T20 World Cup: ಆಸ್ಟ್ರೇಲಿಯಾ ತಂಡ ಸೇರಿದ ಅನುಭವಿ ಬ್ಯಾಟರ್
ವಿಶ್ವದಲ್ಲಿ ಸದ್ಯ ಟಿ20 ಕ್ರಿಕೆಟ್ ಕ್ರೇಜ್ ಆರಂಭವಾಗಿದೆ. ಭಾರತ ಹಾಗೂ ಶ್ರೀಲಂಕಾ ಜಂಟಿಯಾಗಿ ಆಯೋಜಿಸುತ್ತಿರುವ ಈ ಬಾರಿಯ ವಿಶ್ವಕಪ್‌ನಲ್ಲಿ ಒಟ್ಟು 20 ತಂಡಗಳು ಭಾಗವಹಿಸಿವೆ. ಟೂರ್ನಿಯ ಚಾಂಪಿಯನ್ ಪಟ್ಟದ ಮೇಲೆ ಹಲವು ತಂಡಗಳು ಕಣ್ಣು ನೆಟ್ಟಿರುವ ತಂಡಗಳಲ್ಲಿ ಆಸ್ಟ್ರೇಲಿಯಾ ಸಹ ಒಂದು. ಕೊಲಂಬೊದಲ್ಲಿ ಆಸ್ಟ್ರೇಲಿಯಾ ಫೆಬ್ರವರಿ 11 ರಂದು ಐರ್ಲೆಂಡ್ ವಿರುದ್ಧ ಕಣಕ್ಕೆ ಇಳಿಯಿತು. ಈ ಪಂದ್ಯದಲ್ಲಿ ಗಾಯದ ಕಾರಣಕ್ಕಾಗಿ ನಾಯಕ ಮಿಚೆಲ್ ಮಾರ್ಷ್ ಅಂಗಳಕ್ಕೆ ಇಳಿಯಲಿಲ್ಲ.
ತೊಡೆ ಸಂದು ಗಾಯದಿಂದ ಬಳಲುತ್ತಿರುವ ಆಸ್ಟ್ರೇಲಿಯಾ ನಾಯಕ ಮೊದಲ ಪಂದ್ಯದಲ್ಲಿ ಅಖಾಡಕ್ಕೆ ಇಳಿಯಲಿಲ್ಲ. ಇವರ ಬದಲಿಗೆ ತಂಡವನ್ನು ಟ್ರಾವಿಸ್ ಹೆಡ್ ಮುನ್ನಡೆಸಿದ್ದಾರೆ. ಇನ್ನು ಮಿಚೆಲ್ ಮಾರ್ಷ್ ಅವರ ಗಾಯದ ಬಗ್ಗೆ ಕ್ರಿಕೆಟ್ ಆಸ್ಟ್ರೇಲಿಯಾ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಆಸ್ಟ್ರೇಲಿಯಾ ತನ್ನ ಅನುಭವಿ ಆಟಗಾರ ಸ್ಟೀವನ್ ಸ್ಮಿತ್ ಅವರಿಗೆ ಬುಲಾವ್ ನೀಡಿದೆ.

ಅಭ್ಯಾಸದ ವೇಳೆ ಮಿಚೆಲ್ ಮಾರ್ಷ್ ತೊಡೆ ಸಂದು ಗಾಯಕ್ಕೆ ತುತ್ತಾದರು. ತರಬೇತಿಯ ಸಮಯದಲ್ಲಿ ಕಾಣಿಸಿಕೊಂಡ ಗಾಯದ ಕಾರಣದಿಂದ ಇವರು ಐರ್ಲೆಂಡ್ ವಿರುದ್ಧ ಕಣಕ್ಕೆ ಇಳಿಯಲಿಲ್ಲ. ಇವರು ನೋವಿನಿಂದ ಬಳಲುತ್ತಿದ್ದಾರೆ.ಇವರ ಗಾಯದಿಂದಾಗಿ ಇವರಿಗೆ ನಡೆಯಲು ತೊಂದರೆ ಆಗುತ್ತಿದೆ. ಹೀಗಾಗಿ ಅವರಿಗೆ ಕೊಂಚ ವಿಶ್ರಾಂತಿ ಅವಶ್ಯಕತೆ ಇದೆ. ಇವರ ಗಾಯದ ಬಗ್ಗೆ ವೈದ್ಯರು ತಮ್ಮ ನಿರ್ಣಯವನ್ನು ಪ್ರಕಟಿಸಿದ ಬಳಿಕವೇ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗುವುದು. ವಿಶ್ವಕಪ್‌ಗೂ ಮುನ್ನ ಪಾಕಿಸ್ತಾನದಲ್ಲಿ ನಡೆದ ಮೂರು ಪಂದ್ಯಗಳ ಟಿ20 ಸರಣಿಯ ಕೊನೆಯ ಎರಡು ಪಂದ್ಯಗಳಲ್ಲಿ ಮಾರ್ಷ್ ಆಡಿದ್ದರು.
