T20 World Cup 2024: 14 ವರ್ಷಗಳ ನಂತರ ಪಾಕಿಸ್ತಾನ ವಿರುದ್ಧ ಸೇಡು ತೀರಿಸಿಕೊಂಡ USA ಬೌಲರ್; ಏನಿದು ರೋಚಕ ಕಥೆ?
ಜೂನ್ 7 ಶುಕ್ರವಾರ, ಐಸಿಸಿ 2024ರ ಟಿ20 ವಿಶ್ವಕಪ್‌ನ 'ಎ' ಗುಂಪಿನ ಪಂದ್ಯದಲ್ಲಿ ಮೊನಾಂಕ್ ಪಟೇಲ್ ನೇತೃತ್ವದ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ (ಯುಎಸ್ಎ) ವಿರುದ್ಧ ಪಾಕಿಸ್ತಾನ ಸೂಪರ್ ಓವರ್‌ನಲ್ಲಿ 5 ರನ್‌ಗಳಿಂದ ಹೀನಾಯವಾಗಿ ಸೋಲು ಕಂಡಿದೆ. ಈ ಸೋಲಿನ ನಂತರ ಬಾಬರ್ ಅಜಮ್ ನಾಯಕತ್ವದ ಪಾಕಿಸ್ತಾನವನ್ನು ಎಲ್ಲೆಡೆ ತೀವ್ರವಾಗಿ ಟೀಕಿಸಲಾಗಿದೆ.
ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 7 ವಿಕೆಟ್‌ಗೆ 159 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಅಮೆರಿಕ ತಂಡ 3 ವಿಕೆಟ್‌ಗೆ 159 ರನ್ ಕಲೆ ಹಾಕಿ ಪಂದ್ಯವನ್ನು ಡ್ರಾ ಮಾಡಿಕೊಂಡಿತ್ತು. ಹೀಗಾಗಿ ಸೂಪರ್ ಓವರ್‌ನಲ್ಲಿ ಅಬ್ಬರಿಸಿದ ಅಮೆರಿಕ 18 ರನ್ ನೀಡಿತ್ತು. ಇತ್ತ ಪಾಕಿಸ್ತಾನ ಕೇವಲ 13 ರನ್ ಹೊಡೆದು ಗುರಿ ತಲುಪಲು ಸಾಧ್ಯವಾಗದೆ ಪಂದ್ಯ ಕೈ ಚೆಲ್ಲಿತ್ತು.

ಪಾಕಿಸ್ತಾನ ವಿರುದ್ಧ ಅಮೆರಿಕಾ ಬೌಲರ್ ಸೌರಭ್ ನೇತ್ರವಾಲ್ಕರ್ ಅವರು ಅದ್ಭುತ ಬೌಲಿಂಗ್ ಪ್ರದರ್ಶನ ಮಾಡಿದ್ದರು. ಜೊತೆಗೆ ಅಮೆರಿಕಾ ತಂಡದ ಗೆಲುವಿಗೆ ಸೌರಭ್ ನೇತ್ರವಾಲ್ಕರ್ ದೊಡ್ಡ ಪಾತ್ರ ವಹಿಸಿದ್ದರು. ಕೇವಲ 4 ಓವರ್‌ಗಳಲ್ಲಿ 13 ರನ್ ನೀಡಿ 2 ವಿಕೆಟ್ ಪಡೆದು ಮಿಂಚಿದ್ದರು.
ಬಳಿಕ ಅಮೇರಿಕಾ ಪರ ಸೂಪರ್ ಓವರ್ ಬೌಲ್ ಸೌರಭ್ ನೇತ್ರವಲ್ಕರ್ ಪಾಕಿಸ್ತಾನವನ್ನು 13/1 ಕಟ್ಟಿ ಹಾಕಿದ್ದರು. ಈ ಮೂಲಕ ತಮ್ಮ ತಂಡ 5 ರನ್‌ಗಳಿಂದ ರೋಚಕ ಜಯ ಸಾಧಿಸುವಂತೆ ಮಾಡಿದ್ದರು. ಇದಾದ ನಂತರ ಸೌರಭ್ ನೇತ್ರವಾಲ್ಕರ್ ಅವರ ಕೆಲವು ಹಳೆಯ ವೀಡಿಯೊಗಳನ್ನು ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡುತ್ತಿದ್ದಾರೆ.
14 ವರ್ಷಗಳ ಸೇಡು
ಮೂಲತಃ ಸೌರಭ್ ನೇತ್ರವಾಲ್ಕರ್ ಭಾರತದವರು. 2010ರ ಅಂಡರ್-19 ವಿಶ್ವಕಪ್‌ನ ಭಾರತ ತಂಡದಲ್ಲಿದ್ದರು. ಜನವರಿ 23, 2010 ರಂದು ಪಾಕಿಸ್ತಾನವು ಅಂಡರ್-19 ವಿಶ್ವಕಪ್‌ನ ಕ್ವಾರ್ಟರ್-ಫೈನಲ್ ಪಂದ್ಯದಲ್ಲಿ ಭಾರತವನ್ನು 2 ವಿಕೆಟ್‌ಗಳಿಂದ ಸೋಲಿಸಿತು. ಆ ಪಂದ್ಯದಲ್ಲಿ ಸೌರಭ್ ನೇತ್ರವಾಲ್ಕರ್ ಭಾರತ ಪರ ಆಡಿದ್ದರು.
ಸೌರಭ್ ನೇತ್ರವಾಲ್ಕರ್ 2010ರ ಅಂಡರ್-19 ವಿಶ್ವಕಪ್‌ನ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಭಾರತದ ಪರ ಪಾಕಿಸ್ತಾನ ವಿರುದ್ಧ 5 ಓವರ್‌ಗಳಲ್ಲಿ 16 ರನ್ ನೀಡಿ 1 ವಿಕೆಟ್ ಪಡೆದಿದ್ದರು. ಆದರೆ ಸೌರಭ್ ನೇತ್ರವಾಲ್ಕರ್ ಅವರು ಪಾಕಿಸ್ತಾನದ ವಿರುದ್ಧ ಭಾರತವನ್ನು ಗೆಲುವಿನತ್ತ ಕೊಂಡೊಯ್ಯಲು ಸಾಧ್ಯವಾಗಿರಲಿಲ್ಲ.
ಇದೀಗ 14 ವರ್ಷಗಳ ನಂತರ ಸೌರಭ್ ನೇತ್ರಾವಲ್ಕರ್ ಪಾಕಿಸ್ತಾನ ವಿರುದ್ಧ ತಮ್ಮ ಸೇಡು ತೀರಿಸಿಕೊಂಡಿದ್ದಾರೆ. ಸೌರಭ್ ನೇತ್ರವಾಲ್ಕರ್ ಅಮೇರಿಕಾ ಪರ ಪಾಕಿಸ್ತಾನವನ್ನು ಸೋಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವುದರಿಂದ ಭಾರತೀಯ ಅಭಿಮಾನಿಗಳಲ್ಲಿ ಸಂತೋಷದ ವಾತಾವರಣವನ್ನು ಸೃಷ್ಟಿಸಿದೆ.
ಸೌರಭ್ ನೇತ್ರವಾಲ್ಕರ್ ಅವರು 2010ರ ಅಂಡರ್-19 ವಿಶ್ವಕಪ್‌ನಲ್ಲಿ ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್ ಮತ್ತು ಸಂದೀಪ್ ಶರ್ಮಾ ಅವರಂತಹ ಭಾರತೀಯ ಆಟಗಾರರೊಂದಿಗೆ ಕಣಕ್ಕೀಳಿದಿದ್ದರು. ಸೌರಭ್ ನೇತ್ರವಾಲ್ಕರ್ 2010ರ ಅಂಡರ್-19 ವಿಶ್ವಕಪ್‌ನಲ್ಲಿ ಭಾರತದ ಪರ ಗರಿಷ್ಠ 9 ವಿಕೆಟ್‌ಗಳನ್ನು ಪಡೆದಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications