For Quick Alerts
ALLOW NOTIFICATIONS  
For Daily Alerts
 

ಟಿ 20 ವಿಶ್ವಕಪ್‌ 2026: ಬಲಿಷ್ಠ ಆಸ್ಟ್ರೇಲಿಯಾಗೆ ಮಣ್ಣು ಮುಕ್ಕಿಸಿ ಭರ್ಜರಿ ಗೆಲುವು ಸಾಧಿಸಿದ ಜಿಂಬಾಬ್ವೆ

T20 World Cup 2026: ಜಿಂಬಾಬ್ವೆ ವಿರುದ್ಧ ನಡೆದ ಟಿ 20 ವಿಶ್ವಕಪ್‌ 2026 19ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ 23 ರನ್‌ಗಳ ಅಂತರದಿಂದ ಸೋಲು ಕಂಡಿದೆ. ಕೊನೆವರೆಗೂ ಹೋರಾಟ ನಡೆಸಿದ ಆಸ್ಟ್ರೇಲಿಯಾ ತಂಡ, ಗುರಿ ಬೆನ್ನಟ್ಟುವ ವೇಳೆ ಗೆಲುವಿಗೆ ಬಹಳ ಸಮೀಪ ಬಂದರೂ ನಿರ್ಣಾಯಕ ಕ್ಷಣಗಳಲ್ಲಿ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡ ಕಾರಣ ಪಂದ್ಯವನ್ನು ಕೈಚೆಲ್ಲಿತು. ಇತ್ತ ಜಿಂಬಾಂಬೆ ತಂಡವು ಉತ್ತಮ ಬೌಲಿಂಗ್‌ ಪ್ರದರ್ಶನದ ಮೂಲಕ ಮಹತ್ವದ ಗೆಲುವು ಸಾಧಿಸಿ ಗಮನ ಸೆಳೆಯಿತು.

ಕೊಲಂಬೋ ಪ್ರೇಮದಾಸ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಜಿಂಬಾಬ್ವೆ ತಂಡವು ನಿಗದಿತ 20 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 169 ರನ್‌ಗಳನ್ನು ಕಲೆಹಾಕಿ 170 ಟಾರ್ಗೆಟ್‌ ನೀಡಿತು. ಈ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ 19.3 ಓವರ್‌ಗಳಲ್ಲಿ ತನ್ನೆಲ್ಲ ವಿಕೆಟ್‌ ಕಳೆದುಕೊಂಡು 146 ರನ್‌ ಗಳಿಸಿತು. ಈ ಮೂಲಕ 23 ರನ್‌ಗಳಿಂದ ಸೋಲುವ ಮೂಲಕ ಜಿಂಬಾಬ್ವೆಗೆ ಶರಣಾಯಿತು.

T20 World Cup 2026 Zimbabwe won by 23 Runs Australia in R Premadasa International Cricket Stadium

ಆಸ್ಟ್ರೇಲಿಯಾಗೆ ಹೀನಾಯ ಸೋಲು

ಅಚ್ಚರಿ ವಿಚಾರ ಏನೆಂದ್ರೆ ವಿಶ್ವಪ್ರಸಿದ್ಧ ಕ್ರಿಕೆಟ್‌ ಟೀಂಗಳಲ್ಲಿ ಒಂದಾಗಿರುವ ಆಸ್ಟ್ರೇಲಿಯಾವು ಜಿಂಬಾಬ್ವೆ ವಿರುದ್ಧ ಹಿನಾಯ ಸೋಲು ಕಂಡಿರುವುದು. ಹೀಗೆ ಈ ಬಾರಿ ಬಹುತೇಕ ಹೊಸ ತಂಡಗಳೇ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ನಲ್ಲಿ ಮಿಂಚುವ ಮೂಲಕ ಇಡೀ ವಿಶ್ವದ ಗಮನ ಸೆಳೆದಿವೆ. ಅಂದ್ರೆ, ತಪ್ಪಾಗಲಾರದು.

ಅರ್ಧ ಶತಕದೊಂದಿದೆ ಮಿಂಚಿದ ಬ್ರಿಯಾನ್ ಬೆನ್ನೆಟ್

ಇಂದಿನ ಪಂದ್ಯದಲ್ಲಿ ಜಿಂಬಾಬ್ವೆ ಪರ ಬ್ಯಾಟ್‌ ಮಾಡಿದ ಬ್ರಿಯಾನ್ ಬೆನ್ನೆಟ್ 56 ಎಸೆತಗಳಲ್ಲಿ 7 ಬೌಂಡರಿ ಸಹಿತ ಅಜೇಯ 64 ರನ್‌ಗಳನ್ನು ಬಾರಿಸಿದರೆ, ತಡಿವಾನಶೆ ಮರುಮಾನಿ 35(21), ರಯಾನ್ ಬರ್ಲ್ 35(30), ಸಿಕಂದರ್ ರಾಝಾ ಅಜೇಯ 25 ರಸ್‌ಗಳನ್ನು ಸಿಡಿಸುವ ಮೂಲಕ ತಂಡದ ಮೊತ್ತವನ್ನು 160 ಗಡಿ ದಾಡಿಸಿದರು. ಬ್ರಿಯಾನ್ ಬೆನ್ನೆಟ್ ಅವರ ಸ್ಫೋಟಕ ಬ್ಯಾಟಿಂಗ್‌ನಿಂದ ಬಂದ ಅರ್ಧ ಶತಕದೊಂದಿದೆ ತಂಡ ಬೃಹತ್ ಮೊತ್ತ ಕಲೆಹಾಕಿತು.

ಮಾರಕ ಬೌಲಿಂಗ್‌ ದಾಳಿ ನಡೆಸಿದ ಜಿಂಬಾಬ್ವೆ

ಜಿಂಬಾಬ್ವೆ ನೀಡಿದ 170 ರನ್‌ಗಳ ಗುರಿಯನ್ನು ಮುಟ್ಟಲಾಗದೇ ಆಸ್ಟ್ರೇಲಿಯಾ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು ಸೋಲನುಭವಿಸಿತು. ಅಷ್ಟರ ಮಟ್ಟಿಗೆ ಜಿಂಬಾಂಬೆ ತಂಡದ ಬೌಲರ್‌ಗಳು ಮಾರಕ ಬೌಲಿಂಗ್ ದಾಳಿ ನಡೆಸಿದರು. ಜಿಂಬಾಂಬೆ ಪರ ಬೌಲಿಂಗ್ ಮಾಡಿದ, ಬ್ಲೆಸಿಂಗ್ ಮುಜರಬಾನಿ ನಾಲ್ಕು ಓವರ್‌ ಎಸೆದು ಕೇವಲ 17 ರನ್‌ಗಳನ್ನು ನೀಡಿ 4 ವಿಕೆಟ್‌ ಕಬಳಿಸಿದರೆ, ಬ್ರಾಡ್ ಇವಾನ್ಸ್ 3.3 ಓವರ್‌ ಎಸೆದು 23 ರನ್‌ಗಳನ್ನು ಕೊಟ್ಟು 3 ವಿಕೆಟ್‌ ಉರುಳಿಸಿದರು. ಈ ಮೂಲಕ ತಂಡದ ಗೆಲುವಿಗೆ ಇವರು ಪ್ರಮುಖ ಪಾತ್ರವಹಿಸಿದರು.

ಬೆಚ್ಚಿಬಿದ್ದ ಆಸ್ಟ್ರೇಲಿಯಾ ಬ್ಯಾಟರ್‌ಗಳು

ಉಳಿದಂತೆ, ವೆಲ್ಲಿಂಗ್ಟನ್ ಪೆಡ್ಜಿಸೈ ಮಸಕಡ್ಜಾ ಹಾಗೂ ರಯಾನ್ ಬರ್ಲ್ ತಲಾ ಒಂದು ವಿಕೆಟ್‌ ಕಬಳಿಸಿ ಆಸ್ಟ್ರೇಲಿಯಾ ತಂಡವನ್ನು 146 ರನ್‌ಗಳಿಗೆ ಕಟ್ಟಿಹಾಕಿದರು. ಈ ಮೂಲಕ ಜಿಂಬಾಬ್ವೆ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಭರ್ಜರಿಯಾಗಿ ಗೆಲುವು ಸಾಧಿಸಿತು. ಒಟ್ಟಿನಲ್ಲಿ ಜಿಂಬಾಬ್ವೆ ಮಾರಕ ಬೌಲಿಂಗ್‌ ದಾಳಿಗೆ ಆಸ್ಟ್ರೇಲಿಯಾ ಬ್ಯಾಟರ್‌ಗಳು ಬೆಚ್ಚಿಬಿದ್ದಿದ್ದಂತೂ ನಿಜ.

Story first published: Friday, February 13, 2026, 15:05 [IST]
Other articles published on Feb 13, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+