T20 World Cup 2024: ಕೆನಡಾ ಮಣಿಸಿ ಶುಭಾರಂಭ ಮಾಡಿದ ಯುಎಸ್‌ಎ
ಜೂನ್ 2 ಭಾನುವಾರ, ಅಮೆರಿಕಾದ ಡಲ್ಲಾಸ್‌ನ ಗ್ರ್ಯಾಂಡ್ ಪ್ರೈರೀ ಸ್ಟೇಡಿಯಂನಲ್ಲಿ ನಡೆದ ಐಸಿಸಿ 2024ರ ಟಿ 20 ವಿಶ್ವಕಪ್‌ನ ಉದ್ಘಾಟನಾ ಪಂದ್ಯದಲ್ಲಿ ಕೆನಡಾ ವಿರುದ್ಧ ಗೆದ್ದ ಆತಿಥೇಯ ಯುಎಸ್‌ಎ ತಂಡ ಶುಭರಾಂಭ ಮಾಡಿದೆ.
ಯುಎಸ್‌ಎ ಪರ ಆಂಡ್ರೀಸ್ ಗೌಸ್ ಮತ್ತು ಆರನ್ ಜೋನ್ಸ್ ಜೋಡಿ ಅಬ್ಬರದ ಜೊತೆಯಾಟವಾಡಿದರು. ಹೀಗಾಗಿ ಕೆನಡಾ ಎದುರು ಯುಎಸ್‌ಎ 7 ವಿಕೆಟ್‌ಗಳ ಅಮೋಘ ಗೆಲುವು ಸಾಧಿಸಿದೆ. ಟಿ20 ವಿಶ್ವಕಪ್ 2024ರಲ್ಲಿ ಕೆನಡಾ ಮೊದಲ ಸೋಲು ಅನುಭವಿಸಿದೆ.

ಕೆನಡಾ ನೀಡಿದ 195 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಯುಎಸ್ಎಗೆ ಆರಂಭದಲ್ಲೇ ಸ್ಟೀವನ್ ಟೇಲರ್ ವಿಕೆಟ್ ಪಡೆಯುವ ಮೂಲಕ ಕಲೀಂ ಸನಾ ಶಾಕ್ ನೀಡಿದರು. ನಂತರ ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಆಗಮಿಸಿದ ಮೊನಾಂಕ್ ಪಟೇಲ್ ಅವರು ಆಂಡ್ರೀಸ್ ಗೌಸ್ ಜೊತೆ ಉತ್ತಮ ರನ್ ಕಲೆ ಹಾಕಿದರು.
ನಿಧಾನವಾಗಿ 16 ರನ್ ಗಳಿಸಿ ಆಡುತ್ತಿದ ಮೊನಾಂಕ್ ಪಟೇಲ್ ಅವರು ದಿಲ್ಲನ್ ಹೇಲಿಗರ್ ಬೌಲಿಂಗ್‌ನಲ್ಲಿ ಔಟ್ ಆದರು. ಈ ಹಂತದಲ್ಲಿ ಕೆನಡಾ ಬೌಲರ್‌ಗಳು ಮೇಲುಗೈ ಸಾಧಿಸಿದರು.
ಬಳಿಕ ನಾಲ್ಕನೇ ಕ್ರಮಾಂಕದಲ್ಲಿ ಬಂದ ಆರನ್ ಜೋನ್ಸ್ ಕೆನಡಾ ಬೌಲರ್‌ಗಳ ಎಲ್ಲಾ ಲೆಕ್ಕಚಾರವನ್ನು ಉಲ್ಟಾ ಮಾಡಿದರು. ಮತ್ತೊಂದೆಡೆ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ಮಾಡಿದ ಆಂಡ್ರೀಸ್ ಗೌಸ್ ಅವರು ಅರ್ಧಶತಕ ಸಿಡಿಸಿ ಮಿಂಚಿದರು.
ಆಂಡ್ರೀಸ್ ಗೌಸ್ 46 ಎಸೆತಗಳಲ್ಲಿ 7 ಬೌಂಡರಿ ಹಾಗು 3 ಸಿಕ್ಸರ್ ಮೂಲಕ 65 ರನ್ ಗಳಿಸಿ ನಿಖಿಲ್ ದತ್ತಾ ಬೌಲಿಂಗ್‌ನಲ್ಲಿ ವಿಕೆಟ್ ಕಳೆದುಕೊಂಡರು. ಇತ್ತ ಆರನ್ ಜೋನ್ಸ್ ಕೂಡ ಕೆನಡಾ ಬೌಲರ್‌ಗಳನ್ನು ಬೆಂಡತ್ತಿದರು.
ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ ಆರನ್ ಜೋನ್ಸ್ ಕೇವಲ 40 ಎಸೆತಗಳಲ್ಲಿ 10 ಭರ್ಜರಿ ಸಿಕ್ಸರ್ ಮತ್ತು 4 ಬೌಂಡರಿ ನೆರವಿನಿಂದ ಅಜೇಯ 94 ರನ್ ಗಳಿಸಿ ಯುಎಸ್‌ಎ ಗೆಲುವಿಗೆ ಕೊಡುಗೆ ನೀಡಿದರು. ಅಂತಿಮವಾಗಿ ಯುಎಸ್‌ಎ 3 ವಿಕೆಟ್‌ಗಳನ್ನು ಕಳೆದುಕೊಂಡು 17.4 ಓವರ್‌ಗಳಲ್ಲೇ ಗುರಿ ಮುಟ್ಟಿತು.
ಕೆನಡಾ ಪರ ಕಲೀಂ ಸನಾ, ದಿಲ್ಲನ್ ಹೇಲಿಗರ್ ಮತ್ತು ನಿಖಿಲ್ ದತ್ತಾ ತಲಾ ಒಂದೊಂದು ವಿಕೆಟ್ ಪಡೆದುಕೊಂಡರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications