Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆಸ್ಟ್ರೇಲಿಯಾ ಎದುರು ರೋಹಿತ್‌ ಶರ್ಮಾ ಬ್ಯಾಟಿಂಗ್‌ಗೆ ದಿಗ್ಗಜ ಕ್ರಿಕೆಟಿಗರು ಫಿದಾ; ಹಿಟ್‌ಮ್ಯಾನ್‌ ಬಗ್ಗೆ ಹೇಳಿದ್ದೇನು?

ಜೂನ್ 26 ಬುಧವಾರ, ಭಾರತೀಯ ಕ್ರಿಕೆಟ್‌ ಅಭಿಮಾನಿಗಳು ಅಂದುಕೊಂಡಂತೆ 2024ರ ಟಿ20 ವಿಶ್ವಕಪ್‌ ಸೆಮಿಫೈನಲ್‌ಗೆ ರೋಹಿತ್‌ ಶರ್ಮಾ ನಾಯತ್ವಕದ ಭಾರತ ತಂಡವು ತಲುಪಿದೆ.

ಇದೀಗ ಟೀಮ್‌ ಇಂಡಿಯಾ ತನ್ನ ಸೆಮಿಫೈನಲ್‌ ಪಂದ್ಯವನ್ನು (ಜೂನ್‌ 27) ಇಂಗ್ಲೆಂಡ್‌ ವಿರುದ್ಧ ಆಡಲಿದೆ. ಕಳೆದ ಬಾರಿ 2022ರ ಟಿ20 ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಭಾರತವನ್ನು ಇಂಗ್ಲೆಂಡ್‌ ಸೋಲಿಸಿತ್ತು. ಈಗ ಆ ಸೋಲಿನ ಸೇಡನ್ನು ಟೀಮ್‌ ಇಂಡಿಯಾ ತೀರಿಸಿಕೊಳ್ಳಲು ಅವಕಾಶವಿದೆ.

T20 World Cup 2024 What did legendary cricketers say to Rohit Sharma batting

ಇನ್ನೊಂದೆಡೆ ಟಿ20 ವಿಶ್ವಕಪ್‌ 2024ರ ಟೂರ್ನಿಯಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ತಮ್ಮ ಅತ್ಯುತ್ತಮ ಫಾರ್ಮ್‌ಗೆ ಮರಳಿದ್ದಾರೆ. ರೋಹಿತ್ ಶರ್ಮಾ ಆಸ್ಟ್ರೇಲಿಯಾ ವಿರುದ್ಧ (ಜೂನ್‌ 24) ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿ 41 ಎಸೆತಗಳಲ್ಲಿ 92 ರನ್ ಗಳಿಸಿದ್ದರು.

ರೋಹಿತ್‌ ಶರ್ಮಾ ಅವರ ಈ ಇನ್ನಿಂಗ್ಸ್ ನೆರವಿನಿಂದ ಭಾರತ ತಂಡ ಕಾಂಗರೂ ಪಡೆ ಎದುರು 200ಕ್ಕೂ ಹೆಚ್ಚು ರನ್ ಗಳಿಸಲು ಸಾಧ್ಯವಾಯಿತು. ಆಸ್ಟ್ರೇಲಿಯಾ ಸ್ಟಾರ್ ಎಡಗೈ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಅವರಿಗೆ ರೋಹಿತ್ ಕ್ಲಾಸ್ ತೆಗೆದುಕೊಂಡಿದ್ದರು. ಒಂದೇ ಓವರ್‌ನಲ್ಲಿ 28 ರನ್ ಬಾರಿಸಿದ್ದರು. ಇಂತಹ ಭರ್ಜರಿ ಇನ್ನಿಂಗ್ಸ್ ಆಡಿದ ರೋಹಿತ್‌ ಶರ್ಮಾ ಬ್ಯಾಟಿಂಗ್‌ ಬಗ್ಗೆ ದಿಗ್ಗಜ ಕ್ರಿಕೆಟಿಗರು ಭಾರೀ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

T20 World Cup 2024 What did legendary cricketers say to Rohit Sharma batting

ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಇನ್ನಿಂಗ್ಸ್‌

ಇಂಗ್ಲೆಂಡ್‌ ತಂಡ ಮಾಜಿ ಆಟಗಾರ ನಾಸಿರ್ ಹುಸೇನ್, ರೋಹಿತ್‌ ಶರ್ಮಾ ಬ್ಯಾಟಿಂಗ್ ಬಗ್ಗೆ ಪ್ರತಿಕ್ರಿಯಿಸಿದ್ದು, 'ಆಸ್ಟ್ರೇಲಿಯಾ ವಿರುದ್ಧ ರೋಹಿತ್ ಶರ್ಮಾ ಅವರು ಆಡಿದ ಆಟ ನಾನು ವೈಟ್ ಬಾಲ್ ಕ್ರಿಕೆಟ್‌ನಲ್ಲಿ ನೋಡಿದ ಅತ್ಯುತ್ತಮ ಇನ್ನಿಂಗ್ಸ್‌ಗಳಲ್ಲಿ ಒಂದಾಗಿದೆ.

ಆಸ್ಟ್ರೇಲಿಯಾ ವಿರುದ್ಧ ರೋಹಿತ್ ಶರ್ಮಾ ಅದ್ಭುತ ಪ್ರದರ್ಶನ ನೀಡಿದರು. ಅಡಿಲೇಡ್ ಸೆಮಿಫೈನಲ್ ನಂತರ ರೋಹಿತ್ ಶರ್ಮಾ ಟೀಮ್‌ ಇಂಡಿಯಾದ ಮನಸ್ಥಿತಿಯನ್ನು ಬದಲಾಯಿಸಿದರು. ಈ ಇನ್ನಿಂಗ್ಸ್ 2023ರ ಏಕದಿನ ವಿಶ್ವಕಪ್‌ನಲ್ಲಿ ಬಂದಿತ್ತು. ಈಗ ಟಿ20 ವಿಶ್ವಕಪ್‌ನಲ್ಲಿಯೂ ಮೂಡಿ ಬಂದಿದೆ ಎಂದು ಹೇಳಿದ್ದಾರೆ.

ರೋಹಿತ್ ಬ್ಯಾಟಿಂಗ್ ನೋಡಲು ಟಿಕೆಟ್‌ ಖರೀದಿಸುತ್ತೇನೆ

ಟೀಮ್‌ ಇಂಡಿಯಾ ಮಾಜಿ ಆರಂಭಿಕ ಬ್ಯಾಟರ್‌ ವೀರೇಂದ್ರ ಸೆಹ್ವಾಗ್‌ ಅವರು ಕ್ರಿಕ್‌ಬಝ್‌ ಜೊತೆ ಮಾತನಾಡಿದ್ದು, "ಒಬ್ಬ ಆಟಗಾರನ ಬ್ಯಾಟಿಂಗ್ ಅನ್ನು ನೋಡುವ ಸಲುವಾಗಿ ಪಂದ್ಯದ ಟಿಕೆಟ್‌ ಖರೀಸುತ್ತೇನೆಂದರೆ, ಅದು ರೋಹಿತ್‌ ಶರ್ಮಾಗಾಗಿ ಮಾತ್ರ. ಅವರ ಬ್ಯಾಟಿಂಗ್‌ ನಿಜಕ್ಕೂ ಟಿಕೆಟ್‌ಗೆ ನೀಡಿದ ಹಣಕ್ಕೆ ಮೌಲ್ಯವನ್ನು ತಂದುಕೊಡುತ್ತದೆ" ಎಂದು ಬಣ್ಣಿಸಿದ್ದಾರೆ.

ರೋಹಿತ್‌ ಶರ್ಮಾ ಬ್ಯಾಟಿಂಗ್‌ ಅನ್ನು ಪ್ರೀತಿಸುತ್ತೇನೆ

ಆಸ್ಟ್ರೇಲಿಯಾ ಮಹಿಳಾ ಆಟಗಾರ್ತಿ ಹಾಗು ವೇಗದ ಬೌಲರ್‌ ಮಿಚೆಲ್‌ ಸ್ಟಾರ್ಕ್‌ ಅವರ ಪತ್ನಿ
ಅಲಿಸ್ಸಾ ಹೀಲಿ ಅವರು ಕೂಡ ರೋಹಿತ್‌ ಶರ್ಮಾ ಬ್ಯಾಟಿಂಗ್‌ ಬಗ್ಗೆ ಮಾತನಾಡಿದ್ದಾರೆ.

'ನನಗೆ ರೋಹಿತ್ ಶರ್ಮಾ ಅವರ ಬ್ಯಾಟಿಂಗ್ ನೋಡುವುದೆಂದರೆ ಇಷ್ಟ. ಒಮ್ಮೆ ಅವರು ಫಾರ್ಮ್ ಬಂದರೆ ತಡೆಯುವುದು ತುಂಬಾ ಕಷ್ಟಕರವಾಗಿದೆ. ರೋಹಿತ್‌ ಶರ್ಮಾ ಅವರು ಶಾರ್ಟ್ ಬಾಲ್‌ಗೆ ಅತ್ಯುತ್ತಮವಾಗಿ ಸಿಕ್ಸರ್‌ ಬಾರಿಸುತ್ತಾರೆ' ಎಂದು ಗುಣಗಾನ ಮಾಡಿದ್ದಾರೆ.

ತಂಡಕ್ಕಾಗಿ ರನ್ ಗಳಿಸಿದರು

ಭಾರತದ ಮಾಜಿ ವೇಗದ ಬೌಲರ್ ಜಹೀರ್ ಖಾನ್ ಅವರು ಪ್ರತಿಕ್ರಿಯಿಸಿ, ಆಸ್ಟ್ರೇಲಿಯಾ ವಿರುದ್ಧ ರೋಹಿತ್ ಶರ್ಮಾ ಆಕ್ರಮಣಕಾರಿಯಾಗಿ ಆಡಲು ಬಯಸಿದ್ದರು. ಜೊತೆಗೆ ಟಿ20 ಕ್ರಿಕೆಟ್‌ನಲ್ಲಿ ತಂಡವು ವಿಭಿನ್ನವಾಗಿ ಆಡಬೇಕೆಂದು ಅವರು ಬಯಸಿದ್ದರು.

ಹೀಗಾಗಿ ರೋಹಿತ್ ಸ್ವತಃ ಬೀರುಸಿನ ಬ್ಯಾಟಿಂಗ್‌ ಮಾಡಿದರು. ಅಲ್ಲದೆ, ರೋಹಿತ್‌ ಶರ್ಮಾ 90 ರನ್‌ ಆಸುಪಾಸಿನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾಗ ಶತಕದತ್ತ ನೋಡುತ್ತಿರಲಿಲ್ಲ, ತಂಡಕ್ಕಾಗಿ ರನ್ ಗಳಿಸಲು ಪ್ರಯತ್ನಿಸುತ್ತಿದ್ದರು ಎಂದಿದ್ದಾರೆ.

ಜನರ ಪ್ರಶ್ನೆಗೆ ಬ್ಯಾಟಿಂಗ್ ಮೂಲಕ ರೋಹಿತ್‌ ಉತ್ತರ

ಆಸ್ಟ್ರೇಲಿಯಾದ ಮಾಜಿ ದಿಗ್ಗಜ ವಿಕೆಟ್‌ ಕೀಪರ್ ಮತ್ತು ಬ್ಯಾಟರ್‌ ಆಡಮ್‌ ಗಿಲ್‌ಕ್ರಿಸ್ಟ್‌ ಅವರು ರೋಹಿತ್‌ ಶರ್ಮಾ ಅವರ ಆಟದ ಬಗ್ಗೆ ಸಾಕಷ್ಟು ಹೊಗಳಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ರೋಹಿತ್‌ ಶರ್ಮಾ ಅವರ ಪ್ರಭಾವ ಮತ್ತು ಫಾರ್ಮ್‌ ಬಗ್ಗೆ ಜನರು ಪ್ರಶ್ನಿಸುತ್ತಿದ್ದರು.

ಇದೀಗ ರೋಹಿತ್ ಶರ್ಮಾ ಬ್ಯಾಟಿಂಗ್ ಮೂಲಕ ತಮ್ಮ ಹೇಳಿಕೆ ನೀಡಿದ್ದಾರೆ. ಇದು ಟಿ20 ಫಾರ್ಮ್‌ನ ಅನುಮಾನಗಳನ್ನು ನಿವಾರಿಸುತ್ತದೆ. ಜೊತೆಗೆ ಇದು ರೋಹಿತ್‌ ಶರ್ಮಾ ಅವರ ಸ್ಪೂರ್ತಿದಾಯಕ ಮತ್ತು ಧೈರ್ಯಶಾಲಿಯಾಗಿದೆ.

Story first published: Wednesday, June 26, 2024, 12:00 [IST]
Other articles published on Jun 26, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+