T20 World Cup: ಅತಿ ಹೆಚ್ಚು ಸಿಕ್ಸರ್‌ಗಳನ್ನು ನೀಡಿದ ಟಾಪ್ 5 ಬೌಲರ್ಸ್
ಈ ಬಾರಿಯ ಟಿ20 ವಿಶ್ವಕಪ್ ಮುಗಿದಿದೆ. ಈ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಸ್ಥಿರ ಪ್ರದರ್ಶನ ನೀಡಿ ಜಯ ಸಾಧಿಸಿದೆ. ಭಾನುವಾರ (ಮಾರ್ಚ್ 8) ನಡೆದ ಫೈನಲ್ ಪಂದ್ಯದಲ್ಲಿ 96 ರನ್‌ಗಳಿಂದ ನ್ಯೂಜಿಲೆಂಡ್ ಮಣಿಸಿದ ಭಾರತ ಪ್ರಶಸ್ತಿ ಎತ್ತಿ ಸಂಭ್ರಮಿಸಿದೆ. ಈ ಟೂರ್ನಿಯಲ್ಲಿ ಸ್ಟಾರ್ ಬ್ಯಾಟರ್‌ಗಳ ಆರ್ಭಟ ಜೋರಾಗಿತ್ತು. ಇನ್ನು ಬೌಲರ್‌ಗಳು ಸಹ ರನ್ ನೀಡಿ ಕೈ ಸುಟ್ಟುಕೊಂಡಿದ್ದಾರೆ. ಟೂರ್ನಿಯಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿಕೊಂಡ ಟಾಪ್ 5 ಬೌಲರ್‌ಗಳ ಪಟ್ಟಿಯಲ್ಲಿ ಟೀಮ್ ಇಂಡಿಯಾದ ಬೌಲರ್‌ಗಳು ಸ್ಥಾನ ಇದೆ. ಅತಿ ಹೆಚ್ಚು ಸಿಕ್ಸರ್‌ಗಳನ್ನು ನೀಡಿದ ಬೌಲರ್‌ಗಳ ಪಟ್ಟಿಯಲ್ಲಿ ಇಂಗ್ಲೆಂಡ್, ಟೀಮ್ ಇಂಡಿಯಾ ಬೌಲರ್‌ಗಳು ಹೆಚ್ಚಿದ್ದಾರೆ.
ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿಕೊಂಡ ಪಟ್ಟಿಯಲ್ಲಿ ಟೀಮ್ ಇಂಡಿಯಾದ ಹಾರ್ದಿಕ್ ಪಾಂಡ್ಯ ಅಗ್ರ ಸ್ಥಾನದಲ್ಲಿದ್ದಾರೆ. ಇವರು ಆಡಿದ 9 ಪಂದ್ಯಗಳಲ್ಲಿ 33 ಓವರ್ ಬೌಲಿಂಗ್ ಮಾಡಿದ್ದು 20 ಸಿಕ್ಸರ್‌ಗಳನ್ನು ಬಿಟ್ಟುಕೊಟ್ಟಿದ್ದಾರೆ. ಇದು ವಿಶ್ವಕಪ್‌ನಲ್ಲಿ ಬೌಲರ್ ಒಬ್ಬ ನೀಡಿದ ಅತಿ ಹೆಚ್ಚು ಸಿಕ್ಸರ್‌ಗಳ ಸಂಖ್ಯೆಯಾಗಿದೆ.

ಆದಿಲ್ ರಶೀದ್
ಇಂಗ್ಲೆಂಡ್ ತಂಡದ ಅನುಭವಿ ಸ್ಪಿನ್ ಬೌಲರ್ ಆದಿಲ್ ರಶೀದ್ ಅತಿ ಹೆಚ್ಚು ಸಿಕ್ಸರ್‌ಗಳನ್ನು ನೀಡಿದ ಬೌಲರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ನಿಲ್ಲುತ್ತಾರೆ. ಇವರು ಆಡಿದ 8 ಪಂದ್ಯಗಳಲ್ಲಿ 13 ವಿಕೆಟ್ ಪಡೆದು ತಂಡಕ್ಕೆ ಆಧಾರವಾಗಿದ್ದಾರೆ. ಆದರೆ ಇವರ ಬೌಲಿಂಗ್‌ನಲ್ಲೇ ಅತಿ ಹೆಚ್ಚು ಸಿಕ್ಸರ್‌ಗಳನ್ನು ಸಹ ನೀಡಿದ್ದಾರೆ. ಇವರು 8ರ ಎಕಾನಮಿಯಲ್ಲಿ ರನ್ ನೀಡಿದ್ದು, ಈ ವೇಳೆ ಇವರು 18 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ.
ವರುಣ್ ಚಕ್ರವರ್ತಿ
ಟೀಮ್ ಇಂಡಿಯಾದ ಸ್ಪಿನ್ ಬೌಲರ್ ವರುಣ್ ಚಕ್ರವರ್ತಿ ಅವರು ಸಹ ಅತಿ ಹೆಚ್ಚು ದಂಡನೆಗೆ ಒಳಗಾದ ಬೌಲರ್. ಇವರು ಟೂರ್ನಿಯ ಆರಂಭದಲ್ಲಿ ಶಿಸ್ತು ಬದ್ಧ ದಾಳಿ ನಡೆಸಿ ಗಮನ ಸೆಳೆದಿದ್ದರು. ಆದರೆ ಮಹತ್ವದ ಪಂದ್ಯಗಳಲ್ಲಿ ಇವರು ಸಹ ರನ್ ಬಿಟ್ಟುಕೊಟ್ಟರು. ಇವರು ಟಿ20 ವಿಶ್ವಕಪ್‌ನಲ್ಲಿ ಆಡಿದ 9 ಪಂದ್ಯಗಳಲ್ಲಿ 14 ವಿಕೆಟ್ ಪಡೆದಿದ್ದಾರೆ. ಆದರೆ 17 ಸಿಕ್ಸರ್‌ಗಳನ್ನು ಎದುರಾಳಿ ಬ್ಯಾಟರ್‌ಗಳಿಗೆ ನೀಡಿದ್ದಾರೆ.
ಜೋಫ್ರಾ ಆರ್ಚರ್
ಇಂಗ್ಲೆಂಡ್ ವೇಗದ ಬೌಲಿಂಗ್‌ನ ಬೆನ್ನೆಲೆಬು ಜೋಫ್ರಾ ಆರ್ಚರ ಅವರು ಸಹ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ದಂಡನೆಗೆ ಒಳಗಾದ ಬೌಲರ್‌ಗಳ ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಇವರು ಟೂರ್ನಿಯಲ್ಲಿ 30 ಓವರ್ ಬೌಲಿಂಗ್ ನಡೆಸಿದ್ದು, 17 ಸಿಕ್ಸರ್ ಬಿಟ್ಟುಕೊಟ್ಟಿದ್ದಾರೆ.
ಮಾರ್ಕೊ ಜಾನ್ಸೆನ್
ದಕ್ಷಿಣ ಆಫ್ರಿಕಾದ ಎಡಗೈ ವೇಗದ ಬೌಲರ್ ಮಾರ್ಕೊ ಜಾನ್ಸೆನ್ ಅತಿ ಹೆಚ್ಚು ದಂಡನೆಗೆ ಒಳಗಾದ ಬೌಲರ್. ಇವರು 6 ಪಂದ್ಯಗಳಲ್ಲಿ 14 ಸಿಕ್ಸರ್‌ಗಳನ್ನು ನೀಡಿದ್ದಾರೆ. ಅಲ್ಲದೆ 11 ವಿಕೆಟ್ ಪಡೆದಿದ್ದಾರೆ. ಇವರು ಸುಮಾರು 23 ಓವರ್ ಬೌಲಿಂಗ್ ಮಾಡಿದ್ದು ಈ ವೇಳೆ 237 ರನ್ ನೀಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications