IND vs BAN: ಭಾರತ-ಬಾಂಗ್ಲಾದೇಶ ಪಂದ್ಯದ ವೇಳೆ ಆಂಟಿಗುವಾ ಹವಾಮಾನ ಹೇಗಿರಲಿದೆ?
ಜೂನ್ 21 ಶುಕ್ರವಾರ, ಟಿ20 ವಿಶ್ವಕಪ್ 2024ರ ಗುಂಪು ಹಂತದಲ್ಲಿ ಅಗ್ರಸ್ಥಾನ ಪಡೆದ ನಂತರ, ಭಾರತ ತಂಡವು ಸೂಪರ್ -8 ನಲ್ಲಿಯೂ ಉತ್ತಮ ಆರಂಭವನ್ನು ಮಾಡಿದೆ. ಮೊದಲ ಸೂಪರ್-8 ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು 47 ರನ್‌ಗಳಿಂದ ಸೋಲಿಸುವ ಮೂಲಕ ಭಾರತ ಸೆಮಿಫೈನಲ್‌ನತ್ತ ಹೆಜ್ಜೆ ಹಾಕಿದೆ.
ಇದೀಗ ಭಾರತ ತಂಡವು ಜೂನ್ 22 ರ ಶನಿವಾರದಂದು ಸೂಪರ್ -8ರ ಎರಡನೇ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಎದುರಿಸಲಿದೆ. ಆಂಟಿಗುವಾದ ನಾರ್ತ್ ಸೌಂಡ್‌ನಲ್ಲಿರುವ ಸರ್ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ.

ಈ ಪಂದ್ಯದ ವೇಳೆ ಮಳೆಯ ಸಂಭವನೀಯತೆ ಏನು? ಪಂದ್ಯ ನೋಡುವ ಅಭಿಮಾನಿಗಳ ಆಸೆ ಹುಸಿಯಾಗುವುದೇ? ಹವಾಮಾನ ವರದಿ ಏನು ಹೇಳುತ್ತದೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.
ಟಿ20 ವಿಶ್ವಕಪ್ 2024ರ ಡಿ ಗುಂಪಿನ ಅಂಕಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾದ ನಂತರ ಬಾಂಗ್ಲಾದೇಶ ಎರಡನೇ ಸ್ಥಾನ ಗಳಿಸಿತ್ತು. ಆದರೆ ಭಾರತವು ಗ್ರೂಪ್ ಎ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿತ್ತು.
ನಜ್ಮುಲ್ ಹೊಸೈನ್ ಶಾಂಟೊ ನೇತೃತ್ವದ ಬಾಂಗ್ಲಾದೇಶ ತಂಡವು ಗುಂಪು ಹಂತದಲ್ಲಿ ಮೂರು ಗೆಲುವುಗಳನ್ನು ದಾಖಲಿಸಿತು. ಆದರೆ ನಂತರ ಪಂದ್ಯಾವಳಿಯಲ್ಲಿ ಎರಡು ಸೋಲುಗಳನ್ನು ಅನುಭವಿಸಿತು. ಒಂದು ಗ್ರೂಪ್ ಪಂದ್ಯದಲ್ಲಿದ್ದರೆ ಇನ್ನೊಂದು ಸೋಲು ಸೂಪರ್ 8-ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿತ್ತು.

ಮತ್ತೊಂದೆಡೆ, ಟೀಮ್ ಇಂಡಿಯಾ ಇದುವರೆಗೆ ಯಾವುದೇ ಪಂದ್ಯವನ್ನ ಸೋತಿಲ್ಲ. ಟೀಮ್ ಇಂಡಿಯಾ ಗುಂಪು ಹಂತದಲ್ಲಿ ಸತತ ಮೂರು ಗೆಲುವುಗಳನ್ನು ದಾಖಲಿಸಿತ್ತು. ಆದರೆ ಕೆನಡಾ ವಿರುದ್ಧದ ಕೊನೆಯ ಪಂದ್ಯವನ್ನು ಮಳೆಯಿಂದಾಗಿ ರದ್ದುಗೊಳಿಸಲಾಯಿತು.
ಇದಾದ ಬಳಿಕ ಸೂಪರ್ 8 ರಲ್ಲಿ ರೋಹಿತ್ ಶರ್ಮಾ ನೇತೃತ್ವದ ತಂಡವು ಅಫ್ಘಾನಿಸ್ತಾನವನ್ನು 47 ರನ್‌ಗಳಿಂದ ಸೋಲಿಸಿತು. ಈಗ ರೋಹಿತ್ ಶರ್ಮಾ ನೇತೃತ್ವದ ಈ ತಂಡವು ಬಾಂಗ್ಲಾದೇಶವನ್ನು ಸೋಲಿಸಿ ಸೆಮಿಫೈನಲ್‌ನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲಿದೆ.
ಆಂಟಿಗುವಾದಲ್ಲಿ ಹವಾಮಾನ ಹೇಗಿರಲಿದೆ?
ಆಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ನಡೆಯಲಿರುವ ಭಾರತ-ಬಾಂಗ್ಲಾದೇಶ ಟಿ20 ವಿಶ್ವಕಪ್ 2024 ಸೂಪರ್ 8 ಗುಂಪು-1 ಪಂದ್ಯದ ಹವಾಮಾನದ ಕುರಿತು ನೋಡುವುದಾದರೆ, ಕೆಲವು ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ. ಅಕ್ಯುವೆದರ್ ವರದಿಯ ಪ್ರಕಾರ, ಶನಿವಾರ ಮಳೆಯ ಸಂಭವನೀಯತೆ ಶೇಕಡಾ 40 ಮತ್ತು ಗುಡುಗು ಸಹಿತ ಮಳೆಯ ಸಂಭವನೀಯತೆ ಶೇಕಡಾ 24 ರಷ್ಟಿದೆ.
ಆ್ಯಂಟಿಗುವಾದ ನಾರ್ತ್ ಸೌಂಡ್‌ನಲ್ಲಿ ನಡೆಯಲಿರುವ ಬಿಗ್ ಮ್ಯಾಚ್‌ನ ವೇಳೆ ಹಗಲಿನಲ್ಲಿ ಗಂಟೆಗೆ ಸುಮಾರು 35 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸಲಿದೆ. ಇದಲ್ಲದೆ, ಮೋಡ ಕವಿದ ಸಂಭವನೀಯತೆ ಸುಮಾರು 41 ಪ್ರತಿಶತ ಮತ್ತು ಮಳೆಯ ಅಂದಾಜು ಸಮಯ ಸುಮಾರು ಎರಡು ಗಂಟೆಗಳು ಸುರಿಯುವ ಸಾಧ್ಯತೆ ಇದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications