ಐಡೆನ್ ಮಾರ್ಕ್ರಾಮ್, ಲುಂಗಿ ಎನ್‌ಗಿಡಿ ಪವರ್: ದಕ್ಷಿಣ ಆಫ್ರಿಕಾಕ್ಕೆ ಜಯ
ನವದೆಹಲಿ: ಗುಂಪು ಹಂತದಲ್ಲಿ ಹಾಲಿ ರನ್ನರ್ ಅಪ್ ದಕ್ಷಿಣ ಆಫ್ರಿಕಾ ಸಂಘಟಿತ ಆಟದ ಪ್ರದರ್ಶನವನ್ನು ನೀಡಿ 57 ರನ್‌ಗಳಿಂದ ಕೆನಡಾ ತಂಡವನ್ನು ಮಣಿಸಿದೆ. ಈ ಮೂಲಕ ದಕ್ಷಿಣ ಆಫ್ರಿಕಾ "ಡಿ" ಗುಂಪಿನ ಪಂದ್ಯದಲ್ಲಿ ಶುಭಾರಂಭವನ್ನು ಮಾಡಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡದ ಆರಂಭ ಭರ್ಜರಿಯಾಗಿತ್ತು. ಆರಂಭಿಕರಾದ ಐಡೆನ್ ಮಾರ್ಕ್ರಾಮ್ ಹಾಗೂ ಅನುಭವಿ ಕ್ವಿಂಟನ್ ಡಿಕಾಕ್ ಜೋಡಿ ತಂಡಕ್ಕೆ ಆಧಾರವಾಯಿತು. ಈ ಜೋಡಿ ಪವರ್ ಫುಲ್ ಆಟವನ್ನು ಆಡಿ ತಂಡಕ್ಕೆ ನೆರವಾಯಿತು. ಈ ಜೋಡಿ 6.5 ಓವರ್‌ಗಳಲ್ಲಿ 70 ರನ್ ಸೇರಿಸಿತು. ಈ ವೇಳೆ ಕ್ವಿಟನ್ ಡಿಕಾಕ್ 2 ಬೌಂಡರಿ ಸೇರಿದಂತೆ 25 ರನ್ ಬಾರಿಸಿ ಮಿಂಚಿದರು.

ಎರಡನೇ ವಿಕೆಟ್‌ಗೆ ಐಡೆನ್ ಮಾರ್ಕ್ರಾಮ್ ಹಾಗೂ ರಯಾನ್ ರಿಕಲ್ಟನ್ ಜೋಡಿ ಸಹ ಅರ್ಧಶತಕದ ಜೊತೆಯಾಟ ನೀಡಿತು. ಈ ವೇಳೆ ಐಡೆನ್ ಮಾರ್ಕ್ರಾಮ್ 10 ಬೌಂಡರಿ, 1 ಸಿಕ್ಸರ್ ಸಹಾಯದಿಂದ 59 ರನ್ ಬಾರಿಸಿದರು. ರಿಕಲ್ಟನ್ 3 ಬೌಂಡರಿ, 1 ಸಿಕ್ಸರ್ ಒಳಗೊಂಡಂತೆ 33 ರನ್ ಸಿಡಿಸಿದರು. ಮಧ್ಯಮ ಕ್ರಮಾಂಕದ ಭರವಸೆಯ ಬ್ಯಾಟರ್ ಡೆವಾಲ್ಡ್ ಬ್ರೇವಿಸ್ (6) ನಿರಾಸೆ ಅನುಭವಿಸಿದರು.
ಮಿಲ್ಲರ್, ಟ್ರಿಸ್ಟನ್ ಜೊತೆಯಾಟ
ಡೇವಿಡ್ ಮಿಲ್ಲರ್ ಹಾಗೂ ಟ್ರಿಸ್ಟನ್ ಸ್ಟಬ್ಸ್ ಜೋಡಿ ಕೊನೆಯ ಓವರ್‌ಗಳಲ್ಲಿ ಅಬ್ಬರಿಸಿತು. ಈ ಜೋಡಿ ಅಜೇಯ 75 ರನ್ ಸಿಡಿಸಿತು. ಮಿಲ್ಲರ್ 1 ಬೌಂಡರಿ, 3 ಸಿಕ್ಸರ್ ನೆರವಿನಿಂದ ಅಜೇಯ 39 ರನ್ ಬಾರಿಸಿದರೆ, ಟ್ರಿಸ್ಟನ್ ಸ್ಟಬ್ಸ್ ಅಜೇಯ 34 ರನ್ ಸಿಡಿಸಿದರು. ಅಂತಿಮವಾಗಿ ದಕ್ಷಿಣ ಆಫ್ರಿಕಾ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 213 ರನ್ ಸೇರಿಸಿತು. ಕೆ ನಡಾ ಪರ ಅಂಶ್ ಪಟೇಲ್ 3 ವಿಕೆಟ್ ಉರುಳಿಸಿದರು.
