For Quick Alerts
ALLOW NOTIFICATIONS  
For Daily Alerts
 

ಭಾರತದಲ್ಲಿ ಆಡಲು ಬಾಂಗ್ಲಾ ಹಿಂದೇಟು: ಟಿ20 ವಿಶ್ವಕಪ್‌ ಪಂದ್ಯಗಳಿಗೆ ಶ್ರೀಲಂಕಾ ಆತಿಥ್ಯ

ಬಾಂಗ್ಲಾದೇಶ ತಂಡ ಟಿ20 ವಿಶ್ವಕಪ್‌ನಲ್ಲಿ ತಾನಾಡುವ ಸ್ಥಳಗಳ ಬದಲಾವಣೆಗೆ ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿ (ಐಸಿಸಿ) ಮುಂದೆ ಬೇಡಿಕೆ ಇಟ್ಟಿದ್ದು, ಈ ಬೇಡಿಕೆ ಈಡೇರುವ ಸಾಧ್ಯತೆ ಇದೆ. ಶ್ರೀಲಂಕಾ ಹೆಚ್ಚಿನ ಪಂದ್ಯಗಳಿಗೆ ಆತಿಥ್ಯ ನೀಡಲು ಸಜ್ಜಾಗಿದೆ.

ಭಾರತ ಹಾಗೂ ಬಾಂಗ್ಲಾದೇಶದ ನಡುವಣ ಇತ್ತೀಚಿನ ರಾಜಕೀಯ ಬೆಳವಣಿಗೆಗಳು ಕ್ರಿಕೆಟ್‌ ಮೇಲೆ ನೇರ ಪರಿಣಾಮ ಬೀರಿವೆ. ಈ ಎಲ್ಲದರ ಮಧ್ಯ ಕೋಲ್ಕತ್ತಾ ನೈಟ್‌ ರೈಡರ್ಸ್‌ (ಕೆಕೆಆರ್) ತಂಡದಿಂದ ಬಾಂಗ್ಲಾದೇಶದ ಮುಸ್ತಾಫಿಜುರ್ ರಹಮಾನ್‌ ಅವರನ್ನು ಬಿಡುಗಡೆ ಮಾಡುವೆ ಬಿಸಿಸಿಐ ಸೂಚಿಸಿತ್ತು. ಇದಕ್ಕೆ ಪ್ರತಿಯಾಗಿ ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿ ಸಹ ಭದ್ರತಾ ಕಾರಣದಿಂದ ಭಾರತ ಪ್ರವಾಸವನ್ನು ಬೆಳೆಸಲು ಹಿಂದೇಟು ಹಾಕಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿ ಬಾಂಗ್ಲಾದೇಶದ ಮನವಿ ಸ್ಪಂದಿಸುವ ಸಾಧ್ಯತೆ ಇದೆ. ಈ ಮೂಲಕ ಬಾಂಗ್ಲಾದೇಶಕ್ಕೆ ತಟಸ್ಥ ಸ್ಥಳದಲ್ಲಿ ಆಡುವ ಅವಕಾಶವನ್ನು ನೀಡಬಹುದಾಗಿದೆ. ತಟಸ್ಥ ಸ್ಥಳಗಳಲ್ಲಿ ಪಂದ್ಯಗಳು ನಡೆಯುವುದು ಇತ್ತೀಚಿನ ದಿನಗಳಲ್ಲಿ ಐಸಿಸಿ ಹಾಗೂ ಏಷ್ಯಾ ಕಪ್ ಕ್ರಿಕೆಟ್‌ ಟೂರ್ನಿಯಲ್ಲೂ ಕಂಡು ಬಂದಿದೆ.

T20 World Cup 2026 Bangladesh Matches Likely to Shift from India to Sri Lanka Amid Safety Fears

ಭಾನುವರ ಸಂಜೆಯ ವೇಳೆಗೆ ಶ್ರೀಲಂಕಾ ಕ್ರಿಕೆಟ್ ಮಂಡಳಿಗೂ ಯಾವುದೇ ಆದೇಶ ಬಂದಿಲ್ಲ ಎಂದು ತಿಳಿದು ಬಂದಿದೆ. ಶ್ರೀಲಂಕಾ ಹೆಚ್ಚುವರಿ ಪಂದ್ಯಗಳನ್ನು ತಮ್ಮ ದೇಶದಲ್ಲಿ ನಡೆಸಲು ಆಸಕ್ತರಾಗಿದ್ದಾರೆ. ಪಾಕಿಸ್ತಾನ ಟಿ20 ವಿಶ್ವಕಪ್‌ನ ತನ್ನ ಎಲ್ಲ ಪಂದ್ಯಗಳನ್ನು ಶ್ರೀಲಂಕಾದಲ್ಲೇ ಆಡಲಿದೆ. ಅಂತೆಯೇ ಬಾಂಗ್ಲಾದೇಶ ಸಹ ಇದೇ ದೇಶದಲ್ಲಿ ತನ್ನ ಎಲ್ಲ ಪಂದ್ಯಗಳನ್ನು ಆಡಬಹುದು.

ಎದುರಾಗಲಿವೆ ಈ ಸಮಸ್ಯೆ

2026ರಲ್ಲಿ ಬಾಂಗ್ಲಾದೇಶ ಆಡುವ ಸ್ಥಳಗಳು ಬದಲಾಗುವ ಸಾಧ್ಯತೆ ಇದೆ. ಶ್ರೀಲಂಕಾ ಮೂರು ನಗರಗಳಲ್ಲಿ ಟಿ20 ವಿಶ್ವಕಪ್‌ ಆಯೋಜಿಸಲಿದೆ. ಇದರಲ್ಲಿ ಕೊಲಂಬೊ ಹಾಗೂ ಪಲ್ಲಿಕಲ್ ಸೇರಿವೆ. ಆದರೆ ಪಂದ್ಯಗಳು ಶಿಫ್ಟ್‌ ಆದಲ್ಲಿ ಸಾರಿಗೆ, ಹೋಟೆಲ್ ಮತ್ತು ಪ್ರಯಾಣದ ವ್ಯವಸ್ಥೆಗಳನ್ನು ಸಮರ್ಪಕವಾಗಿ ನಿಭಾಯಿಸುವುದು ದೊಡ್ಡ ಸವಾಲಾಗಿದೆ. ಈ ಸವಾಲಿಗೆ ತಾನು ಸಿದ್ಧರಿರುವುದಾಗಿ ಶ್ರೀಲಂಕಾ ಕ್ರಿಕೆಟ್‌ ಮಂಡಳಿ ಸಿದ್ಧವಿದೆ ಎಂದು ತಿಳಿದು ಬಂದಿದೆ. ಐಸಿಸಿ ಲಾಜಿಸ್ಟಿಕ್ಸ್ ಅನ್ನು ಸರಿಯಾಗಿ ನಿಭಾಯಿಸಿದಲ್ಲಿ ನಾವು ಪಂದ್ಯಗಳನ್ನು ಆಯೋಜಿಸಲು ಯಾವುದೇ ಸಮಸ್ಯೆ ಇಲ್ಲ. ನಾವು ಅವರಿಗೆ ಶ್ರೀಲಂಕಾದಲ್ಲಿ ಆಡಲು ಅವಕಾಶವನ್ನು ಕಲ್ಪಿಸಬಹುದು ಎಂದು ಶ್ರೀಲಂಕಾ ಕ್ರಿಕೆಟ್‌ ಬೋರ್ಡ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

T20 World Cup 2026 Bangladesh Matches Likely to Shift from India to Sri Lanka Amid Safety Fears

ನಮ್ಮ ಮೊದಲ ಆಯ್ಕೆ ಕೊಲಂಬೊ ಕ್ರೀಡಾಂಗಣವಾಗಿರಲಿದೆ. ಅಲ್ಲದೆ ಪಳ್ಳಿಕಲ್ ನಲ್ಲೂ ಪಂದ್ಯಗಳನ್ನು ನಡೆಸಬಹುದು. ಶ್ರೀಲಂಕಾ ಪ್ರತಿ ದಿನವೂ ಒಂದು ಪಂದ್ಯಕ್ಕೆ ಆತಿಥ್ಯ ನೀಡಲಿದೆ. ಬಾಂಗ್ಲಾದೇಶ ಪಂದ್ಯಗಳು ಶಿಫ್ಟ್ ಆದಲ್ಲಿ ಈ ಪಂದ್ಯವನ್ನು ಬೇರೆ ಸ್ಥಳಗಳಲ್ಲಿ ಆಯೋಜಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಾಂಗ್ಲಾದೇಶ ಟಿ20 ವಿಶ್ವಕಪ್‌ನಲ್ಲಿ ಸಿ ಗುಂಪಿನಲ್ಲಿ ಸ್ಥಾನ ಪಡೆದಿದೆ. ಈ ಗುಂಪಿನಲ್ಲಿ ವೆಸ್ಟ್‌ ಇಂಡೀಸ್‌, ಇಟಲಿ, ಇಂಗ್ಲೆಂಡ್, ನೇಪಾಳ ತಂಡಗಳ ಜೊತೆ ಬಾಂಗ್ಲಾದೇಶ ಲೀಗ್‌ ಹಂತದಲ್ಲಿ ಕಾದಾಟ ನಡೆಸಲಿದೆ. ಈ ಮೊದಲಿನ ವೇಳಾಪಟ್ಟಿಯಂತೆ ಬಾಂಗ್ಲಾ ಆರಂಭದ ಮೂರು ಪಂದ್ಯಗಳನ್ನು ಕೋಲ್ಕತ್ತಾದಲ್ಲಿ ಕೊನೆಯ ಲೀಗ್ ಪಂದ್ಯವನ್ನು ಮುಂಬೈನಲ್ಲಿ ಆಡಬೇಕಿತ್ತು.

Story first published: Monday, January 5, 2026, 6:15 [IST]
Other articles published on Jan 5, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+