For Quick Alerts
ALLOW NOTIFICATIONS  
For Daily Alerts
 

T20 World Cup: ಭಾರತ, ನೆದರ್‌ಲ್ಯಾಂಡ್‌ ಸೆಣಸಾಟ-ಅಭಿಷೇಕ್‌ ಮೇಲೆ ಒತ್ತಡ

ಟಿ20 ವಿಶ್ವಕಪ್‌ ಲೀಗ್ ಹಂತದ ಪಂದ್ಯ ಮುಗಿಯುವ ಹಂತದಲ್ಲಿದೆ. ಹಾಲಿ ಚಾಂಪಿಯನ್ ಟೀಮ್ ಇಂಡಿಯಾ ಈ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿ ಹ್ಯಾಟ್ರಿಕ್ ಗೆಲುವಿನ ನಗೆ ಬೀರಿದೆ. ಲೀಗ್ ಹಂತದ ಕೊನೆಯ ಪಂದ್ಯವನ್ನು ಭಾರತ ಬುಧವಾರ ಆಡಲಿದೆ. ಈ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಪಡೆ ನೆದರ್‌ಲ್ಯಾಂಡ್‌ ವಿರುದ್ಧ ಕಾದಾಟ ನಡೆಸಲಿದೆ. ಲೀಗ್‌ನ ನಾಲ್ಕನೇ ಪಂದ್ಯದಲ್ಲಿ ಜಯ ಸಾಧಿಸಿ ಅಜೇಯವಾಗಿ ಸೂಪರ್ 8 ಹಂತ ತಲುಪುವ ಆಸೆ ಭಾರತ ತಂಡದ್ದಾಗಿದೆ.

ಟೀಮ್ ಇಂಡಿಯಾ ಸದ್ಯ ಆಡಿರುವ ಮೂರು ಪಂದ್ಯಗಳನ್ನು ಗೆದ್ದು ಬೀಗಿದೆ. ಭಾರತ ತಂಡ ಮೊದಲ ಪಂದ್ಯದಲ್ಲಿ ಯುಎಸ್‌ಎ ವಿರುದ್ಧ, ಎರಡನೇ ಪಂದ್ಯದಲ್ಲಿ ನಮೀಬಿಯಾ ವಿರುದ್ಧ, ಮೂರನೇ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಜಯ ಸಾಧಿಸಿದೆ. ಈಗ ನಾಲ್ಕನೇ ಪಂದ್ಯವನ್ನು ಗೆದ್ದು ಗೆಲುವಿನ ಅಜೇಯ ಓಟವನ್ನು ಮುಂದುವರಿಸುವ ಲೆಕ್ಕಾಚಾರವನ್ನು ಹಾಕಿಕೊಂಡಿದೆ.

T20 World Cup

ನೆದರ್‌ಲ್ಯಾಂಡ್ ಸಹ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಿ ಒಂದೂ ಗೆಲುವು ದಾಖಲಿಸಿದೆ. ಪಾಕಿಸ್ತಾನ ವಿರುದ್ಧ ಮೊದಲ ಪಂದ್ಯದಲ್ಲಿ ಅಬ್ಬರದ ಪ್ರದರ್ಶನ ನೀಡಿದರೂ, ಸಹ ಜಯ ದಾಖಲಿಸುವಲ್ಲಿ ವಿಫಲವಾಗಿದೆ. ಲೀಗ್ ಹಂತದ ನಾಲ್ಕನೇ ಪಂದ್ಯದಲ್ಲಿ ಭಾರತದ ವಿರುದ್ಧ ನರೇಂದ್ರ ಮೋದಿ ಮೈದಾನದಲ್ಲಿ ಕಾದಾಟ ನಡೆಸಲಿದೆ.

ಅಭಿಷೇಕ್‌ ಮೇಲೆ ಒತ್ತಡ

ಟೀಮ್ ಇಂಡಿಯಾದ ಆರಂಭಿಕ ಆಟಗಾರ ಅಭಿಷೇಕ್‌ ಶರ್ಮಾ, ಇನ್ನೂ ಟೂರ್ನಿಯಲ್ಲಿ ಒಂದೇ ಒಂದು ರನ್‌ ಸಿಡಿಸಿಲ್ಲ. ಇವರು ಹೊಟ್ಟೆನೋವಿನ ಸಮಸ್ಯೆಯಿಂದ ಬಳಲುತ್ತಿದ್ದರು. ಹೀಗಾಗಿ ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ಕಣಕ್ಕೆ ಇಳಿದಿರಲಿಲ್ಲ. ಇವರು ಪಾಕ್‌ ವಿರುದ್ಧ ಪಂದ್ಯದಲ್ಲಿ ಕಣಕ್ಕೆ ಇಳಿಯುತ್ತಾರೋ ಇಲ್ಲವೋ ಎಂಬ ಅನುಮಾನಗಳು ಇದ್ದವು. ಆದರೆ ಇವರು ಪಾಕ್‌ ವಿರುದ್ಧ ಕಣಕ್ಕೆ ಇಳಿದು ಸೊನ್ನೆ ಸುತ್ತಿದರು. ಟಿ20 ವಿಶ್ವಕಪ್‌ನ ನಂಬರ್ 1 ಬ್ಯಾಟರ್ ಆಗಿರುವ ಅಭಿಷೇಕ್‌ ಈ ವಿಶ್ವಕಪ್‌ನಲ್ಲಿ ಒಂದೇ ಒಂದು ರನ್‌ ಬಾರಿಸದಿರುವು ತಂಡದಲ್ಲಿ ಚಿಂತೆ ಮೂಡಿಸಿದೆ.

T20 World Cup

ಇಶಾನ್ ಕಿಶನ್‌ ಆಕರ್ಷಣೆ

ವಿಕೆಟ್‌ ಕೀಪರ್ ಬ್ಯಾಟರ್ ಇಶಾನ್‌ ಕಿಶನ್‌ ಭರ್ಜರಿ ಲಯದಲ್ಲಿದ್ದಾರೆ. ಇವರು ನಮೀಬಿಯಾ, ಪಾಕಿಸ್ತಾನ ವಿರುದ್ಧ ಅರ್ಧಶತಕ ಬಾರಿಸಿ ಭರವಸೆ ಮೂಡಿಸಿದ್ದಾರೆ. ಬುಧವಾರವೂ ಅರ್ಧಶತಕ ಬಾರಿಸುವ ಇರಾದೆಯನ್ನು ಹೊಂದಿದ್ದಾರೆ. ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್, ರಿಂಕು ಸಿಂಗ್‌ ತಮ್ಮ ನೈಜ ಆಟವನ್ನು ಆಡಿ ತಂಡದ ಗೆಲುವಿನಲ್ಲಿ ಮಿಂಚಬೇಕಿದೆ.

ಆಲ್‌ರೌಂಡರ್ ರೂಪದಲ್ಲಿ ಕಾಣಿಸಿಕೊಳ್ಳುವ ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಶಿವಂ ದುಬೆ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ತಂಡಕ್ಕೆ ಆಧಾರವಾಗಬೇಕಿದೆ.

ಅರ್ಶದೀಪ್‌ ಎಂಟ್ರಿ

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅರ್ಶದೀಪ್‌ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದರು. ನೆದರ್‌ಲ್ಯಾಂಡ್‌ ವಿರುದ್ಧ ಪಂದ್ಯದಲ್ಲಿ ಇವರು ಕಣಕ್ಕೆ ಇಳಿಯಬಹುದಾಗಿದೆ. ಇವರು ಜಸ್ಪ್ರೀತ್ ಬುಮ್ರಾ ಅವರಿಗೆ ಉತ್ತಮ ಸಾಥ್ ನೀಡಿ, ಪವರ್‌ ಪ್ಲೇನಲ್ಲಿ ವಿಕೆಟ್‌ ಬೇಟೆ ನಡೆಸಬೇಕಿದೆ. ಇನ್ನು ಸ್ಪಿನ್ ಬೌಲರ್‌ ರೂಪದಲ್ಲಿ ವರುಣ್‌ ಚಕ್ರವರ್ತಿ ಮಾತ್ರ ಸ್ಥಾನ ಪಡೆಯುವ ಸಾಧ್ಯತೆ ಇದೆ.

ನೆದರ್‌ಲ್ಯಾಂಡ್‌ ತಂಡದಲ್ಲೂ ಆಲ್‌ರೌಂಡರ್ ಆಟಗಾರರ ದಂಡೇ ಇದೆ. ಬಾಸ್ ಡಿ ಲೀಡೆ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ತಂಡಕ್ಕೆ ಆಧಾರವಾಗಬಲ್ಲ ಆಟಗಾರ. ಲೋಗನ್ ವ್ಯಾನ್ ಬೀಕ್ ಸಹ ತಂಡದ ಅಗತ್ಯಕ್ಕೆ ತಕ್ಕಂತೆ ಪ್ರದರ್ಶನ ನೀಡಬಲ್ಲರು. ನೆದರ್‌ಲ್ಯಾಂಡ್‌ ಈ ಪಂದ್ಯವನ್ನು ಗೆದ್ದು ಮುಂದಿನ ಹಂತದ ಕನಸನ್ನು ಹಸಿರಾಗಿಸಿಕೊಳ್ಳುವ ಆಸೆಯನ್ನು ಹೊಂದಿದೆ. ಸದ್ಯ ನದರ್‌ಲ್ಯಾಂಡ್‌ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

Story first published: Tuesday, February 17, 2026, 19:00 [IST]
Other articles published on Feb 17, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+