ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್‌: ಈ ಮೂರು ಅಂಶಗಳೇ ಭಾರತಕ್ಕೆ ಕಳವಳ; ಗೆಲುವಿಗೂ ಸೋಲಿಗೂ ಹೊಣೆಯಾಗಲಿದೆ ಈ ನಿರ್ಧಾರ!

T20 world cup: 3 headache in Team Indias T20 World Cup squad

ಟಿ20 ವಿಶ್ವಕಪ್‌ಗೆ ಭಾರತದ 15 ಆಟಗಾರರ ಬಳಗವನ್ನು ಘೋಷಣೆ ಮಾಡಲಾಗಿದೆ. ತಂಡದ ಘೋಷಣೆಯ ಬೆನ್ನಲ್ಲೇ ಆಯ್ಕೆಯಾಗಿರುವ ಆಟಗಾರರ ವಿಚಾರವಾಗಿ ಸಾಕಷ್ಟು ಚರ್ಚೆಗಳು ವಿಶ್ಲೇಷಣೆಗಳು ಜೋರಾಗಿ ನಡೆಯುತ್ತಿದೆ. ಅಂತಿಮ ಹಂತದಲ್ಲಿ ಯಾವುದೇ ಅಚ್ಚರಿಯ ನಿರ್ಧಾರಗಳನ್ನು ಆಯ್ಕೆ ಸಮಿತಿ ಮಾಡದಿರುವುದು ಮಹತ್ವದ ಅಂಶವಾಗಿದೆ. ಏಷ್ಯಾ ಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ರವಿ ಬಿಷ್ಣೋಯ್‌ಗೆ ಮಾತ್ರವೇ ಈ ಮಹತ್ವದ ಟೂರ್ನಿಯಲ್ಲಿ ಸ್ಥಾನ ದೊರೆಯದಿರುವುದು ಅಣ್ಣ ಅಚ್ಚರಿ ಮೂಡಿಸಿದೆ. ಆಸಿಸ್ ವೇಗದ ಬೌಲಿಂಗ್‌ಗೆ ನೆರವು ನೀಡುವ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂಬುದು ಅರ್ಥ ಮಾಡಿಕೊಳ್ಳಬಹುದಾದ ಸಂಗತಿ.

ಇನ್ನು ಈ ಭಾರಿಯ ವಿಶ್ವಕಪ್‌ಗೆ ಭಾರತ ತಂಡ ನಾಲ್ವರು ಸ್ಪೆಶಲಿಸ್ಟ್ ವೇಗಿಗಳೊಂದಿಗೆ ಕಣಕ್ಕಿಳಿಯುತ್ತಿದೆ. ಯುವ ವೇಗಿ ಅರ್ಷ್‌ದೀಪ್‌ಗೆ ಈ ತಂಡದಲ್ಲಿ ಅವಕಾಶ ದೊರೆತಿದ್ದು ಆವೇಶ್ ಖಾನ್ ಹೊರಗುಳಿದಿದ್ದಾರೆ. ಜಸ್ಪ್ರೀತ್ ಬೂಮ್ರಾ ಹಾಗೂ ಹರ್ಷಲ್ ಪಟೇಲ್ ಕಮ್‌ಬ್ಯಾಕ್ ಮಾಡಿದ್ದು ಅನುಭವಿ ಮೊಹಮ್ಮದ್ ಶಮಿ, ಶ್ರೇಯಸ್ ಐಯ್ಯರ್, ರವಿ ಬಿಷ್ಣೋಯ್ ಹಾಗೂ ದೀಪಕ್ ಚಾಹರ್ ಮೀಸಲು ಆಟಗಾರರಾಗಿ ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸಲಿದ್ದಾರೆ.

ಟಿ20 ವಿಶ್ವಕಪ್ ಭಾರತ ತಂಡದಲ್ಲಿ ಈತನನ್ನು ಪರಿಗಣಿಸಬೇಕಿತ್ತು, ಅನ್ಯಾಯವಾಗಿದೆ; ದಾನೀಶ್ ಕನೇರಿಯಾಟಿ20 ವಿಶ್ವಕಪ್ ಭಾರತ ತಂಡದಲ್ಲಿ ಈತನನ್ನು ಪರಿಗಣಿಸಬೇಕಿತ್ತು, ಅನ್ಯಾಯವಾಗಿದೆ; ದಾನೀಶ್ ಕನೇರಿಯಾ

ಆದರೆ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಆಯ್ಕೆ ಮಾಡಿರುವ ರೋಹಿತ್ ಶರ್ಮಾ ನೇತೃತ್ವದ ಪಡೆಯಲ್ಲಿ ಕಳವಳ ಪಡುವಂತಾ ಮೂರು ಅಂಶಗಳಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.. ಮುಂದೆ ಓದಿ..

ಯುಜುವೇಂದ್ರ ಚಾಹಲ್ ಫಾರ್ಮ್

ಯುಜುವೇಂದ್ರ ಚಾಹಲ್ ಫಾರ್ಮ್

ಇತ್ತೀಚೆಗಷ್ಟೇ ಅಂತ್ಯವಾಗಿರುವ ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತದ ಅನುಭವಿ ಸ್ಪಿನ್ನರ್ ಯುಜುವೇಂದ್ರ ಚಾಹಲ್ ತಮ್ಮ ಎಂದಿನ ಲಯದಲ್ಲಿದ್ದಂತೆ ಕಂಡುಬರಲಿಲ್ಲ. ಬಹುತೇಕ ಪಂದ್ಯಗಳಲ್ಲಿ ಬ್ಯಾಟರ್‌ಗಳು ಚಾಹಲ್ ಅವರನ್ನು ಸುಲಭವಾಗಿ ಎದುರಿಸಿದ್ದರು. ಆಡಿರುವ ನಾಲ್ಕು ಪಂದ್ಯಗಳಲ್ಲಿ ಚಾಹಲ್ ನಾಲ್ಕು ವಿಕೆಟ್ ಮಾತ್ರವೇ ಪಡೆದಿದ್ದಾರೆ. 7.93 ಅವರ ಎಕಾನಮಿ. ರವಿ ಬಿಷ್ಣೋಯ್ ವಿಶ್ವಕಪ್‌ಗ ಆಯ್ಕೆಯಾಗದ ಕಾರಣದಿಂದಾಗಿ ವಿಶ್ವಕಪ್‌ನ ಬಹುತೇಕ ಪಂದ್ಯಗಳಲ್ಲಿ ಚಾಹಲ್ ಕಣಕ್ಕಿಳಿಯುವ ಸಾಧ್ಯತೆಯಿದೆ. ಮಧ್ಯಮ ಓವರ್‌ಗಳಲ್ಲಿ ಚಾಹಲ್ ಹಿನ್ನಡೆ ಅನುಭವಿಸುತ್ತಿದ್ದು ಈ ವಿಚಾರವಾಗಿ ವಿಶ್ವಕಪ್‌ಗೂ ಮುನ್ನ ಪರಿಹಾರವನ್ನು ಕಂಡುಕೊಳ್ಳಬೇಕಿದೆ.

ರಿಷಭ್ ಪಂತ್ ಅಥವಾ ದಿನೇಶ್ ಕಾರ್ತಿಕ್

ರಿಷಭ್ ಪಂತ್ ಅಥವಾ ದಿನೇಶ್ ಕಾರ್ತಿಕ್

ಇನ್ನು ವಿಶ್ವಕಪ್‌ಗೆ ಆಯ್ಕೆ ಮಾಡಿರುವ ತಂಡದಲ್ಲಿ ಅನುಭವಿ ದಿನೇಶ್ ಕಾರ್ತಿಕ್ ಹಾಗೂ ರಿಷಭ್ ಪಂತ್ ಇಬ್ಬರು ಕೂಡ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಈ ಇಬ್ಬರು ಆಟಗಾರರ ಪೈಕಿ ವಿಶ್ವಕಪ್‌ನಲ್ಲಿ ಯಾರನ್ನು ಕಣಕ್ಕಿಳಿಸುವುದು ಎಂಬ ವಿಚಾರವಾಗಿ ಸಾಕಷ್ಟ ಗೊಂದಲಗಳು ನಡೆಯಲಿದೆ. ರಿಷಭ್ ಪಂತ್ ಚುಟುಕು ಮಾದರಿಯಲ್ಲಿ ಸತತವಾಗಿ ವೈಫಲ್ಯ ಅನುಭವಿಸುತ್ತಿದ್ದರೂ ವಿಶ್ವಕಪ್‌ಗೆ ಮತ್ತೊಂದು ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಇತ್ತ ಅದ್ಭುತ ಫಾರ್ಮ್‌ನಲ್ಲಿರುವ ದಿನೇಶ್ ಕಾರ್ತಿಕ್ ಡೆತ್ ಓವರ್‌ಗಳಲ್ಲಿ ತಂಡಕ್ಕೆ ರನ್‌ವೇಗವನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಹೀಗಾಗಿ ಈ ಇಬ್ಬರು ಆಟಗಾರರ ಪೈಕಿ ಯಾರನ್ನು ಆಯ್ಕೆ ಮಾಡುವುದು ತಲೆನೋವಾಗಲಿದೆ.

ಜಸ್ಪ್ರೀತ್ ಬುಮ್ರಾ ಹಾಗೂ ಹರ್ಷಲ್ ಪಟೇಲ್ ಫಿಟ್‌ನೆಸ್

ಜಸ್ಪ್ರೀತ್ ಬುಮ್ರಾ ಹಾಗೂ ಹರ್ಷಲ್ ಪಟೇಲ್ ಫಿಟ್‌ನೆಸ್

ಏಷ್ಯಾ ಕಪ್‌ನಲ್ಲಿ ಭಾರತದ ಅನನುಭವಿ ವೇಗದ ಬೌಲಿಂಗ್ ವಿಭಾಗ ಅನುಭವಿಸಿದ ಒತ್ತಡವನ್ನು ಗಮನಿಸಿದ ಬಳಿಕ ವಿಶ್ವಕಪ್‌ಗೆ ಜಸ್ಪ್ರೀತ್ ಬೂಮ್ರಾ ಹಾಗೂ ಹರ್ಷಲ್ ಪಟೇಲ್ ಆಯ್ಕೆಯಾಗಿರುವುದು ಅಭಿಮಾನಿಗಳಿಗೆ ಸ್ವಲ್ಪ ಸಮಾಧಾನ ತಂದಿದೆ. ಇಬ್ಬರು ಕೂಡ ಗಾಯದ ಕಾರಣದಿಂದಾಗಿ ತಂಡದಿಂದ ಹೊರಬಿದ್ದು ಕಮ್‌ಬ್ಯಾಕ್ ಮಾಡಿದ್ದಾರೆ. ಈ ಇಬ್ಬರು ಆಟಗಾರರ ಸೇರ್ಪಡೆಯಿಂದಾಗಿ ತಂಡದ ಬಲ ಹೆಚ್ಚಿದ್ದರೂ ಇವರ ಫಿಟ್‌ನೆಸ್ ಬಗ್ಗೆ ಕಳವಳ ಇದ್ದೇ ಇದೆ. ಈ ಮಹತ್ವದ ಟೂರ್ನಿಯುದ್ದಕ್ಕೂ ಇಬ್ಬರು ಆಟಗಾರರು ಕೂಡ ಫಿಟ್‌ನೆಸ್ ಕಾಪಾಡಿಕೊಳ್ಳಬೇಕಾದ ಅಗತ್ಯವಿದೆ.

ಟಿ20 ವಿಶ್ವಕಪ್‌ಗೆ ಆಯ್ಕೆಯಾದ ಭಾರತ ತಂಡ

ಟಿ20 ವಿಶ್ವಕಪ್‌ಗೆ ಆಯ್ಕೆಯಾದ ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಸರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಶ್‌ದೀಪ್ ಸಿಂಗ್
ಸ್ಟ್ಯಾಂಡ್‌ಬೈ ಆಟಗಾರರು: ಮೊಹಮ್ಮದ್. ಶಮಿ, ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್, ದೀಪಕ್ ಚಹಾರ್

Story first published: Tuesday, September 13, 2022, 19:41 [IST]
Other articles published on Sep 13, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X