T20 World Cup: ಮೂರನೇ ದಿನವೂ ಮೂರು ಪಂದ್ಯ: ಇಟಲಿ ಮೇಲೆ ಎಲ್ಲರ ಕಣ್ಣು
ಟಿ20 ವಿಶ್ವಕಪ್ 2026 ಅದ್ಧೂರಿಯಾಗಿ ಆರಂಭವಾಗಿದೆ. ಚಾಂಪಿಯನ್ ಪಟ್ಟದ ಮೇಲೆ ಕಣ್ಣು ನೆಟ್ಟಿರುವ ತಂಡಗಳು ಭರ್ಜರಿ ಆರಂಭವನ್ನು ಮಾಡಿವೆ. ಲೀಗ್ ಹಂತದಲ್ಲಿ ಪ್ರತಿ ದಿನ ಮೂರು ಪಂದ್ಯಗಳು ನಡೆಯಲಿವೆ. ಸೋಮವಾರವೂ ಟಿ20 ವಿಶ್ವಕಪ್‌ನಲ್ಲಿ ಒಟ್ಟು ಮೂರು ಪಂದ್ಯಗಳು ಅಭಿಮಾನಿಗಳನ್ನು ಸೆಳೆಯಲಿವೆ. ಟೂರ್ನಿಯ ಮೂರನೇ ದಿನದಂದು ಇಟಲಿ ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್ ಆಡಲಿದೆ.
ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸಲು ಭಾರತಕ್ಕೆ ಪ್ರಯಾಣ ಬೆಳೆಸುವುದಿಲ್ಲ ಎಂದು ಬಾಂಗ್ಲಾದೇಶ ಹೇಳಿದ ಬಳಿಕ, ಐಸಿಸಿ ಬಾಂಗ್ಲಾವನ್ನು ಟೂರ್ನಿಯಿಂದ ಹೊರಗಿಟ್ಟು ಸ್ಕಾಟ್ಲೆಂಡ್ ತಂಡಕ್ಕೆ ಅವಕಾಶವನ್ನು ನೀಡಿತು. ಸ್ಕಾಟ್ಲೆಂಡ್ ತಂಡ ಕೋಲ್ಕತ್ತಾದಲ್ಲಿ ತನ್ನ ಮೊದಲ ಪಂದ್ಯದಲ್ಲಿ ಇಟಲಿ ವಿರುದ್ಧ ಕಣಕ್ಕೆ ಇಳಿಯಲಿದೆ.

ಅಭಿಮಾನಿಗಳ ಕಣ್ಣು ಈ ಪಂದ್ಯದ ಮೇಲೆ ನೆಟ್ಟಿರಲಿದೆ. ಸ್ಕಾಟ್ಲೆಂಡ್ ಗೆಲುವಿನ ಆರಂಭವನ್ನು ಮಾಡುವ ಕನಸು ಕಾಣುತ್ತಿದೆ. ಇನ್ನು ಇಟಲಿ ಟೂರ್ನಿಗೆ ಪದಾರ್ಪಣೆ ಮಾಡಲಿದೆ. "ಸಿ" ಗುಂಪಿನ ಪಂದ್ಯದಲ್ಲಿ ಗೆಲ್ಲುವುದು ಯಾರು ಎಂಬ ಪ್ರಶ್ನೆ ಉದ್ಭವಿಸಿದೆ.
ಪಂದ್ಯ ಆರಂಭ: ಬೆಳಗ್ಗೆ 11ಕ್ಕೆ
ಓಮನ್ vs ಜಿಂಬಾಬ್ವೆ
"ಬಿ" ಗುಂಪಿನ ಪಂದ್ಯದಲ್ಲಿ ಓಮನ್ ಹಾಗೂ ಜಿಂಬಾಬ್ವೆ ತಂಡಗಳು ಹೋರಾಟವನ್ನು ನಡೆಸಲಿವೆ. ಜಿಂಬಾಬ್ವೆ ನಾಯಕ ಸಿಕಂದರ್ ರಾಜ್ ಹಲವಾರು ಫ್ರಾಂಚೈಸಿ ತಂಡಗಳ ಪರ ಆಡುತ್ತಾರೆ. ಹೀಗಾಗಿ ಇವರ ಅನುಭವ ತಂಡಕ್ಕೆ ಮುಖ್ಯವಾಗಿದೆ. ಇವರು ತಮ್ಮ ಆಲ್‌ರೌಂಡರ್ ಆಟದಿಂದ ತಂಡಕ್ಕೆ ನೆರವಾಗಬಲ್ಲರು. ಬೌಲಿಂಗ್‌ನಲ್ಲಿ ಬ್ಲೆಸ್ಸಿಂಗ್ ಮುಜರಬಾನಿ ಮತ್ತು ರಿಚರ್ಡ್ ನ್ಗಾರವಾ ತಂಡಕ್ಕೆ ನೆರವಾಗಬಲ್ಲರು. ಇನ್ನು ಓಮನ್ ತಂಡದ ಪರ ಹಮದ್ ಮಿರ್ಜಾ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಇವರು ಮೊದಲ ಪಂದ್ಯದಲ್ಲಿ ಬಿಗ್ ಇನಿಂಗ್ಸ್ ಕಟ್ಟುವ ಕನಸಿನಲ್ಲಿದ್ದಾರೆ. ಓಮನ್ ಪರ ರಾಮನಂದಿ ಬಿಗುವಿನ ದಾಳಿ ನಡೆಸಿ ಆರ್ಭಟಿಸ ಬೇಕಿದೆ.
ಪಂದ್ಯ ಆರಂಭ: ಮಧ್ಯಾಹ್ನ 3ಕ್ಕೆ
ದಕ್ಷಿಣ ಆಫ್ರಿಕಾ vs ಕೆನಡಾ
ಪ್ರಸಕ್ತ ಟಿ20 ವಿಶ್ವಕಪ್ ಕಪ್ ಗೆಲ್ಲಬಹುದಾದ ಹಾಟ್ ಫೇವರಿಟ್ ತಂಡಗಳಲ್ಲಿ ಒಂದಾಗಿರುವ ದಕ್ಷಿಣ ಆಫ್ರಿಕಾ ಸೋಮವಾರ ಅಖಾಡ ಪ್ರವೇಶಿಸಲಿದೆ. ಕಳೆದ ವರ್ಷ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಪ್ರಶಸ್ತಿಯನ್ನು ಗೆಲ್ಲುವ ಮೂಲಕ ತಮ್ಮ ಟ್ರೋಫಿ ಬರವನ್ನು ಕೊನೆಗೊಳಿಸಿದ ದಕ್ಷಿಣ ಆಫ್ರಿಕಾ ಮತ್ತೊಂದು ಗೆಲುವಿನ ಕನಸು ಕಾಣುತ್ತಿದೆ. ಕಳೆದ ಬಾರಿಯ ಟಿ20 ವಿಶ್ವಕಪ್‌ನ ರನ್ನರ್ ಅಪ್ ತಂಡ ದಕ್ಷಿಣ ಆಫ್ರಿಕಾ, ಕೆನಡಾ ವಿರುದ್ಧ ಶುಭಾರಂಭದ ನಿರೀಕ್ಷೆಯಲ್ಲಿದೆ. ದಕ್ಷಿಣ ಆಫ್ರಿಕಾ ತಂಡದ ಆಟಗಾರರಿಗೆ ಭಾರತದಲ್ಲಿ ಆಡಿದ ಅನುಭವ ಹೆಚ್ಚಿದೆ. ತಂಡದಲ್ಲಿ ಸ್ಟಾರ್ ಬ್ಯಾಟರ್‌ಗಳ ದಂಡೇ ಇದೆ. ಕ್ವಿಂಟನ್ ಡಿ ಕಾಕ್ ಮತ್ತು ಡೆವಾಲ್ಡ್ ಬ್ರೆವಿಸ್ ಬ್ಯಾಟಿಂಗ್ ವಿಭಾಗದ ಕೇಂದ್ರಬಿಂದು. ಆಲ್‌ರೌಂಡರ್ ಮಾರ್ಕೊ ಜಾನ್ಸನ್, ಕಗಿಸೊ ರಬಾಡ, ಅನ್ರಿಚ್ ನೋಕಿಯಾ, ಲುಂಗಿ ಎನ್‌ಗಿಡಿ ತಮ್ಮ ಶಿಸ್ತು ಬದ್ಧ ದಾಳಿಯ ಪ್ರಕಾರ ಎದುರಾಳಿಗಳನ್ನು ಕಾಡಬಲ್ಲರು.
ಕೆನಡಾ ತಂಡ ಬಿಗ್ ಈವೆಂಟ್‌ಗಳಲ್ಲಿ ಆಡಿದ ಹೆಚ್ಚಿನ ಅನುಭವ ಇಲ್ಲ. ಈ ತಂಡ ಸತತ ಎರಡನೇ ಟಿ20 ವಿಶ್ವಕಪ್ ಆಡುತ್ತಿದ್ದು, ಈ ತಂಡವನ್ನು23 ವರ್ಷದ ದಿಲ್‌ಪ್ರೀತ್ ಬಾಜ್ವಾ ಮುನ್ನಡೆಸುತ್ತಿದ್ದಾರೆ. ಕೆನಡಾ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಮನಮೋಹಕ ಪ್ರದರ್ಶನ ನೀಡಿದ್ದು, ದೊಡ್ಡ ತಂಡಕ್ಕೆ ಪೆಟ್ಟು ನೀಡುವ ಆಸೆಯನ್ನು ಹೊಂದಿದೆ.
ಪಂದ್ಯ ಆರಂಭ: ಸಂಜೆ 7ಕ್ಕೆ
ಟಿ20 ವಿಶ್ವಕಪ್ ಪಂದ್ಯಗಳ ನೇರಪ್ರಸಾರವನ್ನು ಎಲ್ಲಿ ವೀಕ್ಷಿಸಬಹುದು?
ಟಿ20 ವಿಶ್ವಕಪ್‌ನ ಪಂದ್ಯಗಳನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೋಡಬಹುದಾಗಿದೆ. ಅಲ್ಲದೆ ಆನ್‌ಲೈನ್‌ನಲ್ಲಿ ಜಿಯೋಹಾಟ್‌ಸ್ಟಾರ್‌ನಲ್ಲಿ ವೀಕ್ಷಿಸಬಹುದಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications