ಟಿ20 ವಿಶ್ವಕಪ್: ನಮೀಬಿಯಾ vs ಸ್ಕಾಟ್ಲೆಂಡ್, ಟಾಸ್ ರಿಪೋರ್ಟ್, Live ಸ್ಕೋರ್

ಟಿ20 ವಿಶ್ವಕಪ್‌ನ 21ನೇ ಪಂದ್ಯ ಇಂದು ನಡೆಯುತ್ತಿದ್ದು ಈ ಪಂದ್ಯದಲ್ಲಿ ನಮೀಬಿಯಾ ಹಾಗೂ ಸ್ಕಾಟ್ಲೆಂಡ್ ತಂಡಗಳು ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ನಮೀಬಿಯಾ ತಂಡ ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಅಬುಧಾಬಿಯ ಶೇಕ್ ಝಾಯೇದ್ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯುತ್ತಿದೆ.
ಅರ್ಹತಾ ಸುತ್ತಿನಲ್ಲಿ ಪಾಲ್ಗೊಂಡು ಪ್ರಧಾನ ಸುತ್ತಿಗೆ ಕಾಲಿಟ್ಟಿರುವ ಈ ಎರಡು ತಂಡಗಳು ಸೂಪರ್ 12 ಹಂತದಲ್ಲಿ ತಮ್ಮ ಮೊದಲ ಗೆಲುವಿಗಾಗಿ ಹೋರಾಟ ನಡೆಸಲಿದೆ. ಸ್ಕಾಟ್ಲೆಂಡ್ ತಂಡ ಮೊದಲ ಪಂದ್ಯದಲ್ಲಿ ಅಪ್ಘಾನಿಸ್ತಾನ ತಂಡದ ವಿರುದ್ಧ ಸೋಲು ಕಂಡಿದ್ದರೆ ನಮೀಬಿಯಾ ಸೂಪರ್ 12 ಹಂತದಲ್ಲಿ ತನ್ನ ಮೊದಲ ಪಂದ್ಯವನ್ನು ಆಡಲು ಸಜ್ಜಾಗಿದೆ.
ಇನ್ನು ಈ ಪಂದ್ಯದಲ್ಲಿ ಸ್ಕಾಟ್ಲೆಂಡ್ ತಂಡದ ಖಾಯಂ ನಾಯಕ ಗಾಯಗೊಂಡ ಕಾರಣ ಆಡುವ ಬಳಗದಿಂದ ಹೊರಬಿದ್ದಿದ್ದಾರೆ. ಹೀಗಾಗಿ ತಂಡದ ಉಪನಾಯಕ ರಿಚಿ ಬೆರಿಂಗ್ಟನ್ ತಂಡವನನ್ನು ಮುನ್ನಡೆಸುತ್ತಿದ್ದಾರೆ. ಗ್ರೇಗ್ ವ್ಯಾಲಲೇಸ್ ಆಡುವ ಬಳಗದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಉಳಿದಂತೆ ಈ ಹಿಂದಿನ ಪಂದ್ಯದಲ್ಲಿ ಆಡಿದ ಎಲ್ಲಾ ಆಟಗಾರರು ಕೂಡ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನು ಸೂಪರ್ 12 ಹಂತದಲ್ಲಿ ಮೊದಲ ಪಂದ್ಯವನ್ನು ಆಡುತ್ತಿರುವ ನಮೀಬಿಯಾ ಇಂದಿನ ಪಂದ್ಯಕ್ಕಾಗಿ ಯಾವುದೇ ಬದಲಾವಣೆ ಮಾಡಿಕೊಂಡಿಲ್ಲ.
ಮಿಚೆಲ್ ಲೀಸ್ಕ್ ಸ್ಕಾಟ್ಲೆಂಡ್ ಪರವಾಗಿ ಅದ್ಭುತ ಪ್ರದರ್ಶನ ನೀಡಿದರು. 27 ಎಸೆತಗಳ್ನನು ಎದುರಿಸಿದ ಅವರು 44 ರನ್‌ಗಳನ್ನು ಸಿಡಿಸಿದರು. ಈ ಮೂಲಕ ತಂಡದ ಮೊತ್ತ ನೂರರ ಗಡಿ ದಾಟಲು ಕಾರಣರಾದರು. ಅಂತಿಮವಾಗಿ ಸ್ಲಾಟ್ಲೆಂಟ್ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 109 ರನ್‌ಗಳನ್ನು ಗಳಿಸಿತು. ನಮೀಬಿಯಾ ಪರವಾಗಿ ರೂಬನ್ ಟ್ರಂಪ್ಲ್‌ಮನ್ 3 ವಿಕೆಟ್ ಕಬಳಿಸಿದರೆ ಝಾನ್ ಫ್ರಾಂಕ್ಲಿನ್ 2 ಹಾಗೂ ಸ್ಮಿತ್ ಹಾಗೂ ವೈಸ್ ತಲಾ ಒಂದು ವಿಕೆಟ್ ತಮ್ಮದಾಗಿಸಿದರು.
ಇನ್ನು ಸ್ಕಾಟ್ಲೆಂಡ್ ತಂಡ ನೀಡಿದ 110 ರನ್‌ಗಳ ಗುರಿಯನ್ನುಯ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ ಸಾಧಾರಣ ಆರಂಭವನ್ನು ಪಡೆಯಿತು. ಆದರೆ ಮಧ್ಯಮ ಕ್ರಮಾಂಕ ನಮೀಬಿಯಾಗೆ ಆಘಾತ ನೀಡಿತು.50 ರನ್‌ಗಳಿಗೆ 1 ವಿಕೆಟ್ ಕಳೆದುಕೊಂಡಿದ್ದ ನಮೀಬಿಯಾ ನಂತರ 67 ರನ್‌ಗಳಾಗುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡಿತ್ತು. ಈ ಮೂಲಕ ಸಂಕಷ್ಟದ ಸಮಯವನ್ನು ಎದುರಿಸಿತು. ಆದರೆ ಜೆಜೆ ಸ್ಮಿತ್ ನಮೀಬಿಯಾ ಪಾಲಿಗೆ ಆಸರೆಯಾದರು. ಅಂತಿಮವಾಗಿ ನಮೀಬಿಯಾ 19.1 ಓವರ್‌ಗಳಲ್ಲಿ ಸ್ಲಾಟ್ಲೆಂಡ್ ನಿಡಿದ ಗುರಿಯನ್ನು ಮೀರಿ ನಿಲ್ಲುವಲ್ಲಿ ಯಶಸ್ವಿಯಾಯಿತು.
ಸ್ಲಾಟ್ಲೆಂಡ್ ತಂಡದ ಪರವಾಗಿ ಮೈಕಲ್ ಲೀಸ್ಕ್ ಬೌಲಿಂಗ್‌ನಲ್ಲಿಯೂ ಮಿಂಚಿದ್ದು 2 ವಿಕೆಟ್ ಪಡೆದಿದ್ದಾರೆ. ಉಳಿದಂತೆ ಬ್ರಾಡ್ಲಿ ವೀಲ್, ಸಫಿಯಾನ್ ಶರೀಫ್, ಕ್ರಿಸ್ ಗ್ರೀವ್ಸ್ ಹಾಗೂ ಮಾರ್ಕ್ ವ್ಯಾಟ್ ತಲಾ 1 ವಿಕೆಟ್ ಪಡೆಯಲು ಯಶಸ್ವಿಯಾಗಿದ್ದಾರೆ.
ಇನ್ನು ಈ ಗೆಲುವಿನ ಮೂಲಕ ಅಂಕಪಟ್ಟಿಯಲ್ಲಿ ನಮೀಬಿಯಾ 3ನೇ ಸ್ಥಾನವನ್ನು ಪಡೆದುಕೊಂಡಿದೆ. ಭಾರತ ಹಾಗೂ ನ್ಯೂಜಿಲೆಂಡ್ ತಮಡಗಳು ತಮ್ಮ ಆರಂಭಿಕ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಸೋಲು ಕಂಡ ಪರಿಣಾಮವಾಗಿ ನಮೀಬಿಯಾ ತಂಡದ ನಂತರದ ಸ್ಥಾನದಲ್ಲಿದೆ. ಗ್ರೂಪ್ 2ರಲ್ಲಿ ಪಾಕಿಸ್ತಾನ ಅಗ್ರ ಸ್ಥಾನದಲ್ಲಿದ್ದು ಅಫ್ಘಾನಿಸ್ತಾನ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ.
ಸ್ಕಾಟ್ಲೆಂಡ್ ಆಡುವ ಬಳಗ: ಜಾರ್ಜ್ ಮುನ್ಸಿ, ಮ್ಯಾಥ್ಯೂ ಕ್ರಾಸ್ (ವಿಕೆಟ್ ಕೀಪರ್), ಕ್ಯಾಲಮ್ ಮ್ಯಾಕ್ಲಿಯೋಡ್, ರಿಚಿ ಬೆರಿಂಗ್ಟನ್ (ನಾಯಕ), ಕ್ರೇಗ್ ವ್ಯಾಲೇಸ್, ಮೈಕೆಲ್ ಲೀಸ್ಕ್, ಕ್ರಿಸ್ ಗ್ರೀವ್ಸ್, ಮಾರ್ಕ್ ವ್ಯಾಟ್, ಜೋಶ್ ಡೇವಿ, ಸಫ್ಯಾನ್ ಷರೀಫ್, ಬ್ರಾಡ್ಲಿ ವೀಲ್
ಬೆಂಚ್: ಅಲಾಸ್ಡೇರ್ ಇವಾನ್ಸ್, ಕೈಲ್ ಕೋಟ್ಜರ್, ಡೈಲನ್ ಬಡ್ಜ್, ಹಮ್ಜಾ ತಾಹಿರ್
ನಮೀಬಿಯಾ ಆಡುವ ಬಳಗ: ಕ್ರೇಗ್ ವಿಲಿಯಮ್ಸ್, ಝೇನ್ ಗ್ರೀನ್ (ವಿಕೆಟ್ ಕೀಪರ್), ಗೆರ್ಹಾರ್ಡ್ ಎರಾಸ್ಮಸ್ (ನಾಯಕ), ಡೇವಿಡ್ ವೈಸ್, ಮೈಕೆಲ್ ವ್ಯಾನ್ ಲಿಂಗೆನ್, ಜೆಜೆ ಸ್ಮಿಟ್, ಜಾನ್ ಫ್ರಿಲಿಂಕ್, ಪಿಕ್ಕಿ ಯಾ ಫ್ರಾನ್ಸ್, ಜಾನ್ ನಿಕೋಲ್ ಲಾಫ್ಟಿ-ಈಟನ್, ರೂಬೆನ್ ಟ್ರಂಪೆಲ್ಮನ್, ಬರ್ನಾರ್ಡ್ ಸ್ಕೋಲ್ಟ್ಜ್
ಬೆಂಚ್: ಸ್ಟೀಫನ್ ಬಾರ್ಡ್, ಮಿಚೌ ಡು ಪ್ರೀಜ್, ಕಾರ್ಲ್ ಬಿರ್ಕೆನ್‌ಸ್ಟಾಕ್, ಬೆನ್ ಶಿಕೊಂಗೊ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications