ಟಿ20 ವಿಶ್ವಕಪ್ 2024: ಐಪಿಎಲ್ ಫೈನಲ್‌ಗೂ ಮುನ್ನ ನ್ಯೂಯಾರ್ಕ್‌ಗೆ ಪ್ರಯಾಣಿಸಲಿದೆ ಟೀಮ್ ಇಂಡಿಯಾ
ಇದೇ ಜೂನ್ 2ರಿಂದ ಯುಎಸ್ಎ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ನಡೆಯಲಿರುವ 2024ರ ಐಸಿಸಿ ಟಿ20 ವಿಶ್ವಕಪ್‌ಗೆ ದಿನಗಣನೆ ಆರಂಭವಾಗಿದ್ದು, ಮತ್ತೊಂದು ಕ್ರಿಕೆಟ್ ಹಬ್ಬಕ್ಕೆ ಅಭಿಮಾನಿಗಳು ಸಜ್ಜಾಗಿದ್ದಾರೆ.
ಇದೇ ವೇಳೆ, 2024ರ ಟಿ20 ವಿಶ್ವಕಪ್‌ಗಾಗಿ ಬಹುಪಾಲು ಭಾರತ ಕ್ರಿಕೆಟ್ ತಂಡದ ಆಟಗಾರರು ಮತ್ತು ಕೋಚಿಂಗ್ ಸಿಬ್ಬಂದಿ ನಿಯೋಗವು ಮೇ 25ರಂದು ನ್ಯೂಯಾರ್ಕ್‌ಗೆ ತೆರಳಲು ಸಜ್ಜಾಗಿದೆ. ಇನ್ನು ಉಳಿದ ಕೆಲವ ಆಟಗಾರರು ಮೇ 26ರಂದು ನಡೆಯುವ ಐಪಿಎಲ್ ಫೈನಲ್ ಪಂದ್ಯದ ನಂತರ ಯುಎಸ್ಎನಲ್ಲಿ ಭಾರತ ತಂಡವನ್ನು ಕೂಡಿಕೊಳ್ಳಲಿದ್ದಾರೆ.

ಗಮನಾರ್ಹವಾಗಿ, ಐಪಿಎಲ್ ಪ್ಲೇಆಫ್ ಆಡದ ತಂಡಗಳ ಭಾರತೀಯ ತಂಡದ ಆಟಗಾರರು ಮೇ 19ರಂದು ಅಂತಿಮ ಲೀಗ್ ಪಂದ್ಯದ ನಂತರ ಮೇ 21ರಂದು ಯುಎಸ್‌ಎಗೆ ನಿರ್ಧರಿಸಲಾಗಿತ್ತು. ಆದರೆ ಯೋಜನೆಗಳು ಬದಲಾಗಿದ್ದು, ಇದೀಗ ಮೊದಲ ಗುಂಪು ಮೇ 25ರಂದು ಭಾರತದಿಂದ ನಿರ್ಗಮಿಸಲಿದೆ.
ಐಪಿಎಲ್ ಫೈನಲ್‌ನಲ್ಲಿರುವ ತಂಡಗಳ ಆಟಗಾರರು ಮಾತ್ರ ಮೇ 27ರಂದು ನ್ಯೂಯಾರ್ಕ್‌ಗೆ ಹೊರಡಲಿದ್ದಾರೆ. ಇದು ಬಾಂಗ್ಲಾದೇಶ ವಿರುದ್ಧದ ಅಭ್ಯಾಸ ಪಂದ್ಯಕ್ಕೂ ಮೊದಲು ಕೆಲವು ಉತ್ತಮ ಅಭ್ಯಾಸ ಅವಧಿಗಳನ್ನು ಪಡೆಯಲು ಸಮಯವನ್ನು ಪಡೆಯುತ್ತದೆ.
ಸಂಜು ಸ್ಯಾಮ್ಸನ್, ಯಶಸ್ವಿ ಜೈಸ್ವಾಲ್ ಮತ್ತು ಯುಜ್ವೇಂದ್ರ ಚಾಹಲ್ ಅವರು ಐಪಿಎಲ್ 2024ರ ಅಗ್ರ-2ರ ಸ್ಥಾನದಲ್ಲಿರುವ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಸೇರಿದ್ದಾರೆ.
2024ರ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡದ ಮೊದಲ ಪಂದ್ಯ ಜೂನ್ 5ರಂದು ಐರ್ಲೆಂಡ್ ವಿರುದ್ಧ, ನಂತರ ಜೂನ್ 9ರಂದು ಪಾಕಿಸ್ತಾನ ವಿರುದ್ಧ ಹೈ-ವೋಲ್ಟೇಜ್ ಪಂದ್ಯದಲ್ಲಿ ಸೆಣಸಾಡಲಿದೆ.
"ಭಾರತ ತಂಡದ ನಾಯಕ ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್, ಜಸ್ಪ್ರೀತ್ ಬುಮ್ರಾ, ರಿಷಭ್ ಪಂತ್, ಅರ್ಶ್‌ದೀಪ್ ಸಿಂಗ್, ಅಕ್ಷರ್ ಪಟೇಲ್ ಅವರಂತಹ ಕೆಲವು ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಮೇ 25ರಂದು ನ್ಯೂಯಾರ್ಕ್‌ಗೆ ತೆರಳುವ ನಿರೀಕ್ಷೆಯಿದೆ".
"ಈ ಮೊದಲು, ಮೊದಲ ಬ್ಯಾಚ್‌ನ ನಿರ್ಗಮನದ ದಿನಾಂಕ ಮೇ 21 ಆಗಿತ್ತು. ಆದರೆ ಭಾರತ ಕೇವಲ ಒಂದು ಅಭ್ಯಾಸ ಪಂದ್ಯವನ್ನು (ಜೂನ್ 1ರಂದು ಬಾಂಗ್ಲಾದೇಶ ವಿರುದ್ಧ) ಆಡುತ್ತಿರುವುದರಿಂದ ಆಟಗಾರರು ಕೆಲವು ಹೆಚ್ಚುವರಿ ದಿನಗಳನ್ನು ತವರಿನಲ್ಲಿಯೇ ಕಳೆಯುತ್ತಾರೆ," ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
2024ರ ಟಿ20 ವಿಶ್ವಕಪ್‌ಗೆ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್. ಸಿರಾಜ್.
ಪ್ರಯಾಣ ಮೀಸಲು ಆಟಗಾರರು: ಶುಭ್ಮನ್ ಗಿಲ್, ರಿಂಕು ಸಿಂಗ್, ಅವೇಶ್ ಖಾನ್, ಖಲೀಲ್ ಅಹ್ಮದ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications