For Quick Alerts
ALLOW NOTIFICATIONS  
For Daily Alerts
 

T20 World Cup: ಹ್ಯಾಟ್ರಿಕ್‌ ಗೆಲುವಿನ ನಗೆ ಬೀರಿದ ದಕ್ಷಿಣ ಆಫ್ರಿಕಾ

ಅಹಮದಾಬಾದ್: ನಾಯಕ ಐಡನ್‌ ಮಾರ್ಕ್ರಾಮ್‌ (ಅಜೇಯ 86) ಹಾಗೂ ವೇಗದ ಬೌಲರ್‌ ಮಾರ್ಕೊ ಜಾನ್ಸನ್‌ (40ಕ್ಕೆ 4) ಇವರುಗಳ ಭರ್ಜರಿ ಆಟದ ನೆರವಿನಿಂದ ದಕ್ಷಿಣ ಆಫ್ರಿಕಾ "ಡಿ" ಗುಂಪಿನಲ್ಲಿ 7 ವಿಕೆಟ್‌ಗಳಿಂದ ನ್ಯೂಜಿಲೆಂಡ್ ತಂಡವನ್ನು ಮಣಿಸಿ, ಗುಂಪಿನಲ್ಲಿ ಅಗ್ರಸ್ಥಾನ ಪಡೆದಿದೆ. ಈ ಮೂಲಕ ದಕ್ಷಿಣ ಆಫ್ರಿಕಾ ಮುಂದಿನ ಹಂತಕ್ಕೆ ಒಂದು ಕಾಲು ಇಟ್ಟಿದೆ.

ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡದ ಆರಂಭ ಸಾಧಾರಣವಾಗಿತ್ತು. ಟಿಮ್ ಸಿಫರ್ಟ್‌ (13) ರನ್ ಬಾರಿಸಿ ಔಟ್ ಆದರು. ಆಗ ತಂಡದ ಮೊತ್ತ 33 ಆಗಿತ್ತು. ಯುವ ಆಲ್‌ರೌಂಡರ್‌ ರಚಿನ್ ರವೀಂದ್ರ (13) ಬಿಗ್ ಇನಿಂಗ್ಸ್ ಕಟ್ಟಲಿಲ್ಲ. ಆರಂಭಿಕ ಫಿನ್ ಅಲೆನ್ 17 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ ಸಹಾಯದಿಂದ 31 ರನ್‌ ಬಾರಿಸಿ ಪೆವಿಲಿಯನ್ ಸೇರಿದರು. ಮಧ್ಯಮ ಕ್ರಮಾಂಕದಲ್ಲಿ ಗ್ಲೆನ್ ಫಿಲಿಪ್ಸ್‌ (1) ರನ್ ಬರ ಅನುಭವಿಸಿದರು.

T20 World Cup 2026

5ನೇ ವಿಕೆಟ್‌ಗೆ ಮಾರ್ಕ್ ಚಾಂಪ್ಮನ್‌ ಹಾಗೂ ಡೇರಿಲ್ ಮಿಚೆಲ್ ಜೋಡಿ ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ಶ್ರಮಿಸಿದರು. ಈ ಜೋಡಿ 44 ಎಸೆತಗಳಲ್ಲಿ 74 ರನ್ ಸೇರಿಸಿತು. ಮಾರ್ಕ್ ಚಾಂಪ್ಮನ್‌ 6 ಬೌಂಡರಿ, 2 ಸಿಕ್ಸರ್ ಸಹಾಯದಿಂದ 48 ರನ್‌ ಸಿಡಿಸಿದರು. ಡೇರೆಲ್ ಮಿಚೆಲ್‌ 2 ಬೌಂಡರಿ, 1 ಸಿಕ್ಸರ್ ನೆರವಿನಿಂದ 32 ರನ್‌ ಬಾರಿಸಿ ಅಬ್ಬರಿಸಿದರು. ಜೇಮ್ಸ್ ನೀಶಮ್ 3 ಬೌಂಡರಿ ಸಹಾಯದಿಂದ ಅಜೇಯ 23 ರನ್‌ ಬಾರಿಸಿ ತಂಡದ ಮೊತ್ತ ಹಿಗ್ಗಿಸಿದರು. ಅಂತಿಮವಾಗಿ ನ್ಯೂಜಿಲೆಂಡ್ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 175 ರನ್ ಸೇರಿಸಿತು.

ಭರ್ಜರಿ ಆರಂಭ

ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡದ ಆರಂಭ ಭರ್ಜರಿಯಾಗಿತ್ತು. ಐಡನ್‌ ಮಾರ್ಕ್ರಾಮ್‌ ಹಾಗೂ ಕ್ವಿಂಟನ್‌ ಡಿಕಾಕ್ ಜೋಡಿ ಉತ್ತಮ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ 62 ರನ್‌ ಸೇರಿಸಿತು. ಈ ವೇಳೆ ಕ್ವಿಂಟನ್ ಡಿಕಾಕ್ 20 ರನ್‌ ಬಾರಿಸಿ ಮಿಂಚಿದರು. ರಯಾನ್‌ ರಿಕಲ್ಟನ್ 21 ರನ್ ಬಾರಿಸಿ ನಾಯಕ ಮಾರ್ಕ್ರಾಮ್‌ಗೆ ಉತ್ತಮ ಸಾಥ್ ನೀಡಿದರು.

T20 World Cup 2026

ಡೆವಾಲ್ಡ್ ಬ್ರೇವಿಸ್‌ 21 ರನ್‌ ಚಚ್ಚಿದರು. ಆರಂಭಿಕ ಆಟಗಾರ ಐಡನ್ ಮಾರ್ಕ್ರಾಮ್‌ ಜೋಡಿ ಅಬ್ಬರಿಸಿದರು. ಇವರು 44 ಎಸೆತಗಳಲ್ಲಿ 8 ಬೌಂಡರಿ, 4 ಸಿಕ್ಸರ್ ಸಹಾಯದಿಂದ ಅಜೇಯ 86 ರನ್‌ ಸಿಡಿಸಿ ಗೆಲುವಿನಲ್ಲಿ ಮಿಂಚಿದರು. ಅಂತಿಮವಾಗಿ ದಕ್ಷಿಣ ಆಫ್ರಿಕಾ 17.1 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 178 ರನ್‌ ಸಿಡಿಸಿ ಟೂರ್ನಿಯಲ್ಲಿ ಸತತ ಮೂರನೇ ಗೆಲುವು ದಾಖಲಿಸಿತು.

Story first published: Saturday, February 14, 2026, 23:46 [IST]
Other articles published on Feb 14, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+