T20 World Cup 2024: ಬಾರ್ಬಡೋಸ್‌ನಲ್ಲಿ ಕುಣಿದು ಕುಪ್ಪಳಿಸಿದ ಟೀಮ್ ಇಂಡಿಯಾ; ವಿರಾಟ್-ಅರ್ಷದೀಪ್ ಪಂಜಾಬಿ ಡ್ಯಾನ್ಸ್ ವೈರಲ್
ಜೂನ್ 30 ಭಾನುವಾರ, ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವು ಟಿ20 ವಿಶ್ವಕಪ್ 2024 ಪ್ರಶಸ್ತಿ ಗೆದ್ದ ನಂತರ ದೇಶಾದ್ಯಂತ ವಿಭಿನ್ನ ರೀತಿಯಲ್ಲಿ ಸಂಭ್ರಮಾಚರಣೆ ನಡೆಯುತ್ತಿದೆ. ಹೀಗಿರುವಾಗ ಟೀಮ್ ಇಂಡಿಯಾ ಆಟಗಾರರು ಕೂಡ ಸಂಭ್ರಮಿಸುವುದರಲ್ಲಿ ಹಿಂದೆ ಬಿದ್ದಿಲ್ಲ.
ಟಿ20 ವಿಶ್ವಕಪ್ 2024ರ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೀಮ್ ಇಂಡಿಯಾ 7 ರನ್ ಗಳ ಜಯ ಸಾಧಿಸಿತು. ಈ ಗೆಲುವಿನ ಬಳಿಕ ಭಾರತ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರು ವೇಗದ ಬೌಲರ್ ಅರ್ಷದೀಪ್ ಸಿಂಗ್ ಜೊತೆ ಕುಣಿದು ಕುಪ್ಪಳಿಸುವ ಮೂಲಕ ವಿಜಯೋತ್ಸವ ಆಚರಿಸಿದ್ದಾರೆ.

ಈ ಇಬ್ಬರು ಸ್ಟಾರ್ ಆಟಗಾರರು ಭಾಂಗ್ರಾ ಡ್ಯಾನ್ಸ್ ಅನ್ನು ಹುರುಪಿನಿಂದ ಮಾಡಿದರು. ಇದರ ವೀಡಿಯೊವನ್ನು ಐಸಿಸಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಸಾಕಷ್ಟು ವೈರಲ್ ಆಗಿದೆ.
ವಿರಾಟ್ ಕೊಹ್ಲಿ ಮತ್ತು ಅರ್ಷದೀಪ್ ಸಿಂಗ್ ಜೊತೆಗೆ ಮೊಹಮ್ಮದ್ ಸಿರಾಜ್, ಅಕ್ಸರ್ ಪಟೇಲ್ ಮತ್ತು ರಿಂಕು ಸಿಂಗ್ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಎಲ್ಲಾ ಆಟಗಾರರು ಗೆಲುವಿನಿಂದ ತುಂಬಾ ಸಂತೋಷಗೊಂಡಿದ್ದು, ಭಾಂಗ್ರಾ ಡ್ಯಾನ್ಸ್ ಅನ್ನು ಸಂತಸದಿಂದ ಮಾಡಿದ್ದಾರೆ.
ಅರ್ಷದೀಪ್ ಸಿಂಗ್ ಮೂಲತಃ ಪಂಜಾಬ್‌ನವರಾಗಿದ್ದು, ವಿರಾಟ್ ಕೊಹ್ಲಿ ಕೂಡ ಪಂಜಾಬ್‌ನೊಂದಿಗೆ ಸಂಪರ್ಕ ಹೊಂದಿದ್ದಾರೆ. ಹೀಗಾಗಿ ಇಬ್ಬರೂ ಅದ್ಭುತವಾಗಿ ಪಂಜಾಬಿ ನೃತ್ಯ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ವಿರಾಟ್ ಮತ್ತು ಅರ್ಷದೀಪ್ ಅವರ ಸ್ಫೋಟಕ ಪ್ರದರ್ಶನ 2024ರ ಟಿ 20 ವಿಶ್ವಕಪ್‌ನ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವಿಗೆ ಕಾರಣವಾಯಿತು.
ವಿರಾಟ್ ಕೊಹ್ಲಿ ಸತತ ಕಳಪೆ ಫಾರ್ಮ್ ನಡುವೆ ಫೈನಲ್ ಪಂದ್ಯದಲ್ಲಿ ಅಬ್ಬರಿಸಿದರು. ಕೊಹ್ಲಿ 69 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್‌ಗಳೊಂದಿಗೆ 76 ರನ್ ಗಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಇದರೊಂದಿಗೆ ಅರ್ಷದೀಪ್ ಸಿಂಗ್ 4 ಓವರ್ ಗಳಲ್ಲಿ 20 ರನ್ ನೀಡಿ 2 ವಿಕೆಟ್ ಪಡೆದರು.
ಈ ಇಬ್ಬರೂ ಆಟಗಾರರು ಭಾರತವನ್ನು ವಿಶ್ವ ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಗೆಲುವಿನೊಂದಿಗೆ ಭಾರತ 2007ರ ನಂತರ 2004ರಲ್ಲಿ ಎರಡನೇ ಬಾರಿಗೆ ಟಿ20 ವಿಶ್ವಕಪ್ ಪ್ರಶಸ್ತಿ ಗೆದ್ದುಕೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications