T20 World Cup 2024: ಚುಟುಕು ವಿಶ್ವಕಪ್ ಟೂರ್ನಿ ಬಗ್ಗೆ ಸಂಪೂರ್ಣ ಮಾಹಿತಿ!
ಮೇ 30 ಗುರುವಾರ, 9ನೇ ಆವೃತ್ತಿಯ ಐಸಿಸಿ ಪುರುಷರ ಟಿ20 ಕ್ರಿಕೆಟ್ ವಿಶ್ವಕಪ್ 2024 ಟೂರ್ನಿಯನ್ನು ವೆಸ್ಟ್ ಇಂಡೀಸ್ ಮತ್ತು ಅಮೆರಿಕಾ ದೇಶಗಳು ಜಂಟಿಯಾಗಿ ಆಯೋಜಿಸುತ್ತಿವೆ. ಈ ಬಾರಿಯ ಟಿ20 ವಿಶ್ವಕಪ್ ಹಲವು ವಿಶೇಷತೆಗಳಿಂದ ಕೂಡಿದ್ದು, ಜೂನ್ 2 ರಿಂದ ಆರಂಭವಾಗುತ್ತಿದೆ.
ಟಿ20 ವಿಶ್ವಕಪ್ ಇತಿಹಾಸ ಮೊಟ್ಟ ಮೊದಲ ಬಾರಿಗೆ ಒಂದೇ ವೇದಿಕೆಯಲ್ಲಿ 20 ತಂಡಗಳು 55 ಪಂದ್ಯಗಳಲ್ಲಿ ವಿಶ್ವಕಪ್ ಟ್ರೋಫಿಗಾಗಿ ಹೋರಾಡಲಿವೆ. ಕ್ರಿಕೆಟ್ ಅಭಿಮಾನಿಗಳು 4 ವಾರಗಳ ಕಾಲ ರೋಮಾಂಚಕಾರಿ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಸಿದ್ದರಾಗಿದ್ದಾರೆ. ಈ ಟೂರ್ನಿಯ ಪ್ರಮುಖ ಮಾಹಿತಿಗಳು ಇಲ್ಲಿದೆ.

ಗುಂಪು ಸ್ವರೂಪ
ಬಹುನಿರೀಕ್ಷಿತ ಟೂರ್ನಿಯಲ್ಲಿ ಆಡಲಿರುವ 20 ತಂಡಗಳನ್ನು 4 ಗುಂಪುಗಳಾಗಿ ವಿಂಗಡಿಸಲಾಗಿದೆ. ಪ್ರತಿಯೊಂದೂ ಗುಂಪು 5 ತಂಡಗಳನ್ನು ಒಳಗೊಂಡಿದೆ. ಅದರಂತೆ ಲೀಗ್ ಹಂತದಲ್ಲಿ A B C ಮತ್ತು D ಗುಂಪುಗಳಲ್ಲಿನ ತಂಡಗಳ ಪಂದ್ಯ ನಡೆಯಲಿದೆ.
ಗುಂಪು ಹಂತದಲ್ಲಿ ಪ್ರತಿ ತಂಡ 4 ಪಂದ್ಯಗಳನ್ನು ಆಡಲಿದೆ. ಇದಾದ ಮೇಲೆ ಆಯಾ ಗುಂಪುಗಳ ಅಂಕಪಟ್ಟಿಯಲ್ಲಿ ಮೊದೆಲೆರಡು ಸ್ಥಾನಗಳನ್ನು ಪಡೆದ ತಂಡಗಳು ಮುಂದಿನ ಹಂತಕ್ಕೇರಲಿವೆ. ಈ ಮೂಲಕ 4 ಗುಂಪುಗಳಿಂದ ಒಟ್ಟು 8 ತಂಡಗಳು ಸೂಪರ್-8ರಲ್ಲಿ ಸ್ಥಾನ ಪಡೆಯಲಿವೆ.
ಬಳಿಕ 8 ತಂಡಗಳು ಪರಸ್ಪರ ಒಂದೊಂದು ಸೆಣಸಾಡಲಿವೆ. ಈ ವೇಳೆ ಕೂಡ ಅಂಕಪಟ್ಟಿಯಲ್ಲಿ ಅಗ್ರ 4 ಸ್ಥಾನಗಳನ್ನು ಪಡೆದ 4 ತಂಡಗಳು ನಾಕೌಟ್ ಹಂತಕ್ಕೇರಲಿವೆ. ನಂತರ 4 ತಂಡಗಳ ನಡುವೆ ಸೆಮಿಫೈನಲ್ ಪಂದ್ಯದಲ್ಲಿ ನಡೆಯದೆ.
ಇಲ್ಲಿ ಗೆದ್ದ 2 ತಂಡಗಳು ಜೂನ್ 29 ರಂದು ನಡೆಯಲಿರುವ ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ.
ಗುಂಪುಗಳು
ಗುಂಪು A: ಭಾರತ, ಪಾಕಿಸ್ತಾನ, ಯುಎಸ್ಎ, ಐರ್ಲೆಂಡ್, ಕೆನಡಾ
ಗುಂಪು B: ಇಂಗ್ಲೆಂಡ್, ಆಸ್ಟ್ರೇಲಿಯಾ, ನಮೀಬಿಯಾ, ಸ್ಕಾಟ್ಲೆಂಡ್, ಓಮನ್
ಗುಂಪು C: ವೆಸ್ಟ್ ಇಂಡೀಸ್, ನ್ಯೂಜಿಲೆಂಡ್, ಅಫ್ಘಾನಿಸ್ತಾನ, ಉಗಾಂಡಾ, ಪಪುವಾ ನ್ಯೂಗಿನಿಯಾ
ಗುಂಪು D: ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಬಾಂಗ್ಲಾದೇಶ, ನೆದರ್ಲೆಂಡ್ಸ್, ನೇಪಾಳ
ಟಿ20 ವಿಶ್ವಕಪ್ ನಿಯಮಗಳು
1) ಯಾವುದೇ ಪಂದ್ಯ ಡ್ರಾದಲ್ಲಿ ಕೊನೆಗೊಂಡರೆ ಸೂಪರ್ ಓವರ್ ಇರುತ್ತದೆ. ಸೂಪರ್ ಓವರ್ ಟೈ ಆಗಿದ್ದರೆ, ವಿಜೇತರನ್ನು ಘೋಷಿಸುವವರೆಗೆ ಸತತ ಸೂಪರ್ ಓವರ್‌ಗಳನ್ನು ಆಡಲಾಗುತ್ತದೆ.
2) ಜೂನ್ 26 ರಂದು ನಡೆಯಲಿರುವ ಮೊದಲ ಸೆಮಿಫೈನಲ್‌ನಲ್ಲಿ ದಿನದ ಅಂತ್ಯಕ್ಕೆ 60 ನಿಮಿಷಗಳು ಮತ್ತು ಜೂನ್ 27 ರಂದು 190 ನಿಮಿಷಗಳು ಲಭ್ಯವಿದ್ದು, ಎರಡೂ ಸೆಮಿಫೈನಲ್‌ಗಳಿಗೆ ಐಸಿಸಿ ಒಟ್ಟು 250 ನಿಮಿಷಗಳ ಹೆಚ್ಚುವರಿ ಸಮಯವನ್ನು ಇಟ್ಟುಕೊಂಡಿದೆ.
3) ಎರಡನೇ ಸೆಮಿಫೈನಲ್‌ನ (ಜೂನ್ 27) ನಿಗದಿತ ದಿನದಂದು ಹೆಚ್ಚುವರಿ 250 ನಿಮಿಷಗಳು ಲಭ್ಯವಿರುತ್ತವೆ. ಜೂನ್ 29 ರಂದು ನಡೆಯಲಿರುವ ಫೈನಲ್ ಪಂದ್ಯಕ್ಕೆ ಜೂನ್ 30 ಅನ್ನು ಮೀಸಲು ದಿನವನ್ನಾಗಿ ಇರಿಸಲಾಗಿದೆ. ಫೈನಲ್ ಪಂದ್ಯಕ್ಕೆ ಮಳೆ ಅಥವಾ ಇನ್ನಿತರ ಘಟನೆ ಸಂಭವಿಸಿ ಅಡ್ಡಿಯಾದರೆ ಮೀಸಲು ದಿನದಲ್ಲಿ ಆಡಸಲಾಗುತ್ತದೆ.
ಟಿ20 ವಿಶ್ವಕಪ್ ನಗದು ಬಹುಮಾನ
2024ರ ಟಿ20 ವಿಶ್ವಕಪ್‌ನ ನಗದು ಬಹುಮಾನದ ಮೊತ್ತವನ್ನು ಐಸಿಸಿ ಇನ್ನೂ ಖಚಿತಪಡಿಸಿಲ್ಲ. ಆದರೆ ಕಳೆದ ಆವೃತ್ತಿಯ ಒಟ್ಟು ನಗದು ಬಹುಮಾನ ಅಂದಾಜು US$5.6 ಮಿಲಿಯನ್ ಡಾಲರ್ ಆಗಿತ್ತು. ಟೂರ್ನಿಯಲ್ಲಿ ಭಾಗವಹಿಸಿದ ಎಲ್ಲಾ 16 ತಂಡಗಳಿಗೆ ಬಹುಮಾನ ನೀಡಲಾಗಿತ್ತು.
ಟಿ20 ವಿಶ್ವಕಪ್ 2022ರ ಚಾಂಪಿಯನ್ ಇಂಗ್ಲೆಂಡ್ ತಂಡ US$1.6 ಮಿಲಿಯನ್ (ಅಂದಾಜು 13 ಕೋಟಿ ರೂ.) ಅನ್ನು ಬಹುಮಾನವಾಗಿ ಪಡೆದರೆ, ರನ್ನರ್ ಅಪ್ ಪಾಕಿಸ್ತಾನವು US$800,000 (ಅಂದಾಜು 6.5 ಕೋಟಿ ರೂ.) ಪಡೆದಿತ್ತು. ಈ ನಗದು ಬಹಮಾನ ವಿಜೇತ ತಂಡಕ್ಕೆ ನೀಡಿದ ಮೊತ್ತದ ಅರ್ಧದಷ್ಟು.
ಟಿ20 ವಿಶ್ವಕಪ್ ನಡೆಯುವ ಸ್ಥಳಗಳು : ಲೀಗ್ ಹಂತದ ಕೆಲ ಪಂದ್ಯಗಳಿಗೆ ಯುಎಸ್ಎ ಆತಿಥ್ಯವಹಿಸಿದರೆ, ಸೂಪರ್-8 ಹಂತದ ಎಲ್ಲಾ ಪಂದ್ಯಗಳು ವೆಸ್ಟ್ ಇಂಡೀಸ್‌ನಲ್ಲಿ ಜರುಗಲಿದೆ.
ವೆಸ್ಟ್ ಇಂಡೀಸ್ ಕ್ರೀಡಾಂಗಣಗಳು
1) ಕೆನ್ಸಿಂಗ್ಟನ್ ಓವಲ್, ಬ್ರಿಡ್ಜ್‌ಟೌನ್, ಬಾರ್ಬಡೋಸ್
2) ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂ, ನಾರ್ತ್ ಸೌಂಡ್, ಆಂಟಿಗುವಾ
3) ಬ್ರಿಯಾನ್ ಲಾರಾ ಕ್ರಿಕೆಟ್ ಅಕಾಡೆಮಿ, ತರುಬಾ, ಟ್ರಿನಿಡಾಡ್ ಮತ್ತು ಟೊಬಾಗೊ
4) ಅರ್ನೋಸ್ ವೆಲ್ ಗ್ರೌಂಡ್, ಆರ್ನೋಸ್ ವೆಲ್, ಸೇಂಟ್ ವಿನ್ಸೆಂಟ್
5) ಡ್ಯಾರೆನ್ ಸ್ಯಾಮಿ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ, ಗ್ರೋಸ್ ಐಲೆಟ್, ಸೇಂಟ್ ಲೂಸಿಯಾ
ಅಮೆರಿಕಾ ಕ್ರೀಡಾಂಗಣಗಳು
1) ನಸ್ಸೌ ಕೌಂಟಿ ಇಂಟರ್‌ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಂ, ನ್ಯೂಯಾರ್ಕ್
2) ಬ್ರೋವರ್ಡ್ ಕೌಂಟಿ ಸ್ಟೇಡಿಯಂ, ಸೆಂಟ್ರಲ್ ಬ್ರೋವರ್ಡ್ ಪಾರ್ಕ್, ಫ್ಲೋರಿಡಾ
3) ಗ್ರ್ಯಾಂಡ್ ಪ್ರೈರೀ ಕ್ರಿಕೆಟ್ ಸ್ಟೇಡಿಯಂ, ಡಲ್ಲಾಸ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications