ಜೂನ್ 22 ಶನಿವಾರ, 2024ರ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾದ ಪ್ರದರ್ಶನ ಇಲ್ಲಿಯವರೆಗೆ ಅತ್ಯುತ್ತಮವಾಗಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡವು ಗ್ರೂಪ್ ಹಂತದಲ್ಲಿ 3 ಪಂದ್ಯಗಳನ್ನು ಮತ್ತು ಸೂಪರ್-8 ಹಂತದಲ್ಲಿ 1 ಪಂದ್ಯವನ್ನು ಗೆದ್ದಿದೆ.
ಇಲ್ಲಿಯವರೆಗೆ 2024ರ ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಸೋಲನ್ನು ಕಂಡಿಲ್ಲ. ಈಗ ಮೆನ್ ಇನ್ ಬ್ಲೂ ತನ್ನ ಸೂಪರ್-8 ರ ಎರಡನೇ ಪಂದ್ಯವನ್ನು ಬಾಂಗ್ಲಾದೇಶ ವಿರುದ್ಧ ಇಂದು ರಾತ್ರಿ ಭಾರತೀಯ ಕಾಲಮಾನ 8 ಗಂಟೆಗೆ ಆಡಲಿದೆ. ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್ ಬಾಂಗ್ಲಾದೇಶ ವಿರುದ್ಧದ ಪ್ಲೇಯಿಂಗ್-11 ರಲ್ಲಿ ದೊಡ್ಡ ಬದಲಾವಣೆ ಮಾಡಬಹುದು.

ಐಪಿಎಲ್‌ನಲ್ಲಿ ನೀಡಿದ ಪ್ರದರ್ಶನದ ಆಧಾರ ಮೇಲೆ ಸ್ಟಾರ್ ಆಲ್‌ರೌಂಡರ್ ಶಿವಂ ದುಬೆ ಅವರನ್ನು ಟಿ20 ವಿಶ್ವಕಪ್‌ನ ಭಾರತ ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ಆದರೆ ಶಿವಂ ದುಬೆ ಸಿಕ್ಕ ಅವಕಾಶವನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಅವರಿಂದ ಇಲ್ಲಿವರೆಗೂ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ಬಂದಿಲ್ಲ.
ಇದುವರೆಗೆ ಆಡಿರುವ 4 ಪಂದ್ಯಗಳಲ್ಲಿ ಸಂಪೂರ್ಣ ನಿರಾಸೆ ಮೂಡಿಸಿದ್ದಾರೆ. ಶಿವಂ 4 ಪಂದ್ಯಗಳ 4 ಇನ್ನಿಂಗ್ಸ್‌ಗಳಲ್ಲಿ 44 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರ ಬ್ಯಾಟ್‌ನಿಂದ ಕೇವಲ 1 ಬೌಂಡರಿ ಮತ್ತು 2 ಸಿಕ್ಸರ್‌ಗಳು ಬಂದಿವೆ.
ದುಬೆ ಅವರ ಕಳಪೆ ಪ್ರದರ್ಶನದಿಂದ ಈಗ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್ ಅವರು ಪ್ಲೇಯಿಂಗ್-11 ನಿಂದ ಕೈಬಿಡುವ ಸಾಧ್ಯವಿದೆ. ದುಬೆ ಸ್ಥಾನಕ್ಕೆ ಸಂಜು ಸ್ಯಾಮ್ಸನ್ ಅವರನ್ನು ಪ್ಲೇಯಿಂಗ್-11 ರಲ್ಲಿ ಸೇರಿಸಿಕೊಳ್ಳಬಹುದು. ಸಂಜು ತಂಡದಲ್ಲಿ ಆಡುವ ಅವಕಾಶ ಪಡೆದು ಮಿಂಚಿದರೆ ಮುಂಬರುವ ಪಂದ್ಯಗಳಲ್ಲಿ ಇನ್ನೂ ಹೆಚ್ಚಿನ ಅವಕಾಶ ಸಿಗಲಿದೆ.
ಸಂಜು ಐಪಿಎಲ್ 2023ರಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. 15 ಪಂದ್ಯಗಳಲ್ಲಿ 531 ರನ್ ಗಳಿಸಿದ್ದರು. ಪರಿಣಾಮ ಸಂಜು 2024 ರ ಟಿ20 ವಿಶ್ವಕಪ್‌ಗಾಗಿ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದರು. ಸಂಜು ಟಿ20 ಕ್ರಿಕೆಟ್‌ನಲ್ಲಿ 3ನೇ ಕ್ರಮಾಂಕದಲ್ಲಿ ಉತ್ತಮವಾಗಿ ಬ್ಯಾಟ್ ಮಾಡುತ್ತಾರೆ.
ಇದರೊಂದಿಗೆ ಅವರು 5ನೇ ಕ್ರಮಾಂಕದಲ್ಲಿ ಭಾರತ ತಂಡದ ಪರ ಸ್ಫೋಟಕವಾಗಿ ಆಡಬಲ್ಲರು. ಶಿವಂ ಪ್ಲೇಯಿಂಗ್-11 ರಿಂದ ಹೊರಗುಳಿದಿದ್ದರೆ, ಹಾರ್ದಿಕ್ ಪಾಂಡ್ಯ ತಂಡದಲ್ಲಿ ಫಿನಿಶರ್ ಪಾತ್ರವನ್ನು ನಿರ್ವಹಿಸಬಹುದು.
ಈ ಟಿ20 ವಿಶ್ವಕಪ್ 2024 ರಲ್ಲಿ ಹಾರ್ದಿಕ್ ಪಾಂಡ್ಯ ಇಲ್ಲಿಯವರೆಗೆ ಹಲವು ದೊಡ್ಡ ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಡೆತ್ ಓವರ್‌ಗಳಲ್ಲಿ ದೊಡ್ಡ ಹೊಡೆತಗಳನ್ನು ಆಡುವುದಕ್ಕೆ ಪಾಂಡ್ಯ ಹೆಸರುವಾಸಿಯಾಗಿದ್ದಾರೆ.
ಆದರೆ ಸಂಜು ಸ್ಯಾಮನ್ಸ್ ಟೀಮ್ ಇಂಡಿಯಾಕ್ಕೆ ಸ್ಥಿರತೆಯಿಂದ ಬ್ಯಾಟಿಂಗ್ ಆಡುತ್ತಾರೆ. ಶಿವಂ ದುಬೆ ಅವರಿಂದ ಸ್ಥಿರತೆ ಕಾಣಲು ಸಾಧ್ಯವಿಲ್ಲ. ಏಕೆಂದರೆ ದುಬೆ ಕೂಡ ದೊಡ್ಡ ಹೊಡೆತಗಳನ್ನು ಆಡುತ್ತಾರೆ.