Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

T20 World Cup: ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್ ಫೈಟ್: ಫೈನಲ್ ಟಿಕೇಟ್ ಯಾರಿಗೆ?

ಕೋಲ್ಕತ್ತಾ: ಐಸಿಸಿ ಟಿ20 ವಿಶ್ವಕಪ್ ಮಹತ್ವದ ಘಟ್ಟಕ್ಕೆ ಬಂದು ನಿಂತಿದೆ. ಮೊದಲ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಹಾಗೂ ನ್ಯೂಜಿಲೆಂಡ್ ತಂಡಗಳು ಕಾದಾಟ ನಡೆಸಲಿವೆ. ಎರಡೂ ತಂಡಗಳು ಸೂಪರ್ 8 ಹಂತದಲ್ಲಿ ಅಮೋಘ ಪ್ರದರ್ಶನ ನೀಡಿ ಸೆಮಿಫೈನಲ್ ಹಂತವನ್ನು ಪ್ರವೇಶಿಸಿವೆ. ಈ ಪಂದ್ಯದಲ್ಲಿ ಜಯ ಸಾಧಿಸಿ ಪ್ರಶಸ್ತಿ ಸುತ್ತಿಗೆ ಪ್ರವೇಶಿಸುವ ಆಸೆಯನ್ನು ಎರಡೂ ತಂಡಗಳು ಹೊಂದಿವೆ.

ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ದಕ್ಷಿಣ ಆಫ್ರಿಕಾ ಹಾಗೂ ನ್ಯೂಜಿಲೆಂಡ್ ತಂಡಗಳು 19 ಬಾರಿ ಮುಖಾಮುಖಿಯಾಗಿವೆ. ಈ ವೇಳೆ ದಕ್ಷಿಣ ಆಫ್ರಿಕಾ 12, ನ್ಯೂಜಿಲೆಂಡ್ 7 ಪಂದ್ಯಗಳಲ್ಲಿ ಜಯ ಸಾಧಿಸಿದೆ. ದಕ್ಷಿಣ ಆಫ್ರಿಕಾ ತಂಡ ಈ ಬಾರಿಯ ಸೂಪರ್ 8 ಹಂತದಲ್ಲಿ ಭರ್ಜರಿ ಪ್ರದರ್ಶನ ನೀಡಿ ಆಡಿರುವ ಮೂರು ಪಂದ್ಯಗಳಲ್ಲಿ ಜಯ ದಾಖಲಿಸಿದೆ. ಇನ್ನು ನ್ಯೂಜಿಲೆಂಡ್ ಸಹ ಆಡಿರುವ ಪಂದ್ಯಗಳಲ್ಲಿ 1 ಗೆಲುವು, 1 ಸೋಲು ಕಂಡಿದೆ. ಅಲ್ಲದೆ ಒಂದು ಪಂದ್ಯ ರದ್ದಾಗಿದ್ದರೂ ರನ್ ರೇಟ್ ಆಧಾರಾರದ ಮೇಲೆ ಸೆಮಿಫೈನಲ್ ಹಂತ ಪ್ರವೇಶಿಸಿದೆ.

T20 World Cup

ದಕ್ಷಿಣ ಆಫ್ರಿಕಾ ತಂಡದ ಪರ ಸ್ಟಾರ್ ಆಟಗಾರರು ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. ತಂಡದ ನಾಯಕ ಐಡನ್ ಮಾರ್ಕ್ರಾಮ್ ಅವರು ಟೂರ್ನಿಯಲ್ಲಿ ಅಬ್ಬರದ ಪ್ರದರ್ಶನ ನೀಡಿ ತಂಡಕ್ಕೆ ಆಧಾರವಾಗಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ರಯಾನ್ ರಿಕಲ್ಟನ್ ಸಹ ಸ್ಥಿರ ಪ್ರದರ್ಶನ ನೀಡಿ ತಂಡಕ್ಕೆ ನೆರವಾಗಿದ್ದು, ಈ ಇಬ್ಬರೂ ಬ್ಯಾಟರ್ಗಳು ಮಹತ್ವದ ಪಂದ್ಯದಲ್ಲಿ ದೊಡ್ಡ ಇನಿಂಗ್ಸ್ ಕಟ್ಟುವ ಅನಿವಾರ್ಯತೆ ಇದೆ. ಈ ಆಟಗಾರರಿಗೆ ಉಳಿದ ಆಟಗಾರರು ಉತ್ತಮ ಸಾಥ್ ನೀಡಿದಲ್ಲಿ ಜಯ ಸುಲಭವಾಗುತ್ತದೆ.

ದಕ್ಷಿಣ ಆಫ್ರಿಕಾ ಪರ ಹೆಚ್ಚು ರನ್ ಸಾಧಕರು

ಐಡನ್ ಮಾರ್ಕ್ರಾಮ್, 7 ಪಂದ್ಯ, 268 ರನ್
ರಯಾನ್ ರಿಕಲ್ಟನ್, 7 ಪಂದ್ಯ, 228 ರನ್
ಡೆವಾಲ್ಡ್ ಬ್ರೆವಿಸ್, 7 ಪಂದ್ಯ, 173 ರನ್

ದಕ್ಷಿಣ ಆಫ್ರಿಕಾ ತಂಡದಲ್ಲಿ ನುರಿತ ಬೌಲರ್ಗಳ ದಂಡೇ ಇದೆ. ವೇಗದ ಬೌಲಿಂಗ್ ವಿಭಾಗದಲ್ಲಿ ಲುಂಗಿ ಎನ್ಗಿಡಿ ಹಾಗೂ ಕಗಿಸೊ ರಬಾಡ ಹೊಸ ಚೆಂಡಿನೊಂದಿಗೆ ತಂಡಕ್ಕೆ ಆಧಾರವಾಗಬಲ್ಲರು. ಇನ್ನು ಕೇಶವ್ ಮಹಾರಾಜ್ ಸ್ಪಿನ್ ಬೌಲಿಂಗ್ ಮೂಲಕ ಎದುರಾಳಿಗಳನ್ನು ಕಾಡಬಲ್ಲರು.

ದಕ್ಷಿಣ ಆಫ್ರಿಕಾ ಪರ ಹೆಚ್ಚು ವಿಕೆಟ್ ಪಡೆದವರು

ಲುಂಗಿ ಎನ್ಗಿಡಿ, 6 ಪಂದ್ಯ, 12 ವಿಕೆಟ್
ಕಾರ್ಬಿನ್ ಬೋಷ್, 6 ಪಂದ್ಯ, 11 ವಿಕೆಟ್
ಮಾರ್ಕೊ ಜಾನ್ಸನ್, 5 ಪಂದ್ಯ, 11 ವಿಕೆಟ್

ನ್ಯೂಜಿಲೆಂಡ್ ತಂಡದ ಭರವಸೆಯ ಆಟಗಾರರು ಸಹ ಉತ್ತಮ ಲಯದಲ್ಲಿದ್ದಾರೆ. ಇವರು ತಂಡದ ಅಗತ್ಯಕ್ಕೆ ತಕ್ಕಂತೆ ಪ್ರದರ್ಶನ ನೀಡುತ್ತಿರುವುದು ಮ್ಯಾನೇಜ್ಮೆಂಟ್ಗೆ ಸಮಾಧಾನ ತಂದಿದೆ. ಆರಂಭಿಕ ಆಟಗಾರ ಟೀಮ್ ಸಿಫರ್ಟ್ ಮತ್ತು ಫಿನ್ ಅಲೇನ್ ಸಮಯೋಚಿತ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಧಾರವಾಗಬೇಕಿದೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ರಚಿನ್ ರವೀಂದ್ರ, ಗ್ಲೆನ್ ಫಿಲಿಪ್ಸ್, ತಂಡ ತಮ್ಮ ಮೇಲೆ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಬೇಕಿದೆ.

ನ್ಯೂಜಿಲೆಂಡ್ ತಂಡದ ಪರ ಗರಿಷ್ಠ ರನ್

ಟೀಮ್ ಸಿಫರ್ಟ್, 7 ಪಂದ್ಯ, 216 ರನ್
ಫಿನ್ ಅಲೇನ್, 7 ಪಂದ್ಯ, 189 ರನ್
ಗ್ಲೆನ್ ಫಿಲಿಪ್ಸ್, 7 ಪಂದ್ಯ, 176 ರನ್

T20 World Cup

ನ್ಯೂಜಿಲೆಂಡ್ ತಂಡಕ್ಕೆ ಸ್ಪಿನ್ ಬೌಲರ್ಗಳ ಬಲವಿದೆ. ಟೂರ್ನಿಯಲ್ಲಿ ರಚಿನ್ ರವೀಂದ್ರ ಬಿಗುವಿನ ದಾಳಿ ನಡೆಸಿ ತಂಡಕ್ಕೆ ಆಧಾರವಾಗಬಲ್ಲರು. ಇನ್ನು ಮಿಚೆಲ್ ಸ್ಯಾಂಟ್ನರ್ ಹಾಗೂ ಗ್ಲೆನ್ ಫಿಲಿಪ್ಸ್ ಸಹ ತಮ್ಮ ಸ್ಪಿನ್ ದಾಳಿಯಿಂದ ಎದುರಾಳಿಗಳಿಗೆ ಕಾಟ ನೀಡಬೇಕಿದೆ. ವೇಗದ ಬೌಲರ್ಗಳು ಪವರ್ ಪ್ಲೇನಲ್ಲಿ ಪವರ್ ಫುಲ್ ಬೌಲಿಂಗ್ ನಡೆಸಬೇಕಿದೆ.

ನ್ಯೂಜಿಲೆಂಡ್ ಪರ ಗರಿಷ್ಠ ವಿಕೆಟ್ ಸಾಧಕರು

ರಚಿನ್ ರವೀಂದ್ರ, 7 ಪಂದ್ಯ, 9 ವಿಕೆಟ್
ಮ್ಯಾಟ್ ಹೆನ್ರಿ, 7 ಪಂದ್ಯ, 7 ವಿಕೆಟ್
ಲಾಕಿ ಫಾರ್ಗ್ಯೂಸನ್, 6 ಪಂದ್ಯ, 5 ವಿಕೆಟ್

Story first published: Tuesday, March 3, 2026, 19:25 [IST]
Other articles published on Mar 3, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+