For Quick Alerts
ALLOW NOTIFICATIONS  
For Daily Alerts
 

ಟಿ 20 ವಿಶ್ವಕಪ್‌ 2026: ಟೂರ್ನಿಯಲ್ಲಿ ಅತೀ ಹೆಚ್ಚು ರನ್‌ ಸಿಡಿಸಿದ ಮೊದಲ ತಂಡ ಶ್ರೀಲಂಕಾ: ಒಮನ್‌ಗೆ ಹೀನಾಯ ಸೋಲು

T20 World Cup 2026: ಟಿ20 ವಿಶ್ವಕಪ್‌ 2026ರಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡ ಒಮನ್ ವಿರುದ್ಧ ಗೆದ್ದು ಐತಿಹಾಸಾತ್ಮಕ ಸಾಧನೆ ಮಾಡಿದೆ. ಶ್ರೀಲಂಕಾ ಟೂರ್ನಿಯಲ್ಲಿನ ಮೊದಲ ಬಾರಿ ಅತೀ ಹೆಚ್ಚು ರನ್‌ ಸಿಡಿಸಿದ ತಂಡ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿ. ಹಾಗಾದ್ರೆ, ಯಾರು ಎಷ್ಟು ರನ್‌ ಕಲೆಹಾಕಿದರು ಎನ್ನುವ ಸಂಪೂರ್ಣ ವರದಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಟಾಸ್‌ ಸೋತು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 225 ರನ್‌ಗಳನ್ನು ಕಲೆಹಾಕಿತು. ಇದು ಟೂರ್ನಿಯಲ್ಲಿ ಮೊದಲು ದಾಖಲಾದ ಅತೀ ಹೆಚ್ಚು ಮೊತ್ತವಾಗಿದೆ. ಇದುವರೆಗೂ ಯಾವ ತಂಡವೂ ಇಲ್ಲಿಯವರೆಗೆ ತಲುಪಿಲ್ಲ. ಬಳಿಕ ಬ್ಯಾಟ್ ಬೀಸಿದ ಒಮನ್ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 120 ರನ್‌ಗಳನ್ನು ಕಲೆಹಾಕಿ 105 ರನ್‌ಗಳಿಂದ ಹೀನಾಯ ಸೋಲು ಕಂಡಿತು. ಇನ್ನೂ ಶ್ರೀಲಂಕಾ ನೀಡಿದ ಈ ಬೃಹತ್ ಮೊತ್ತ ಎಲ್ಲಾ ತಂಡಗಳಿಗೆ ದೊಡ್ಡ ಸವಾಲಾಗಿದೆ.

T20 World Cup 2026 Sri Lanka Register Biggest Win Over Oman Today Match Know Complete details

ಶ್ರೀಲಂಕಾ ಹೊಸ ದಾಖಲೆ

ಶ್ರೀಲಾಂಕಾ ಪರ ಬ್ಯಾಟ್ ಮಾಡಿದ, ಕುಸಾಲ್ ಮೆಂಡಿಸ್ 61(45), ಪವನ್ ರತ್ನಾಯಕೆ 60(28), ದಾಸುನ್ ಶನಕ 50(20) ರನ್‌ ಸಿಡಿಸಿ ಮಿಂಚಿದರು. ಇವರೇ ತಂಡದ ಗೆಲುವಿಗೆ ಪ್ರಮುಖ ಕಾರಣಕರ್ತರಾದರು. ಉಳಿದಂತೆ ಪಾತುಮ್ ನಿಸ್ಸಾಂಕ 13 (11), ಕಮಿಲ್ ಮಿಶ್ರಾ 8(7) ಸಿಡಿಸಿ ವಿಕೆಟ್‌ ಒಪ್ಪಿಸಿದರೆ, ಕಮಿಂದು ಮೆಂಡಿಸ್ ಅಜೇಯ 19 , ದುನಿತ್ ವೆಲ್ಲಲಾಗೆ ಅಜೇಯ 6 ರನ್‌ ಕಲೆಹಾಕುವ ಮೂಲಕ ತಂಡ ಮೊತ್ತವನ್ನು 220ರ ಗಡಿ ದಾಟಿಸಿದರು.

ಒಮನ್ ಸೋಲಿಗೆ ಕಾರಣ ಏನು?

