T20 World Cup 2024: ನಾಯಕ ರೋಹಿತ್ ಶರ್ಮಾ ಬಗ್ಗೆ ಟೀಮ್ ಇಂಡಿಯಾ ಆಟಗಾರರು ಹೇಳಿದ್ದೇನು?
ಜೂನ್ 15 ಶನಿವಾರ, ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ಕ್ರಿಕೆಟ್ ತಂಡವು 2024ರ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಸೂಪರ್-8 ಸುತ್ತಿಗೆ ಆರ್ಹತೆ ಪಡೆದಿದೆ. ರೋಹಿತ್ ಹೊರತುಪಡಿಸಿ, ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ ತಂಡದಲ್ಲಿರುವ ಏಕೈಕ ಹಿರಿಯ ಆಟಗಾರರಾಗಿದ್ದಾರೆ.
ಇದಲ್ಲದೇ ಇಡೀ ಯುವ ತಂಡದೊಂದಿಗೆ ನಾಯಕ ರೋಹಿತ್ ಈ ಟೂರ್ನಿಯಲ್ಲಿ ಗೆಲುವಿನ ಯಾತ್ರೆ ನಡೆಸುತ್ತಿದ್ದಾರೆ. ನಾಯಕನಾಗಿ ತಂಡವನ್ನು ನಿರ್ವಹಿಸುವುದರ ಜೊತೆಗೆ ಸಹಾ ಆಟಗಾರರಿಂದ ಅತ್ಯುತ್ತಮ ಪ್ರದರ್ಶನವನ್ನು ಪಡೆಯುವುದು ದೊಡ್ಡ ಸವಾಲಾಗಿರುತ್ತದೆ. ಆದರೆ ರೋಹಿತ್ ಈ ಸವಾಲನ್ನು ಸ್ವೀಕರಿಸಿ ಯಶಸ್ವಿಯಾಗಿದ್ದಾರೆ.

ಯಶಸ್ವಿ ಜೈಸ್ವಾಲ್, ಅರ್ಷದೀಪ್ ಸಿಂಗ್ ಮತ್ತು ರಿಂಕು ಸಿಂಗ್ ಅವರಂತಹ ಯುವ ಆಟಗಾರರಿಗೆ ತಂಡದಲ್ಲಿ ಸ್ವಾತಂತ್ರವಾಗಿ ಆಡಲು ರೋಹಿತ್ ಶರ್ಮಾ ನೀಡಿದ್ದಾರೆ. ಅಲ್ಲದೆ ಸೂರ್ಯಕುಮಾರ್ ಯಾದವ್, ರಿಷಬ್ ಪಂತ್ ಮತ್ತು ಸಂಜು ಸ್ಯಾಮ್ಸನ್ ಅವರಿಗೂ ತಮ್ಮದೇ ಆದ ಶೈಲಿಯಲ್ಲಿ ಆಡುವ ಭರವಸೆಯನ್ನು ನೀಡಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ ಈ ಎಲ್ಲಾ ಆಟಗಾರರು ತಮ್ಮ ನಾಯಕನ ಬಗ್ಗೆ ಏನು ಹೇಳಿದ್ದಾರೆ ಎಂಬುದರ ಕುರಿತು ಮಾಹಿತಿ ಇಲ್ಲಿದೆ.
ಟೀಮ್ ಇಂಡಿಯಾ ವಿಕೆಟ್ ಕೀಪರ್ ಮತ್ತು ಬ್ಯಾಟರ್ ರಿಷಬ್ ಪಂತ್ ಮಾತನಾಡಿ, 'ರೋಹಿತ್ ಭಾಯ್ ಬಹಳಷ್ಟು ಕ್ರಿಕೆಟ್ ಆಡಿದ್ದಾರೆ. ಆದರೆ ಅವರು ಪ್ರತಿದಿನ ತಮ್ಮ ಆಟವನ್ನು ಸುಧಾರಿಸಲು ಬಯಸುತ್ತಾರೆ. ಇದನ್ನು ನಾನು ನಿಜವಾಗಿಯೂ ಪ್ರಶಂಸಿಸುತ್ತೇನೆ ಎಂದಿದ್ದಾರೆ.
ರೋಹಿತ್ ಅವರಿಂದ ಕಲಿಯುವುದು ಬಹಳಷ್ಟಿದೆ
ಮತ್ತೋರ್ವ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ತಮ್ಮ ನಾಯಕನ ಬಗ್ಗೆ ಗುಣಗಾನ ಮಾಡಿದ್ದಾರೆ. ನಾವು ಭಿನ್ನವಾಗಿರುವುದು ಹೇಗೆ ಎಂಬುದನ್ನು ನಾವು ರೋಹಿತ್ ಶರ್ಮಾ ಭಾಯ್ ಅವರಿಂದ ಕಲಿಯಬೇಕು. ಅವರು ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳುವುದಿಲ್ಲ.
ಎಷ್ಟು ಕ್ಯಾಮೆರಾಗಳು ಮತ್ತು ಮೈಕ್‌ಗಳು ತಮ್ಮ ಮಾತುಗಳನ್ನು ಕೇಳುತ್ತಿವೆ ಎಂದು ಅವರು ಲೆಕ್ಕಿಸುವುದಿಲ್ಲ. ರೋಹಿತ್ ಶರ್ಮಾ ಅವರಿಂದ ನಾವು ಯುವಕರು ಕಲಿಯುವುದು ಬಹಳಷ್ಟಿದೆ ಎಂದು ಹೇಳಿದ್ದಾರೆ. ಸಂಜು ಅವರ ಅದ್ಭುತ ಬ್ಯಾಟಿಂಗ್ ಮತ್ತು ಟೈಮಿಂಗ್ ಕುರಿತು ರೋಹಿತ್ ಅನೇಕ ಬಾರಿ ಹೊಗಳಿದ್ದಾರೆ.
ಭಾರತದ ನಂ.1 ಟಿ20 ಬ್ಯಾಟರ್ ಸೂರ್ಯಕುಮಾರ್ ಯಾದವ್ ನಾಯಕನ ಬಗ್ಗೆ ಮಾತನಾಡಿ, 'ಅವರು ಆಟವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ. ರೋಹಿತ್ ಬ್ಯಾಟಿಂಗ್ ಮಾಡುವಾಗ ಗೊಂದಲದಲ್ಲಿ ಸಿಕ್ಕಿ ಹಾಕಿಕೊಂಡರೆ ಸರಳ ಕ್ರಿಕೆಟ್ ಆಡುತ್ತಾರೆ. ಅದು ನನಗೆ ಇಷ್ಟವಾಗುತ್ತದೆ ಎಂದು ಹೊಗಳಿದ್ದಾರೆ.
ಸೂರ್ಯ ವಿಭಿನ್ನ ಆಟದ ಶೈಲಿಯನ್ನು ಹೊಂದಿದ್ದಾನೆ. ರೋಹಿತ್ ಯಾವಾಗಲೂ ಅವರನ್ನು ಬೆಂಬಲಿಸುತ್ತ ಬಂದಿದ್ದಾರೆ. ಜೊತೆಗೆ ಸೂರ್ಯನಿಗೆ ಮುಕ್ತವಾಗಿ ಆಡುವ ಅವಕಾಶವನ್ನು ರೋಹಿತ್ ನೀಡಿದ್ದಾರೆ.
ಭಾರತ ತಂಡದ ಚೈನಾಮನ್ ಬೌಲರ್ ಖ್ಯಾತಿಯ ಸ್ಪಿನ್ನರ್ ಕುಲದೀಪ್ ಯಾದವ್, ರೋಹಿತ್ ಬಗ್ಗೆ ಮಾತನಾಡುತ್ತಾ, 'ಅವರು ಎಲ್ಲಾ ಯುವಕರನ್ನು ಇಷ್ಟಪಡುತ್ತಾರೆ. ಇದೇ ಅವರನ್ನು ಯಾವಾಗಲೂ ಸಕ್ರಿಯವಾಗಿರಿಸುತ್ತದೆ' ಎಂದು ಹೇಳಿದರು.
ಟೀಮ್ ಇಂಡಿಯಾದ ಸ್ಟಾರ್ ಆಲ್ ರೌಂಡರ್ ಶಿವಂ ದುಬೆ ಪ್ರತಿಕ್ರಿಯಿಸಿ, 'ರೋಹಿತ್ ಶರ್ಮಾ ತುಂಬಾ ಸಕಾರಾತ್ಮಕ ವ್ಯಕ್ತಿ. ನಾನು ಅವರ ಬ್ಯಾಟಿಂಗ್ ನೋಡುವುದನ್ನು ಇಷ್ಟಪಡುತ್ತೇನೆ. ಅವರು ತುಂಬಾ ಸಹಜವಾಗಿ ಕ್ರಿಕೆಟ್ ಆಡುತ್ತಾರೆ. ಅವರಿಂದ ನಾನು ಸಾಕಷ್ಟು ಕಲಿತಿದ್ದೇನೆ' ಎಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications