For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್, 3ನೇ ಪಂದ್ಯ; ಐರ್ಲೆಂಡ್ vs ನೆದರ್ಲ್ಯಾಂಡ್ಸ್, ಟಾಸ್ ವರದಿ, Live ಸ್ಕೋರ್

T20 world cup: 3rd Match, Ireland vs Netherlands, Live score and Playing XI
Photo Credit: icc twitter

ಟಿ20 ವಿಶ್ವಕಪ್‌ನ ಅರ್ಹತಾ ಸುತ್ತಿನ ಮೂರನೇ ಪಂದ್ಯ ಆರಂಭವಾಗಿದೆ. ಈ ಪಂದ್ಯದಲ್ಲಿ ಐರ್ಲೆಂಡ್ ಹಾಗೂ ನೆದರ್ಲ್ಯಾಂಡ್ಸ್ ತಂಡಗಳ ಮಧ್ಯೆ ಸೆಣೆಸಾಟ ಆರಂಭವಾಗಿದೆ. ಈ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್‌ ತಂಡ ಟಾಸ್ ಗೆದ್ದಿದ್ದು ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

ಈ ಪಂದ್ಯ ಅಬುಧಾಬಿಯ ಶೇಕ್ ಝಾಯೇದ್ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಇದೇ ಕ್ರೀಡಾಂಗಣದಲ್ಲಿ ನಂತರ ಮಾಜಿ ಟಿ20 ವಿಶ್ವಕಪ್‌ನ ಚಾಂಪಿಯನ್ ಶ್ರೀಲಂಕಾ ಹಾಗೂ ನಮೀಬಿಯಾ ವಿರುದ್ಧದ ಪಂದ್ಯ ಕೂಡ ನಡೆಯಲಿದೆ.

ಇನ್ನು ಇತ್ತಚೆಗಷ್ಟೇ ಮುಕ್ತಾಯವಾದ ಐಪಿಎಲ್‌ನ ಪಂದ್ಯಗಳು ಕೂಡ ಈ ಶೇಕ್ ಜಾಯೇದ್ ಮೈದಾನದಲ್ಲಿ ನಡೆದಿದೆ. ಹೀಗಾಗಿ ಈ ಪಿಚ್ ಸವಾಲಿನಿಂದ ಕೂಡಿದ್ದು 150ಕ್ಕಿಂತ ಹೆಚ್ಚಿನ ರನ್ ಗಳಿಸಿದರೆ ಎದುರಾಳಿಗೆ ಬೆನ್ನಟ್ಟಲು ಕಠಿಣವೆನಿಸಲಿದೆ.

ಟಿ20 ವಿಶ್ವಕಪ್‌ನ ಮೂರನೇ ಪಂದ್ಯದಲ್ಲಿ ಐರ್ಲೆಂಡ್ ತಂಡ ನೆದರ್ಲ್ಯಾಂಡ್ ವಿರುದ್ಧ ಭರ್ಜರಿ ಜಯವನ್ನು ದಾಖಲಿಸಿದೆ. ಈ ಮೂಲಕ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಐರ್ಲೆಂಡ್ ಶುಭಾರಂಭವನ್ನು ಮಾಡಿದೆ. ಪಂದ್ಯದುದ್ದಕ್ಕೂ ಐರ್ಲೆಂಡ್ ಎದುರಾಳಿ ನೆದರ್ಲೆಂಡ್ಸ್ ವಿರುದ್ಧ ಸಂಪೂರ್ಣ ಮೇಲುಗೈ ಸಾಧಿಸುತ್ತಾ ಬಂದಿತ್ತು. ಅಂತಿಮವಾಗಿ ಇನ್ನೂ 29 ಎಸೆತಗಳು ಬಾಕಿಯಿರುವಂತೆಯೇ ನೆದರ್ಲ್ಯಾಂಡ್ಸ್ ತಂಡವನ್ನು 7 ವಿಕೆಟ್‌ಗಳಿಂದ ಐರ್ಲೆಂಡ್ ಮಣಿಸಿತು.

ಈ ಪಂದ್ಯದಲ್ಲಿ ಟಾಸ್ ಗೆದ್ದ ನೆದರ್ಲ್ಯಾಂಡ್ಸ್ ತಂಡ ಮೊದಲಿಗೆ ಬ್ಯಾಟಿಂಗ್ ಮಾಡುವ ನಿರ್ಧಾರ ತೆಗೆದುಕೊಂಡಿತ್ತು. ಆದರೆ ನಾಯಕನ ನಿರ್ಧಾರವನ್ನು ಸಮರ್ಥಿಸುವಂತೆ ಯಾವ ಹಂತದಲ್ಲಿಯೂ ತಂಡದ ಆಟಗಾರರು ಪ್ರದರ್ಶನ ನೀಡಲಿಲ್ಲ. ಆರಂಭಿಕ ಆಟಗಾರ ಮ್ಯಾಕ್ಸ್‌ಒ ಡೌಡ್ ಮಾತ್ರ ಏಕಾಂಗಿ ಹೋರಾಟ ನಡೆಸಿ ಅರ್ಧ ಶತಕ ದಾಖಲಿಸಿದರು. ನೆದರ್ಲೆಂಡ್ಸ್ ತಮಡದ ಐವರು ನಾಲ್ವರು ಆಟಗಾರರು ಶೂನ್ಉಯಕ್ಕೆ ವಿಕೆಟ್ ಕಳೆದುಕೊಂಡಿದ್ದಾರೆ. ಅಂತಿಮವಾಗಿ ನಿಗದಿತ 20 ಓವರ್‌ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 106 ರನ್‌ಗಳಿಗೆ ತನ್ನ ಆಟವನ್ನು ಮುಗಿಸಿತು ನೆದರ್ಲೆಂಡ್ಸ್ ತಂಡ.

1
51666

ಐರ್ಲೆಂಡ್ ತಂಡ: ಆಂಡ್ರ್ಯೂ ಬಾಲ್ಬಿರ್ನಿ (ನಾಯಕ), ನೀಲ್ ರಾಕ್ (ವಿಕೆಟ್ ಕೀಪರ್), ಪಾಲ್ ಸ್ಟಿರ್ಲಿಂಗ್, ಗರೆಥ್ ಡೆಲಾನಿ, ಜಾರ್ಜ್ ಡೊಕ್ರೆಲ್, ಹ್ಯಾರಿ ಟೆಕ್ಟರ್, ಕರ್ಟಿಸ್ ಕ್ಯಾಂಪರ್, ಸಿಮಿ ಸಿಂಗ್, ಮಾರ್ಕ್ ಅಡೈರ್, ಕ್ರೇಗ್ ಯಂಗ್, ಜೋಶುವಾ ಲಿಟಲ್, ಕೆವಿನ್ ಒ ಬ್ರಿಯಾನ್, ಆಂಡಿ ಮೆಕ್‌ಬ್ರೈನ್, ಬೆಂಜಮಿನ್ ಬಿಳಿ, ಲೋರ್ಕನ್ ಟಕ್ಕರ್

ಮೈದಾನದಲ್ಲಿ Rishab Pant ಅವರು Ashwinಗೆ ಹೇಳಿದ್ದೇನು | Oneindia Kannada

ನೆದರ್ಲ್ಯಾಂಡ್ಸ್ ತಂಡ: ಪೀಟರ್ ಸೀಲಾರ್ (ನಾಯಕ), ಸ್ಕಾಟ್ ಎಡ್ವರ್ಡ್ಸ್ (ವಿಕೆಟ್ ಕೀಪರ್), ಸ್ಟೀಫನ್ ಮೈಬರ್ಗ್, ಮ್ಯಾಕ್ಸ್ ಒಡೌಡ್, ಬೆನ್ ಕೂಪರ್, ಕಾಲಿನ್ ಅಕೆರ್ಮನ್, ರಯಾನ್ ಟೆನ್ ಡೋಸ್ಚೇಟ್, ಬಾಸ್ ಡಿ ಲೀಡೆ, ರೋಲೋಫ್ ವ್ಯಾನ್ ಡೆರ್ ಮೆರ್ವೆ, ಲೋಗನ್ ವ್ಯಾನ್ ಬೀಕ್, ಫ್ರೆಡ್ ಕ್ಲಾಸೆನ್, ಫಿಲಿಪ್ ಬೋಯ್ಸೆವೈನ್, ಪಾಲ್ ವ್ಯಾನ್ ಮೀಕೆರೆನ್, ಬ್ರಾಂಡನ್ ಗ್ಲೋವರ್, ಟಿಮ್ ವ್ಯಾನ್ ಡೆರ್ ಗಗ್ಟೆನ್

Story first published: Monday, October 18, 2021, 19:03 [IST]
Other articles published on Oct 18, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+