For Quick Alerts
ALLOW NOTIFICATIONS  
For Daily Alerts
 

T20 World Cup 2024: ಸೂಪರ್ 8ರಲ್ಲಿ ಭಾರತ ತಂಡದ ವೇಳಾಪಟ್ಟಿ; ಪಂದ್ಯದ ಸಮಯ, ಸ್ಥಳ ದಿನಾಂಕ

2024ರ ಐಸಿಸಿ ಟಿ20 ವಿಶ್ವಕಪ್‌ ಪಂದ್ಯಾವಳಿಯ ಸೂಪರ್ 8ರ ಹಂತವು ಜೂನ್ 19ರಿಂದ ಪ್ರಾರಂಭವಾಗಲಿದೆ. ಎಂಟು ತಂಡಗಳಲ್ಲಿ ಈಗಾಗಲೇ ಏಳು ತಂಡಗಳು ಅರ್ಹತೆ ಪಡೆದಿವೆ.

ಪ್ರಸಕ್ತ ಟಿ20 ವಿಶ್ವಕಪ್‌ನ ಎ ಗುಂಪಿನಿಂದ ಭಾರತ ಮತ್ತು ಯುಎಸ್ಎ ತಂಡಗಳು ಸೂಪರ್ 8ಕ್ಕೆ ಅರ್ಹತೆ ಪಡೆದರೆ, ಬಿ ಗುಂಪಿನಿಂದ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳು ಸ್ಥಾನ ಪಡೆದಿವೆ. ಇನ್ನು ಸಿ ಗುಂಪಿನಿಂದ ಅಫ್ಘಾನಿಸ್ತಾನ ಮತ್ತು ವೆಸ್ಟ್ ಇಂಡೀಸ್ ತಂಡಗಳು ಅರ್ಹತೆ ಪಡೆದಿದ್ದರೆ, ಡಿ ಗುಂಪಿನಲ್ಲಿ ಸದ್ಯಕ್ಕೆ ದಕ್ಷಿಣ ಆಫ್ರಿಕಾ ಮುನ್ನಡೆದಿದೆ.

T20 World Cup 2024 Team India s Schedule in Super 8 Stage Match Time Venue And Date

ಸೂಪರ್ 8ರಲ್ಲಿ ತಂಡಗಳನ್ನು ಮತ್ತೊಮ್ಮೆ ಎರಡು ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಭಾರತ ತಂಡ ಈವರೆಗೆ ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನ ತಂಡಗಳೊಂದಿಗೆ ಗ್ರೂಪ್ 1ರಲ್ಲಿ ಸ್ಥಾನ ಪಡೆದಿದೆ. ಡಿ ಗುಂಪಿನಲ್ಲಿ ಎರಡನೇ ಸ್ಥಾನ ಪಡಯುವ ತಂಡವು ಗುಂಪು 1ರಲ್ಲಿ ಅಂತಿಮ ಸ್ಥಾನವನ್ನು ಪಡೆಯುತ್ತದೆ. ಅದು ಬಾಂಗ್ಲಾದೇಶ ಅಥವಾ ನೆದರ್ಲ್ಯಾಂಡ್ಸ್ ಆಗಿರಬಹುದು.

ಮತ್ತೊಂದೆಡೆ, ಗ್ರೂಪ್ 2ರಲ್ಲಿ ದಕ್ಷಿಣ ಆಫ್ರಿಕಾ ತಂಡವು ಯುಎಸ್ಎ ಮತ್ತು ವೆಸ್ಟ್ ಇಂಡೀಸ್ ಸಹ-ಆತಿಥೇಯ ತಂಡಗಳೊಂದಿಗೆ ಸ್ಥಾನ ಪಡೆದಿದೆ. ಬಿ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದ ಇಂಗ್ಲೆಂಡ್ ತಂಡವು ಅಂತಿಮ ಸ್ಥಾನವನ್ನು ಪಡೆದಿದೆ.

2023ರ ವಿಶ್ವಕಪ್ ಫೈನಲ್‌ನ ಪುನರಾವರ್ತನೆಯಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ತಂಡವನ್ನು ಎದುರಿಸುವುದರಿಂದ ಜೂನ್ 24ರಂದು ಭಾರತೀಯ ಕ್ರಿಕೆಟ್ ಅಭಿಮಾನಿಗಳ ಭಾವನೆಗಳು ಉತ್ತುಂಗಕ್ಕೇರುತ್ತವೆ.

T20 World Cup 2024 Team India s Schedule in Super 8 Stage Match Time Venue And Date

ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾ ಮೂರು ಪಂದ್ಯಗಳನ್ನು ಗೆದ್ದರೆ, ತನ್ನ ಅಂತಿಮ ಪಂದ್ಯವು ಮಳೆಯಿಂದ ರದ್ದಾಯಿತು. ಈ ಮೂಲಕ ಎ ಗುಂಪಿನಲ್ಲಿ ಅಗ್ರಸ್ಥಾನ ಗಳಿಸಿ ಅರ್ಹತೆ ಗಳಿಸಿತು.

ಸೂಪರ್ 8ರ ಪಂದ್ಯಗಳಿಗಾಗಿ ಭಾರತ ತಂಡವು ಯುಎಸ್ಎಯಿಂದ ವೆಸ್ಟ್ ಇಂಡೀಸ್‌ಗೆ ಪ್ರಯಾಣ ಬೆಳೆಸಲಿದೆ. ಹೀಗಾಗಿ ಭಾರತದ ಎಲ್ಲಾ ಮೂರು ಸೂಪರ್ 8ರ ಪಂದ್ಯಗಳು ಕೆರಿಬಿಯನ್‌ನಲ್ಲಿ ನಡೆಯಲಿವೆ.

ಟೀಮ್ ಇಂಡಿಯಾ ತನ್ನ ಸೂಪರ್ 8ರ ಹಂತದ ಮೊದಲ ಪಂದ್ಯವನ್ನು ಗುರುವಾರ, ಜೂನ್ 20ರಂದು ರಶೀದ್ ಖಾನ್ ನಾಯಕತ್ವದ ಅಫ್ಘಾನಿಸ್ತಾನ ವಿರುದ್ಧ ಆಡಲಿದೆ.

2024ರ ಟಿ20 ವಿಶ್ವಕಪ್‌ನಲ್ಲಿ ಸೂಪರ್ 8ರ ಸ್ವರೂಪ, ಗುಂಪುಗಳು ಮತ್ತು ಭಾರತ ತಂಡದ ಸಂಪೂರ್ಣ ವೇಳಾಪಟ್ಟಿಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಮಾಹಿತಿ ಇಲ್ಲಿದೆ.

ಟಿ20 ವಿಶ್ವಕಪ್‌ 2024: ಸೂಪರ್ 8ರ ಗುಂಪುಗಳು

ಗುಂಪು 1: ಭಾರತ (A1), ಆಸ್ಟ್ರೇಲಿಯಾ (B2), ಅಫ್ಘಾನಿಸ್ತಾನ (C1), ಬಾಂಗ್ಲಾದೇಶ (D2)

ಗುಂಪು 2: ಯುಎಸ್ಎ (A2), ಇಂಗ್ಲೆಂಡ್ (B1), ವೆಸ್ಟ್ ಇಂಡೀಸ್ (C2), ದಕ್ಷಿಣ ಆಫ್ರಿಕಾ (D1)

ಸೂಪರ್ 8ರಲ್ಲಿ ಭಾರತದ ವೇಳಾಪಟ್ಟಿ

ಜೂನ್ 20: vs ಅಫ್ಘಾನಿಸ್ತಾನ ವಿರುದ್ಧ, ಕೆನ್ಸಿಂಗ್ಟನ್ ಓವಲ್, ಬಾರ್ಬಡೋಸ್ (ಭಾರತೀಯ ಕಾಲಮಾನ ರಾತ್ರಿ 8 ಗಂಟೆ)

ಜೂನ್ 22: vs ಬಾಂಗ್ಲಾದೇಶ, ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂ, ಆಂಟಿಗುವಾ (ಭಾರತೀಯ ಕಾಲಮಾನ ರಾತ್ರಿ 8 ಗಂಟೆ)

ಜೂನ್ 24: vs ಆಸ್ಟ್ರೇಲಿಯಾ, ಡೇರೆನ್ ಸ್ಯಾಮಿ ಕ್ರಿಕೆಟ್ ಗ್ರೌಂಡ್, ಸೇಂಟ್ ಲೂಸಿಯಾ (ಭಾರತೀಯ ಕಾಲಮಾನ ರಾತ್ರಿ 8 ಗಂಟೆ)

Story first published: Sunday, June 16, 2024, 14:40 [IST]
Other articles published on Jun 16, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+