ವಿಂಡೀಸ್ ವಿರುದ್ಧ ದಾಖಲೆಯ ರನ್ ಚೇಸ್ ಮಾಡಿದ ಭಾರತ; ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಕಾದಾಟ
ಕೋಲ್ಕತ್ತಾ: ಭರವಸೆಯ ಆಟಗಾರ ಸಂಜು ಸ್ಯಾಮ್ಸನ್ ಅವರ ಜವಾಬ್ದಾರಿಯುತ ಆಟದ ನೆರವಿನಿಂದ ಟೀಮ್ ಇಂಡಿಯಾ ಟಿ20 ವಿಶ್ವಕಪ್ ಸೂಪರ್ 8 ಹಂತದ ಮಹಹತ್ವದ ಪಂದ್ಯದಲ್ಲಿ 5 ವಿಕೆಟ್‌ಗಳಿಂದ ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿ, ಟೂರ್ನಿಯ ಸೆಮಿಫೈನಲ್ ಹಂತಕ್ಕೆ ಪ್ರವೇಶ ಪಡೆದಿದೆ. ಮಾರ್ಚ್ 5 ರಂದು ಭಾರತ, ಇಂಗ್ಲೆಂಡ್ವಿರುದ್ಧ ಮುಂಬೈ ವಿರುದ್ಧ ಸೆಮಿಫೈನಲ್ ಪಂದ್ಯವನ್ನು ಆಡಲಿದೆ.
196 ರನ್‌ಗಳ ಗುರಿಯನ್ನು ಬೆನಟ್ಟಿದ ಟೀಮ್ ಇಂಡಿಯಾ ಆರಂಭ ಕಳಪೆಯಾಗಿತ್ತು. ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಹಾಗೂ ಸಂಜು ಸ್ಯಾಮ್ಸನ್ ಜೋಡಿ 3 ಓವರ್‌ಗಳಲ್ಲಿ 29 ರನ್ ಸೇರಿಸಿತು. ಈ ವೇಳೆ ಅಭಿಷೇಕ್ ಶರ್ಮಾ ಅಕೇಲ್ ಹೊಸೈನ್ ಅವರ ಎಸೆತದಲ್ಲಿ ಬಿಗ್ ಹಿಟ್ ಬಾರಿಸಲು ಹೋಗಿ ಶಿಮ್ರೋನ್ ಹೆಟ್ಮೆಯರ್‌ಗೆ ಕ್ಯಾಚ್ ನೀಡಿದರು. ಅಭಿಷೇಕ್ ಶರ್ಮಾ 10 ರನ್‌ಗಳಿಗೆ ಆಟ ಮುಗಿಸಿದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಇಶಾನ್ ಕಿಶನ್ 2 ಬೌಂಡರಿ ಸಹಾಯದಿಂದ 10 ರನ್ ಬಾರಿಸಿ ಔಟ್ ಆದರು.

41 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ಬ್ಯಾಟ್ ಮಾಡಿದ ಸೂರ್ಯಕುಮಾರ್ ಯಾದವ್ ಹಾಗೂ ಆರಂಭಿಕ ಸಂಜು ಸ್ಯಾಮ್ಸನ್ ಜೋಡಿ ಸಮಯೋಚಿತ ಬ್ಯಾಟಿಂಗ್ ನಡೆಸಿತು. ಈ ಜೋಡಿ 35 ಎಸೆತಗಳಲ್ಲಿ 58 ರನ್ ಬಾರಿಸಿತು. ಸೂರ್ಯಕುಮಾರ್ ಯಾದವ್ (18) ದೊಡ್ಡ ಹೊಡೆತಕ್ಕೆ ಮುಂದಾಗಿ ಔಟ್ ಆದರು. ಶಾಮರ್ ಜೋಸೆಫ್ ಅವರ ಔಟ್ ಸೈಡ್ ಆಫ್ ಸ್ಟಂಪ್ ಎಸೆತವನ್ನು ತಪ್ಪಾಗಿ ಗ್ರಹಿಸಿ ಬೌಂಡರಿ ಲೈನ್‌ನಲ್ಲಿ ನಿಂತಿದ್ದ ಶೆರ್ಫೇನ್ ರುದರ್ಫೋರ್ಡ್ ಅವರಿಗೆ ಕ್ಯಾಚ್ ನೀಡಿದರು.ನಂತರ ಬಂದ ತಿಲಕ್ ವರ್ಮಾ ಸಹ 15 ಎಸೆತಗಳಲ್ಲಿ 27 ರನ್ ಸೇರಿಸಿದರು. ಹಾರ್ದಿಕ್ ಪಾಂಡ್ಯ 17, ಶಿವಂ ದುಬೆ ಅಜೇಯ 8 ರನ್ ಬಾರಿಸಿದರು.
ಸಂಜು ಅಜೇಯ 97
ಟೀಮ್ ಇಂಡಿಯಾದ ಆರಂಭಿ ಆಟಗಾರ ಸಂಜು ಸ್ಯಾಮ್ಸನ್ ಅಮೋಘವಾಗಿ ಬ್ಯಾಟಿಂಗ್ ನಡೆಸಿದರು. ಇವರು 50 ಎಸೆತಗಳಲ್ಲಿ 12 ಬೌಂಡರಿ, 4 ಸಿಕ್ಸರ್ ಸಹಾಯದಿಂದ ಅಜೇಯ 97 ರನ್ ಬಾರಿಸಿ ತಂಡ ಸೆಮಿಫೈನಲ್ ಪ್ರವೇಶಿಸಲು ಪ್ರಮುಖ ಕಾರಣರಾದರು. ಅಂತಿಮವಾಗಿ ಭಾರತ 19.2 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 199 ರನ್ ಸೇರಿಸಿತು.
ಭರ್ಜರಿ ಅರಂಭ
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ವಿಂಡೀಸ್ ತಂಡದ ಅರಂಭಿಕರು ತಂಡಕ್ಕೆ 68 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿದರು. ಮಹತ್ವದ ಪಂದ್ಯದಲ್ಲಿ ನಾಯಕ ಶಾಯ್ ಹೋಪ್ (32) ಅವರೊಂದಿಗೆ ಇನಿಂಗ್ಸ್ ಆರಂಭಿಸಿದ ರೋಸ್ಟನ್ ಚೇಸ್ ತಂಡಕ್ಕೆ ಆಧಾರವಾದರು. ಈ ಜೋಡಿ ಆರಂಭದಲ್ಲಿ ಎಚ್ಚರಿಕೆಯಿಂದ ಬ್ಯಾಟಿಂಗ್ ನಡೆಸಿತು. ಶಾಯ್ ಹೋಪ್ ವರುಣ್ ಚಕ್ರವರ್ತಿ ಅವರು ತೋಡಿದ ಖೆಡ್ಡಾಗೆ ಬಲಿಯಾದರು. ಮೊತ್ತವನ್ನು ಹಿಗ್ಗಿಸಲು ಹೋದ ರೋಸ್ಟನ್ ಚೇಸ್ ಬುಮ್ರಾ ಅವರ ಎಸೆತದಲ್ಲಿ ಸೂರ್ಯಗೆ ಕ್ಯಾಚ್ ನೀಡಿದರು. ಈ ವೇಳೆ ಇವರು 5 ಬೌಂಡರಿ, 1 ಸಿಕ್ಸರ್ ಸಿಡಿಸಿ ತಂಡಕ್ಕೆ ಅಧಾರವಾದರು.
ಮಧ್ಯಮ ಕ್ರಮಾಂಕದ ಭರವಸೆಯ ಆಟಗಾರ ಶಿಮ್ರೋನ್ ಹೆಟ್ಮೇಯರ್ 27 ರನ್ ಬಾರಿಸಿದ್ದಾಗ ಜಸ್ಪ್ರೀತ್ ಬುಮ್ರಾ ಅವರು ತೋಡಿದ ಖೆಡ್ಡಾಗೆ ಬಲಿಯಾದರು. ಶೆರ್ಫೇನ್ ರುದರ್ಫೋರ್ಡ್ 14 ರನ್‌ಗಳಿಗೆ ಆಟ ಮುಗಿಸಿದರು. 119 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದಾಗ ತಂಡಕ್ಕೆ ರೋವ್‌ಮನ್ ಪೊವೆಲ್ ಹಾಗೂ ಜೇಸನ್ ಹೋಲ್ಡರ್ ಜೋಡಿ ಕೇವಲ 35 ಎಸೆತಗಳಲ್ಲಿ ಅಜೇಯ 76 ರನ್‌ಗಳ ಜೊತೆಯಾಟವನ್ನು ನೀಡಿದರು. ಹೋಲ್ಡರ್ ಅಜೇಯ 37 ರನ್ ಬಾರಿಸಿದರೆ, ಪೋವೆಲ್ ಅಜೇಯ 34 ರನ್ ಬಾರಿಸಿದರು. ಅಂತಿಮವಾಗಿ ವಿಂಡೀಸ್ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 195 ರನ್ ಸಿಡಿಸಿದರು. ಭಾರತದ ಪರ ಜಸ್ಪ್ರೀತ್ ಬುಮ್ರಾ 2 ವಿಕೆಟ್ ಪಡೆದರು. ಹಾರ್ದಿಕ್ ಪಾಂಡ್ಯ, ವರುಣ್ ಚಕ್ರವರ್ತಿ ತಲಾ ಒಂದು ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications