
ಟಿ20 ವಿಶ್ವಕಪ್‌ನಲ್ಲಿ ಇಂದು ಮತ್ತೊಂದು ಪ್ರಮುಖ ಪಂದ್ಯ ನಡೆಯುತ್ತಿದ್ದು ಇದರಲ್ಲಿ ಶ್ರೀಲಂಕಾ ಹಾಗೂ ಆಸ್ಟ್ರೇಲಿಯಾ ತಂಡಗಳು ಪರಸ್ಪರ ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಆಸ್ಟ್ರೇಲಿಯಾ ತಂಡ ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ಮೊದಲಿಗೆ ಶ್ರೀಲಂಕಾ ತಂಡ ಬ್ಯಾಟಿಂಗ್‌ಗೆ ಇಳಿದಿದೆ.
ಶ್ರೀಲಂಕಾ ಹಾಗೂ ಆಸ್ಟ್ರೇಲಿಯಾ ಎರಡು ತಂಡಗಳು ಕೂಡ ಸೂಪರ್ 12 ಹಂತವನ್ನು ಗೆಲುವಿನೊಂದಿಗೆ ಆರಂಭಿಸಿದೆ. ಶ್ರೀಲಂಕಾ ಅರ್ಹತಾ ಸುತ್ತಿನಲ್ಲಿ ಆಡಿದ ನಂತರ ಸೂಪರ್ 12 ಹಂತದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದು ಉತ್ತಮ ಪ್ರದರ್ಶನ ನೀಡುವ ಮೂಲಕ ನಿರೀಕ್ಷೆ ಮೂಡಿಸಿದೆ. ಮತ್ತೊಂದೆಡೆ ಆಸ್ಟ್ರೇಲಿಯಾ ಕೂಡ ಈ ಬಾರಿಯ ಚುಟುಕು ವಿಶ್ವಕಪ್‌ನಲ್ಲಿ ಅತ್ಯುತ್ತಮ ಸಾಧನೆ ಮಾಡಲು ಹವಣಿಸುತ್ತಿದೆ.
ಆಸ್ಟ್ರೇಲಿಯಾ ತಂಡ ಸೂಪರ್ 12 ಹಂತದ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಆಡಿದ್ದು ಈ ಪಂದ್ಯದಲ್ಲಿ 5 ವಿಕೆಟ್‌ಗಳ ಅಂತರದ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಮತ್ತೊಂದೆಡೆ ಅರ್ಹತಾ ಸುತ್ತಿನಲ್ಲಿ ಆಡಿ ಅಜೇಯ ತಂಡವಾಗಿ ಪ್ರಧಾನ ಸುತ್ತಿಗೆ ಪ್ರವೇಶ ಪಡೆದ ಶ್ರೀಲಂಕಾ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಎದುರಿಸಿತ್ತು. ಬಾಂಗ್ಲಾದೇಶದ ವಿರುದ್ಧ ಅದ್ಭುತ ಜಯ ದಾಖಲಸುವ ಮೂಲಕ ಶ್ರೀಲಂಕಾ ಆತ್ಮ ವಿಶ್ವಾಸ ಹೆಚ್ಚಿಸಿಕೊಂಡಿದೆ.
ಕಳೆದ ಕೆಲ ತಿಂಗಳಿನಿಂದ ಮಂಕಾಗಿದ್ದ ಡೇವಿಡ್ ವಾರ್ನರ್ ಮತ್ತೆ ತಮ್ಮ ಹಳೇಯ ಫಾರ್ಮ್‌ಗೆ ಮರಳಿದ್ದಾರೆ. ಶ್ರಿಲಂಕಾ ವಿರುದ್ಧದ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನಿಡಿದ ಡೇವಿಡ್ ವಾರ್ನರ್ ಆಸ್ಟ್ರೇಲುಯಾದ ಭರ್ಜರಿ ಗೆಲುವಿಗೆ ಕಾರಣವಾಗಿದ್ದಾರೆ. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 7 ವಿಕೆಟ್‌ಗಳ ಅಂತರದಿಂದ ಗೆಲುವು ಸಾಧಿಸಲು ಯಶಸ್ವಿಯಾಗಿದೆ. ಈ ಮೂಲಕ ಸತತ 2ನೇ ಗೆಲುವನ್ನು ಸಾಧಿಸಿದೆ ಆರೋನ್ ಫಿಂಚ್ ಬಳಗ.
ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಶ್ರಿಲಂಕಾ ತಂಡ 154 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ಇನ್ನಿಂಗ್ಸ್ ಮುಗಿಸಿತು. ಲಂಕಾ ತಂಡದ ಪರವಾಗಿ ಕುಸಾಲ್ ಪೆರೆರ ಅಸಲಂಕಾ ತಲಾ 35 ರನ್‌ಗಳ ಕೊಡುಗೆ ನೀಡಿದರೆ ರಾಜಪಕ್ಸ ಅಜೇಯ 33 ರನ್‌ಗಳನ್ನು ಗಳಿಸಿದರು. ಆಸ್ಟ್ರೇಲಿಯಾ ತಂಡದ ಪರವಾಗಿ ಆಡಂ ಜಂಪಾ ನಾಲ್ಕು ಓವರ್‌ಗಳಲ್ಲಿ ಕೇವಲ 12 ರನ್ ನೀಡಿ 2 ವಿಕೆಟ್ ಪಡೆದರೆ ಸ್ಟಾರ್ಕ್ ಹಾಗೂ ಪ್ಯಾಟ್ ಕಮ್ಮಿನ್ಸ್ ಕೂಡ ತಲಾ 2 ವಿಕೆಟ್ ಪಡೆದರು.
ಇನ್ನು ಶ್ರೀಲಂಕಾ ತಂಡ ನೀಡಿದ 155 ರನ್‌ಗಳ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡಕ್ಕೆ ಅದ್ಭುತ ಆರಂಭ ದೊರೆಯಿತು. ಆರೋನ್ ಫಿಂಚ್ ಹಾಗೂ ಡೇವಿಡ್ ವಾರ್ನರ್ ಜೋಡಿ ಮೊದಲ ವಿಕೆಟ್‌ಗೆ 70 ರನ್‌ಗಳ ಕೊಡುಗೆ ನೀಡಿದರು. ಆರೋನ್ ಫಿಂಚ್ 37 ರನ್‌ಗಳಿಸಿ ಔಟಾದರು. ನಂತರ ಗ್ಲೆನ್ ಮ್ಯಾಕ್ಸ್‌ವೆಲ್ 5 ರನ್‌ಗಳಿಗೆ ವಿಕೆಟ್ ಕಳೆದುಕೊಂಡು ನಿರಾಸೆ ಅನುಭವಿಸಿದರು. ಆದರೆ ಡೇವಿಡ್ ವಾರ್ನರ್ ತಮ್ಮ ಅದ್ಭುತ ಇನ್ನಿಂಗ್ಸ್‌ಅನ್ನು ಮುಂದುವರಿಸಿದ್ದರು. ತಮಡದ ಮೊತ್ತ 130 ರನ್‌ಗಳಾಗಿದ್ದಾಗ ವಾರ್ನರ್ ಮೂರನೇ ಆಟಗಾರನಾಗಿ ಫೆವಿಲಿಯನ್ ಸೇರಿದರು. ಆದರೆ ಅದಾಗಲೇ ಆಸ್ಟ್ರೇಲಿಯಾ ಗೆಲುವಿನ ಸನಿಹಕ್ಕೆ ಬಂದಿತ್ತು. ನಂತರ ಅನುಭವಿ ಸ್ಟೀವ್ ಸ್ಮಿತ್ ಹಾಗೂ ಅಲ್‌ರೌಂಡರ್ ಮಾರ್ಕಸ್ ಸ್ಟೋಯ್ನಿಸ್ ಗೆಲುವಿನ ಪ್ರಕ್ರಿಯೆ ಪೂರ್ಣಗೊಳಿಸಿದರು.
Live ಸ್ಕೋರ್ ಕಾರ್ಡ್ ಹೀಗಿದೆ
ಇನ್ನು ಈ ಪಂದ್ಯಕ್ಕಾಗಿ ಆಸ್ಟ್ರೇಲಿಯಾ ತಂಡ ಯಾವುದೇ ಬದಲಾವನೆ ಮಾಡಿಕೊಂಡಿಲ್ಲ. ಎಲ್ಲ ಆಟಗಾರರು ಕೂಡ ಸಮರ್ಥರಾಗಿದ್ದು ಈ ಹಿಂದಿನ ಪಂದ್ಯದಲ್ಲಿ ಕಣಕ್ಕಿಳಿದ ಎಲ್ಲಾ ಆಟಗಾರರು ಆಡಲಿದ್ದಾರೆ ಎಂದು ನಾಯಕ ಫಿಂಚ್ ತಿಳಿಸಿದರು. ಮತ್ತೊಂದೆಡೆ ಶ್ರೀಲಂಕಾ ತಂಡದಲ್ಲಿ ಒಂದು ಬದಲಾವಣೆ ಮಾಡಿಕೊಳ್ಳಲಾಗಿದೆ. ಮಹೀಶ ತೀಕ್ಷಣ ಈ ಪಂದ್ಯದಲ್ಲಿ ಆಡುವ ಬಳಗದಲ್ಲಿ ಸ್ಥಾನ ಪಡೆದಿದ್ದು ಬಿನುರಾ ಪೆರ್ನಾಂಡೋ ಆಡುವ ಬಳಗದಿಂದ ಹೊರಗುಳಿದಿದ್ದಾರೆ
ಆಸ್ಟ್ರೇಲಿಯಾ ಆಡುವ ಬಳಗ: ಡೇವಿಡ್ ವಾರ್ನರ್, ಆರನ್ ಫಿಂಚ್ (ನಾಯಕ), ಮಿಚೆಲ್ ಮಾರ್ಷ್, ಸ್ಟೀವನ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ಆಡಮ್ ಝಂಪಾ, ಜೋಶ್ ಹ್ಯಾಜಲ್‌ವುಡ್
ಬೆಂಚ್: ಕೇನ್ ರಿಚರ್ಡ್ಸನ್, ಆಷ್ಟನ್ ಅಗರ್, ಮಿಚೆಲ್ ಸ್ವೆಪ್ಸನ್, ಜೋಶ್ ಇಂಗ್ಲಿಸ್
ಶ್ರೀಲಂಕಾ ಆಡುವ ಬಳಗ: ಕುಸಾಲ್ ಪೆರೇರಾ (ವಿಕೆಟ್ ಕೀಪರ್), ಪಾತುಮ್ ನಿಸ್ಸಾಂಕ, ಚರಿತ್ ಅಸಲಂಕಾ, ಅವಿಷ್ಕ ಫೆರ್ನಾಂಡೋ, ವನಿಂದು ಹಸರಂಗ, ಭಾನುಕಾ ರಾಜಪಕ್ಸೆ, ದಾಸುನ್ ಶನಕ (ನಾಯಕ), ಚಾಮಿಕ ಕರುಣಾರತ್ನೆ, ದುಷ್ಮಂತ ಚಮೀರ, ಲಹಿರು ಕುಮಾರ, ಮಹೇಶ್ ತೀಕ್ಷಣ
ಬೆಂಚ್: ಅಕಿಲಾ ದನಂಜಯ, ಧನಂಜಯ ಡಿ ಸಿಲ್ವಾ, ದಿನೇಶ್ ಚಂಡಿಮಲ್, ಬಿನೂರ ಫೆರ್ನಾಂಡೋ