For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್ 2024: ಭಾರತ ತಂಡದ ಮೊದಲ ಬ್ಯಾಚ್‌ನೊಂದಿಗೆ ವಿರಾಟ್ ಕೊಹ್ಲಿ ಪ್ರಯಾಣಿಸಿಲ್ಲವೇಕೆ?

ಮುಂಬರುವ 2024ರ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಗಾಗಿ ಶನಿವಾರ, ಮೇ 25ರಂದು ಮುಂಬೈನಿಂದ ಭಾರತ ಕ್ರಿಕೆಟ್ ತಂಡದ ಮೊದಲ ಬ್ಯಾಚ್ ಯುಎಸ್ಎ ಪ್ರಯಾಣ ಬೆಳೆಸಿತು. ಆದರೆ, ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಕಾಣಿಸಿಕೊಂಡಿಲ್ಲ.

ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಇತರ ಕೆಲವು ಸ್ಟಾರ್‌ಗಳು ಶನಿವಾರ ಮುಂಬೈನಿಂದ ಹೊರಡುವ ನಿರೀಕ್ಷೆಯಿತ್ತು. ಆಟಗಾರರು ಯುಎಸ್‌ಎಗೆ ತೆರಳುವ ಮೊದಲು ದುಬೈಗೆ ತೆರಳುವ ನಿರೀಕ್ಷೆಯಿದೆ.

T20 World Cup 2024 Why Didn t Virat Kohli Travel With Team India s First Batch


ವಿರಾಟ್ ಕೊಹ್ಲಿ ಅವರ ಕೆಲವು ಕಡತಗಳೊಂದಿಗೆ ಸ್ವಲ್ಪ ವಿಳಂಬವಾಗಿರುವುದರಿಂದ ಯುಎಸ್ಎಗೆ ಹೊರಡುವ ಭಾರತೀಯ ಆಟಗಾರರ ಮೊದಲ ಬ್ಯಾಚ್‌ನಿಂದ ಗೈರುಹಾಜರಾಗಲು ಕಾರಣ ಬಹಿರಂಗವಾಗಿದೆ.

ಆಟಗಾರರು ಶನಿವಾರ ಮುಂಬೈಲ್ಲಿ ಕೂಡಿಕೊಂಡರು. ಆದರೆ ಮೊದಲ ಬ್ಯಾಚ್‌ನಲ್ಲಿ ಕಾಣೆಯಾದ ಪ್ರಮುಖ ಹೆಸರು ವಿರಾಟ್ ಕೊಹ್ಲಿ. ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತು ಸಹಾಯಕ ಸಿಬ್ಬಂದಿಯೊಂದಿಗೆ ರೋಹಿತ್ ಶರ್ಮಾ, ರವೀಂದ್ರ ಜಡೇಜಾ ಮತ್ತು ಇತರ ಆಟಗಾರರು ಕಾಣಿಸಿಕೊಂಡರು.

ಗುರುವಾರ, ಮೇ 30ರಂದು ವಿರಾಟ್ ಕೊಹ್ಲಿ ಅಮೆರಿಕಕ್ಕೆ ಪ್ರಯಾಣಿಸಿಲಿದ್ದಾರೆ ಎಂಬ ಮಾಹಿತಿ ಇದೀಗ ಬಹಿರಂಗವಾಗಿದೆ. ಹೀಗಾಗಿ ಅವರು ಪಂದ್ಯಾವಳಿ ಪ್ರಾರಂಭವಾಗುವ ಮೊದಲು ಅಭ್ಯಾಸ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯಕ್ಕೆ ಅನುಮಾನವೆನಿಸಿದೆ.

T20 World Cup 2024 Why Didn t Virat Kohli Travel With Team India s First Batch

ವಿರಾಟ್ ಕೊಹ್ಲಿ ಹೊರತುಪಡಿಸಿ ಉಪನಾಯಕ ಹಾರ್ದಿಕ್ ಪಾಂಡ್ಯ ಕೂಡ ಮೊದಲ ಬ್ಯಾಚ್ ಆಟಗಾರರೊಂದಿಗೆ ಪ್ರಯಾಣಿಸಿಲ್ಲ. ಹಾರ್ದಿಕ್ ಪಾಂಡ್ಯ ಸದ್ಯ ಲಂಡನ್‌ನಲ್ಲಿದ್ದು, ಅಲ್ಲಿಂದಲೇ ನೇರವಾಗಿ ತಂಡವನ್ನು ಸೇರಿಕೊಳ್ಳುವ ನಿರೀಕ್ಷೆಯಿದೆ.

ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ಜೂನ್ 5ರಂದು ಐರ್ಲೆಂಡ್ ವಿರುದ್ಧ ಅಭಿಯಾನ ಪ್ರಾರಂಭಿಸಿದ ನಂತರ, ಜೂನ್ 9ರಂದು ನ್ಯೂಯಾರ್ಕ್‌ನಲ್ಲಿ ಪಾಕಿಸ್ತಾನ ವಿರುದ್ಧ ಹಣಾಹಣಿ ನಡೆಸಲಿದೆ.

2024ರ ಟಿ20 ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿಯ ಅದ್ಭುತ ಫಾರ್ಮ್ ಮುಂದುವರಿಕೆ

ಐಪಿಎಲ್ 2024ರ ಆವೃತ್ತಿಯಲ್ಲಿ ಅದ್ಭುತ ಬ್ಯಾಟಿಂಗ್ ಅಭಿಯಾನವನ್ನು ಆನಂದಿಸಿರುವ ವಿರಾಟ್ ಕೊಹ್ಲಿ ಟಿ20 ವಿಶ್ವಕಪ್‌ಗೆ ತೆರಳುವ ಮುನ್ನ ಅದ್ಭುತ ಫಾರ್ಮ್‌ನಲ್ಲಿದ್ದಾರೆ.

ವಿರಾಟ್ ಕೊಹ್ಲಿ ಆಡಿದ 15 ಪಂದ್ಯಗಳಲ್ಲಿ 61.75ರ ಸರಾಸರಿ ಮತ್ತು 153ರ ಸ್ಟ್ರೈಕ್ ರೇಟ್‌ನೊಂದಿಗೆ 741 ರನ್‌ಗಳೊಂದಿಗೆ ಆರೆಂಜ್ ಕ್ಯಾಪ್ ಪಡೆದಿದ್ದಾರೆ.

ವಿರಾಟ್ ಕೊಹ್ಲಿ ಅವರ ಐಪಿಎಲ್ 2024ರ ವೃತ್ತಿಜೀವನದಲ್ಲಿ ಇದು ಎರಡನೇ ಅತ್ಯುತ್ತಮ ಆವೃತ್ತಿಯಾಗಿದೆ. ಇದೇ ವೇಳೆ ತಮ್ಮ ಸ್ಟ್ರೈಕ್-ರೇಟ್ ಅನ್ನು ಪ್ರಶ್ನಿಸಿದ ಟೀಕಾಕಾರರನ್ನು ಬಾಯಿ ಮುಚ್ಚಿಸಿದರು.

ಆರ್‌ಸಿಬಿ ದ್ವಿತೀಯಾರ್ಧದಲ್ಲಿ ಐತಿಹಾಸಿಕ ಪುನರಾಗಮನ ಮಾಡುವ ಮೂಲಕ ಪ್ಲೇಆಫ್ ತಲುಪಲು ಸಹಾಯ ಮಾಡುವಲ್ಲಿ ಭಾರತೀಯ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಆದರೆ, ಆರ್‌ಸಿಬಿ ತಂಡ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ ವಿರುದ್ಧ ಸೋತು ಅಭಿಯಾನ ಕೊನೆಗೊಳಿಸಿತು.

Story first published: Sunday, May 26, 2024, 8:01 [IST]
Other articles published on May 26, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+