For Quick Alerts
ALLOW NOTIFICATIONS  
For Daily Alerts
 

Virat Kohli: ವಿಶ್ವಕಪ್ ಇತಿಹಾಸದಲ್ಲಿ ಚರಿತ್ರೆ ಸೃಷ್ಟಿಸಿದ ವಿರಾಟ್ ಕೊಹ್ಲಿ; ಈ ಸಾಧನೆ ಮಾಡಿದ ವಿಶ್ವದ ಏಕೈಕ ಬ್ಯಾಟರ್

ಶನಿವಾರ, ಜೂನ್ 22ರಂದು ಆಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ನಡೆದ 2024ರ ಐಸಿಸಿ ಟಿ20 ವಿಶ್ವಕಪ್‌ನ ಸೂಪರ್ 8ರ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ ತಂಡ 50 ರನ್‌ಗಳ ಭರ್ಜರಿ ಗೆಲುವು ದಾಖಲಿಸಿತು.

ಸೂಪರ್ 8ರಲ್ಲಿ ಸತತ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಪ್ರಸಕ್ತ ಟಿ20 ವಿಶ್ವಕಪ್‌ ಪಂದ್ಯಾವಳಿಯ ಸೆಮಿಫೈನಲ್ ತಲುಪುವ ಹಾದಿಯನ್ನು ಸುಗಮಗೊಳಿಸಿಕೊಂಡಿದೆ. ಉಳಿದ ಒಂದು ಪಂದ್ಯವನ್ನು ಜೂನ್ 24ರಂದು ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ.

T20 World Cup 2024 Virat Kohli has Created History in T20 and ODI World Cups

ಇದೇ ವೇಳೆ ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರು ವಿಶ್ವಕಪ್‌ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಟಿ20 ಮತ್ತು ಏಕದಿನ ಕ್ರಿಕೆಟ್ ವಿಶ್ವಕಪ್‌ಗಳಲ್ಲಿ 3,000 ರನ್ ಗಳಿಸಿದ ವಿಶ್ವದ ಮೊದಲ ಕ್ರಿಕೆಟಿಗ ಎನಿಸಿದರು.

ಆಂಟಿಗುವಾದಲ್ಲಿ ಬಾಂಗ್ಲಾದೇಶ ವಿರುದ್ಧದ ಟಿ20 ವಿಶ್ವಕಪ್‌ನ ಸೂಪರ್ 8ರ ಹಣಾಹಣಿಯಲ್ಲಿ ರನ್ ಮಷಿನ್ ವಿರಾಟ್ ಕೊಹ್ಲಿ ಈ ಮೈಲಿಗಲ್ಲನ್ನು ಸ್ಥಾಪಿಸಿದರು.

ಈ ಪಂದ್ಯಾವಳಿಯಲ್ಲಿ ಕೆಲವು ಕಳಪೆ ಆಟಗಳ ನಂತರ, ವಿರಾಟ್ ಕೊಹ್ಲಿ 28 ಎಸೆತಗಳಲ್ಲಿ 37 ರನ್ ಗಳಿಸುವ ಮೂಲಕ ತಮ್ಮ ವಿಂಟೇಜ್ ಆಟವನ್ನು ತೋರಿಸಿದರು. ವಿರಾಟ್ ಅವರ ಇನ್ನಿಂಗ್ಸ್‌ನಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್‌ಗಳು ಸೇರಿದ್ದವು ಮತ್ತು 132.14ರ ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸಿದರು.

T20 World Cup 2024 Virat Kohli has Created History in T20 and ODI World Cups

ಐಸಿಸಿ ಟಿ20 ವಿಶ್ವಕಪ್‌ನ ಇತಿಹಾಸದಲ್ಲಿ ವಿರಾಟ್ ಕೊಹ್ಲಿ 32 ಪಂದ್ಯಗಳ 30 ಇನ್ನಿಂಗ್ಸ್‌ಗಳಲ್ಲಿ 63.52ರ ಸರಾಸರಿ ಮತ್ತು 129.78ರ ಸ್ಟ್ರೈಕ್ ರೇಟ್‌ನಲ್ಲಿ 1,207 ರನ್ ಗಳಿಸಿ ಅತಿ ಹೆಚ್ಚು ರನ್ ಸ್ಕೋರರ್ ಆಗಿದ್ದಾರೆ.

11 ಬಾರಿ ಅಜೇಯರಾಗಿ ಮುಗಿಸಿರುವ ವಿರಾಟ್ ಕೊಹ್ಲಿ ಟಿ20 ವಿಶ್ವಕಪ್‌ ಪಂದ್ಯಾವಳಿಯ ಇತಿಹಾಸದಲ್ಲಿ 14 ಅರ್ಧ ಶತಕಗಳನ್ನು ಗಳಿಸಿದ್ದಾರೆ, ಜೊತೆಗೆ ಅಜೇಯ 89 ರನ್‌ಗಳ ಅತ್ಯುತ್ತಮ ಸ್ಕೋರ್ ಹೊಂದಿದ್ದಾರೆ. ಅವರು ತಮ್ಮ ಉತ್ತಮ ಪ್ರದರ್ಶನಕ್ಕಾಗಿ 2014 ಮತ್ತು 2016ರಲ್ಲಿ 'ಪ್ಲೇಯರ್ ಆಫ್ ದಿ ಟೂರ್ನಮೆಂಟ್' ಪ್ರಶಸ್ತಿಯನ್ನು ಗೆದ್ದಿದ್ದಾರೆ.

2014ರ ಟಿ20 ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ತಮ್ಮ ಅತ್ಯುತ್ತಮ ಅಭಿಯಾನ ಹೊಂದಿದ್ದರು, ಆರು ಪಂದ್ಯಗಳಲ್ಲಿ 106.33ರ ಸರಾಸರಿ ಮತ್ತು 129.15ರ ಸ್ಟ್ರೈಕ್ ರೇಟ್‌ನಲ್ಲಿ ನಾಲ್ಕು ಅರ್ಧಶತಕಗಳೊಂದಿಗೆ 319 ರನ್ ಗಳಿಸಿದ್ದರು.

ಸದ್ಯ ನಡೆಯುತ್ತಿರುವ 2024ರ ಟಿ20 ವಿಶ್ವಕಪ್‌ ಪಂದ್ಯಾವಳಿಯಲ್ಲಿ ವಿರಾಟ್ ಕೊಹ್ಲಿ ಆಡಿದ ಐದು ಪಂದ್ಯಗಳಲ್ಲಿ 13.20ರ ಸರಾಸರಿ ಮತ್ತು 108.19ರ ಸ್ಟ್ರೈಕ್ ರೇಟ್‌ನೊಂದಿಗೆ 66 ರನ್ ಗಳಿಸಿದ್ದಾರೆ ಮತ್ತು 37 ರನ್‌ಗಳ ಅತ್ಯುತ್ತಮ ಸ್ಕೋರ್ ಮಾಡಿದ್ದಾರೆ.

ಇನ್ನು 50 ಓವರ್‌ಗಳ ಏಕದಿನ ವಿಶ್ವಕಪ್‌ಗೆ ಬಂದರೆ, ವಿರಾಟ್ ಕೊಹ್ಲಿ ದೊಡ್ಡ ಸ್ವರೂಪದಲ್ಲಿ ಉತ್ತಮ ದಾಖಲೆಯನ್ನು ಹೊಂದಿದ್ದಾರೆ. ಅವರು ಪಂದ್ಯಾವಳಿಯ ಇತಿಹಾಸದಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ.

ಈವರೆಗೆ ಆಡಿದ 37 ಪಂದ್ಯಗಳ 37 ಇನ್ನಿಂಗ್ಸ್‌ಗಳಲ್ಲಿ 59.83ರ ಸರಾಸರಿ ಮತ್ತು 88.20ರ ಸ್ಟ್ರೈಕ್ ರೇಟ್‌ನೊಂದಿಗೆ ಐದು ಶತಕಗಳು ಮತ್ತು 12 ಅರ್ಧಶತಕಗಳೊಂದಿಗೆ 1,795 ರನ್ ಗಳಿಸಿದ್ದಾರೆ. ಇದರಲ್ಲಿ ಅವರ 117 ರನ್‌ಗಳ ಅತ್ಯುತ್ತಮ ಸ್ಕೋರ್ ಒಳಗೊಂಡಿದೆ.

ಭಾರತದಲ್ಲಿ ನಡೆದ 2023ರ ಏಕದಿನ ವಿಶ್ವಕಪ್‌ನಲ್ಲಿ ವೃತ್ತಿಜೀವನದ ಅತ್ಯುತ್ತಮ ಪ್ರದರ್ಶನ ನೀಡಿದ ವಿರಾಟ್ ಕೊಹ್ಲಿ 11 ಪಂದ್ಯಗಳಲ್ಲಿ 95ಕ್ಕಿಂತ ಹೆಚ್ಚಿನ ಸರಾಸರಿಯಲ್ಲಿ 3 ಶತಕ ಮತ್ತು 6 ಅರ್ಧಶತಕಗಳೊಂದಿಗೆ 765 ರನ್‌ಗಳನ್ನು ಗಳಿಸುವ ಮೂಲಕ 'ಪ್ಲೇಯರ್ ಆಫ್ ದಿ ಟೂರ್ನಮೆಂಟ್' ಪ್ರಶಸ್ತಿ ಗೆದ್ದರು.

ಇದರಲ್ಲಿ ವಿರಾಟ್ ಕೊಹ್ಲಿ ಅವರ ಅತ್ಯುತ್ತಮ ಸ್ಕೋರ್ 117 ರನ್ ಆಗಿದ್ದು, ಒಂದೇ ವಿಶ್ವಕಪ್ ಆವೃತ್ತಿಯಲ್ಲಿ ಬ್ಯಾಟರ್‌ನಿಂದ ಅತಿ ಹೆಚ್ಚು ರನ್ ದಾಖಲಿಸಿದರು. 2003ರಲ್ಲಿ ಭಾರತದ ಲೆಜೆಂಡ್ ಸಚಿನ್ ತೆಂಡೂಲ್ಕರ್ ಅವರ 673 ರನ್‌ಗಳ ದಾಖಲೆಯನ್ನು ಹಿಂದಿಕ್ಕಿದರು.

ಒಟ್ಟಾರೆಯಾಗಿ, ಎರಡೂ ಸ್ವರೂಪದ ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ಆಡಿದ 69 ಪಂದ್ಯಗಳ 67 ಇನ್ನಿಂಗ್ಸ್‌ಗಳಲ್ಲಿ 61.26ರ ಸರಾಸರಿಯಲ್ಲಿ 3,002 ರನ್ ಗಳಿಸಿದ್ದಾರೆ. ಇದರಲ್ಲಿ ಐದು ಶತಕ ಮತ್ತು 26 ಅರ್ಧಶತಕಗಳನ್ನು ಗಳಿಸಿದ್ದಾರೆ, ಅತ್ಯುತ್ತಮ ಸ್ಕೋರ್ 117 ರನ್ ಆಗಿದೆ.

Story first published: Sunday, June 23, 2024, 7:58 [IST]
Other articles published on Jun 23, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+