T20 World Cup 2024: ಫೈನಲ್ ತಲುಪುವ ಸಂಭಾವ್ಯ ತಂಡಗಳನ್ನು ಹೆಸರಿಸಿದ ಟ್ರಾವಿಸ್ ಹೆಡ್
ಸದ್ಯ ಯುಎಸ್ಎ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ನಡೆಯುತ್ತಿರುವ 2024ರ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಟ್ರೋಫಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದೆ. ಜೂನ್ 5ರಂದು ಐರ್ಲೆಂಡ್ ವಿರುದ್ಧದ ಪಂದ್ಯದೊಂದಿಗೆ ತನ್ನ ಅಭಿಯಾನ ಅರಂಭಿಸಲಿದೆ.
ಇದೇ ವೇಳೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ಅವರು ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಹೈ-ವೋಲ್ಟೇಜ್ ಪೈಪೋಟಿಯ ಬಗ್ಗೆ ಮಾತನಾಡಿದರು.

2024ರ ಐಸಿಸಿ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಕ್ರಿಕೆಟ್‌ನ ಎರಡು ದೈತ್ಯ ತಂಡಗಳು ಮುಖಾಮುಖಿಯಾದರೆ, ಭಾರತ ತಂಡ ಸೇಡು ತೀರಿಸಿಕೊಳ್ಳಲು ಎದುರು ನೋಡುತ್ತಾರೆ ಎಂದು ಸೂಚಿಸುತ್ತದೆ.
ಕಳೆದ ವರ್ಷ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಮತ್ತು ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಪ್ಯಾಟ್ ಕಮ್ಮಿನ್ಸ್ ನಾಯಕತ್ವದ ಆಸ್ಟ್ರೇಲಿಯಾ ತಂಡವು ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡದ ವಿರುದ್ಧ ಗೆಲುವು ಸಾಧಿಸಿದ ನಂತರ, ಭಾರತ-ಆಸ್ಟ್ರೇಲಿಯಾ ನಡುವಿನ ಪ್ರಶಸ್ತಿ ಪೈಪೋಟಿಯು ನಂಬಲಾಗದಂತಿದೆ ಎಂದು ಟ್ರಾವಿಸ್ ಹೆಡ್ ಅಭಿಪ್ರಾಯಪಟ್ಟಿದ್ದಾರೆ.

ಎರಡು ತಂಡಗಳು ಇತ್ತೀಚಿನ ವರ್ಷಗಳಲ್ಲಿ ಕ್ರಿಕೆಟ್‌ನ ಎಲ್ಲ ಸ್ವರೂಪಗಳಾದ್ಯಂತ ತೀವ್ರವಾದ ಕ್ರೀಡಾ ಪೈಪೋಟಿಯನ್ನು ಹುಟ್ಟುಹಾಕಿವೆ. ಟಿ20 ವಿಶ್ವಕಪ್‌ನಲ್ಲಿ ಮುಖಾಮುಖಿಯಾದ ಐದು ಪಂದ್ಯಗಳಲ್ಲಿ ಮೂರರಲ್ಲಿ ಗೆದ್ದಿರುವ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಹೆಡ್-ಟು-ಹೆಡ್ ದಾಖಲೆಯನ್ನು ಹೊಂದಿದೆ.
ಭಾರತದ ವಿರುದ್ಧ ಐಸಿಸಿ ಪಂದ್ಯಾವಳಿಯಲ್ಲಿ ಆಸ್ಟ್ರೇಲಿಯಾದ ಪ್ರದರ್ಶನಗಳು ಇನ್ನೂ ಭಾರತೀಯ ಅಭಿಮಾನಿಗಳಿಗೆ ನೋವುಂಟು ಮಾಡಿದೆ ಎಂದು ಟ್ರಾವಿಸ್ ಹೆಡ್ ಹೇಳಿದ್ದಾರೆ. ಫೈನಲ್ ಪಂದ್ಯದಲ್ಲಿ ಇಬ್ಬರೂ ಪರಸ್ಪರ ಮುಖಾಮುಖಿಯಾದರೆ, ಭಾರತ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಬರುತ್ತದೆ ಎಂದರು.
"ಎರಡೂ ತಂಡಗಳು ಫೈನಲ್‌ಗೆ ಬಂದರೆ ಚೆನ್ನಾಗಿರುತ್ತದೆ. ಭಾರತದಲ್ಲಿ ಪ್ರತಿಯೊಬ್ಬರೂ ಅದನ್ನು ಇಷ್ಟಪಡುತ್ತಾರೆ ಎಂದು ನಾನು ಭಾವಿಸುತ್ತೇನೆ, ವಿಶೇಷವಾಗಿ ಕಳೆದ ಎರಡು ಫೈನಲ್‌ಗಳಲ್ಲಿ ಏನಾಯಿತು ಎಂಬುದನ್ನು ಪರಿಗಣಿಸಿ".
