
ಟಿ20 ವಿಶ್ವಕಪ್‌ನಲ್ಲಿ ಇಂದು ಐದನೇ ಪಂದ್ಯ ನಡೆಯುತ್ತಿದ್ದು ಈ ಪಂದ್ಯದಲ್ಲಿ ಪಪುವಾ ನ್ಯೂಗಿನಿ ಹಾಗೂ ಸ್ಕಾಟ್ಲೆಂಡ್ ತಂಡಗಳು ಮುಖಾಮುಖಿಯಾಗಿದೆ. ಸ್ಕಾಟ್ಲೆಂಡ್ ತಂಡ ಟಾಸ್ ಗೆದ್ದಿದ್ದು ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಸ್ಕಾಟ್ಲೆಂಟ್ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಅದ್ಭುತವಾದ ಆರಂಭವನ್ನು ಪಡೆದುಕೊಂಡಿದೆ. ಈ ಪಂದ್ಯದಲ್ಲಿಯೂ ತನ್ನ ಪ್ರದರ್ಶನವನ್ನು ಮುಂದಿವರಿಸುವ ವಿಶ್ವಾಸದಲ್ಲಿದೆ.
ಸ್ಕಾಟ್ಲೆಂಟ್ ಈ ಬಾರಿಯ ವಿಶ್ವಕಪ್‌ನ ಆರಂಭಿಕ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಭರ್ಜರಿ ಗೆಲುವು ಸಾಧಿಸಿತ್ತು. ಈ ಮತ್ತೊಂದೆಡೆ ಪಪುವಾ ನ್ಯೂಗಿನಿ ತನ್ನ ಮೊದಲ ಪಂದ್ಯದಲ್ಲಿ ಆತಿಥೇಯ ಒಮಾನ್ ವಿರುದ್ಧ ಸೋಲು ಕಂಡಿದೆ. ಹೀಗಾಗಿ ತಮ್ಮ ಮೊದಲ ಗೆಲುವಿಗಾಗಿ ಪಪುವಾ ನ್ಯೂಗಿನಿ ಹವಣಿಸುತ್ತಿದೆ. ಒಮಾನ್‌ನ ಅಲ್ ಅಮೆರತ್ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯುತ್ತಿದೆ.
Live ಸ್ಕೋರ್ ಕಾರ್ಡ್ ಇಲ್ಲಿದೆ:
ಸ್ಕಾಟ್ಲೆಂಡ್ ಸಂಪೂರ್ಣ ತಂಡ: ಕೈಲ್ ಕೋಟ್ಜರ್ (ನಾಯಕ), ಮ್ಯಾಥ್ಯೂ ಕ್ರಾಸ್ (ವಿಕೆಟ್ ಕೀಪರ್), ಜಾರ್ಜ್ ಮುನ್ಸೆ, ರಿಚಿ ಬೆರಿಂಗ್ಟನ್, ಕ್ಯಾಲಮ್ ಮ್ಯಾಕ್ಲಿಯೋಡ್, ಮೈಕೆಲ್ ಲೀಸ್ಕ್, ಕ್ರಿಸ್ ಗ್ರೀವ್ಸ್, ಮಾರ್ಕ್ ವ್ಯಾಟ್, ಜೋಶ್ ಡೇವಿ, ಸಫ್ಯಾನ್ ಷರೀಫ್, ಬ್ರಾಡ್ಲಿ ವೀಲ್, ಡೈಲನ್ ಬಡ್ಜ್, ಕ್ರೇಗ್ ವ್ಯಾಲೇಸ್, ಅಲಾಸ್ಡೇರ್ ಇವಾನ್ಸ್ , ಹಮ್ಜಾ ತಾಹಿರ್
ಪಪುವಾ ನ್ಯೂ ಗಿನಿಯಾ ಸ್ಕ್ವಾಡ್: ಅಸ್ಸಾದ್ ವಾಲಾ (ನಾಯಕ), ಕಿಪ್ಲಿನ್ ಡೊರಿಗಾ (ವಿಕೆಟ್ ಕೀಪರ್), ಟೋನಿ ಉರಾ, ಲೆಗಾ ಸಿಯಾಕಾ, ಚಾರ್ಲ್ಸ್ ಅಮಿನಿ, ಸೆಸೆ ಬೌ, ನಾರ್ಮನ್ ವನುವಾ, ಸೈಮನ್ ಅಟೈ, ಡೇಮಿಯನ್ ರಾವ್, ಕಬುವಾ ಮೊರಿಯಾ, ನೊಸೈನ ಪೊಕಾನ, ಚಾಡ್ ಸೋಪರ್, ಜೇಸನ್ ಕಿಲಾ, ಹಿರಿ ಹಿರಿ, ಗೌಡಿ ಟೋಕಾ