ಟಿ20 ವಿಶ್ವಕಪ್ ರೋಚಕ ಘಟ್ಟದತ್ತ ಮುಖ ಮಾಡಿದೆ. ಇನ್ನು ಸೂಪರ್ 8 ಹಂತದ ಪಂದ್ಯಗಳು ನಡೆಯಲಿವೆ. ಈ ಬಾರಿಯ ಟೂರ್ನಿಯಲ್ಲಿ ಒಟ್ಟು 20 ತಂಡಗಳು ಭಾಗವಹಿಸಿದ್ದವು. ಈ ತಂಡಗಳನ್ನು 4 ಗುಂಪುಗಳಲ್ಲಿ ವಿಂಗಡಿಸಲಾಗಿತ್ತು. ಅಲ್ಲದೆ ಪ್ರತಿ ಗುಂಪಿನಲ್ಲಿ 5 ತಂಡಗಳಿಗೆ ಅವಕಾಶ ನೀಡಲಾಗಿತ್ತು. ಈ ವೇಳೆ ಲೀಗ್ ಹಂತದ ಪಂದ್ಯಗಳಲ್ಲಿ ಸ್ಥಿರ ಪ್ರದರ್ಶನ ನೀಡಿದ ಒಂದು ಗುಂಪಿನ ಎರಡು ತಂಡಗಳು ಸೂಪರ್ 8 ಹಂತಕ್ಕೆ ಅರ್ಹತೆ ಪಡೆದಿವೆ.
ಎ ಗುಂಪಿನಿಂದ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಂದಿನ ಹಂತಕ್ಕೆ ಅರ್ಹತೆ ಪಡೆದಿದ್ದು, ಬಿ ಗುಂಪಿನಲ್ಲಿ ಶ್ರೀಲಂಕಾ, ಜಿಂಬಾಬ್ವೆ ತಂಡಗಳು ಅಗ್ರ ಎರಡು ತಂಡಗಳಾಗಿ ಸೂಪರ್ 8 ಹಂತ ತಲುಪಿವೆ. ಸಿ ಗುಂಪಿನಲ್ಲಿ ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ತಂಡಗಳು ಮುಂದಿನ ಹಂತ ಪ್ರವೇಶಿಸಿವೆ. ಡಿ ಗುಂಪಿನಲ್ಲಿ ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್ ಮೊದಲೆರಡು ಸ್ಥಾನ ಪಡೆದಿದ್ದು ಸೂಪರ್ 8 ಹಂತಕ್ಕೆ ಪ್ರವೇಶಿಸಿವೆ.

ಸೂಪರ್ 8 ಹಂತಕ್ಕೆ ಅರ್ಹತೆ ಪಡೆದ 8 ತಂಡಗಳನ್ನು 2 ಗುಂಪಿನಲ್ಲಿ ವಿಂಗಡಿಸಲಾಗಿದೆ. ಭಾರತ ಮೊದಲ ಗುಂಪಿನಲ್ಲಿ ಸ್ಥಾನ ಪಡೆದಿದೆ. ಉಳಿದಂತೆ ಜಿಂಬಾಬ್ವೆ, ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ ತಂಡಗಳು ಸ್ಥಾನ ಪಡೆದಿವೆ. ಬಿ ಗುಂಪಿನಲ್ಲಿ ಪಾಕಿಸ್ತಾನ, ಶ್ರೀಲಂಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ತಂಡಗಳು ಸ್ಥಾನ ಪಡೆದಿವೆ.
ಫೆ.22: ಭಾರತ vs ದಕ್ಷಿಣ ಆಫ್ರಿಕಾ, ಅಹಮದಾಬಾದ್, ಸಂಜೆ 7ಕ್ಕೆ
ಫೆ.23: ಜಿಂಬಾಬ್ವೆ vs ವೆಸ್ಟ್ ಇಂಡೀಸ್, ಅಹಮದಾಬಾದ್, ಮಧ್ಯಾಹ್ನ 3ಕ್ಕೆ
ಫೆ.26: ಭಾರತ vs ಜಿಂಬಾಬ್ವೆ, ಚೆನ್ನೈ, ಸಂಜೆ 7ಕ್ಕೆ
ಮಾ.1: ಜಿಂಬಾಬ್ವೆ vs ದಕ್ಷಿಣ ಆಫ್ರಿಕಾ, ದೆಹಲಿ, ಮಧ್ಯಾಹ್ನ 3ಕ್ಕೆ
ಮಾ.1: ಭಾರತ vs ವೆಸ್ಟ್ ಇಂಡೀಸ್, ಕೋಲ್ಕತ್ತಾ, ಸಂಜೆ 7ಕ್ಕೆ
ಫೆ.21: ನ್ಯೂಜಿಲೆಂಡ್ vs ಪಾಕಿಸ್ತಾನ, ಕೊಲಂಬೊ, ಸಂಜೆ 7
ಫೆ.22: ಇಂಗ್ಲೆಂಡ್ vs ಶ್ರೀಲಂಕಾ, ಕ್ಯಾಂಡಿ, ಮಧ್ಯಾಹ್ನ 3
ಫೆ.24: ಇಂಗ್ಲೆಂಡ್ vs ಪಾಕಿಸ್ತಾನ, ಕ್ಯಾಂಡಿ, ಸಂಜೆ 7
ಫೆ.25: ನ್ಯೂಜಿಲೆಂಡ್ vs ಶ್ರೀಲಂಕಾ, ಕೊಲಂಬೊ, ಸಂಜೆ 7
ಫೆ.27: ಇಂಗ್ಲೆಂಡ್ vs ನ್ಯೂಜಿಲೆಂಡ್, ಕೊಲಂಬೊ, ಸಂಜೆ 7
ಫೆ.28: ಪಾಕಿಸ್ತಾನ vs ಶ್ರೀಲಂಕಾ,, ಸಂಜೆ 7
ಸೂಪರ್ 8 ಹಂತದಲ್ಲಿ ಪ್ರತಿ ತಂಡದ ಅಗ್ರ 2 ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯಲಿವೆ.