For Quick Alerts
ALLOW NOTIFICATIONS  
For Daily Alerts
 

T20 World Cup 2026: 500 ಮಿಲಿಯನ್ ವೀಕ್ಷಣೆ ದಾಟಿ ಹೊಸ ಮೈಲಿಗಲ್ಲು

ಭಾರತ ಹಾಗೂ ಶ್ರೀಲಂಕಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಈಗ ಮಹತ್ತರ ಘಟ್ಟಕ್ಕೆ ತಲುಪಿದೆ. ಬುಧವಾರದಿಂದ ಟೂರ್ನಿಯ ಸೆಮಿಫೈನಲ್ ಪಂದ್ಯಗಳು ಆರಂಭವಾಗುತ್ತವೆ. ಈ ಪಂದ್ಯಗಳು ಆರಂಭಕ್ಕೂ ಮುನ್ನ ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿ (ಐಸಿಸಿ) ಟಿ20 ವಿಶ್ವಕಪ್‌ 2026ಕ್ಕೆ ಸಂಬಂಧಿಸಿದಂತೆ ದೊಡ್ಡ ಅಪ್‌ಡೇಟ್‌ ನೀಡಿದೆ. ಟಿ20 ವಿಶ್ವಕಪ್‌ ವೀಕ್ಷಣೆಯಲ್ಲಿ ದೊಡ್ಡ ದಾಖಲೆಯನ್ನು ಬರೆದಿದೆ. ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಈ ವರೆಗೆ 500 ಮಿಲಿಯನ್ ಗಡಿ ದಾಟಿದೆ ಎಂದು ಐಸಿಸಿ ತಿಳಿಸಿದೆ.

ಐಸಿಸಿ ಟಿ20 ವಿಶ್ವಕಪ್‌ ಇತಿಹಾಸದಲ್ಲಿ ಇದುವರೆಗಿನ ಅತಿ ಹೆಚ್ಚು ವೀಕ್ಷಕರ ಸಂಖ್ಯೆ ದಾಖಲಾಗಿದೆ ಎಂದು ಐಸಿಸಿ ಅಧ್ಯಕ್ಷ ಜಯ್ ಶಾ ತಿಳಿಸಿದ್ದಾರೆ. ಪಂದ್ಯಾವಳಿಯನ್ನು ಜಾಗತಿಕವಾಗಿ ಅತಿ ಹೆಚ್ಚು ಜನರನ್ನು ಸೆಳೆದಿದೆ. ಕ್ರಿಕೆಟ್ ಅನ್ನು ಜಾಗತಿಕವಾಗಿ ಎಲ್ಲರಿಗೂ ತಲುಪಿಸಬೇಕು ಎಂಬ ಗುರಿಯೊಂದಿಗೆ ನಾವು ಈ ಪ್ರಯಾಣ ಆರಂಭಿಸಿದ್ದೆವು. ಭಾರತೀಯ ಅಭಿಮಾನಿಗಳು ತೋರಿರುವ ಈ ಅಪಾರ ಪ್ರೀತಿ ನಮ್ಮ ಕೆಲಸವನ್ನು ಪ್ರೋತ್ಸಾಹಿಸಿದಂತಿದೆ ಎಂದು ತಿಳಿಸಿದ್ದಾರೆ.

T20 World Cup

ಚುಟುಕು ವಿಶ್ವಕಪ್‌ನ್ನು ಭಾರತದಲ್ಲಿ ವೀಕ್ಷಿಸಿದವರ ಸಂಖ್ಯೆಯೂ ಗಣನೀಯವಾಗಿ ಏರಿಕೆ ಆಗಿದೆ. ಭಾರತದಲ್ಲಿ ಈ ಬಾರಿಯ ವಿಶ್ವಕಪ್ ವೀಕ್ಷಿಸಿದವರ ಸಂಖ್ಯೆ 500 ಮಿಲಿಯನ್ ದಾಟಿದೆ. ಇದು ಟಿ20 ವಿಶ್ವಕಪ್ ಇತಿಹಾಸದಲ್ಲೇ ದಾಖಲೆ ಸೃಷ್ಟಿಸಿದೆ. ಈ ಮೂಲಕ ಹಿಂದಿನ ಎಲ್ಲ ದಾಖಲೆಗಳನ್ನು ಭಾರತ ಅಳಿಸಿ ಹಾಕಿದೆ ಎಂದು ಜಯ್ ಶಾ ಪೋಸ್ಟ್‌ ಮಾಡಿದ್ದಾರೆ.

ದಾಖಲೆ ವೀಕ್ಷಣೆ

ಡಿಜಿಟಲ್‌ ಪ್ಲಾಟ್‌ ಫಾರ್ಮ್‌ಗಳಲ್ಲೂ ಟಿ20 ವಿಶ್ವಕಪ್ ವೀಕ್ಷಣೆಯಲ್ಲಿ ಗಣನೀಯವಾಗಿ ಏರಿಕೆ ಕಂಡಿದೆ. ಜಿಯೋ ಹಾಟ್‌ಸ್ಟಾರ್‌ ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ಏಕಕಾಲಕ್ಕೆ 6.05 ಕೋಟಿ ಜನರು ಪಂದ್ಯವನ್ನು ವೀಕ್ಷಿಸಿದ್ದು ದಾಖಲೆ ಬರೆದಿದೆ. ಭಾರತೀಯ ಅಭಿಮಾನಿಗಳು ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ದಾಖಲೆಗಳನ್ನು ನಿರ್ಮಿಸಲಿದ್ದಾರೆ ಎಂದು ಜಯ್ ಶಾ ತಿಳಿಸಿದ್ದಾರೆ. ಇನ್ನು ಟೂರ್ನಿಯಲ್ಲಿ ಎರಡು ಸೆಮಿಫೈನಲ್ ಪಂದ್ಯಗಳು ಹಾಗೂ ಫೈನಲ್‌ ಪಂದ್ಯಗಳು ನಡೆಯಬೇಕಿವೆ. ಈ ಅಂಕಿಅಂಶಗಳು ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ದೊಡ್ಡ ಯಶಸ್ಸಿನ ಕಥೆಯನ್ನು ಹೇಳುವಂತಿದೆ.

T20 World Cup

ಫೆಬ್ರವರಿ 7 ರಿಂದ ಆರಂಭವಾದ ಟಿ20 ವಿಶ್ವಕಪ್, ಮಾರ್ಚ್ 8 ರಂದು ಕೊನೆಯಾಗಲಿದೆ. ಫೈನಲ್ ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಮೈದಾನದಲ್ಲಿ ನಡೆಯಲಿದೆ. ಈ ಬಾರಿಯ ವಿಶ್ವಕಪ್‌ ಹಲವು ದಾಖಲೆಗಳನ್ನು ಅಳಿಸಿ ಹಾಕಿದೆ. ಈ ಅಂಕಿಅಂಶಗಳು ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ರ ಬೃಹತ್ ಯಶಸ್ಸನ್ನು ಅನುಸರಿಸುತ್ತವೆ, ಇದು ಈ ಹಿಂದೆ 250 ಬಿಲಿಯನ್ ನಿಮಿಷಗಳ ವೀಕ್ಷಣೆ ಸಮಯ ಮತ್ತು ಟಿವಿಯಲ್ಲಿ 122 ಮಿಲಿಯನ್ ಗರಿಷ್ಠದೊಂದಿಗೆ ದಾಖಲೆಗಳನ್ನು ಮುರಿದಿತ್ತು.

ಗುರುವಾರದಂದು ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಮುಂಬೈನ ವಾಂಖೆಡೆ ಮೈದಾನದಲ್ಲಿ ಕಾದಾಟ ನಡೆಸಲಿವೆ. ಈ ಮೈದಾನದಲ್ಲಿ ಭಾರತ ಕಳೆದ ಹತ್ತು ವರ್ಷದಿಂದ ಒಂದೇ ಒಂದು ಪಂದ್ಯವನ್ನು ಸೋತಿಲ್ಲ.

Story first published: Wednesday, March 4, 2026, 17:13 [IST]
Other articles published on Mar 4, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+