T20 World Cup 2024: ಸೂಪರ್-8ನಲ್ಲಿ ಎರಡು ವಿಶ್ವಕಪ್ ಸೋಲಿಗೆ ಟೀಮ್ ಇಂಡಿಯಾ ಸೇಡು ತೀರಿಸಿಕೊಳ್ಳುತ್ತಾ?
ಜೂನ್ 14 ಶುಕ್ರವಾರ, ಐಸಿಸಿ ಟಿ20 ವಿಶ್ವಕಪ್ 2024ರಲ್ಲಿ ಲೀಗ್ ಸುತ್ತು ಅಂತಿಮ ಹಂತವನ್ನು ತಲುಪಿದೆ. ಸೂಪರ್-8 ಆರಂಭಕ್ಕೆ ಒಂದು ವಾರ ಬಾಕಿ ಇದೆ.
ಒಂದೆಡೆ ಟೀಮ್ ಇಂಡಿಯಾ ಈಗಾಗಲೇ ಸೂಪರ್-8ರ ಟಿಕೆಟ್ ಬುಕ್ ಮಾಡಿದ್ದರೆ, ಮತ್ತೊಂದೆಡೆ ಭಾರತದ ವೈರಿ ಎಂದೇ ಕರೆಯುವ ತಂಡ ಕೂಡ ಸೂಪರ್-8ರಲ್ಲಿ ರೋಹಿತ್ ಪಡೆಗಾಗಿ ಕಾಯುತ್ತಿದೆ.

ಕಳೆದ ಎರಡು ವರ್ಷಗಳಲ್ಲಿ ಭಾರತದ ಐಸಿಸಿ ಟ್ರೋಫಿ ಗೆಲ್ಲುವ ಓಟಕ್ಕೆ ಆಸ್ಟ್ರೇಲಿಯಾ ಬ್ರೇಕ್ ಹಾಕುವ ಮೂಲಕ ಕೋಟ್ಯಾಂತರ ಭಾರತೀಯ ಅಭಿಮಾನಿಗಳ ನಿದ್ದೆಗೆಡಿಸಿದೆ. ಹೀಗಾಗಿ ಈ ಬಾರಿ ಟಿ20 ವಿಶ್ವಕಪ್‌ನಲ್ಲಿ ರೋಹಿತ್ ಸೋಲಿನ ಸೇಡಿಗಾಗಿ ಸಜ್ಜಾಗಿದೆ.
ಭಾರತ ಮತ್ತು ಪಾಕಿಸ್ತಾನದ ನಂತರ ಟೀಮ್ ಇಂಡಿಯಾ ಮತ್ತು ಆಸ್ಟ್ರೇಲಿಯಾ ಪಂದ್ಯವನ್ನು ಎರಡನೇ ಅತಿದೊಡ್ಡ ಪೈಪೋಟಿ ಎಂದು ಕರೆಯದರೆ ತಪ್ಪಾಗುವುದಿಲ್ಲ. ಪ್ಯಾಟ್ ಕಮ್ಮಿನ್ಸ್ ನಾಯಕತ್ವದ ಕಾಂಗೂರು ಪಡೆ ಟೀಮ್ ಇಂಡಿಯಾದಿಂದ ಎರಡು ಐಸಿಸಿ ಟ್ರೋಫಿಗಳನ್ನು ಕಸಿದುಕೊಂಡಿದೆ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಟೀಮ್ ಇಂಡಿಯಾವನ್ನು ಸೋಲಿಸಿದ ಆಸ್ಟ್ರೇಲಿಯಾ ನಂತರ 2023ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಭಾರತದಿಂದ ಪ್ರಶಸ್ತಿಯನ್ನು ವಶಪಡಿಸಿಕೊಂಡಿದೆ. ಈ ಎರಡು ಸೋಲುಗಳಿಂದ ಭಾರತ ಇನ್ನಷ್ಟು ಬಲಿಷ್ಠವಾಗಿ ಟಿ20 ವಿಶ್ವಕಪ್ 2024ರಲ್ಲಿ ಕಣಕ್ಕೀಳಿದೆ.
ಸೋಲಿನ ಸೇಡು ಯಾವಾಗ
ಟಿ20 ವಿಶ್ವಕಪ್‌ನ 'ಎ' ಗುಂಪಿನಲ್ಲಿ ಮೊದಲ ಸ್ಥಾನ ಪಡೆಯುವ ಮೂಲಕ ಭಾರತ ತಂಡ ಸೂಪರ್-8ಗೆ ಅರ್ಹತೆ ಪಡೆದಿದೆ. ಟೀಮ್ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಸೂಪರ್-8ರಲ್ಲಿ ಜೂನ್ 20 ರಂದು 'ಸಿ' ಗುಂಪಿನಲ್ಲಿ ಮೊದಲ ಸ್ಥಾನ ಪಡೆದ ತಂಡದ ವಿರುದ್ಧ ಆಡಲಿದೆ.
ಜೂನ್ 22 ರಂದು ಟೀಮ್ ಇಂಡಿಯಾ ಎರಡನೇ ಪಂದ್ಯವನ್ನು ಆಡಲಿದ್ದು, ಇದರಲ್ಲಿ ತಂಡವು 'ಡಿ' ಗುಂಪಿನಲ್ಲಿ ಎರಡನೇ ಸ್ಥಾನದಲ್ಲಿರುವ ತಂಡವನ್ನು ಎದುರಿಸಲಿದೆ. ಈ ತಂಡಗಳನ್ನು ಇನ್ನೂ ನಿರ್ಧರಿಸಲಾಗಿಲ್ಲ.
ಇದಲ್ಲದೆ, ಜೂನ್ 24 ರಂದು ಸೇಂಟ್ ಲೂಸಿಯಾದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ (IND vs AUS) ನಡುವಿನ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಈ ವೇಳೆ ಆಸ್ಟ್ರೇಲಿಯಾ ವಿರುದ್ಧ ಎರಡು ವಿಶ್ವಕಪ್ ಸೋಲಿನ ಸೇಡು ತೀರಿಸಿಕೊಳ್ಳುವ ಮೂಲಕ ಟೂರ್ನಿಯಿಂದ ಹೊರ ಹಾಕುವ ಸುವರ್ಣಾವಕಾಶವಿದೆ.
ಭಾರತಕ್ಕೆ ಟ್ರಾವಿಸ್ ಹೆಡ್ ವಿಲನ್
ಟೀಮ್ ಇಂಡಿಯಾಕ್ಕೆ ಆಸ್ಟ್ರೇಲಿಯಾದ ಎಡಗೈ ಸ್ಪೋಟಕ ಆರಂಭಿಕ ಬ್ಯಾಟರ್ ಟ್ರಾವಿಸ್ ಹೆಡ್ ಸಾಕಷ್ಟು ಕಾಟ ನೀಡಿದ್ದಾರೆ. ಹೀಗಾಗಿ ಹೆಡ್ ವಿರುದ್ಧ ಭಾರತ ತಂಡದ ಬೌಲರ್‌ಗಳು ಮಾಸ್ಟರ್ ಪ್ಲಾನ್ ಮಾಡಬೇಕಾಗಿದೆ.
ಹೆಡ್ ಆಸ್ಟ್ರೇಲಿಯಾದ ಸಾಮಾನ್ಯ ಆಟಗಾರನಲ್ಲ. ಆದರೆ ಈ ಆಟಗಾರ ಭಾರತದಿಂದ ಎರಡು ಐಸಿಸಿ ಟ್ರೋಫಿಗಳನ್ನು ಕಸಿದುಕೊಂಡಿದ್ದಾನೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಥವಾ ಏಕದಿನ ವಿಶ್ವಕಪ್ ಫೈನಲ್ ಎರಡರಲ್ಲೂ ಟ್ರಾವಿಸ್ ಶತಕ ಗಳಿಸಿ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡಿದರು.
ಟಿ20 ವಿಶ್ವಕಪ್ 2024ರಲ್ಲೂ ಟ್ರಾವಿಸ್ ಹೆಡ್ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಆಡಿರುವ 3 ಪಂದ್ಯಗಳಲ್ಲಿ 12, 34, 34* ರನ್‌ಗಳ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications