For Quick Alerts
ALLOW NOTIFICATIONS  
For Daily Alerts
 

ಮಾಜಿ ಚಾಂಪಿಯನ್‌ ಆಸ್ಟ್ರೇಲಿಯಾ ವಿಶ್ವಕಪ್‌ ಟೂರ್ನಿಯಿಂದ ಔಟ್‌

T20 World Cup 2026: ಟಿ20 ವಿಶ್ವಕಪ್ ಟೂರ್ನಿಯಲ್ಲಿ ದೊಡ್ಡ ಅಚ್ಚರಿ ಸಂಭವಿಸಿದೆ. ಟೂರ್ನಿಯ ಬಲಿಷ್ಠ ತಂಡವಾದ ಆಸ್ಟ್ರೇಲಿಯಾ ಟೂರ್ನಿಯಿಂದ ಹೊರಬಿದ್ದಿದ್ದು, ಜಿಂಬಾಬ್ವೆ ಸೂಪರ್‌-8 ಹಂತಕ್ಕೆ ಪ್ರವೇಶಿಸಿದೆ. ಇಂದು ಜಿಂಬಾಬ್ವೆ ಮತ್ತು ಐರ್ಲೆಂಡ್ ನಡುವಿನ ಮಹತ್ವದ ಪಂದ್ಯ ನಡೆಯಬೇಕಿತ್ತು. ಆದರೆ, ನಿರಂತರ ಮಳೆಯಿಂದಾಗಿ ಪಂದ್ಯವನ್ನು ಆರಂಭಿಸುವುದು ಸಾಧ್ಯವಾಗಲಿಲ್ಲ. ಪರಿಣಾಮ ಪಂದ್ಯವನ್ನು ರದ್ದುಗೊಳಿಸಲಾಗಿದ್ದು, ಎರಡೂ ತಂಡಗಳಿಗೆ ತಲಾ ಒಂದು ಅಂಕ ನೀಡಲಾಯಿತು.

ಈ ಒಂದು ಅಂಕದೊಂದಿಗೆ ಜಿಂಬಾಬ್ವೆ ಒಟ್ಟು 5 ಅಂಕಗಳನ್ನು ಗಳಿಸಿ ಅಂಕಪಟ್ಟಿಯಲ್ಲಿ ಮುನ್ನಡೆ ಸಾಧಿಸಿತು. ಇದರ ಫಲವಾಗಿ ಜಿಂಬಾಬ್ವೆ ಸೂಪರ್‌-8 ಹಂತಕ್ಕೆ ಅರ್ಹತೆ ಪಡೆದರೆ, ಆಸ್ಟ್ರೇಲಿಯಾ ಟೂರ್ನಿಯಿಂದ ಹೊರಬಿದ್ದಿದೆ. ಟೂರ್ನಿಯ ಆರಂಭದಿಂದಲೇ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದ ಜಿಂಬಾಬ್ವೆ, ಮಹತ್ವದ ಹಂತಕ್ಕೆ ಪ್ರವೇಶಿಸುವ ಮೂಲಕ ತನ್ನ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಇನ್ನೂ ಆಸ್ಟ್ರೇಲಿಯಾ ಹೊರಬಿದ್ದಿರುವುದು ಕ್ರಿಕೆಟ್ ಅಭಿಮಾನಿಗಳಿಗೆ ಅಚ್ಚರಿಯ ಸಂಗತಿಯಾಗಿದ್ದು, ಟೂರ್ನಿಯ ಮುಂದಿನ ಹಂತ ಇನ್ನಷ್ಟು ರೋಚಕ ತಿರುವು ಪಡೆಯುವ ನಿರೀಕ್ಷೆಯಿದೆ.

T20 World Cup 2026 Zimbabwe Qualify for Super 8 as Australia Crash Out After Rain-Abandoned Match

ಜಿಂಬಾಬ್ವೆ ಮತ್ತು ಐರ್ಲೆಂಡ್ ನಡುವಿನ ಪಂದ್ಯ ಮಳೆಯಿಂದ ರದ್ದಾಗಿದೆ. ನಿರಂತರ ಮಳೆಯ ಹಿನ್ನೆಲೆ ನಿಯಮಾನುಸಾರ ಉಭಯ ತಂಡಗಳಿಗೆ ತಲಾ ಒಂದು ಅಂಕ ನೀಡಲಾಯಿತು. ಈ ಫಲಿತಾಂಶದೊಂದಿಗೆ, ಜಿಂಬಾಬ್ವೆ ತಂಡದ ಒಟ್ಟು ಅಂಕಗಳು 5ಕ್ಕೆ ಏರಿದ್ದು, ಬಿ ಗುಂಪಿನಿಂದ ಸೂಪರ್-8 ಹಂತಕ್ಕೆ ಅಧಿಕೃತವಾಗಿ ಪ್ರವೇಶ ಪಡೆಸಿದೆ.

ಮತ್ತೊಂದೆಡೆ, 2021ರ ಚಾಂಪಿಯನ್ ಆಸ್ಟ್ರೇಲಿಯಾ ತಂಡವು ಆಡಿದ ಮೂರು ಪಂದ್ಯಗಳಲ್ಲಿ ಒಂದರಲ್ಲಿ ಗೆದ್ದು ಕೇವಲ 2 ಅಂಕಗಳನ್ನು ಪಡೆದುಕೊಂಡಿತ್ತು. ಇನ್ನೂ ಫೆಬ್ರವರಿ 20ರಂದು ಒಮಾನ್ ವಿರುದ್ಧದ ಪಂದ್ಯ ಗೆದ್ದರೂ ಗರಿಷ್ಠ 4 ಅಂಕಗಳಷ್ಟೇ ಪಡೆಯಲು ಸಾಧ್ಯವಾಗುತ್ತದೆ. ಇದರಿಂದ ಆಸ್ಟ್ರೇಲಿಯಾ ಸೂಪರ್-8 ಹಂತಕ್ಕೆ ಎಂಟ್ರಿ ಕೊಡಲು ಸಾಧ್ಯವಾಗುವುದಿಲ್ಲ. ಈ ಕಾರಣದಿಂದ ಅಧಿಕೃತವಾಗಿ ಈಗಲೇ ಟೂರ್ನಿಯಿಂದ ಹೊರಬಿದ್ದಿದೆ.

ಗ್ರೂಪ್‌ 'ಬಿ'ನ ಮತ್ತೊಂದು ತಂಡ ಶ್ರೀಲಂಕಾ ಈಗಾಗಲೇ ಸೂಪರ್-8 ಹಂತಕ್ಕೆ ಪ್ರವೇಶ ಪಡೆದಿದೆ. ಇನ್ನೂ ಸೂಪರ್-8 ಹಂತ ಪ್ರವೇಶಿಸಿದ ಜಿಂಬಾಬ್ವೆ ತಂಡ ಮುಂದಿನ ಪಂದ್ಯಗಳಲ್ಲಿ ಭಾರತ, ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಪೈಪೋಟಿ ನಡೆಸಲಿದೆ. ಒಟ್ಟಿನಲ್ಲಿ ಇದೀಗ ಬಲಿಷ್ಠ ಆಸ್ಟ್ರೇಲಿಯಾ ತಂಡವೇ ಟೂರ್ನಿಯಿಂದ ಹೊರಬಿದ್ದಿರುವುದು ಆಶ್ಚರ್ಯಕರ ಸಂಗತಿಯಾಗಿದೆ.

Story first published: Tuesday, February 17, 2026, 18:23 [IST]
Other articles published on Feb 17, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+