For Quick Alerts
ALLOW NOTIFICATIONS  
For Daily Alerts
 

IND vs ENG: ಭಾರತ vs ಇಂಗ್ಲೆಂಡ್ ನಡುವಿನ ಸೆಮಿಫೈನಲ್ ಪಂದ್ಯ ರದ್ದಾದರೆ ಮುಂದೇನು?

2024ರ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಯ ಚಾಂಪಿಯನ್ ಪಟ್ಟಕ್ಕೇರಲು ಭಾರತ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಅಫ್ಘಾನಿಸ್ತಾನ ತಂಡಗಳು ಸಜ್ಜಾಗಿದ್ದು, ಎರಡು ಸೆಮಿಫೈನಲ್ ಪಂದ್ಯಗಳಲ್ಲಿ ಸೆಣಸಾಡಲಿವೆ.

ನಾಲ್ಕು ತಂಡಗಳು ಇದುವರೆಗೆ ಭರ್ಜರಿ ಅಭಿಯಾನ ಹೊಂದಿವೆ. ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಇದುವರೆಗೆ ಒಂದೇ ಒಂದು ಪಂದ್ಯವನ್ನು ಸೋಲದೇ ಅಜೇಯವಾಗಿ ಉಳಿದಿವೆ. ಉಳಿದೆರಡು ಇಂಗ್ಲೆಂಡ್ ಮತ್ತು ಅಫ್ಘಾನಿಸ್ತಾನ ತಂಡಗಳು ಪಂದ್ಯಾವಳಿಯುದ್ದಕ್ಕೂ ಏರಿಳಿತ ಕಂಡು ವೀರೋಚಿತವಾಗಿ ಸೆಮಿಫೈನಲ್ ತಲುಪಿವೆ.

T20 World Cup 2024 What Next If India vs England Semi-final Match is Cancelled

ಟಿ20 ವಿಶ್ವಕಪ್‌ನ ಮೊದಲ ಸೆಮಿಫೈನಲ್ ಪಂದ್ಯ ಗುರುವಾರ ಬೆಳಿಗ್ಗೆ 6 ಗಂಟೆಗೆ ಅಫ್ಘಾನಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆಯಲಿದ್ದು, ನಂತರ ರಾತ್ರಿ 8 ಗಂಟೆಗೆ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಸೆಣಸಾಡಲಿವೆ.

ಟೀಮ್ ಇಂಡಿಯಾ 2022ರ ಟಿ20 ವಿಶ್ವಕಪ್‌ನ ಸೆಮಿಫೈನಲ್ ಸೋಲಿಗೆ ಸೇಡು ತೀರಿಸಿಕೊಳ್ಳಲು ಎದುರು ನೋಡುತ್ತಿದೆ. ಅಲ್ಲಿ ಇಂಗ್ಲೆಂಡ್ 10 ವಿಕೆಟ್‌ಗಳಿಂದ ಸೋಲಿಸಿ ಪ್ರಶಸ್ತಿಯನ್ನು ಎತ್ತಿ ಹಿಡಿದಿತ್ತು.

T20 World Cup 2024 What Next If India vs England Semi-final Match is Cancelled

ಆದಾಗ್ಯೂ, ಗಯಾನಾದ ಹವಾಮಾನ ಪರಿಸ್ಥಿತಿ ಇಂಗ್ಲೆಂಡ್‌ ತಂಡಕ್ಕೆ ವಿಭಿನ್ನ ಯೋಜನೆಯನ್ನು ಹೊಂದಬಹುದು. ಗಯಾನಾದಲ್ಲಿ ಮಳೆ ಸುರಿದು ಪಂದ್ಯವನ್ನು ರದ್ದುಗೊಳಿಸಿದರೆ, ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಸ್ವಯಂಚಾಲಿತವಾಗಿ ಫೈನಲ್‌ಗೆ ತಲುಪಲಿದೆ ಎಂಬುದು ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ.

ಮಳೆ ಬಂದರೆ ಭಾರತ ತಂಡ ಏಕೆ ಫೈನಲ್‌ಗೆ ಅರ್ಹತೆ ಪಡೆಯುತ್ತದೆ?

ಸೂಪರ್ 8ರ ಹಂತದಲ್ಲಿ ಆಸ್ಟ್ರೇಲಿಯಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ವಿರುದ್ಧ ಭಾರತ ತನ್ನ ಎಲ್ಲಾ ಪಂದ್ಯಗಳನ್ನು ಗೆದ್ದು ಅಗ್ರಸ್ಥಾನ ಪಡೆಯಿತು. ಪ್ರಸ್ತುತ, ಭಾರತ ತಂಡವು 2024ರ ಟಿ20 ವಿಶ್ವಕಪ್‌ನಲ್ಲಿ ಭರ್ಜರಿ ಫಾರ್ಮ್‌ನಲ್ಲಿದೆ. ಟೀಮ್ ಇಂಡಿಯಾ ಇನ್ನೂ ಪಂದ್ಯಾವಳಿಯಲ್ಲಿ ಅಜೇಯವಾಗಿದೆ.

ಆಸ್ಟ್ರೇಲಿಯಾ ತಂಡವನ್ನು 24 ರನ್‌ಗಳಿಂದ ಸೋಲಿಸಿದ ನಂತರ, ರೋಹಿತ್ ಶರ್ಮಾ ಪಡೆ ಸೆಮಿಫೈನಲ್ ಪಂದ್ಯಕ್ಕೆ ಬರುತ್ತಿದೆ. ಫ್ಲೋರಿಡಾದ ಲಾಡರ್‌ಹಿಲ್‌ನಲ್ಲಿ ಕೆನಡಾ ವಿರುದ್ಧ ಮಳೆ-ಬಾಧಿತ ಪಂದ್ಯ ರದ್ದಾದ ನಂತರ, ಅಂಕವನ್ನು ಹಂಚಿಕೊಂಡ ಭಾರತ ತಂಡ ಆಡಿದ ಪ್ರತಿಯೊಂದು ಪಂದ್ಯವನ್ನು ಗೆದ್ದಿದೆ.

ಮತ್ತೊಂದೆಡೆ, ಇಂಗ್ಲೆಂಡ್ ತಂಡವು ಸೆಮಿಫೈನಲ್‌ಗಾಗಿ ಗಯಾನಾವನ್ನು ತಲುಪಿತು. 'ಖಂಡಿತವಾಗಿಯೂ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್' ಎಂಬ ಸಂದೇಶದೊಂದಿಗೆ ತಂಡವು ಜಾರ್ಜ್‌ಟೌನ್‌ಗೆ ವಿಮಾನವನ್ನು ಹತ್ತುತ್ತಿದ್ದಂತೆ ಇಂಗ್ಲೆಂಡ್ ಕ್ರಿಕೆಟ್ ಟ್ವೀಟ್ ಮಾಡಿದೆ.

19 ತಿಂಗಳ ಹಿಂದೆ ಅಡಿಲೇಡ್‌ನಲ್ಲಿ ನಡೆದ ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಕೊನೆಯ ಬಾರಿಗೆ ಮುಖಾಮುಖಿಯಾದಾಗ, ಜೋಸ್ ಬಟ್ಲರ್ ನಾಯಕತ್ವದ ತಂಡ 10 ವಿಕೆಟ್‌ಗಳ ಗೆಲುವು ಸಾಧಿಸಿತು.

ಆನಂತರ ಭಾರತ ತಂಡ ಟಿ20 ಕ್ರಕೆಟ್‌ನಲ್ಲಿ ಸಂಪೂರ್ಣ ಮರುಚಿಂತನೆಗೆ ಒತ್ತಾಯಿಸಿತು. ತಂತ್ರ ಮತ್ತು ಹೆಚ್ಚು ಸ್ಥಾಪಿತವಾದ ಹಿರಿಯ ಆಟಗಾರರ ಬದಲಿಗೆ ಕಿರಿಯರ ಆಗಮನವಾಯಿತು ಮತ್ತು ಸಂಪ್ರದಾಯ ಆಟದಿಂದ ಆಕ್ರಮಣಶೀಲತೆಗೆ ಒಗ್ಗಿಕಂಡಿತು.

ಇದೇ ವೇಳೆ ಭಾರತ ತಂಡವು 2007ರ ಚೊಚ್ಚಲ ಪಂದ್ಯಾವಳಿ ಗೆದ್ದ ನಂತರ, ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದಿಲ್ಲ ಮತ್ತು 2011ರ ಏಕದಿನ ವಿಶ್ವಕಪ್ ಪಂದ್ಯಾವಳಿಯ ನಂತರ, ಯಾವುದೇ ಸ್ವರೂಪದಲ್ಲಿ ತನ್ನ ವಿಶ್ವಕಪ್ ಗೆದ್ದಿಲ್ಲ. ಭಾರತ ತಂಡ ತನ್ನ ಕೊನೆಯ ಐಸಿಸಿ ಟ್ರೋಫಿಯನ್ನು 2013ರಲ್ಲಿ ಇಂಗ್ಲೆಂಡ್‌ನಲ್ಲಿ ಐಸಿಸಿ ಚಾಂಪಿಯನ್ಸ್ ಪಂದ್ಯಾವಳಿ ಗೆದ್ದುಕೊಂಡಿತು.

Story first published: Wednesday, June 26, 2024, 20:51 [IST]
Other articles published on Jun 26, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+