ಒಮನ್‌ ಪರ ಬೌಲಿಂಗ್ ಮಾಡಿದ, ಸುಫ್ಯಾನ್ ಮೆಹಮೂದ್, ನದೀಮ್‌ ಖಾನ್ ಹಾಗೂ ಜಿತೆನ್ ರಾಮನಂದಿ ಅವರು ಅತೀ ಹೆಚ್ಚು ರನ್‌ಗಳನ್ನು ಬಿಟ್ಟುಕೊಟ್ಟರು. ಸುಫ್ಯಾನ್ ಮೆಹಮೂದ್ ನಾಲ್ಕು ಓವರ್ ಎಸೆದು ಒಂದು ವಿಕೆಟ್‌ ಕಬಳಿಸಿ ಬರೋಬ್ಬರಿ 60 ರನ್‌ಗಳನ್ನು ಬಿಟ್ಟುಕೊಟ್ಟರು, ನದೀಮ್‌ ಖಾನ್ 40, ಜಿತೆನ್ ರಾಮನಂದಿ 41 ದುಬಾರಿ ರನ್‌ಗಳನ್ನು ನೀಡಿದರು. ಇದೇ ಶ್ರೀಲಂಕಾ ತಂಡದ ಬೃಹತ್ ಮೊತ್ತಕ್ಕೆ ಕಾರಣವಾಯಿತು.

ಶ್ರೀಲಂಕಾ ಗೆಲುವಿಗೆ ಕಾರಣರಾದವರು: ಶ್ರೀಲಂಕಾ ತಂಡದ ಬ್ಯಾಟ್ಸ್‌ಮನ್‌ಗಳು ಬಲಿಷ್ಠ ಪ್ರದರ್ಶನ ನೀಡುವ ಮೂಲಕ ದೊಡ್ಡ ಮೊತ್ತವನ್ನು ಕಲೆಹಾಕುವಲ್ಲಿ ಯಶಸ್ವಿಯಾದರು. ಆರಂಭದಲ್ಲೇ ಉತ್ತಮ ಬ್ಯಾಟ್ ಪ್ರದರ್ಶನ ಮಾಡಿದ ಕುಸಾಲ್ ಮೆಂಡಿಸ್ 45 ಎಸೆತಗಳಲ್ಲಿ 7 ಬೌಂಡರಿಗಳ ಸಹಿತ 61 ರನ್ ಗಳಿಸಿದರು. ಪವನ್ ರತ್ನನಾಯಕೆ ಅವರೊಂದಿಗೆ ಅವರು 94 ರನ್‌ಗಳ ಜೊತೆಯಾಟ ಆಡಿದರು. ನಂತರ ದಸೂನ್ ಶಾನಕ ಅವರ ಜೊತೆಯೂ ಉತ್ತಮ ಜೊತೆಯಾಟ ಆಡಿದ್ದು, ಇದರಿಂದ ತಂಡದ ಮೊತ್ತವು 200 ರನ್‌ಗಳ ಗಡಿ ದಾಟಿತು.

ಪವನ್ ರತ್ನನಾಯಕೆ ಅಕ್ರಮಣಕಾರಿ ಬ್ಯಾಟಿಂಗ್ ಮಾಡಿದ ಕೇವಲ 28 ಎಸೆತಗಳಲ್ಲಿ ಒಂದು ಸಿಕ್ಸರ್, 8 ಬೌಂಡರಿಗಳೊಂದಿಗೆ 60 ರನ್ ಚಚ್ಚಿ ಗಮನ ಸೆಳೆದರು. ಈ ಮೂಲಕ ಅವರು ಕೂಡ ತಂದ ಗೆಲುವಿಗೆ ದೊಡ್ಡ ಕೊಡುಗೆ ನೀಡಿದರು ಹಾಗೂ ಪಂದ್ಯ ಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು. ಇನ್ನೂ ಕೊನೇ ಓವರ್‌ಗಳಲ್ಲಿ ದಸೂನ್ ಶಾನಕ ವೇಗದ ಬ್ಯಾಟಿಂಗ್ ಮಾಡಿ ಕೇವಲ 20 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಹೀಗೆ ಈ ಮೂವರು ಸಿಡಿಸಿದ ತಲಾ ಅರ್ಧ ಶತಕಗಳೇ ತಂಡಗ ಗೆಲುವಿಗೆ ಕಾರಣವಾದವು.

Story first published: Thursday, February 12, 2026, 15:10 [IST]
Other articles published on Feb 12, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+