For Quick Alerts
ALLOW NOTIFICATIONS  
For Daily Alerts
 

T20 World Cup: ಟಿ-20 ವಿಶ್ವಕಪ್‌ ಆರಂಭಕ್ಕೂ ಮುನ್ನ ಸಂಜು ಸ್ಯಾಮ್ಸನ್ ಬ್ಯಾಟಿಂಗ್‌ ಬಗ್ಗೆ ಸುರೇಶ್ ರೈನಾ ಅಚ್ಚರಿ ಭವಿಷ್ಯ

T20 World Cup 2026: ಟಿ-20 ವಿಶ್ವಕಪ್‌ 2026 ಆರಂಭಕ್ಕೆ ಇನ್ನೂ ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿವೆ. ಇದಕ್ಕೂ ಮುಂಚಿತವಾಗಿ ಇದೀಗ ಇತ್ತೀಚಿನ ಇನ್ನಿಂಗ್ಸ್‌ಗಳಲ್ಲಿ ಉತ್ತಮ ಪ್ರದರ್ಶನ ತೋರುವಲ್ಲಿ ವೈಫಲ್ಯ ಕಂಡಿರುವ ಸಂಜು ಸ್ಯಾಮ್ಸನ್‌ ಬ್ಯಾಟಿಂಗ್‌ ಕುರಿತು ಸುರೇಶ್‌ ರೈನಾ ಅವರು ಅಚ್ಚರಿ ಭವಿಷ್ಯವೊಂದನ್ನು ನುಡಿದಿದ್ದಾರೆ. ಹಾಗಾದ್ರೆ, ಅದೇನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಹೌದು.. ಇತ್ತೀನ ಪಂದ್ಯಗಳಲ್ಲಿ ಸಂಜು ಸ್ಯಾಮ್ಸನ್ ಅವರಿಂದ ನಿರೀಕ್ಷಿದಷ್ಟು ಪ್ರದರ್ಶನ ಕಂಡುಬರಲಿಲ್ಲ. ಆರಂಭಿಕರಾಗಿ ಬ್ಯಾಟಿಂಗ್‌ಗೆ ಬಂದರೂ ಸಹ 30 ರನ್‌ಗಳ ಒಳಗೆ ಔಟ್‌ ಆಗಿ ನೀರಸ ಪ್ರದರ್ಶನದ ಮೂಲಕ ಅಭಿಮಾನಿಗ ಭರವಸೆಗೆ ತಣ್ಣೀರೆರಚಿದ್ದಾರೆ. ಆದರೂ ಇದೀಗ ಅವರಿಗೆ ಇನ್ನೂ ಒಂದು ಅವಕಾಶ ಕೂಡ ಇದೆ. ಅದರಲ್ಲಿ ಮಿಂಚಿದರೆ, ಮಂಕಾಗಿರುವ ಅವರು ಸ್ಟಾರ್ ಆಗಿ ಮಿಂಚುವುದರಲ್ಲಿ ಯಾವುದೇ ಅನುಮಾನವಿಲ್ಲ.

T20 World Cup 2026 Suresh Raina Predicts Sanju Samson to Break His Historic Century Record

ಟಿ-20 ವಿಶ್ವಕಪ್ ಇತಿಹಾಸದಲ್ಲಿ ಭಾರತ ಪರ ಶತಕ ಸಿಡಿಸಿದ ಏಕೈಕ ಆಟಗಾರ ಎಂಬ ವಿಶಿಷ್ಟ ದಾಖಲೆ ಇನ್ನೂ ಸುರೇಶ್ ರೈನಾ ಹೆಸರಿನಲ್ಲೇ ಉಳಿದಿದೆ. 2010ರ ಟಿ-20 ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಗುಂಪು ಹಂತದ ಪಂದ್ಯದಲ್ಲಿ ರೈನಾ 101 ರನ್‌ಗಳ ಅದ್ಭುತ ಇನ್ನಿಂಗ್ಸ್‌ ಆಡಿದ್ದರು. ಇದು ಭಾರತ ಪರ ಮೊದಲ ಟಿ-20 ವಿಶ್ವಕಪ್ ಶತಕವಾಗಿದ್ದು, ಇದುವರೆಗೆ ನಡೆದ ಒಂಬತ್ತು ಆವೃತ್ತಿಗಳಲ್ಲೂ ಮತ್ತೊಬ್ಬ ಭಾರತೀಯ ಬ್ಯಾಟ್ಸ್‌ಮನ್ ಈ ಸಾಧನೆ ಮಾಡಲು ಸಾಧ್ಯವಾಗಿಲ್ಲ.

ಸಂಜು ಬಗ್ಗೆ ರೈನಾ ಅಚ್ಚರಿ ಭವಿಷ್ಯ: 2026ರಲ್ಲಿ ನಡೆಯಲಿರುವ ಟಿ-20 ವಿಶ್ವಕಪ್‌ಗೂ ಮುನ್ನ, ಭಾರತದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಅವರು ಆಸಕ್ತಿದಾಯಕ ವಿಚಾರವೊಂದನ್ನು ಬಿಚ್ಚಿಟ್ಟಿದ್ದಾರೆ. ಟೀಮ್ ಇಂಡಿಯಾದ ಸ್ಟಾರ್ ಆಟಗಾರರಾದ ಸೂರ್ಯಕುಮಾರ್ ಯಾದವ್ ಅಥವಾ ಅಭಿಷೇಕ್ ಶರ್ಮಾ ಅಲ್ಲ ಬದಲಾಗಿ ಕೇರಳದ 31 ವರ್ಷದ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಈ ವಿಶ್ವಕಪ್‌ನಲ್ಲಿ ತನ್ನ ಶತಕದ ದಾಖಲೆಯನ್ನು ಸರಿಗಟ್ಟುವ ಸಾಧ್ಯತೆ ಇದೆ ಎಂದು ರೈನಾ ಅಚ್ಚರಿ ಭವಿಷ್ಯ ನುಡಿದಿದ್ದಾರೆ.

ಸಂಜು ಸ್ಯಾಮ್ಸನ್ ಸದ್ಯ ಕಳಪೆ ಫಾರ್ಮ್‌ನಲ್ಲಿದ್ದಾರೆ. ಕಳೆದ ಒಂದು ವರ್ಷದಿಂದ ನಿರೀಕ್ಷಿತ ಪ್ರದರ್ಶನ ನೀಡಲು ಅವರು ವಿಫಲರಾಗಿದ್ದಾರೆ. ಶುಭ್‌ಮನ್ ಗಿಲ್ ಅನುಪಸ್ಥಿತಿಯಲ್ಲಿ ಆರಂಭಿಕ ಆಟಗಾರನಾಗಿ ಅವಕಾಶ ಪಡೆದಿದ್ದರೂ, ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಸರಣಿಯಲ್ಲಿ ಸಂಜುವಿನಿಂದ ಉತ್ತಮ ಆಟ ಕಂಡುಬಂದಿಲ್ಲ. ಆಡಿದ ನಾಲ್ಕು ಇನ್ನಿಂಗ್ಸ್‌ಗಳಲ್ಲಿ 10, 6, 0 ಮತ್ತು 24 ರನ್‌ಗಳಷ್ಟೇ ಕಲೆಹಾಕಿದ್ದಾರೆ. 50ರ ಸಮೀಪದತ್ತ ಹೋಗಿಲ್ಲ ಎನ್ನುವುದೇ ಇದೀಗ ಬೇಸರದ ಸಂಗತಿಯಾಗಿದೆ.

ಅಲ್ಲದೆ, ನೆಟ್ಟಿಗರು ಸಂಜು ಸ್ಯಾಮ್ಸನ್‌ ಅವರಿಂದ ಉತ್ತಮ ಪ್ರದರ್ಶನ ಕಂಡುಬರುತ್ತಿಲ್ಲ. ಅವರು ಈ ಸ್ಥಾನದಲ್ಲಿ ಆಡಲಿಕ್ಕೂ ಲಾಯಕ್ಕಿಲ್ಲ ಅಂತಲೂ ಹೇಳುತ್ತಿದ್ದಾರೆ, ಇದರ ಬೆನ್ನಲ್ಲೇ ಭಾರತದ ಮಾಜಿ ಸ್ಟಾರ್ ಕ್ರಿಕೆಟರ್ ಸುರೇಶ್‌ ರೈನಾ ಅವರು ಸಂಜು ಸ್ಯಾಮ್ಸನ್‌ ಅವರ ಬೆನ್ನಿಗೆ ನಿಂತಿದ್ದಾರೆ. ಅವರು ಟಿ-20 ವಿಶ್ವಕಪ್‌ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ನನ್ನ ಶತಕದ ದಾಖಲೆ ಮುರಿಯಲಿದ್ದಾರೆ ಅಂತಾ ಹೇಳಿದ್ದಾರೆ.

"ಸಂಜು ಸ್ಯಾಮ್ಸನ್ ಶತಕ ಬಾರಿಸಬಲ್ಲ ಆಟಗಾರ. ಅವರು ಆರಂಭಿಕ ಆಟಗಾರನಾಗಿ ಬ್ಯಾಟಿಂಗ್ ಮಾಡುವುದರಿಂದ ದೊಡ್ಡ ಇನ್ನಿಂಗ್ಸ್‌ ಆಡಲು ಅವಕಾಶವಿದೆ. ದಕ್ಷಿಣ ಆಫ್ರಿಕಾದಲ್ಲಿ ಅವರು ಈಗಾಗಲೇ ಎರಡು ಶತಕಗಳನ್ನು ಬಾರಿಸಿದ್ದಾರೆ. ಅಭಿಷೇಕ್ ಶರ್ಮಾ ಹಾಗೂ ಇಶಾನ್ ಕಿಶನ್ ಸ್ಪರ್ಧೆಯಲ್ಲಿ ಇದ್ದರೂ, ಈ ಟಿ-20 ವಿಶ್ವಕಪ್‌ನಲ್ಲಿ ಸಂಜು ಸ್ಯಾಮ್ಸನ್‌ ಶತಕ ಬಾರಿಸಿ ದಾಖಲೆ ಮುರಿತ್ತಾರೆ ಎಂಬ ನಂಬಿಕೆ ನನಗಿದೆ," ಎಂದು ಸುರೇಶ್‌ ರೈನಾ ಹೇಳಿದ್ದಾರೆ.

ಸಂಜು ಮತ್ತೆ ಸಿಡಿದೇಳಲಿದ್ದಾರೆ: ಅಲ್ಲದೆ, "ಸೂರ್ಯಕುಮಾರ್ ಯಾದವ್ ಉದಾಹರಣೆ ನೀಡಿದ ರೈನಾ, ಫಾರ್ಮ್ ತಾತ್ಕಾಲಿಕ ಆಗಿರುತ್ತದೆ, ಆದರೆ, ಕ್ಲಾಸ್ ಶಾಶ್ವತ ಎಂದು ಹೇಳಿದ್ದಾರೆ. ಒಂದು ಅವಧಿಯಲ್ಲಿ ಸೂರ್ಯಕುಮಾರ್ ರನ್‌ಗಳ ಕೊರತೆ ಎದುರಿಸಿದ್ದರೂ, ತಂಡದ ಮ್ಯಾನೇಜ್‌ಮೆಂಟ್ ಮತ್ತು ಕೋಚ್‌ಗಳು ಅವರಿಗೆ ಬೆಂಬಲ ನೀಡಿದರು. ಅದರ ಫಲವಾಗಿ ಅವರು ಮತ್ತೆ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಸಂಜು ಸ್ಯಾಮ್ಸನ್ ವಿಷಯದಲ್ಲೂ ಅದೇ ರೀತಿಯ ಬೆಂಬಲ ನೀಡಬೇಕು," ಎಂಬುದು ರೈನಾ ಅಭಿಪ್ರಾಯ ವ್ಯಕ್ತಡಿಸಿದ್ದಾರೆ.

ಫೆಬ್ರವರಿ 7ರಿಂದ ಆರಂಭವಾಗುವ 20 ತಂಡಗಳ ಟಿ-20 ವಿಶ್ವಕಪ್‌ಗೆ ಸಂಜು ಸ್ಯಾಮ್ಸನ್ ಸ್ಥಾನ ಪಡೆದಿದ್ದಾರೆ. ಸ್ಟಾರ್ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ ಅವರೊಂದಿಗೆ ಅವರು ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ. ಇದುವರೆಗೆ 55 ಅಂತಾರಾಷ್ಟ್ರೀಯ ಟಿ-20 ಪಂದ್ಯಗಳಲ್ಲಿ ಮೂರು ಶತಕಗಳನ್ನು ಬಾರಿಸಿರುವ ಸಂಜು, ಈ ಬಾರಿ ವಿಶ್ವಕಪ್‌ನಲ್ಲಿ ಸುರೇಶ್ ರೈನಾ ಅವರು ಹೇಳಿದಂತೆ ಶತಕ ಬಾರಿಸುತ್ತಾರೆಯೋ ಅಥವಾ ಇಲ್ಲವೋ ಎಂಬುದು ಅಭಿಮಾನಿಗಳ ಪ್ರಶ್ನೆಯಾಗಿದೆ. ಒಟ್ಟಿನಲ್ಲಿ ಈಗಾಗಲೇ ಕಳಪೆ ಪ್ರದರ್ಶನ ತೋರಿ ನೊಂದು ಕಲ್ಲಾಗಿರುವ ಸಂಜು ಮತ್ತೆ ಸಿಡಿದೇಳುವ ಭರವಸೆಯನ್ನು ಸುರೇಶ್‌ ರೈನಾ ಅವರು ಕೊಟ್ಟಿದ್ದಾರೆ. ಇದು ಎಷ್ಟರ ಮಟ್ಟಿಗೆ ನಿಜವಾಗುತ್ತದೆ ಎಂದು ಕಾದುನೋಡಬೇಕಿದೆ ಅಷ್ಟೇ.

Story first published: Friday, January 30, 2026, 22:58 [IST]
Other articles published on Jan 30, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+