ಸ್ಮಿತ್‌ಗೆ ಬುಲಾವ್
ಈ ಪರಿಸ್ಥಿತಿಯಲ್ಲಿ ತಂಡದ ಅಗತ್ಯವನ್ನು ನೋಡಿಕೊಂಡು ಸ್ಟ್ಯಾಂಡ್‌ಬೈ ಆಟಗಾರ ಸ್ಟೀವ್ ಸ್ಮಿತ್ ಶ್ರೀಲಂಕಾ ಪ್ರಯಾಣ ಬೆಳೆಸಿದ್ದಾರೆ. 2024 ರ ಕೊನೆಯಲ್ಲಿ ಸ್ಮಿತ್ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಕೊನೆಯ ಬಾರಿಗೆ ಕಣಕ್ಕೆ ಇಳಿದಿದ್ದರು. ಈ ವರ್ಷದ ಬಿಗ್ ಬ್ಯಾಷ್ ಲೀಗ್ 2025-26 ಋತುವಿನಲ್ಲಿ ಸ್ಮಿತ್ ಸಿಡ್ನಿ ಸಿಕ್ಸರ್ಸ್ ಪರ ಆಡಿ ಮಿಂಚಿದ್ದರು.
ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಆಸೀಸ್ ಯಾವುದೇ ಅಪಾಯವನ್ನು ತೆಗೆದುಕೊಳ್ಳದೇ ಫಿಟ್ ಆಗಿರುವ ಆಟಗಾರರನ್ನು ಕಣಕ್ಕೆ ಇಳಿಸಿದೆ. ನಿಜಕ್ಕೂ ಆಸ್ಟ್ರೇಲಿಯಾ ತಂಡಕ್ಕೆ ಗಾಯ ಬಹುವಾಗಿ ಕಾಡುತ್ತಿದೆ. ಅನುಭವಿ ವೇಗದ ಬೌಲರ್ ಪ್ಯಾಟ್ ಕಮಿನ್ಸ್ ಈಗಾಗಲೇ ಟೂರ್ನಿಯಿಂದ ಹೊರ ನಡೆದಿದ್ದಾರೆ. ಇನ್ನು ಜೋಶ್ ಹ್ಯಾಜಲ್‌ವುಡ್ ಸಹ ಅಲಭ್ಯರಾಗಿದ್ದು, ಇವರಿಗೆ ಬದಲಿ ಆಟಗಾರರನ್ನು ಇನ್ನು ತಂಡ ಘೋಷಿಸಿಲ್ಲ.
ಆಸ್ಟ್ರೇಲಿಯಾ ವೇಳಾ ಪಟ್ಟಿ
ಆಸ್ಟ್ರೇಲಿಯಾ ಲೀಗ್ ಹಂತದ ಮುಂದಿನ ಪಂದ್ಯವನ್ನು ಫೆಬ್ರವರಿ 13 ರಂದು ಜಿಂಬಾಬ್ವೆ ವಿರುದ್ಧ ಆಡಲಿದೆ. ಆತಿಥೇಯ ಶ್ರೀಲಂಕಾ ವಿರುದ್ಧ ಫೆ.16 ರಂದು, ಓಮನ್ ವಿರುದ್ಧ ಫೆ. 20 ರಂದು ಲೀಗ್ ಹಂತದ ಕೊನೆಯ ಪಂದ್ಯವನ್ನು ಆಡಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications