For Quick Alerts
ALLOW NOTIFICATIONS  
For Daily Alerts
 

T20 World Cup 2024: ಕಿವೀಸ್ ಕಿವಿ ಹಿಂಡಿ ಸೂಪರ್‌-8 ತಲುಪಿದ ವೆಸ್ಟ್‌ ಇಂಡೀಸ್‌; ನ್ಯೂಜಿಲೆಂಡ್‌ಗೆ ಎದುರಾಯ್ತು ಸಂಕಷ್ಟ!‌

ಜೂನ್‌ 13 ಗುರುವಾರ, ಟ್ರಿನಿಡಾಡ್ ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವಕಪ್‌ನ ಸಿ ಗುಂಪು ಹಂತದ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ ವೆಸ್ಟ್‌ ಇಂಡೀಸ್‌ ಗೆದ್ದು ಬೀಗಿದೆ. ಈ ಮೂಲಕ ಟಿ20 ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್‌ ಗೆಲುವಿನ ಸಾಧನೆಯನ್ನು ವೆಸ್ಟ್ ಇಂಡೀಸ್‌ ಮಾಡಿದೆ.

ವಿಂಡೀಸ್‌ ಪರ ಅಲ್ಜಾರಿ ಜೋಸೆಫ್ ಮತ್ತು ಗುಡಾಕೇಶ್ ಮೋತಿ ಬೌಲಿಂಗ್ ದಾಳಿಗೆ ಸಿಲುಕಿದ ನ್ಯೂಜಿಲೆಂಡ್‌ ಪ್ರಮುಖ‌ ಬ್ಯಾಟರ್‌ಗಳು ವಿಕೆಟ್‌ ಕಳೆದುಕೊಂಡರು. ಬಳಿಕ ಗ್ಲೆನ್ ಫಿಲಿಪ್ಸ್ ಹೋರಾಟದ ಹೊರತಾಗಿಯೂ ವಿಂಡೀಸ್‌ ನೀಡಿದ 150 ರನ್‌ಗಳ ಗುರಿಯನ್ನು ಕಿವೀಸ್ ಮುಟ್ಟಲು ಸಾಧ್ಯವಾಗದೆ ಪಂದ್ಯ ಸೋತಿದೆ. ವಿಂಡೀಸ್‌ 13 ರನ್‌ಗಳಿಂದ ಜಯ ಕಂಡಿದೆ.

T20 World Cup 2024 West Windies won against New Zealand

ಈ ಗೆಲವಿನ ನಂತರ ವಿಂಡೀಸ್‌ ಟಿ20 ವಿಶ್ವಕಪ್‌ನ ಸೂಪರ್‌-8ಕ್ಕೆ ಆರ್ಹತೆ ಪಡೆದುಕೊಂಡಿದೆ. ಇತ್ತ ನ್ಯೂಜಿಲೆಂಡ್‌ ಆಡಿರುವ ಎರಡು ಪಂದ್ಯಗಳಿಂದ ಸೋತು ಟೂರ್ನಿಯಿಂದ ಹೊರಗುಳಿಯುವ ಭೀತಿಯಲ್ಲಿದೆ.

ಮೊದಲು ಟಾಸ್‌ ಗೆದ್ದ ನ್ಯೂಜಿಲೆಂಡ್‌ ನಾಯಕ ಕೇನ್ ವಿಲಿಯಮ್ಸನ್ ಬೌಲಿಂಗ್‌ ಆಯ್ಕೆ ಮಾಡುಕೊಂಡರು. ಹೀಗಾಗಿ ಇನ್ನಿಂಗ್ಸ್‌ ಶುರು ಮಾಡಿದ ವೆಸ್ಟ್‌ ಇಂಡೀಸ್‌ ಪರ ಬ್ರಾಂಡನ್ ಕಿಂಗ್ ಮತ್ತು ಜಾನ್ಸನ್ ಚಾರ್ಲ್ಸ್ ಆರಂಭಿಕರಾಗಿ ಕಣಕ್ಕೀಳಿದರು. ಜಾನ್ಸನ್ ಚಾರ್ಲ್ಸ್ ಶೂನ್ಯಕ್ಕೆ ಔಟ್‌ ಆದರು.

ಬಳಿಕ ಮೂರನೇ ಕ್ರಮಾಂಕದಲ್ಲಿ ಬಂದ ನಿಕೋಲಸ್‌ ಪೂರನ್‌ ನಿಧಾನವಾಗಿ ಬ್ಯಾಟ್‌ ಬೀಸಿದರು. ಇತ್ತ ಬ್ರಾಂಡನ್ ಕಿಂಗ್ ಕೇವಲ 9 ರನ್‌ಗಳಿಗೆ ಔಟ್‌ ಆದರೆ, ನಂತರ ರೋಸ್ಟನ್ ಚೇಸ್ ಅವರು ಕೂಡ ಯಾವುದೇ ರನ್‌ ಗಳಿಸದೆ ವಿಕೆಟ್‌ ಕಳೆದುಕೊಂಡರು.

ನಂತರ ಕ್ರೀಸ್‌ಗೆ ಬಂದ ಯಾವುದೇ ಬ್ಯಾಟರ್‌ಗಳು ಹೆಚ್ಚು ಹೊತ್ತು ನ್ಯೂಜಿಲೆಂಡ್‌ ಬೌಲಿಂಗ್‌ ಎದುರು ನಿಲ್ಲಲಿಲ್ಲ. ನಿಕೋಲಸ್‌ ಪೂರನ್‌ (17), ನಾಯಕ ರೋವ್‌ಮನ್ ಪೊವೆಲ್ (1) ವಿಕೆಟ್‌ ಕಳೆದುಕೊಂಡರೆ, ಆಂಡ್ರೆ ರಸೆಲ್ (14), ರೊಮಾರಿಯೋ ಶೆಫರ್ಡ್ (13) ಅಕೇಲ್ ಹೊಸೈನ್ (15) ಮತ್ತು ಅಲ್ಜಾರಿ ಜೋಸೆಫ್ (6) ಔಟ್‌ ಆದರು.

ಆದರೆ ಒಂದೆಡೆ ವಿಕೆಟ್‌ ಬೀಳುತ್ತಿದ್ದರೂ ಕ್ರೀಸ್‌ಗೆ ಕಚ್ಚಿ ನಿಂತು ವಿಂಡೀಸ್‌ ಪರ ಶೆರ್ಫೇನ್ ರುದರ್‌ಫೋರ್ಡ್ ಅಬ್ಬರಿಸಿದರು. 39 ಎಸೆತಗಳಲ್ಲಿ 6 ಸಿಕ್ಸರ್‌ ಮತ್ತು 2 ಬೌಂಡರಿ ನೆರವಿನಿಂದ ಅಜೇಯ 68 ರನ್‌ ಹೊಡೆದರು. ಹೀಗಾಗಿ ವಿಂಡೀಸ್‌ 149 ರನ್‌ಗಳನ್ನು ಗಳಿಸಿತು.

ನ್ಯೂಜಿಲೆಂಡ್‌ ಪರ ಟ್ರೆಂಟ್ ಬೌಲ್ಟ್ 3 ವಿಕೆಟ್‌ ಕಬಳಿಸಿ ಸಂಭ್ರಮಿಸಿದರೆ, ಟಿಮ್ ಸೌಥಿ, ಲಾಕಿ ಫರ್ಗುಸನ್ ತಲಾ 2 ವಿಕೆಟ್ ಹಾಗು ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್ ತಲಾ ಒಂದೊಂದು ವಿಕೆಡ್‌ ಪಡೆದುಕೊಂಡರು.

ಎರಡನೇ ಇನ್ನಿಂಗ್ಸ್

ಈ ಟಾರ್ಗೆಟ್‌ ಬೆನ್ನಟ್ಟಿದ ನ್ಯೂಜಿಲೆಂಡ್‌ ತಂಡ ಕೂಡ ಹೇಳಿಕೊಳ್ಳುವಂತ ಪ್ರದರ್ಶನ ನೀಡಲಿಲ್ಲ. ಕಿವೀಸ್ 54 ರನ್‌ಗಳಿಸುವಷ್ಟರಲ್ಲೇ ಪ್ರಮುಖ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಳ್ಳಬೇಕಾಯಿತು.

ಫಿನ್ ಅಲೆನ್ (26), ಡೆವೊನ್ ಕಾನ್ವೇ (5), ಚಿನ್ ರವೀಂದ್ರ (10), ನಾಯಕ ಕೇನ್ ವಿಲಿಯಮ್ಸನ್ (1), ವಿಂಡೀಸ್‌ ಬೌಲಿಂಗ್‌ ದಾಳಿಗೆ ತತ್ತರಿಸಿದರು. ಇದೇ ವೇಳೆ ನೆಡೇರಿಲ್ ಮಿಚೆಲ್ ಸಹಾ 12 ರನ್‌ಗಳಿಗೆ ತಮ್ಮ ಆಟವನ್ನು ನಿಲ್ಲಿಸಿದರು.

ಇನ್ನೊಂದೆಡೆ ಜೇಮ್ಸ್ ನೀಶಮ್ (10), ಟಿಮ್ ಸೌಥಿ (0) ಹಾಗು ಟ್ರೆಂಟ್ ಬೌಲ್ಟ್ (7) ವಿಕೆಟ್‌ ಕಳೆದುಕೊಂಡು ನಿರಾಸೆ ಮೂಡಿಸಿದರು. ಇಂತಹ ಪರಿಸ್ಥಿತಿಯಲ್ಲಿ ಕೊವರಗೂ ಗ್ಲೆನ್ ಫಿಲಿಪ್ಸ್ ಗೆಲುವಿಗಾಗಿ ಹೋರಾಟ ನಡೆಸಿದರು.

ಎದುರಿಸಿದ 33 ಎಸೆತಗಳಲ್ಲಿ ಗ್ಲೆನ್ ಫಿಲಿಪ್ಸ್ 3 ಸಿಕ್ಸರ್ ಹಾಗು 2 ಬೌಂಡರಿ ಮೂಕಲ 40 ರನ್‌ಗಳನ್ನು ಹೊಡೆದು ಔಟ್‌ ಆದರು. ಅಂತಿಮವಾಗಿ ನ್ಯೂಜಿಲೆಂಡ್‌ 9 ವಿಕೆಟ್‌ ನಷ್ಟಕ್ಕೆ 136 ರನ್‌ಗಳನ್ನು ಗಳಿಸಲಷ್ಟೇ ಶಕ್ತವಾಯಿತು.

ವೆಸ್ಟ್‌ ಇಂಡಿಸ್ ಪರ ‌ಅಲ್ಜಾರಿ ಜೋಸೆಫ್ 4 ವಿಕೆಟ್‌ ಪಡೆದರೆ, ಗುಡಾಕೇಶ್ ಮೋತಿ 3 ವಿಕೆಟ್‌ ತೆಗೆದು ಮಿಂಚಿದರು. ಆಂಡ್ರೆ ರಸೆಲ್ ಮತ್ತು ಅಕೇಲ್ ಹೊಸೈನ್ ತಲಾ ಒಂದೊಂದು ವಿಕೆಟ್‌ಗೆ ತೃಪ್ತಿ ಪಟ್ಟರು.

ವೆಸ್ಟ್‌ ಇಂಡೀಸ್‌ vs ನ್ಯೂಜಿಲೆಂಡ್ ಪ್ಲೇಯಿಂಗ್‌-11

ವೆಸ್ಟ್‌ ಇಂಡೀಸ್‌ ತಂಡ: ಬ್ರಾಂಡನ್ ಕಿಂಗ್, ಜಾನ್ಸನ್ ಚಾರ್ಲ್ಸ್, ನಿಕೋಲಸ್ ಪೂರನ್ (ವಿ.ಕೀ), ರೋಸ್ಟನ್ ಚೇಸ್, ರೋವ್‌ಮನ್ ಪೊವೆಲ್ (ನಾಯಕ), ಶೆರ್ಫೇನ್ ರುದರ್‌ಫೋರ್ಡ್, ಆಂಡ್ರೆ ರಸೆಲ್, ರೊಮಾರಿಯೋ ಶೆಫರ್ಡ್, ಅಕೇಲ್ ಹೊಸೈನ್, ಅಲ್ಜಾರಿ ಜೋಸೆಫ್, ಗುಡಾಕೇಶ್ ಮೋಟಿ.

ನ್ಯೂಜಿಲೆಂಡ್ ತಂಡ: ಫಿನ್ ಅಲೆನ್, ಡೆವೊನ್ ಕಾನ್ವೇ (ವಿ.ಕೀ), ಕೇನ್ ವಿಲಿಯಮ್ಸನ್ (ನಾಯಕ), ಡೇರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ, ಲಾಕಿ ಫರ್ಗುಸನ್, ಟ್ರೆಂಟ್ ಬೌಲ್ಟ್.

Story first published: Thursday, June 13, 2024, 9:47 [IST]
Other articles published on Jun 13, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+