ಕಳಪೆ ಆರಂಭ
ಕೆನಡಾ ತಂಡದ ಆರಂಭ ಕಳಪೆಯಾಗಿತ್ತು. ನಾಯಕ ದಿಲ್‌ಪ್ರೀತ್ ಬಾಜ್ವಾ (0), ಯುವರಾಜ್ ಸಾಮ್ರಾ (12), ನಿಕೋಲಸ್ ಕಿರ್ಟನ್ (4), ಶ್ರೇಯಸ್ ಮೊವ್ (9) ರನ್ ಬಾರಿಸಲು ವಿಫಲರಾಗಿ ಬೇಗನೆ ಪೆವಿಲಿಯನ್ ಸೇರಿದರು. 45 ರನ್‌ಗಳಿಗೆ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ನವನೀತ್ ಧಲಿವಾಲ್ ಹಾಗೂ ಹರ್ಷ್ ಥಾಕರ್ ಆಧಾರವಾದರು. ಈ ಜೋಡಿ 69 ರನ್ ಬಾರಿಸಿತು. ಹರ್ಷ್ ಥಾಕರ್ 2 ಬೌಂಡರಿ, 2 ಸಿಕ್ಸರ್ ಸಹಾಯದಿಂದ 33 ರನ್ ಬಾರಿಸಿದರೆ, ನವನೀತ್ ಧಲಿವಾಲ್ 49 ಎಸೆತಗಳಲ್ಲಿ 64 ರನ್ ಸಿಡಿಸಿ ಔಟ್ ಆದರು. ಅಂತಿಮವಾಗಿ ಕೆನಡಾ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 156 ರನ್ ಸಿಡಿಸಿತು. ದಕ್ಷಿಣ ಆಫ್ರಿಕಾ ಪರ ಲುಂಗಿ ಎನ್‌ಗಿಡಿ 31 ರನ್ ನೀಡಿ 4 ವಿಕೆಟ್ ಕಬಳಿಸಿದರು.

ಜಿಂಬಾಬ್ವೆಗೆ ಜಯ
"ಬಿ" ಗುಂಪಿನ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಓಮನ್ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿ 19.5 ಓವರ್‌ಗಳಲ್ಲಿ 103 ರನ್ ಸೇರಿಸಿತು. ಓಮನ್ ಪರ ಸುಫ್ಯಾನ್ ಮೆಹಮೂದ್ 25, ವಿನಾಯಕ್ ಶುಕ್ಲಾ 28, ನದೀಮ್ ಖಾನ್ 20 ರನ್ ಸಿಡಿಸಿದರು. ಜಿಂಬಾಬ್ವೆ ತಂಡದ ಪರ ರಿಚರ್ಡ್ ನ್ಗರಾವಾ, ಬ್ಲೆಸ್ಸಿಂಗ್ ಮುಜರಬಾನಿ, ಬ್ರಾಡ್ ಇವಾನ್ಸ್ ತಲಾ ಮೂರು ವಿಕೆಟ್ ಕಬಳಿಸಿದರು. ಜಿಂಬಾಬ್ವೆ ತಂಡ ಗುರಿಯನ್ನು 13.3 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 106 ರನ್ ಬಾರಿಸಿ ಮೊದಲ ಜಯದ ನಗೆ ಬೀರಿತು. ಜಿಂಬಾಬ್ವೆ ಪರ ಬ್ರಿಯಾನ್ ಬೆನ್ನೆಟ್ ಅಜೇಯ 48, ತಡಿವಾನಾಶೆ ಮರುಮನಿ 21, ಬ್ರೆಂಡನ್ ಟೇಲರ್ 31 ರನ್ ಬಾರಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications