ಜೂನ್ 2ರಿಂದ ಯುಎಸ್ಎ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ನಡೆಯಲಿರುವ ಬಹು ನಿರೀಕ್ಷಿತ 2024ರ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಗಾಗಿ ತಮ್ಮ ಪ್ರಾಥಮಿಕ ತಂಡಗಳನ್ನು ಘೋಷಿಸಲು ಮೇ 1 ಅಂತಿಮ ಗಡುವು ಆಗಿದೆ.
ಇದೇ ವೇಳೆ ಭಾರತ ತಂಡದ ಆಯ್ಕೆ ಮತ್ತು ನಾಯಕ ರೋಹಿತ್ ಶರ್ಮಾ ಅವರಿಗೆ ಉಪನಾಯಕನ ಪಾತ್ರದ ಬಗ್ಗೆ ಕ್ರಿಕೆಟ್ ತಜ್ಞರು ಮತ್ತು ಅಭಿಮಾನಿಗಳ ಮಧ್ಯೆ ವ್ಯಾಪಕವಾದ ಚರ್ಚೆಗಳು ನಡೆಯುತ್ತಿವೆ.

ಐಪಿಎಲ್ 2024ರಲ್ಲಿ ರಿಷಭ್ ಪಂತ್ ಇದುವರೆಗೆ ಆಡಿದ 10 ಇನ್ನಿಂಗ್ಸ್‌ಗಳಲ್ಲಿ 371 ರನ್‌ಗಳೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಬ್ಯಾಟ್‌ನೊಂದಿಗೆ ಮುನ್ನಡೆಸುತ್ತಿದ್ದಾರೆ, ಜೊತೆಗೆ ತಂಡದ ನಾಯಕನಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ.
ಆರಂಭಿಕ ಕೆಲವು ಪಂದ್ಯಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಕೆಳ ಸ್ಥಾನದಲ್ಲಿದ್ದ ನಂತರ, ಅದ್ಭುತ ಪ್ರದರ್ಶನದ ಮೂಲಕ ಪುನರಾಗಮನ ಮಾಡಿದೆ. ವಿಕೆಟ್-ಕೀಪರ್ ಬ್ಯಾಟರ್ ರಿಷಭ್ ಪಂತ್ ಅವರು ಭಾರತ ತಂಡದ ಉಪನಾಯಕನ ಪಾತ್ರದ ಬಗ್ಗೆ ಸ್ವತಃ ಪ್ರಕರಣ ಮುಂದಿಟ್ಟಿದ್ದಾರೆ.
ಟಿ20 ವಿಶ್ವಕಪ್ ಪಂದ್ಯಾವಳಿಗೆ ಹೋಗುವ ಮುನ್ನ ಭಾರತ ತಂಡದ ವಿಕೆಟ್‌ಕೀಪರ್ ಸ್ಥಾನಕ್ಕೆ ರಿಷಭ್ ಪಂತ್ ಅವರನ್ನು ಮೊದಲ ಆಯ್ಕೆ ಎಂದು ಟ್ಯಾಗ್ ಮಾಡಲಾಗುತ್ತಿದೆ.

ಮತ್ತೊಂದೆಡೆ, ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಪ್ರದರ್ಶನಗಳನ್ನು ಗಮನಿಸಬೇಕಾಗುತ್ತದೆ. ಮುಂಬೈ ಇಂಡಿಯನ್ಸ್ ನಾಯಕ ಪ್ರಮುಖ ಪಂದ್ಯಾವಳಿಗಳ ಅತ್ಯಂತ ನಿರ್ಣಾಯಕ ಘಟ್ಟಗಳಲ್ಲಿ ಕೆಲವು ಹೈ-ವೋಲ್ಟೇಜ್ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನದ ಮೂಲಕ ಮೇಲೆ ಬಂದಿದ್ದಾರೆ.
ಆದರೆ, ಸದ್ಯ ನಡೆಯುತ್ತಿರುವ 2024ರ ಐಪಿಎಲ್ ಆವೃತ್ತಿಯಲ್ಲಿ ಬ್ಯಾಟ್ ಮತ್ತು ಬೌಲಿಂಗ್‌ನಲ್ಲಿ ಅವರ ಕಳಪೆ ಪ್ರದರ್ಶನಗಳು, ಕೆಲವು ಪ್ರಶ್ನಾರ್ಹ ನಿರ್ಧಾರಗಳು ಮತ್ತು ಅಭಿಮಾನಿಗಳ ಟೀಕೆಗಳು ಹಾರ್ದಿಕ್ ಪಾಂಡ್ಯಗೆ ಹಿನ್ನಡೆಯನ್ನುಂಟು ಮಾಡಿವೆ.
ಇದು ಹಾರ್ದಿಕ್ ಪಾಂಡ್ಯ ಅವರು ಸ್ಟಾರ್-ಸ್ಟಡ್ಡ್ ಭಾರತ ತಂಡದ ಉಪನಾಯಕನ ದೊಡ್ಡ ಪಾತ್ರವನ್ನು ರಿಷಭ್ ಪಂತ್‌ಗೆ ಬಿಟ್ಟುಕೊಡಬಹುದೇ ಎಂಬ ಚರ್ಚೆಯನ್ನು ತೆರೆದಿಟ್ಟಿದೆ.
ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಹಾರ್ದಿಕ್ ಪಾಮಡ್ಯ ಮತ್ತು ರವೀಂದ್ರ ಜಡೇಜಾ ಅವರನ್ನೊಳಗೊಂಡ ಅಗ್ರ ಮತ್ತು ಮಧ್ಯಮ ಕ್ರಮಾಂಕದ ಹೊರತಾಗಿ, ಸಂಜು ಸ್ಯಾಮ್ಸನ್ ಅಥವಾ ಕೆಎಲ್ ರಾಹುಲ್ ಅವರೊಂದಿಗೆ ಶಿವಂ ದುಬೆ ಮತ್ತು ರಿಂಕು ಸಿಂಗ್ ಅವರಲ್ಲಿ ಒಬ್ಬರು ಅಥವಾ ಇಬ್ಬರೂ ಟಿ20 ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡಲು ಪರಿಗಣಿಸಲಾಗುತ್ತದೆ.
ಇನ್ನು ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಮತ್ತು ಅರ್ಶ್‌ದೀಪ್ ಸಿಂಗ್ ಖಚಿತವಾದ ವೇಗಿಗಳಾಗಿದ್ದು, 15 ಸದಸ್ಯರ ಟಿ20 ವಿಶ್ವಕಪ್ ಭಾರತ ತಂಡದಲ್ಲಿ ಸೇರ್ಪಡೆಗೊಳ್ಳಲಿದ್ದಾರೆ.
ಪ್ರಸಕ್ತ ಐಪಿಎಲ್‌ನಲ್ಲಿ ಸಂದೀಪ್ ಶರ್ಮಾ ಅವರು ತಮ್ಮ ಅದ್ಭುತ ಮಧ್ಯಮ-ವೇಗದ ಜೊತೆಗೆ ಡೆತ್-ಓವರ್ ಬೌಲಿಂಗ್‌ನೊಂದಿಗೆ ಪ್ರದರ್ಶನ ನೀಡುತ್ತಿರುವುದು ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗುವ ಅವಕಾಶಗಳನ್ನು ಹೆಚ್ಚಿಸಿದೆ.
ಅಲ್ಲದೆ, ಅಕ್ಷರ್ ಪಟೇಲ್, ರವಿ ಬಿಷ್ಣೋಯ್ ಅವರನ್ನು ಭಾರತದ ಎರಡನೇ ಆಯ್ಕೆಯ ಸ್ಪಿನ್ನರ್‌ಗಳನ್ನಾಗಿ ತೆಗೆದುಕೊಳ್ಳಬಹುದು ಮತ್ತು ಕುಲದೀಪ್ ಯಾದವ್ ಅವರನ್ನು ಸ್ಪಿನ್-ಬೌಲಿಂಗ್ ಮುನ್ನಡೆಸಲಿದ್ದಾರೆ ಎಂದು ಪರಿಗಣಿಸಬಹುದು.
ಐಪಿಎಲ್‌ನ ಸಾರ್ವಕಾಲಿಕ ಪ್ರಮುಖ ವಿಕೆಟ್-ಟೇಕರ್ ಯುಜ್ವೇಂದ್ರ ಚಹಾಲ್‌ಗೆ ಮರಳಿ ಭಾರತ ತಂಡದಲ್ಲಿ ಸ್ಥಾನ ಪಡೆಯುವ ಅವಕಾಶಗಳು ಕತ್ತಲೆಯಾಗಿ ಕಾಣುತ್ತಿವೆ ಮತ್ತು ಅವರು ದುರದೃಷ್ಟವಶಾತ್ ಮತ್ತೊಂದು ಟಿ20 ವಿಶ್ವಕಪ್ ತಪ್ಪಿಸಿಕೊಳ್ಳುವ ಸಾಧ್ಯತೆಯಿದೆ.