"ಹೀಗಾಗಿ ಭಾರತ ತಂಡವು ಒಂದು ಹಂತದಲ್ಲಿ ಸೇಡು ತೀರಿಸಿಕೊಳ್ಳಲು ಬಯಸುತ್ತದೆ ಎಂದು ನನಗೆ ಖಾತ್ರಿಯಿದೆ. ಹಾಗಿದ್ದಲ್ಲಿ ಅದರ ಸುತ್ತಲೂ ಒಳ್ಳೆಯ ವೇದಿಕೆ ಇರುತ್ತದೆ," ಎಂದು ಟ್ರಾವಿಸ್ ಹೆಡ್ ಹೇಳಿದರು.
ಭಾರತ ಉತ್ತಮ ನಾಯಕತ್ವದ ಕೈಯಲ್ಲಿದೆ: ಟ್ರಾವಿಸ್ ಹೆಡ್
ಐಸಿಸಿ ಫೈನಲ್ ಪಂದ್ಯಗಳಲ್ಲಿ ಮ್ಯಾಚ್ ವಿನ್ನಿಂಗ್ ಶತಕಗಳನ್ನು ಬಾರಿಸಿ ಟ್ರಾವಿಸ್ ಹೆಡ್ ಭಾರತ ತಂಡವನ್ನು ಹೆಚ್ಚು ನೋಯಿಸಿದ್ದಾರೆ.
ಆದರೂ, ಟೀಮ್ ಇಂಡಿಯಾ ಬೆದರಿಕೆಯ ಬಗ್ಗೆ ಟ್ರಾವಿಸ್ ಹೆಡ್ ತಿಳಿದಿದ್ದಾರೆ. ವಿಶೇಷವಾಗಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾರಂತಹ ಸ್ಟಾರ್-ಸ್ಟಡ್ ಲೈನ್‌ಅಪ್ ಮತ್ತು ಅತ್ಯುತ್ತಮ ಐಪಿಎಲ್ ಅಭಿಯಾನದಿಂದ ಬರುತ್ತಿದೆ.
"ಭಾರತ ತಂಡವು ಉತ್ತಮರ ಕೈಯಲ್ಲಿದೆ. ನೀವು ಬಹುಶಃ ನಾಲ್ಕು ಅಥವಾ ಐದು ತಂಡಗಳನ್ನು ಮಿಶ್ರಣದಲ್ಲಿ ಹೆಸರಿಸಬಹುದು ಎಂದು ನಾನು ಭಾವಿಸುತ್ತೇನೆ. ಆಕ್ರಮಣಕಾರಿ ಬ್ರಾಂಡ್ ಕ್ರಿಕೆಟ್ ಆಡುವುದು ಭಾರತಕ್ಕೆ ನಿರ್ಣಾಯಕವಾಗಿದೆ. ರೋಹಿತ್, ವಿರಾಟ್ ಮತ್ತು ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ ಅವರ ಅಸಾಧಾರಣ ಬೌಲಿಂಗ್‌ನೊಂದಿಗೆ ಅವಕಾಶಗಳು ಹೆಚ್ಚಿವೆ," ಎಂದರು.
ವಿಶ್ವಕಪ್‌ಗೆ ಮುನ್ನ ಭಾರತ ತಡ ಬಾಂಗ್ಲಾದೇಶದ ವಿರುದ್ಧ ಅಭ್ಯಾಸ ಪಂದ್ಯವನ್ನು ಆಡಿದೆ ಮತ್ತು ಜೂನ್ 5ರಂದು ನ್ಯೂಯಾರ್ಕ್‌ನಲ್ಲಿ ತನ್ನ ಆರಂಭಿಕ ಪಂದ್ಯದಲ್ಲಿ ಐರ್ಲೆಂಡ್ ತಂಡವನ್ನು ಎದುರಿಸಲಿದೆ.
ಮತ್ತೊಂದೆಡೆ, ಆಸ್ಟ್ರೇಲಿಯಾ ತಂಡ ತನ್ನ ಮೊದಲ ಲೀಗ್ ಪಂದ್ಯವನ್ನು ಓಮನ್ ವಿರುದ್ಧ ಜೂನ್ 6ರಂದು ಬಾರ್ಬಡೋಸ್‌ನಲ್ಲಿ ಆಡಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications