡು ಹೋಗುತ್ತಾರೆ. ಇದಾದ ನಂತರ ರಿಂಕು ಸಿಂಗ್, ಖಲೀಲ್ ಅಹ್ಮದ್ ಮತ್ತು ಯುಜ್ವೇಂದ್ರ ಚಹಾಲ್ ಕೂಡ ಅದ್ಭುತವಾಗಿ ವಾಲಿಬಾಲ್ ಆಡಿರುವುದು ವಿಡಿಯೋದಲ್ಲಿ ಸೆರೆ ಆಗಿದೆ.
ಅಲ್ಲದೆ ಸಂಜು ಸ್ಯಾಮ್ಸನ್, ಶಿವಂ ದುಬೆ, ಅರ್ಷದೀಪ್ ಕೂಡ ಕಾಣಿಸಿಕೊಂಡಿದ್ದು, ವೇಗ ಬೌಲರ್ ಖಲೀಲ್ ಅಹ್ಮದ್ ನಮ್ಮ ತಂಡದಲ್ಲಿ ಉತ್ತಮ ಆಟಗಾರರಿದ್ದಾರೆ ಎಂದು ಹೇಳಿರುವುದು ರೆಕಾರ್ಡ್ ಆಗಿದೆ. ಟೀಮ್ ಇಂಡಿಯಾ ಎಲ್ಲಾ ಆಟಗಾರರು ತುಂಬಾ ಖುಷಿಯಿಂದ ವಾಲಿಬಾಲ್ ಆಡಿದ್ದಾರೆ.
ಸೂಪರ್-8 ರಲ್ಲಿ ಭಾರತದ ಪಂದ್ಯಗಳು
ಭಾರತ ತಂಡವು ಜೂನ್ 20 ರಂದು ಬಾರ್ಬಡೋಸ್‌ನಲ್ಲಿ ಅಫ್ಘಾನಿಸ್ತಾನ ವಿರುದ್ಧ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ಇದರ ನಂತರ ಮುಂದಿನ ಪಂದ್ಯದಲ್ಲಿ ಭಾರತವು ಆಂಟಿಗುವಾದಲ್ಲಿ ಜೂನ್ 22 ರಂದು ಬಾಂಗ್ಲಾದೇಶವನ್ನು ಎದುರಿಸಲಿದೆ.
ಮೆನ್ ಇನ್ ಬ್ಲೂ ತನ್ನ ಅಂತಿಮ ಮತ್ತು ಮೂರನೇ ಪಂದ್ಯವನ್ನು ಸೇಂಟ್ ಲೂಸಿಯಾದಲ್ಲಿ ಆಸ್ಟ್ರೇಲಿಯಾ ವಿರುದ್ಧ ಜೂನ್ 24 ರಂದು ಆಡಲಿದೆ. ಭಾರತದ ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಆರಂಭವಾಗಲಿವೆ. ರೋಹಿತ್ ಪಡೆ ಈ 3 ಪಂದ್ಯಗಳಲ್ಲಿ ಎರಡರಲ್ಲಿ ಗೆದ್ದರೆ ಸೆಮಿಫೈನಲ್‌ಗೆ ಲಗ್ಗೆ ಇಡಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications