T20 World Cup 2024: ಸೂಪರ್ 8ರಲ್ಲಿ ಭಾರತ ತಂಡದ ಎದುರಾಳಿಗಳು ಯಾರು?
ಸದ್ಯ ಯುಎಸ್ಎ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ನಡೆಯುತ್ತಿರುವ 2024ರ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಯ ಆಕರ್ಷಕ ಗುಂಪು ಹಂತದ ಕ್ರಿಯೆಯ ನಂತರ, ಇದೀಗ ಎಲ್ಲರ ಗಮನವು ಪಂದ್ಯಾವಳಿಯ ಸೂಪರ್ 8ರ ಹಂತದತ್ತ ಬದಲಾಗುತ್ತಿದೆ.
ಗಮನಾರ್ಹವಾಗಿ, ಎಂಟು ತಂಡಗಳ ಪೈಕಿ ಈಗಾಗಲೇ ಆರು ತಂಡಗಳು ಮುಂದಿನ ಸುತ್ತಿಗೆ ಅರ್ಹತೆ ಪಡೆದಿವೆ. ಸೂಪರ್ 8ರಲ್ಲಿ ತಂಡಗಳನ್ನು ಮತ್ತೊಮ್ಮೆ ಎರಡು ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಭಾರತ ತಂಡ ಈವರೆಗೆ ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನ ತಂಡಗಳೊಂದಿಗೆ ಗ್ರೂಪ್ 1ರಲ್ಲಿ ಸ್ಥಾನ ಪಡೆದಿದೆ.

ಡಿ ಗುಂಪಿನಲ್ಲಿ ಎರಡನೇ ಸ್ಥಾನ ಪಡಯುವ ತಂಡವು ಗುಂಪು 1ರಲ್ಲಿ ಅಂತಿಮ ಸ್ಥಾನವನ್ನು ಪಡೆಯುತ್ತದೆ. ಅದು ಬಾಂಗ್ಲಾದೇಶ ಅಥವಾ ನೆದರ್ಲ್ಯಾಂಡ್ಸ್ ಆಗಿರಬಹುದು.
ಮತ್ತೊಂದೆಡೆ, ಗ್ರೂಪ್ 2ರಲ್ಲಿ ದಕ್ಷಿಣ ಆಫ್ರಿಕಾ ತಂಡವು ಯುಎಸ್ಎ ಮತ್ತು ವೆಸ್ಟ್ ಇಂಡೀಸ್ ಸಹ-ಆತಿಥೇಯ ತಂಡಗಳೊಂದಿಗೆ ಸ್ಥಾನ ಪಡೆದಿದೆ. ಬಿ ಗುಂಪಿನಲ್ಲಿ ಎರಡನೇ ಸ್ಥಾನ ಪಡೆಯುವ ತಂಡವು ಅಂತಿಮ ಸ್ಥಾನವನ್ನು ಪಡೆಯಲಿದೆ. ಅದು ಇಂಗ್ಲೆಂಡ್ ಅಥವಾ ಸ್ಕಾಟ್ಲೆಂಡ್ ಆಗಿರಬಹುದು.
ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾ ತನ್ನ ಸೂಪರ್ 8ರ ಅಭಿಯಾನವನ್ನು ಗುರುವಾರ, ಜೂನ್ 20ರಂದು ಬಾರ್ಬಡೋಸ್‌ನಲ್ಲಿ ಬ್ರಿಡ್ಜ್‌ಟೌನ್‌ನ ಕೆನ್ಸಿಂಗ್ಟನ್ ಓವಲ್‌ನಲ್ಲಿ ಅಫ್ಘಾನಿಸ್ತಾನ ವಿರುದ್ಧ ಪ್ರಾರಂಭಿಸಲಿದೆ.

ರಶೀದ್ ಖಾನ್ ನಾಯಕತ್ವದ ಅಫ್ಘಾನಿಸ್ತಾನ ತಂಡವು ನಡೆಯುತ್ತಿರುವ ಪಂದ್ಯಾವಳಿಯಲ್ಲಿ ಇದುವರೆಗೆ ಆಡಿದ ಎಲ್ಲಾ ಮೂರು ಪಂದ್ಯಗಳನ್ನು ಗೆದ್ದು ಅತ್ಯುತ್ತಮ ಓಟವನ್ನು ಹೊಂದಿದೆ.
ಅಫ್ಘಾನಿಸ್ತಾನ ತಂಡ ನ್ಯೂಜಿಲೆಂಡ್ ತಂಡವನ್ನು 84 ರನ್‌ಗಳ ಬೃಹತ್ ಅಂತರದಿಂದ ಸೋಲಿಸಿತು. ಇದು ಕಿವೀಸ್ ಪಡೆ ಪಂದ್ಯಾವಳಿಯಿಂದ ಹೊರಬೀಳಲು ಪ್ರಮುಖ ಕಾರಣವಾಗಿದೆ.
ಅಫ್ಘಾನಿಸ್ತಾನ ತಂಡ ತಮ್ಮ ಅದ್ಭುತ ಫಾರ್ಮ್ ಅನ್ನು ಸೂಪರ್ 8ಕ್ಕೆ ಒಯ್ಯಲಿದ್ದಾರೆ ಮತ್ತು ತಮ್ಮ ಮೊದಲ ಸೂಪರ್ 8ರ ಹಣಾಹಣಿಯಲ್ಲಿ ಭಾರತವನ್ನು ಸೋಲಿಸುವ ಮೂಲಕ ತಮ್ಮ ಗೆಲುವಿನ ಆವೇಗವನ್ನು ಮುಂದುವರಿಸಲು ಎದುರು ನೋಡುತ್ತಾರೆ.
ಉಭಯ ತಂಡಗಳ ನಡುವೆ ಆಡಿದ 8 ಟಿ20 ಪಂದ್ಯಗಳಲ್ಲಿ ಏಳನ್ನು ಸೋತಿದೆ ಮತ್ತು ಒಂದು ಫಲಿತಾಂಶವಿಲ್ಲದೆ ಅಂತ್ಯಗೊಂಡಿದೆ. ರಶೀದ್ ಖಾನ್ ಪಡೆ ಭಾರತ ತಂಡದ ವಿರುದ್ಧ ಐತಿಹಾಸಿಕ ಮೊದಲ ಗೆಲುವು ದಾಖಲಿಸಲು ಆಶಿಸುತ್ತಿದೆ.
ಆಂಟಿಗುವಾದ ನಾರ್ತ್ ಸೌಂಡ್‌ನ ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ಜೂನ್ 22ರ ಶನಿವಾರದಂದು ಭಾರತ ತಂಡವು ಬಾಂಗ್ಲಾದೇಶ ಅಥವಾ ನೆದರ್ಲ್ಯಾಂಡ್ಸ್ ತಂಡವನ್ನು ಎದುರಿಸಲಿದೆ.
ಜೂನ್ 24ರಂದು ಭಾರತ ಬದ್ಧ ಎದುರಾಳಿ ಆಸ್ಟ್ರೇಲಿಯಾ ಎದುರಿಸಲಿದೆ
ಸೋಮವಾರ, ಜೂನ್ 24ರಂದು ಸೇಂಟ್ ಲೂಸಿಯಾದ ಗ್ರಾಸ್ ಐಲೆಟ್‌ನ ಡೇರೆನ್ ಸಾಮಿ ರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತ ತಂಡವು ಐಸಿಸಿ ಪಂದ್ಯಾವಳಿಯಬದ್ಧ ಎದುರಾಳಿ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಕಾಂಗರೂ ಪಡೆ ಇತ್ತೀಚಿನ ದಿನಗಳಲ್ಲಿ ಐಸಿಸಿ ಪಂದ್ಯಾವಳಿಗಳಲ್ಲಿ ಸತತವಾಗಿ ಫೈನಲ್‌ನಲ್ಲಿ ಭಾರತವನ್ನು ಸೋಲಿಸಿ ಮೇಲುಗೈ ಸಾಧಿಸಿದೆ.
ಆದಾಗ್ಯೂ, ಉಭಯ ತಂಡಗಳ ನಡುವೆ ಆಡಿದ 31 ಟಿ20 ಪಂದ್ಯಗಳಲ್ಲಿ ಭಾರತ ತಂಡ 19 ಪಂದ್ಯಗಳನ್ನು ಗೆದ್ದು ಟಿ20 ಕ್ರಿಕೆಟ್‌ನಲ್ಲಿ ಆಸೀಸ್ ವಿರುದ್ಧ ಮೇಲುಗೈ ಸಾಧಿಸಿದೆ ಮತ್ತು ಆಸ್ಟ್ರೇಲಿಯಾ 11 ಪಂದ್ಯಗಳ ಗೆಲುವನ್ನು ಹೊಂದಿದೆ. ಟಿ20 ವಿಶ್ವಕಪ್ ಇತಿಹಾಸದಲ್ಲಿ ಐದು ಮುಖಾಮುಖಿಯಲ್ಲಿ ಟೀಮ್ ಇಂಡಿಯಾ ಮೂರು ಬಾರಿ ಗೆದ್ದು, ಆಸ್ಟ್ರೇಲಿಯಾ ವಿರುದ್ಧ ಮೇಲುಗೈ ಹೊಂದಿದೆ.
ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧದ ಇತ್ತೀಚಿನ ಐಸಿಸಿ ಫೈನಲ್‌ನಲ್ಲಿನ ಸೋಲಿಗೆ ಸೇಡು ತೀರಿಸಿಕೊಳ್ಳಲು ಮತ್ತು ಸೆಮಿಫೈನಲ್‌ಗೆ ಮುನ್ನಡೆಯಲು ಉತ್ಸುಕವಾಗಿದೆ.
ಗಮನಾರ್ಹವಾಗಿ ಭಾರತ ತಂಡ ಸೆಮಿಫೈನಲ್‌ಗೆ ಅರ್ಹತೆ ಪಡೆದರೆ, ಗುರುವಾರ, ಜೂನ್ 27ರಂದು ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ಪಂದ್ಯಾವಳಿಯ ಎರಡನೇ ಸೆಮಿಫೈನಲ್ ಪಂದ್ಯವನ್ನು ಆಡಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications