For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್: ಅಬ್ಬರಿಸಿದ ಡೇವಿಡ್ ವಾರ್ನರ್, ಲಂಕಾ ವಿರುದ್ಧ ಆಸ್ಟ್ರೇಲಿಯಾಗೆ ಭರ್ಜರಿ ಗೆಲುವು

T20 world cup: 22nd Match, Australia won by 7 wickets against Sri lanka

ಕಳೆದ ಕೆಲ ತಿಂಗಳಿನಿಂದ ಮಂಕಾಗಿದ್ದ ಡೇವಿಡ್ ವಾರ್ನರ್ ಮತ್ತೆ ತಮ್ಮ ಹಳೇಯ ಫಾರ್ಮ್‌ಗೆ ಮರಳಿದ್ದಾರೆ. ಶ್ರಿಲಂಕಾ ವಿರುದ್ಧದ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನಿಡಿದ ಡೇವಿಡ್ ವಾರ್ನರ್ ಆಸ್ಟ್ರೇಲುಯಾದ ಭರ್ಜರಿ ಗೆಲುವಿಗೆ ಕಾರಣವಾಗಿದ್ದಾರೆ. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 7 ವಿಕೆಟ್‌ಗಳ ಅಂತರದಿಂದ ಗೆಲುವು ಸಾಧಿಸಲು ಯಶಸ್ವಿಯಾಗಿದೆ. ಈ ಮೂಲಕ ಸತತ 2ನೇ ಗೆಲುವನ್ನು ಸಾಧಿಸಿದೆ ಆರೋನ್ ಫಿಂಚ್ ಬಳಗ.

ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಶ್ರಿಲಂಕಾ ತಂಡ 154 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ಇನ್ನಿಂಗ್ಸ್ ಮುಗಿಸಿತು. ಲಂಕಾ ತಂಡದ ಪರವಾಗಿ ಕುಸಾಲ್ ಪೆರೆರ ಅಸಲಂಕಾ ತಲಾ 35 ರನ್‌ಗಳ ಕೊಡುಗೆ ನೀಡಿದರೆ ರಾಜಪಕ್ಸ ಅಜೇಯ 33 ರನ್‌ಗಳನ್ನು ಗಳಿಸಿದರು. ಆಸ್ಟ್ರೇಲಿಯಾ ತಂಡದ ಪರವಾಗಿ ಆಡಂ ಜಂಪಾ ನಾಲ್ಕು ಓವರ್‌ಗಳಲ್ಲಿ ಕೇವಲ 12 ರನ್ ನೀಡಿ 2 ವಿಕೆಟ್ ಪಡೆದರೆ ಸ್ಟಾರ್ಕ್ ಹಾಗೂ ಪ್ಯಾಟ್ ಕಮ್ಮಿನ್ಸ್ ಕೂಡ ತಲಾ 2 ವಿಕೆಟ್ ಪಡೆದರು.

ಇನ್ನು ಶ್ರೀಲಂಕಾ ತಂಡ ನೀಡಿದ 155 ರನ್‌ಗಳ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡಕ್ಕೆ ಅದ್ಭುತ ಆರಂಭ ದೊರೆಯಿತು. ಆರೋನ್ ಫಿಂಚ್ ಹಾಗೂ ಡೇವಿಡ್ ವಾರ್ನರ್ ಜೋಡಿ ಮೊದಲ ವಿಕೆಟ್‌ಗೆ 70 ರನ್‌ಗಳ ಕೊಡುಗೆ ನೀಡಿದರು. ಆರೋನ್ ಫಿಂಚ್ 37 ರನ್‌ಗಳಿಸಿ ಔಟಾದರು. ನಂತರ ಗ್ಲೆನ್ ಮ್ಯಾಕ್ಸ್‌ವೆಲ್ 5 ರನ್‌ಗಳಿಗೆ ವಿಕೆಟ್ ಕಳೆದುಕೊಂಡು ನಿರಾಸೆ ಅನುಭವಿಸಿದರು. ಆದರೆ ಡೇವಿಡ್ ವಾರ್ನರ್ ತಮ್ಮ ಅದ್ಭುತ ಇನ್ನಿಂಗ್ಸ್‌ಅನ್ನು ಮುಂದುವರಿಸಿದ್ದರು. ತಮಡದ ಮೊತ್ತ 130 ರನ್‌ಗಳಾಗಿದ್ದಾಗ ವಾರ್ನರ್ ಮೂರನೇ ಆಟಗಾರನಾಗಿ ಫೆವಿಲಿಯನ್ ಸೇರಿದರು. ಆದರೆ ಅದಾಗಲೇ ಆಸ್ಟ್ರೇಲಿಯಾ ಗೆಲುವಿನ ಸನಿಹಕ್ಕೆ ಬಂದಿತ್ತು. ನಂತರ ಅನುಭವಿ ಸ್ಟೀವ್ ಸ್ಮಿತ್ ಹಾಗೂ ಅಲ್‌ರೌಂಡರ್ ಮಾರ್ಕಸ್ ಸ್ಟೋಯ್ನಿಸ್ ಗೆಲುವಿನ ಪ್ರಕ್ರಿಯೆ ಪೂರ್ಣಗೊಳಿಸಿದರು.

ಈ ಮೂಲಕ ಶ್ರೀಲಂಕಾ ವಿರುದ್ಧ ಆಸ್ಟ್ರೇಲಿಯಾ ಭರ್ಜರಿ ಗೆಲುವು ಸಾಧಿಸಿದೆ. ಶ್ರೀಲಂಕಾ ತಂಡದ ಪರವಾಗಿ ಸ್ಪಿನ್ನರ್ ವನಿಂದು ಹಸರಂಗ 2 ವಿಕೆಟ್ ಪಡೆದು ಮಿಂಚಿದರೆ ನಾಯಕ ದಸುನ್ ಶನಕ ಒಂದು ವಿಕೆಟ್ ಪಡೆದುಕೊಂಡಿದ್ದಾರೆ.

ಇನ್ನು ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾ ತಂಡ ಸೂಪರ್ 12 ಗ್ರೂಫ್ 1ರ ಅಂಕಪಟ್ಟಿಯಲ್ಲಿ 2ನೇ ಸ್ಥಾನವನ್ನು ಪಡೆದುಕೊಂಡಿದೆ. ಆಡಿದ ಎರಡು ಪಮದ್ಯಗಳ ಪೈಕಿ ಎರಡು ಗೆಲುವು ಪಡೆದಿರುವ ಆಸ್ಟ್ರೇಲಿಯಾ ನಾಲ್ಕು ಅಂಕಗಳನ್ನು ಖಾತೆಯಲ್ಲಿ ಹೊಂದಿದೆ. ಇನ್ನು ಈ ಪಟ್ಟಿಯಲ್ಲಿ ಇಂಗ್ಲೆಂಡ್ ತಂಡ ಕೂಡ ಎರಡು ಗೆಲುವುಗಳೊಂದಿಗೆ 4 ಅಂಕ ಸಂಪಾದಿಸಿದ್ದು ನೆಟ್‌ರನ್‌ರೇಟ್‌ನಲ್ಲಿ ಆಸಿಸ್‌ಗಿಂತ ಇಂಗ್ಲೆಂಡ್ ಮುಂದಿದೆ. ಇನ್ನು ಶ್ರೀಲಂಕಾ ತಂಡ ಆಡಿದ 2 ಪಂದ್ಯಗಳ ಪೈಕಿ ಒಂದು ಗೆಲುವು ಹಾಗೂ ಒಂದು ಸೋಲಿನೊಂದಿಗೆ 4ನೇ ಸ್ಥಾನದಲ್ಲಿದೆ.

ಆಸ್ಟ್ರೇಲಿಯಾ ಪ್ಲೇಯಿಂಗ್ XI: ಡೇವಿಡ್ ವಾರ್ನರ್, ಆರನ್ ಫಿಂಚ್ (ನಾಯಕ), ಮಿಚೆಲ್ ಮಾರ್ಷ್, ಸ್ಟೀವನ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ಆಡಮ್ ಝಂಪಾ, ಜೋಶ್ ಹ್ಯಾಜಲ್‌ವುಡ್
ಬೆಂಚ್: ಕೇನ್ ರಿಚರ್ಡ್ಸನ್, ಆಷ್ಟನ್ ಅಗರ್, ಮಿಚೆಲ್ ಸ್ವೆಪ್ಸನ್, ಜೋಶ್ ಇಂಗ್ಲಿಸ್

ಶ್ರೀಲಂಕಾ ಪ್ಲೇಯಿಂಗ್ XI: ಕುಸಾಲ್ ಪೆರೇರಾ (ವಿಕೆಟ್ ಕೀಪರ್), ಪಾತುಮ್ ನಿಸ್ಸಾಂಕ, ಚರಿತ್ ಅಸಲಂಕಾ, ಅವಿಷ್ಕ ಫೆರ್ನಾಂಡೋ, ವನಿಂದು ಹಸರಂಗ, ಭಾನುಕಾ ರಾಜಪಕ್ಸೆ, ದಾಸುನ್ ಶನಕ (ನಾಯಕ), ಚಾಮಿಕ ಕರುಣಾರತ್ನೆ, ದುಷ್ಮಂತ ಚಮೀರ, ಲಹಿರು ಕುಮಾರ, ಮಹೇಶ್ ತೀಕ್ಷಣ
ಬೆಂಚ್: ಅಕಿಲಾ ದನಂಜಯ, ಧನಂಜಯ ಡಿ ಸಿಲ್ವಾ, ದಿನೇಶ್ ಚಂಡಿಮಲ್, ಬಿನೂರ ಫೆರ್ನಾಂಡೋ

Story first published: Friday, October 29, 2021, 10:40 [IST]
Other articles published on Oct 29, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+